Blog

       ಹಿಂದಿನ ಕಾಲದಲ್ಲಿ ರಾಜ-ರಾಣಿಯರು, ರಾಜಮನೆತನದವರು ಧರಿಸುತ್ತಿದ್ದ ಅತ್ಯಮೂಲ್ಯ ಆಭರಣಗಳಲ್ಲಿ ಮುತ್ತು ಕೂಡ ಒಂದು. ಶತಶತಮಾನಗಳಿಂದಲೂ ಮುತ್ತುಗಳು ಸಂಪತ್ತು, ರಾಜತ್ವ, ಶುದ್ಧತೆ, ಬುದ್ಧಿವಂತಿಕೆ, ತಾಳ್ಮೆ ಮತ್ತು ಶಾಂತಿಯೊಂದಿಗೆ ಸಂಬಂಧಿಸಿವೆ. ಕೇವಲ ಆಗರ್ಭ ಶ್ರೀಮಂತರು ಮಾತ್ರ ಧರಿಸುತ್ತಿದ್ದ ಮುತ್ತು ಇಂದು ಬಹಳ ಜನರಿಗೆ ಸಿಗುವಂತಾಗಿದೆ. ಇದಕ್ಕೆ ಕಾರಣ ಕೃತಕವಾಗಿ ಮುತ್ತು ಕೃಷಿ ಮಾಡುತ್ತಿರುವುದು.

 

ಮೊದಲೆಲ್ಲಾ ನೈಸರ್ಗಿಕವಾಗಿ ಸಮುದ್ರದಲ್ಲಿ ಸಿಗುತ್ತಿದ್ದ ಕಾರಣ ಮುತ್ತು ವಿರಳವಾಗಿತ್ತು. ನೈಸರ್ಗಿಕ ಮುತ್ತುಗಳು ಅತ್ಯಂತ ಅಪರೂಪ. ಸುಮಾರು 10 ಸಾವಿರ ಓಯ್ಸ್ಟರ್(Oyster)ಗಳಲ್ಲಿ 1 ಮಾತ್ರ ಮುತ್ತುಗಳನ್ನು ಒಳಗೊಂಡಿರುತ್ತದೆ ಮತ್ತು ಅವುಗಳಲ್ಲಿ ಕೇವಲ ಸಣ್ಣ ಶೇಕಡಾವಾರು ಮಾತ್ರ ಆಭರಣ ಉದ್ಯಮಕ್ಕೆ ಬೇಕಾದ ಗಾತ್ರ, ಆಕಾರ ಮತ್ತು ಬಣ್ಣವನ್ನು ಸಾಧಿಸುತ್ತವೆ. ಇಂದು ಮುತ್ತು ಕೃಷಿಯನ್ನು ಕೃತಕವಾಗಿ ಮಾಡುವುದರಿಂದ ಮುತ್ತುಗಳ ದೊರೆಯುವಿಕೆ ಹೆಚ್ಚಿದೆ.

 

ಮುತ್ತು ಕೃಷಿ ಏಕೆ ಮಾಡಬೇಕು?

       ಇದೊಂದು ಕಡಿಮೆ ಖರ್ಚು ಮತ್ತು ಹೆಚ್ಚು ಲಾಭದ ಕೃಷಿ. ಮುತ್ತು ಪ್ರಪಂಚದಾದ್ಯಂತ ತುಂಬಾ ಬೇಡಿಕೆಯಲ್ಲಿದೆ. ಕೃಷಿ ಮಾಡುವ ತರಬೇತಿ ಪಡೆದು ಮಾರುಕಟ್ಟೆ ತಿಳಿದುಕೊಂಡರೆ ರೈತರು ಉತ್ತಮ ಆದಾಯವನ್ನು ಪಡೆಯಬಹುದು. ಭಾರತವು ಮುತ್ತು ಕೃಷಿಯನ್ನು ಪ್ರೋತ್ಸಾಹಹಿಸಲು ಸಬ್ಸಿಡಿಗಳನ್ನು ನೀಡುತ್ತಿವೆ. ಗುಣಮಟ್ಟದ ಮುತ್ತು ಯಾವಾಗಲೂ ಬೇಡಿಕೆಯಲ್ಲಿರುವುದರಿಂದ, ಉತ್ತಮ ಗುಣಮಟ್ಟದ ಮುತ್ತು ಬೆಳೆದರೆ ಆದಾಯ ಗಳಿಸುವುದು ಸುಲಭ.

 

ಮುತ್ತುಗಳು ಹೇಗೆ ರಚನೆಯಾಗುತ್ತವೆ?

       ಮುತ್ತುಗಳು ಓಯ್ಸ್ಟರ್(Oyster) ಎಂಬ ಜೀವಿಗಳ ಒಳಗೆ ರಚನೆಯಾಗುತ್ತವೆ. ಚಿಪ್ಪಿನಂತಿರುವ ಈ ಜೀವಿಗಳ ಒಳಗೆ ಇತರ ವಸ್ತುಗಳು ಅಥವಾ ಜೀವಿಗಳು ಸಿಕ್ಕಿಹಾಕಿಕೊಂಡಾಗ ಅದರ ಮೇಲೆ nacre ಎಂಬ ವಸ್ತು ಆವರಿಸಿಕೊಂಡು ಘನ ರೂಪಕ್ಕೆ ತಿರುಗುತ್ತದೆ. ಇದು ಕಾಲ ಕಳೆದಂತೆ ಹೊಳಪು, ಆಕಾರ ಮತ್ತು ಬಣ್ಣವನ್ನು ಪಡೆಯುತ್ತದೆ. ಈ ಘನರೂಪವೇ ಮುತ್ತು. ಇವುಗಳ ಗುಣಮಟ್ಟ ಮತ್ತು ವಿರಳತೆಯ ಆಧಾರದ ಮೇಲೆ ಮುತ್ತಿನ ಮೌಲ್ಯ ನಿರ್ಧಾರವಾಗುತ್ತದೆ.

 

ಮುತ್ತು ಕೃಷಿ

       ಇದೊಂದು ಲಾಭದಾಯಕ ಕೃಷಿಯಾಗಿದ್ದು, ಉತ್ತಮ ನಿರ್ವಹಣೆ ಮಾಡಿದರೆ ಅದ್ಭುತ ಲಾಭಗಳಿಸಬಹುದು. ಮುತ್ತು ರಚನೆಯಾಗಲು 1 ರಿಂದ 2 ವರ್ಷಗಳು ಬೇಕಾಗಬಹುದು. ಹೆಚ್ಚು ಲಾಭಗಳಿಸುವ ವೃತ್ತಿಯಾದ ಮುತ್ತು ಕೃಷಿಗೆ ತಾಳ್ಮೆ ಮತ್ತು ಪರಿಶ್ರಮದ ಅಗತ್ಯವಿದೆ.

 

       ಮುತ್ತು ಕೃಷಿ ಮಾಡಲು ಯೋಗ್ಯವಾದ ನೀರನ್ನು CIFA ಅನುಮೋದಿಸಿದ ಪ್ರಯೋಗಾಲಯಗಳಿಂದ ಅನುಮೋದನೆ ತೆಗೆದುಕೊಳ್ಳಬೇಕು. ಓಯ್ಸ್ಟರ್ ಗಳನ್ನು ಖರೀದಿ ಮಾಡಿ, ಮುತ್ತು ಓಯ್ಸ್ಟರ್ ನಲ್ಲಿ ಕೃತಕ ನ್ಯೂಕ್ಲಿಯಸ್ ಅನ್ನು ನೆಡಬೇಕು. ಇದು ಮುತ್ತು ಆಗಿ ಬೆಳೆಯುತ್ತದೆ. ಈ ಸಮಯದಲ್ಲಿ ಸರಿಯಾದ ಆಹಾರ, ಕಾಳಜಿ ಮತ್ತು ಸೋಂಕಿನಿಂದ ರಕ್ಷಿಸುವುದು ತುಂಬಾ ಮುಖ್ಯ.

 

       ಮುತ್ತು ರಚನೆಯಾದ ನಂತರ ಗುಣಮಟ್ಟದ ಅನುಸಾರವಾಗಿ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತದೆ. ಉತ್ತಮ ಗುಣಮಟ್ಟದ ಮುತ್ತಿಗೆ ಬೇಡಿಕೆ ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಬೆಲೆ ಹುಡುಕಿಕೊಂಡು ಬರುತ್ತದೆ. ಮುತ್ತು ಕೃಷಿಯನ್ನು ಪ್ರೋತ್ಸಾಹಿಸಲು ನೀಲಿ ಕ್ರಾಂತಿಯಡಿಯಲ್ಲಿ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಮೀನುಗಾರಿಕೆ ಅಡಿಯಲ್ಲಿ ಬರುವ ಈ ಮುತ್ತು ಕೃಷಿಗೆ ಸಹಾಯಧನ ಇದೆ. ಇದರ ಲಾಭ ಪಡೆದುಕೊಂಡು ಲಾಭದ ಪ್ರಮಾಣ ಹೆಚ್ಚಿಸಿಕೊಳ್ಳಬಹುದು.

 

ಮುತ್ತು ಕೃಷಿಗೆ ಇರುವ ಸಬ್ಸಿಡಿ ಬಗ್ಗೆ ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.youtube.com/watch?v=yBvQdG8AW3Y&t=20s

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #pearl  #pearlfarming  #subsidy  #oysterfarming  #oyster  #fishery  #bluerevolution  



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies