ಉತ್ಕೃಷ್ಟ ಸುಗಂಧರಾಜ ಹೂ ಬೆಳೆಯುವುದು ಹೇಗೆ..?

       ಸುಗಂಧರಾಜ ಹೂವು ಯಾರಿಗೆ ಗೊತ್ತಿಲ್ಲ ಹೇಳಿ. ಹಾರಗಳಲ್ಲಿ, ಹೂಗುಚ್ಛಗಳಲ್ಲಿ ಬಳಸಲಾಗುವ ಜನಪ್ರಿಯ ಹೂವು. ಇದರ ಸುಗಂಧದ ಕಾರಣದಿಂದ ಇದನ್ನು ಪರ್ಫ್ಯೂಮ್ ಗಳಲ್ಲಿ ಬಳಸಲಾಗುತ್ತದೆ. ಕೃಷಿ ವಲಯದಲ್ಲಿ ಕಡಿಮೆ ಕೇಳಿಬರುವ, ಕಡಿಮೆ ರೈತರು ಬೆಳೆಯುವ ಬೆಳೆ ಇದಾಗಿದೆ. ಇದರಿಂದ ಒಳ್ಳೆ ಲಾಭ ಪಡೆಯಬಹುದು. ಆದರೆ ಇದನ್ನು ಬೆಳೆಯುವುದು ಹೇಗೆ? ಬನ್ನಿ ತಿಳಿಯೋಣ.

ರೈತ ಶಕ್ತಿ ಯೋಜನೆಯ ಸಮಗ್ರ ಮಾಹಿತಿ ಇಲ್ಲಿದೆ

ಬೆಂಗಳೂರು: ರೈತರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಕೃಷಿಇಲಾಖೆ ಮುಂದಾಗಿದ್ದು,  ಕೃಷಿಕರ ಮೇಲಿನ ಹೊರೆ ತಪ್ಪಿಸುವ ಸಲುವಾಗಿ ಬಜೆಟ್‌ನಲ್ಲಿ ಘೋಷಿಸಿದಂತೆ " ರೈತಶಕ್ತಿ ಯೋಜನೆ" ರೂಪಿಸಿದೆ.

ಕೇವಲ 15 ಗುಂಟೆಯಲ್ಲಿ, 4 ಲಕ್ಷ ಆದಾಯ..!

ಹಾವೇರಿ: ಕೃಷಿ ಭೂಮಿ ಕಡಿಮೆ ಇದ್ದರೆ, ರೈತರು ಹೆಚ್ಚು ಆದಾಯ ಪಡೆಯೋಕೆ ಸಾಧ್ಯವಿಲ್ಲಎಂಬ ಮಾತಿಗೆ ಟಕ್ಕರ್ ಕೊಟ್ಟಿದ್ದಾರೆ ಈ ಸಾವಯವ ಕೃಷಿಕ. ಕೇವಲ15 ಗುಂಟೆ ಕೃಷಿ ಭೂಮಿಯಲ್ಲಿ ಸಧ್ಯ 4 ಲಕ್ಷ ರೂ. ಆದಾಯ ಪಡೆಯುತ್ತಿರುವ ಇವರ ಸಾಧನೆ ಎಲ್ಲಾ ಕೃಷಿಕರಿಗೆ ಮಾದರಿಯಾಗಿದೆ.

ಪ್ರತಿ ಕೆ.ಜಿ ಬಾಳೆಗೆ 50 ರೂ. ಪಡೆಯುತ್ತಿರುವ ಕೃಷಿಕ..!

ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕರೆ, ರೈತ ಪಟ್ಟ ಶ್ರಮಕ್ಕೆ ಪ್ರತಿಫಲ ದೊರೆತಂತಾಗುತ್ತದೆ. ಹಾಗಿದ್ದಾಗ ಬೆಲೆ ಚೆನ್ನಾಗಿ ಸಿಗಬೇಕೆಂದರೆ ಮೊದಲು ಬೆಳೆ ಆರೋಗ್ಯವಾಗಿ ಬೆಳೆದು, ಹೆಚ್ಚಿನ ಇಳುವರಿಯನ್ನು ರೈತನಿಗೆ ನೀಡಬೇಕು. ಮಾರ್ಕೆಟ್ ನಲ್ಲಿ ಹೆಚ್ಚಿನ ಬೇಡಿಕೆಯಲ್ಲಿ ನಾವು ಬೆಳೆದ ಆಹಾರ ಮಾರಾಟ ಆಗಲು, ನೋಡುವುದಕ್ಕೆ ಆಕರ್ಷಕವಾಗಿ, ತಿನ್ನಲು ರುಚಿಯಾಗಿ ಇರಬೇಕಾಗುತ್ತದೆ.

ಕಿಸಾನ್ ದಿವಸ್: ರೈತರು ಆರ್ಥಿಕವಾಗಿ ಸದೃಢರಾಗಲು ಏನು ಮಾಡಬೇಕು?

       ಡಿಸೆಂಬರ್ 23, ಭಾರತದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ.  ಈ ದಿನವನ್ನು ಕಿಸಾನ್ ದಿವಸ್’ ಅಥವಾ ರಾಷ್ಟ್ರೀಯ ರೈತರ ದಿನವೆಂದು ದೇಶದಾದ್ಯಂತ ಆಚರಿಸಲಾಗುತ್ತದೆ. ಸಮಾಜಕ್ಕೆ ರೈತರ ಕೊಡುಗೆ, ದೇಶದ ಒಟ್ಟಾರೆ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಮಹತ್ವವನ್ನು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಕೃಷಿ ಮತ್ತು ರೈತರಿಗಾಗಿ ದುಡಿದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಗೌರವಾರ್ಥವಾಗಿ ಅವರ ಜನ್ಮದಿನವನ್ನು ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ.

ದ್ರಾಕ್ಷಿ ಬೆಳೆಗಾರ ತಯಾರಿಸಿದ ಔಷಧ: ಡೌನಿ ಬಾಧೆಯೂ ಇಲ್ಲ, ಕೀಟಬಾಧೆಯೂ ಇಲ್ಲ

       ಅಕ್ಕ-ಪಕ್ಕದ ದ್ರಾಕ್ಷಿ ತೋಟಗಳು ಡೌನಿ ಬಾಧೆಯಿಂದ ನರಳುತ್ತಿದ್ದರೆ, ಈ ರೈತನ ದ್ರಾಕ್ಷಿ ತೋಟ ಮಾತ್ರ ಕಂಗೊಳಿಸುತ್ತಿದೆ. ಸಾವಯವ ಕೃಷಿಯ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಇವರು, ಸ್ವತಃ ತಾವೇ ರೋಗ, ಕೀಟಬಾಧೆಗೆ ಪರಿಹಾರ ಕಂಡುಕೊಂಡಿದ್ದಾರೆ.

ಪಾಲಿಹೌಸ್ ನಲ್ಲಿ ವೀಳ್ಯದೆಲೆ ಕೃಷಿ ಎಷ್ಟು ಲಾಭಕರ?

       ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಸರಗೂರು ಗ್ರಾಮದ ಈ ರೈತ ತಮ್ಮ 3.5 ಎಕರೆ ಜಮೀನಿನಲ್ಲಿ ಪಾಲಿಹೌಸ್ ನಲ್ಲಿ ವೀಳ್ಯದೆಲೆ ಬೆಳೆದು ಲಾಭ ಗಳಿಸುತ್ತಿದ್ದಾರೆ. ಪಾನ್ ಮತ್ತಿತರ ಖಾದ್ಯಗಳಲ್ಲಿ ಬಳಸಲಾಗುವ ತಳಿಯನ್ನು ಆಯ್ಕೆ ಮಾಡಿ ಕೃಷಿ ಮಾಡಿದ್ದಾರೆ ರೈತ ಪಾಷಾ. ಸಂಪೂರ್ಣ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿ ಬೆಳೆದಿದ್ದಾರೆ. ಲಕ್ಷಾಂತರ ಜನರು ತಿನ್ನುವ ವೀಳ್ಯದೆಲೆಯನ್ನು ಸಾವಯವದಲ್ಲೇ ಬೆಳೆದು ಜನರಿಗೆ ವಿಷಮುಕ್ತ ಆಹಾರ ಕೊಡಬೇಕು ಎಂದು ಸಾವಯವ ಕೃಷಿ ಆಯ್ದುಕೊಂಡೆ ಎನ್ನುತ್ತಾರೆ ಈ ಯುವ ರೈತ.

ಸಾವಯವ ಕೃಷಿ ಬಗ್ಗೆ ಜನಪ್ರಿಯ ನಾಯಕರು, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್ ಬಿಚ್ಚುಮಾತು

       ಸಾವಯವ ಮತ್ತು ನೈಸರ್ಗಿಕ ಕೃಷಿ ನಮ್ಮ ಪೂರ್ವಜರು ನಮಗೆ ಕೊಟ್ಟ ಬಳುವಳಿ. ಈ ಪದ್ಧತಿಯಲ್ಲಿ ಖರ್ಚು ಕಡಿಮೆ ಮತ್ತು ಇದರಿಂದ ಬಂದ ಫಸಲು ಆರೋಗ್ಯಕರ ಮತ್ತು ಪೌಷ್ಟಿಕಾಂಶಗಳಿಂದ ಕೂಡಿತ್ತು. ಆದರೆ ಈಗ ರಾಸಾಯನಿಕ ಪದ್ಧತಿಯಲ್ಲಿ ಬೆಳೆದ ಬೆಳೆಗಳು ಮನುಷ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕಲಬುರಗಿ ಜಿಲ್ಲೆಯ ಜನಪ್ರಿಯ ನಾಯಕರು ಮತ್ತು ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್ ಅವರು ಕೂಡ ಸಾವಯವ ಕೃಷಿಯ ಕಡೆ ಒಲವು ತೋರಿಸಿದ್ದಾರೆ.  

ಹೆಸರು, ಹತ್ತಿ ಬೆಳೆ ಸೊಗಸಾಗಿ ಬರಲು ಈ ರೈತ ಮಾಡಿದ ಸರಳ ಉಪಾಯ..!

       ಸಾವಯವ ಪದ್ಧತಿಯಲ್ಲಿ ಬೆಳೆದ ಹತ್ತಿ ಬೆಳೆಗೂ ರಾಸಾಯನಿಕ ಪದ್ಧತಿಯಲ್ಲಿ ಬೆಳೆದ ಬೆಳೆಗೂ ವ್ಯತ್ಯಾಸ ನೋಡಿದ್ದೀರಾ? ಪದವೀಧರರಾದ ಇವರು ಕೃಷಿಯನ್ನೇ ಬದುಕಾಗಿ ಕಟ್ಟಿಕೊಳ್ಳುತ್ತಿದ್ದಾರೆ. ಈಗ ರೈತನಾಗಿ ಸಾವಯವ ಕೃಷಿ ಮಾಡುತ್ತಿದ್ದಾರೆ.

ಸೌತೆಕಾಯಿ ನೆಚ್ಚಿಕೊಂಡು ಅಡಿಕೆ ತೋಟ ಹಾಳು?

       ಅಡಿಕೆ ತೋಟದಲ್ಲಿ ಸೌತೆಕಾಯಿ ಬೆಳೆದರೆ ಏನಾಗುತ್ತೆ? ತೋಟ ಹಾಳಾಗುತ್ತಾ? ಖಂಡಿತ ಇಲ್ಲಾ. ಆದರೆ ರಾಸಾಯನಿಕ ಬಳಸಿ ಬೆಳೆಯುವುದರಿಂದ ಅಡಿಕೆ ತೋಟ ಹಾಳಾಗುವುದು ಗ್ಯಾರಂಟಿ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ದೇವರಳ್ಳಿ ಗ್ರಾಮದ ಲೋಕೇಶ್ ಅವರು 240 ಅಡಿಕೆ ಮರಗಳನ್ನು ಹೊಂದಿದ್ದಾರೆ. ಮೊದಲು ಇವರು ರಾಸಾಯನಿಕ ಬಳಸುತ್ತಿದ್ದರು. ಮೈಕ್ರೋಬಿಯ ಸಂಪನ್ಮೂಲ ವ್ಯಕ್ತಿಯಾದ ಮಂಜುನಾಥ್ ಅವರು ಲೋಕೇಶ್ ಅವರಿಗೆ ಸಾವಯವ ಪದ್ಧತಿಯ ಬಗ್ಗೆ ತಿಳಿಸಿ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಲು ಸಲಹೆ ನೀಡಿದರು. ಕಳೆದ ವರ್ಷದಿಂದ ಡಾ.ಸಾಯಿಲ್ ಬಳಸುತ್ತಿರುವ ಇವರು ಉತ್ತಮ ಫಲಿತಾಂಶ ಕಂಡಿದ್ದಾರೆ. ಹೊಂಬಾಳೆ ಉದ್ದ ಬರುತ್ತಿದ್ದು, ಕಾಯಿಗಳೂ ಕೂಡ ಅಧಿಕವಾಗಿ ಬರುತ್ತಿದೆ ಎನ್ನುತ್ತಾರೆ.

|< ... 14 15 16 17 18 19 ...>|
Home    |   About Us    |   Contact    |   
microbi.tv | Ocat Online Catalog Marketing Service in India | Powered by Ocat Digital Pvt.Ltd