ಹೆಚ್ಚು ಕಬ್ಬಿನ ಇಳುವರಿಗಾಗಿ ಪಂಚಸೂತ್ರಗಳು..!
ಕಬ್ಬು ಬೆಳೆಯಲ್ಲಿ 100 ಟನ್ ಇಳುವರಿ ಪಡೆಯೋಕೆ ಸಾಧ್ಯ ಇದೆಯಾ..? ಇದೇ ಎನ್ನುವುದಾದರೆ ಏನೆಲ್ಲಾ ಸೂತ್ರಗಳನ್ನು ಬಳಸಬೇಕೆಂಬ ಗೊಂದಲದಲ್ಲಿ ರೈತರು ಇರ್ತಾರೆ. ಇವುಗಳ ಬಗ್ಗೆ ಪ್ರಮುಖ ಮಾಹಿತಿ ಇಲ್ಲಿದೆ.
|
ಹರಳು ಉದುರುವಿಕೆ, ಹಿಂಗಾರ ಒಣಗುವುದು, ಹಿಡಿಮುಂಡಿಗೆ ರೋಗ, ಸುಳಿ ರೋಗಗಳಿಗೆ ಬ್ರೇಕ್
ಅಡಿಕೆ ತೋಟದಲ್ಲಿ ರೋಗಗಳು ಕಡಿಮೆಯಾಗಿ ಹೆಚ್ಚು ಇಳುವರಿ ಪಡೆಯಬೇಕು, ಉತ್ತಮ ಆದಾಯ ಗಳಿಸಬೇಕು ಎಂಬುದು ಎಲ್ಲಾ ಅಡಿಕೆ ಬೆಳೆಗಾರರ ಆಶಯ. ಆದರೆ ನಮ್ಮ ರೈತರು ರಾಸಾಯನಿಕಗಳ ಮೊರೆ ಹೋಗಿ ತೋಟಗಳನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ತಾತ್ಕಾಲಿಕ ಇಳುವರಿಗಾಗಿ ಮಣ್ಣನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಶಿವಮೊಗ್ಗದ ಈ ರೈತರು ಇದನ್ನು ಅರಿತುಕೊಂಡು ಸಾವಯವದಲ್ಲೇ ಉತ್ತಮವಾಗಿ ಅಡಿಕೆ ತೋಟ ನಿರ್ವಹಣೆ ಮಾಡುತ್ತಿದ್ದಾರೆ.
|
ತಿಂಗಳಾದ್ರೂ ಹಾಳಾಗದ ಟೊಮ್ಯಾಟೋ ಬೆಳೆದಿದ್ದು ಹೇಗೆ ಈ ರೈತ..?
ಸಾವಯವ ಕೃಷಿ ಪದ್ಧತಿಯ ಬಗ್ಗೆ ಅನುಮಾನ ಪಡುವ ರೈತರ ಮಧ್ಯೆ ಇಲ್ಲೊಬ್ಬ ರೈತ 10 ವರ್ಷದಿಂದ ಸಾವಯವ ಕೃಷಿ ಪದ್ದತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೈವಿಕ ಗೊಬ್ಬರ ಬಳಸಿ ಸಾವಯವ ಕೃಷಿಯಲ್ಲೇ ಉತ್ತಮ ಇಳುವರಿ ಪಡೆಯಬಹುದು ಎಂಬುದಕ್ಕೆ ಇವರು ಪ್ರತ್ಯಕ್ಷ ಸಾಕ್ಷಿ.
|
ಕಬ್ಬು, ಶೇಂಗಾ, ಜೋಳ… ಈ ಕೃಷಿಕ ಏನು ಬೆಳೆದರೂ ಸೂಪರ್
ಕೃಷಿಯಲ್ಲಿ ಮೊದಲ ಪ್ರಯತ್ನ. ಸಾವಯವ ಕೃಷಿ ಪದ್ಧತಿಯಲ್ಲೇ ಬೆಳೆ ಬೆಳೆದಿದ್ದಾರೆ ರೈತ ಪರಶುರಾಮ್. ಕಬ್ಬು, ಜೋಳ, ಶೇಂಗಾ ಹೀಗೆ ವಿವಿಧ ಬೆಳೆಗಳನ್ನು ಬೆಳೆದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಗ್ರಾಮದ ರೈತರಾದ ಪರಶುರಾಮ್ ಅವರಿಗೆ ಇದು ವ್ಯವಸಾಯದ ಮೊದಲ ಅನುಭವ. ಯಾವುದೇ ರಾಸಾಯನಿಕ ಬಳಸದೆ ಬೆಳೆ ಬೆಳೆಯುತ್ತಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿ ಕಬ್ಬು, ಶೇಂಗಾ ಮತ್ತು ಜೋಳ ಬೆಳೆಗಳನ್ನು ಬೆಳೆದಿದ್ದಾರೆ.
|
MNC ಬಿಟ್ಟು ಸಾವಯವದಲ್ಲಿ ದಾಳಿಂಬೆ ಬೆಳೆಯಲು ಬಂದಿದ್ದೇಕೆ ಈ ಎಂಜಿನಿಯರ್..?
ಹಳ್ಳಿ ಬಿಟ್ಟು ಪಟ್ಟಣಕ್ಕೆ ಕೆಲಸ ಹುಡುಕಿ ಬರುವ ಈಗಿನ ಯುವಜನತೆಯ ಮಧ್ಯೆ, ಈ ಎಂಜಿನಿಯರ್ ಬೆಂಗಳೂರಿನಲ್ಲಿನ ಉದ್ಯೋಗ ಬಿಟ್ಟು ಕೃಷಿ ಮಾಡಲು ಹಳ್ಳಿಗೆ ಬಂದಿದ್ದಾರೆ. ಸಾವಯವ ಕೃಷಿಯ ಕಡೆ ಒಲವು ತೋರಿಸಿ, ಸಾವಯವ ಪದ್ಧತಿಯಲ್ಲಿ ದಾಳಿಂಬೆ ಮತ್ತು ಸೀಬೆ ಬೆಳೆದಿದ್ದಾರೆ. ಇವರು ಕೃಷಿಗೆ ಅದರಲ್ಲೂ ಸಾವಯವ ಕೃಷಿಗೆ ಬಂದ ಕಾರಣ ತಿಳಿಯೋಣ ಬನ್ನಿ…
|
1 ಎಕರೆಗೆ 75 ರೂ., 6 ಎಕರೆಗೆ 500 ರೂ. ಖರ್ಚು..! ಏನಿದು ಮ್ಯಾಜಿಕ್?
ಕಲಬುರಗಿ : ರಾಸಾಯನಿಕ ಕೃಷಿಯಲ್ಲಿ ಗೊಬ್ಬರದ ಬಳಕೆ ಹೆಚ್ಚಾಗಿ, ಕೃಷಿ ಭೂಮಿಯ ಆಹುತಿ ದಿನೇದಿನೇ ಹೆಚ್ಚಾಗುತ್ತಿದೆ. ಕೃಷಿ ಭೂಮಿಯ ಫಲವತ್ತತೆ ರಾಸಾಯನಿಕ ಗೊಬ್ಬರಗಳ ವಿಷಕ್ಕೆ ಸತ್ತು ಹೋಗುತ್ತಿದೆ. ಹೀಗಿರುವಾಗ ಕೃಷಿಕರು ಬೆಳೆಯ ಇಳುವರಿ ಪಡೆಯುವುದರಲ್ಲಿ ವಿಫಲವಾಗುತ್ತಿದ್ದಾರೆ. ಕೃಷಿ ಭೂಮಿಯ ನಾಶದ ಜತೆಗೆ ವಿನಾಶಕ ಖರ್ಚನ್ನು ಮಾಡಿಕೊಂಡು ರೈತ ಸಾಲದ ಸುಳಿಯಲ್ಲಿ ಸಿಲುಕುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.
|
ಅಪ್ಪನಿಗೆ ರಾಸಾಯನಿಕ ಕೃಷಿ ಮೇಲೆ ಒಲವು, ಮಗನಿಗೆ ಸಾವಯವ ಕೃಷಿಯೇ ಚೆಲುವು
ಸಾವಯವ ಕೃಷಿ ಉತ್ತಮವೋ ಅಥವಾ ರಾಸಾಯನಿಕ ಕೃಷಿ ಪದ್ಧತಿ ಉತ್ತಮವೋ? ಇದೇ ಈ ಅಪ್ಪ-ಮಗನ ವಾದ. ಮಗನಿಗೆ ಸಾವಯವ ಕೃಷಿ ಹಿಡಿಸಿದರೆ, ಸಾವಯವ ಕೃಷಿ ಪದ್ಧತಿಯಿಂದ ನಷ್ಟದ ಹಾದಿ ಹಿಡಿಯಬೇಕಾಗುತ್ತದೆ ಎಂಬುದು ಅಪ್ಪನ ವಾದ. ಇವರಿಬ್ಬರಲ್ಲಿ ಯಾರು ಸರಿ? ಸಾವಯವ ಕೃಷಿಯಿಂದ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದು ಎಷ್ಟೋ ರೈತರ ಅನಿಸಿಕೆ. ಆದರೆ ಸಾಯವಯವದಲ್ಲಿ ರಾಸಾಯನಿಕ ಪದ್ಧತಿಗಿಂತ ಕಡಿಮೆ ಖರ್ಚು ಮತ್ತು ಇಳುವರಿ ಹೆಚ್ಚಾಗುತ್ತದೆ.
|
ಉತ್ತಮ ಗುಣಮಟ್ಟದ ರೇಷ್ಮೆ ಬೆಳೆಯುವುದು ಈಗ ಸುಲಭ
ಹಿಪ್ಪುನೇರಳೆಯ ಎಲೆಗಳು ರೇಷ್ಮೆ ಹುಳುಗಳಿಗೆ ಏಕೈಕ ಆಹಾರವಾಗಿದೆ. ಆದ್ದರಿಂದ ಹಿಪ್ಪುನೇರಳೆ ಕೃಷಿ ನೇರವಾಗಿ ರೇಷ್ಮೆ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಹಿಪ್ಪುನೇರಳೆ ಹೆಚ್ಚು ಬೆಳೆಯುವ ದೇಶಗಳಲ್ಲಿ ಹೆಚ್ಚು ರೇಷ್ಮೆ ಉತ್ಪಾದಿಸಲಾಗುತ್ತದೆ. ಜಗತ್ತಿನ ಹಿಪ್ಪುನೇರಳೆ ಕೃಷಿಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ ಮತ್ತು ರೇಷ್ಮೆ ಉತ್ಪಾದನೆಯಲ್ಲೂ 2ನೇ ಸ್ಥಾನದಲ್ಲಿದೆ. ಇಲ್ಲೊಬ್ಬ ರೈತರು ಸಾವಯವದಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿ ಹಿಪ್ಪುನೇರಳೆ ಬೆಳೆದಿದ್ದಾರೆ.
|
ಸಾವಯವ ಈರುಳ್ಳಿ: ಉತ್ತಮ ಆದಾಯ ಗಳಿಸುವುದು ಹೀಗೆ…
ಈರುಳ್ಳಿ ಎಲ್ಲಾ ರೀತಿಯ ಅಡುಗೆ, ತಿಂಡಿ-ತಿನಿಸುಗಳಲ್ಲಿ ಬಳಸುವ ತರಕಾರಿಯಾಗಿದೆ. ನಮ್ಮ ದೇಶದಲ್ಲಂತೂ ಈರುಳ್ಳಿ ಇಲ್ಲದೆ ಅಡುಗೆಯೇ ಇಲ್ಲಾ ಎಂಬ ಮಟ್ಟಿಗೆ ಇದರ ಬಳಕೆಯಿದೆ. ಹಾಗಾಗಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ದೇಶಗಳಲ್ಲಿ ಚೀನಾ ನಂತರ 2ನೇ ಸ್ಥಾನದಲ್ಲಿ ಭಾರತ ಇದೆ. ನಮ್ಮ ದೇಶದಲ್ಲಿ ತುಂಬಾ ರೈತರು ಈರುಳ್ಳಿ ಬೆಳೆಯುತ್ತಾರೆ. ಈರುಳ್ಳಿ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕವು 3ನೇ ಸ್ಥಾನದಲ್ಲಿದೆ. ನಮ್ಮ ರಾಜ್ಯದಲ್ಲಿ ಈರುಳ್ಳಿಗೆ ತುಂಬಾ ಬೇಡಿಕೆಯಿದ್ದು, ಇದರ ಸದುಪಯೋಗ ರೈತರು ಪಡೆದುಕೊಳ್ಳಬಹುದು. ಇಲ್ಲೊಬ್ಬ ರೈತರು ಈರುಳ್ಳಿಯಲ್ಲಿ ಉತ್ತಮ ಇಳುವರಿಯನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
|
28 ಎಕರೆಯಲ್ಲಿ ಸಾವಯವದಲ್ಲಿ ಕಡಲೆ ಬೆಳೆದ ಕೃಷಿಕರ ಅನುಭವ
ಕಡಲೆ ಒಂದು ಅತೀ ಮುಖ್ಯ ವಾಣಿಜ್ಯ ಬೆಳೆ. 2020ರಲ್ಲಿ ಭಾರತವು ಜಾಗತಿಕ ಮೊತ್ತದ ಒಟ್ಟು 73% ರಷ್ಟು ಕಡಲೆಯನ್ನು ಉತ್ಪಾದಿಸಿತ್ತು. ಈ ಮಟ್ಟಿಗೆ ಭಾರತದ ಕಡಲೆಗೆ ಬೇಡಿಕೆಯಿದ್ದು, ಇದರ ಸದುಪಯೋಗ ರೈತರು ಪಡೆದುಕೊಳ್ಳಬಹುದು. ಉತ್ತಮ ಇಳುವರಿಯಿಂದ ಆದಾಯ ಹೆಚ್ಚಿಸಿಕೊಳ್ಳಬಹುದು.
|