Blog

ಬೆಟ್ಟದ ನೆಲ್ಲಿ ಎಂದ ತಕ್ಷಣ ಬಾಯಿ ನೀರೂರಲು ಶುರುವಾಗುತ್ತೆ. ನೆಲ್ಲಿಕಾಯಿಯಲ್ಲಿ ನಾವು ಎರಡು ವಿಧವಾದ ನೆಲ್ಲಿಯನ್ನು ನೋಡುತ್ತೆವೆ. ಒಂದು ನಾಡಿನ ನೆಲ್ಲಿಕಾಯಿ,ತ್ತೊಂದು ಹೆಚ್ಚಾಗಿ ಗುಡ್ಡ ಗಾಡುಗಳಲ್ಲಿ ಬೆಳೆದು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಬೆಟ್ಟದ ನೆಲ್ಲಿ. ಚಿಕ್ಕವಯಸ್ಸಿನಲ್ಲಿ ನೆಲ್ಲಿಕಾಯಿಯ ರುಚಿಯನ್ನು ಉಪ್ಪು, ಖಾರದೊಂದಿಗೆ ಸ್ನೇಹಿತರ ಜತೆ ಚಪ್ಪರಿಸಿ ತಿಂದಿರುವ ನೆನಪುಗಳು ನಮಗುಂಟು.


ಮನೆಯ  ಹಿತ್ತಲ್ಲಿನಲ್ಲಿ, ಹೊಲಗಳಲ್ಲಿ ಬೆಳೆದಾಗ ಅವುಗಳನ್ನು ಕಿತ್ತು ತಿನ್ನುವುದೇ ಖುಷಿ. ಆದರೆ ಈಗಿನ ದಿನಗಳಲ್ಲಿ ತಂತ್ರಜ್ಞಾನ ಬದಲಾದಂತೆ ಮರ ಗಿಡಗಳನ್ನು ನೋಡುವುದು ಸಹಿತ ಕಡಿಮೆಯಾಗುತ್ತಿರುವುದು ದುಃಖದ ಸಂಗತಿ. ಹಾಗಾದ್ರೆ ಬೆಟ್ಟದ ನೆಲ್ಲಿಯನ್ನು ಕೃಷಿಯಲ್ಲಿ ಬಳಸಿಕೊಂಡಾಗ ರೈತರಿಗೆ ಸಿಗುವ ಲಾಭಗಳೇನು, ಆರೋಗ್ಯಕ್ಕೆ ಎಷ್ಟು ಉಪಕಾರಿ ಎಂದು ಬನ್ನಿ ತಿಳಿಯೋಣ. ಬಾಯಿಗೆ ಒಗರು ಒಗರಾಗಿ ರುಚಿ ಉಣಿಸುವ ಬೆಟ್ಟದ ನೆಲ್ಲಿಕಾಯಿಯು ದೇಹದ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತೆ.


ಉದಾಹರಣೆಗೆ ತಲೆ ಹೇನು ಮತ್ತು ಹೊಟ್ಟು ಸಮಸ್ಯೆ ನಿವಾರಣೆ, ಅಸ್ತಮಾ ನಿಯಂತ್ರಣ, ಚರ್ಮದ ಕಾಂತಿ ಹೆಚ್ಚಿಸಲು, ಸಕ್ಕರೆ ಖಾಯಿಲೆ ತಡೆಯುವಿಕೆ, ಕ್ಯಾನ್ಸರ್ ಸಮಸ್ಯೆ ತಡೆಯುವಿಕೆ, ಲಿವರ್ ಮತ್ತು ಬಾಯಿ ನೋವು ಸಮಸ್ಯೆ ನಿವಾರಣೆ, ಇನ್ನು ಹಲವಾರು ಸಮಸ್ಯೆಗಳಿಗೆ ಬೆಟ್ಟದ ನೆಲ್ಲಿ ರಾಮಬಾಣವಾಗಿದೆ.


ಷ್ಟೆಲ್ಲಾ ಔಷಧೀಯ ಗುಣಗಳನ್ನು ಹೊಂದಿರುವ ಬೆಟ್ಟದ ನೆಲ್ಲಿಕಾಯಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಈಗ ನೋಡಿದರೆ ಮಾರುಕಟ್ಟೆಯಲ್ಲಿ ಕೆ.ಜಿ ಗೆ 100 ರೂ. ಬೆಲೆಯಲ್ಲಿ ನಾವು ಇದನ್ನು ಪಡೆಯಬಹುದು ಹಾಗಾಗಿ ಈ ಬೆಳೆಯನ್ನು ಕೃಷಿಯಲ್ಲಿ ಅಳವಡಿಸಿಕೊಂಡಾಗ, ರೈತರು ಇದರಿಂದ ಹೆಚ್ಚಿನ ಆದಾಯ ಪಡೆಯುವುದರಲ್ಲಿ ಅನುಮಾನವೇ ಇಲ್ಲ.

 

ಕೃಷಿಕರು ಮುಖ್ಯ ಬೆಳೆಯ ಜತೆಗೆ ಹೊಲದ ಬದುವಿನಲ್ಲಿ ಅಥವಾ ಬೆಳೆಗಳ ಜತೆ ಜಿಗ್ ಜ್ಯಾಗ್ ರೂಪದಲ್ಲಿ ಬೆಳೆಸಿಕೊಂಡರೆ, ವರ್ಷಗಳು ಉರುಳಿದಂತೆ ಉತ್ತಮ ಲಾಭವನ್ನು ಪಡೆಯುತ್ತಾರೆ. ಹಾಗಾದ್ರೆ ಇದನ್ನು ಕೃಷಿಯಲ್ಲಿ ಬೆಳೆಯುವ ಕ್ರಮ ಹೇಗೆ? ಮಾರುಕಟ್ಟೆಯ ಮಾಹಿತಿ ಬಗ್ಗೆ ತಿಳಿಯಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ಪೂರ್ತಿಯಾಗಿ ವಿಡೀಯೋ ನೋಡಿ.


https://www.youtube.com/watch?v=X5fSrY0G3NQ

 

ವರದಿ: ವನಿತಾ ಪರಸನ್ನವರ್

 




Blog




Home    |   About Us    |   Contact    |   
microbi.tv | Powered by Ocat Online Advertising & Content Marketing Service in India