Blog

       ರಾಸಾಯನಿಕ ಬಳಸದೆ ಕೃಷಿ ಮಾಡಲಾಗುವುದಿಲ್ಲ ಎನ್ನುವ ಜನರ ಮಧ್ಯೆ, ಇವರು ಮೊದಲಿನಿಂದಲೂ ನೈಸರ್ಗಿಕ ಮತ್ತು ಸಾವಯವ ಕೃಷಿ  ಮಾಡಿಕೊಂಡು ಬಂದಿದ್ದಾರೆ. ಹಲವಾರು ವರ್ಷಗಳಿಂದ ವಿಷಮುಕ್ತ ಆಹಾರ ಬೆಳೆಯುತ್ತಿದ್ದಾರೆ. 20 ವರ್ಷದ ಅಡಿಕೆ ತೋಟದ ಮಾಲೀಕರು ಇವರು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಇಟಗಿ ಗ್ರಾಮದ ರೈತರಾದ ಪರಮೇಶಪ್ಪ ಮುದ್ದಿಯವರು 1964 ರಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಸಾವಯವ ಕೃಷಿ ಮೂಲಕ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

 

       ರಾಸಾಯನಿಕ ಬಳಸಿದರೆ ಮಾತ್ರ ಕೃಷಿ ಎನ್ನುವ ಈ ಕಾಲದಲ್ಲಿ, ಹಲವಾರು ವರ್ಷಗಳಿಂದ ರಾಸಾಯನಿಕ ರಹಿತ ಕೃಷಿ ಮಾಡುತ್ತಿರುವ ಪರಮೇಶಪ್ಪ ಮುದ್ದಿಯವರು ಇತರರಿಗೆ ಮಾದರಿ. ಸಾವಯವ ಕೃಷಿಯಿಂದ ಖರ್ಚು ಕಡಿಮೆಯಾಗಿ ಇಳುವರಿ ಹೆಚ್ಚುತ್ತದೆ ಎಂಬುದು ಇವರ ಅನುಭವ. ತಿಪ್ಪೆ ಗೊಬ್ಬರ, ಕುರಿ ಗೊಬ್ಬರ, ಇತ್ಯಾದಿಗಳನ್ನು ತಮ್ಮ ಬೆಳೆಗಳಿಗೆ ಬಳಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸುತ್ತಿದ್ದು, ಇಳುವರಿ ಉತ್ತಮಗೊಂಡಿದೆಡಾ.ಸಾಯಿಲ್ ಬಳಕೆಯಿಂದ ರೈತರು ಉತ್ತಮ ಇಳುವರಿ ಪಡೆಯಬಹುದು ಎಂಬುದು ಇವರ ನಿಲುವು. ಈ ಇಳಿವಯಸ್ಸಿನಲ್ಲೂ ಕೃಷಿಯಲ್ಲಿ ತೊಡಗಿಕೊಂಡು ವಿಷಮುಕ್ತ ಆಹಾರ ಬೆಳೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಪರಮೇಶಪ್ಪ ಮುದ್ದಿಯವರು ಇಂದಿನ ರೈತರಿಗೆ ಮಾದರಿ ಮತ್ತು ಸ್ಪೂರ್ತಿ ಎಂದರೆ ತಪ್ಪಾಗಲಾರದು.

 

ಸಂಪೂರ್ಣ ವಿಡೀಯೊ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ….

https://www.youtube.com/watch?v=12rudCZ_p7s

 

 

ಬರಹ: ರವಿಕುಮಾರ್ 

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #naturalfarming  #organicfarming  #highyield  #healthycrop  #soilhealth  #arecafarming  #arecanut  #diseasecontrol  #arecayield  #naturalfarming  



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies