Blog

ಕಬ್ಬು ಬೆಳೆಯಲ್ಲಿ 100 ಟನ್ ಇಳುವರಿ ಪಡೆಯೋಕೆ ಸಾಧ್ಯ ಇದೆಯಾ..? ಇದೇ ಎನ್ನುವುದಾದರೆ ಏನೆಲ್ಲಾ ಸೂತ್ರಗಳನ್ನು ಬಳಸಬೇಕೆಂಬ ಗೊಂದಲದಲ್ಲಿ ರೈತರು ಇರ್ತಾರೆ. ಇವುಗಳ ಬಗ್ಗೆ ಪ್ರಮುಖ ಮಾಹಿತಿ ಇಲ್ಲಿದೆ.

ಬೀಜೋಪಚಾರ : ಬೀಜೋಪಚಾರ ಬಿತ್ತುವ ಬೆಳೆಗಳಿಗೆ ರಕ್ಷಾ ಕವಚ, ರೋಗಗಳಿಂದ ಬೆಳೆಯನ್ನು ಕಾಪಾಡಿ, ಉತ್ತಮ ಮೊಳಕೆ ಯೊಡೆಯೋಕೆ ಸಹಾಯಕವಾಗುತ್ತದೆ.


ಸೂಕ್ತ ಅಂತರ: ಕಬ್ಬಿನಲ್ಲಿ ಅಂರವನ್ನು ಹೆಚ್ಚಿಸಲು ರೈತರು ಹಿಂದೇಟು ಹಾಕುತ್ತಾರೆ. ಕಾರಣ ಹೆಚ್ಚು ಅಂತರ ನೀಡಿದಾಗ ಕಬ್ಬಿನ ಸಾಲುಗಳು ಕಡಿಮೆ ಗುತ್ತವೆ, ಇಳುವರಿ ಹೆಚ್ಚಲು ಸಾಧ್ಯವಾಗುವುದಿಲ್ಲ ಎಂಬ ನಂಬಿಕೆ. ವಾಸ್ತವವಾಗಿ ಬೆಳೆಯಲ್ಲಿ ಹೆಚ್ಚು ಅಂತರ ನೀಡಿದಾಗ, ಬೆಳೆಗೆ ಬೇಕಾದ ಗಾಳಿ, ಬೆಳಕು ಸಮರ್ಪಕವಾಗಿ ದೊರೆಯುವುದರಿಂದ ಬೆಳೆ ಬೆಳವಣಿಗೆ ಚೆನ್ನಾಗಿ ಆಗುವುದರ ಜತೆಗೆ ಇಳುವರಿ ಹೆಚ್ಚಳವಾಗುತ್ತದೆ.


ಪೋಷಕಾಂಶಗಳ ನಿರ್ವಹಣೆ : ಬೆಳೆಗಳಿಗೆ ಪೋಷಕಾಂಶದ ನಿರ್ವಹಣೆ ಬಹುಮುಖ್ಯ. ಪೋಷಕಾಂಶಗಳನ್ನು ಪೂರೈಸೋದ್ರಲ್ಲಿ, ನಮ್ಮ ಕೃಷಿಕರು ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕೃಷಿ ಭೂಮಿ, ಬೆಳೆ ಎರಡೂ ಹಾಳುಮಾಡಿಕೊಳ್ಳುತ್ತಾರೆ. ಹಾಗಾಗಿ ಕೃಷಿಕರು ಸಾವಯವ ಕೃಷಿ ಪದ್ಧತಿಯಲ್ಲಿ ಪೋಷಕಾಂಶಗಳನ್ನು ಬೆಳೆಗೆ ನೀಡಬೇಕು. ಉದಾಹರಣೆಗೆ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸುವುದು ಉತ್ತಮ.


ನೀರಿನ ನಿರ್ವಹಣೆ : ಪ್ರತಿಯೊಂದು ಬೆಳೆಯಲ್ಲಿ ನೀರಿನ ನಿರ್ವಹಣೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಅದೇ ರೀತಿಯಾಗಿ ಕಬ್ಬು ಬೆಳೆಯಲ್ಲಿಯೂ ಅಷ್ಟೇ. ನಾವು ಕೃಷಿ ಭೂಮಿಗೆ ನೀರನ್ನು ನೀಡುವಾಗ, ಮಣ್ಣಿಗೆ ನೀರಿನ ಅವಶ್ಯಕತೆ ಇದೆಯಾ? ಇಲ್ಲವಾ ಎಂಬುದನ್ನು ತಿಳಿದು ನಂತರ ಕೊಡಬೇಕು. ಕಾಲಮಾನಕ್ಕೆ ಅನುಗುಣವಾಗಿ ಬೆಳೆಗೆ ನೀರು ನೀಡಬೇಕು.


ರೋಗ ಮತ್ತು ಕೀಟಗಳ ನಿರ್ವಹಣೆ: ರೋಗ ಹಾಗೂ ಕೀಟಗಳ ನಿರ್ವಹಣೆ ಕೃಷಿಯಲ್ಲಿ ಬಹುದೊಡ್ಡ ಚಾಲೆಂಜ್. ಇವುಗಳ ನಿರ್ವಹಣೆಗೆ ರೈತರು, ರಾಸಾಯನಿಕ ಸ್ಪ್ರೇಗಳನ್ನು ಬಳಸಿ ಬೆಳೆಯಲ್ಲಿಯೂ ಕೂಡ ದೊಡ್ಡ ಹಾನಿಯನ್ನು ತಂದುಕೊಳ್ತಾರೆ. ಹಾಗಾಗಿ ರಾಸಾಯನಿಕಗಳನ್ನು ಬಳಸದೆ ಸಾವಯವ ಪದ್ಧತಿಯಲ್ಲಿ ನಿರ್ವಹಣೆ ಮಾಡಬೇಕು.


ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಈ ಕೆಳಗಿನ ವೀಡಿಯೋವನ್ನು ಕ್ಲಿಕ್ ಮಾಡಿ, ಸಾವಯವದಲ್ಲಿ ಕಬ್ಬಿನ ಇಳುವರಿ ಹೆಚ್ಚಿಸುವ ಮಾರ್ಗಗಳು ದೊರೆಯುತ್ತವೆ.       

https://www.youtube.com/watch?v=7A-qFCmdaf4&t=253s


ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/


ವರದಿ: ವನಿತಾ ಪರಸನ್ನವರ್

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies