Blog

ಸಾವಯವ ಕೃಷಿ ಮಾಡಲು ಹಿಂಜರಿಯುವ ರೈತರಿಗೆ ಮಾದರಿ ಈ ಆಧುನಿಕ ರೈತ. ಉದ್ಯೋಗದಲ್ಲಿದ್ದರೂ ಕೃಷಿಯನ್ನೂ ಬಿಡದೆ ಸಾವಯವ ಕೃಷಿ ಮಾಡುತ್ತಿದ್ದಾರೆ. ತಮ್ಮ 2.5 ಎಕರೆ ಜಮೀನಿನಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಮೊದಲು ಅವಶ್ಯಕತೆ ಬಿದ್ದಾಗ ಸ್ವಲ್ಪ ರಾಸಾಯನಿಕ ಗೊಬ್ಬರ ಬಳಸಿದರು. ಈಗ ಸಂಪೂರ್ಣವಾಗಿ ಸಾವಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ.

 

       ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ರೈತರು ಬಸುರಾಜ್ ಭಟ್. ಮೂಲತಃ ಕೃಷಿ ಹಿನ್ನೆಲೆಯವರಾಗಿದ್ದು, ಸ್ವಂತ ಉದ್ಯೋಗದಲ್ಲಿದ್ದಾರೆ. ಕೃಷಿ ಮೇಲಿರುವ ಪ್ರೀತಿಯಿಂದ ಉದ್ಯೋಗದ ಜೊತೆ ಅಡಿಕೆ ಕೃಷಿ ಮಾಡುತ್ತಿದ್ದಾರೆ. ಅಡಿಕೆ ಜೊತೆ ಬಾಳೆಯನ್ನು ಬೆಳೆದು ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಗೊಣ್ಣೆಹುಳುವಿನ ಕಾಟ ಹೆಚ್ಚಿರುವುದರಿಂದ ಹಲವು ಮರಗಳು ಹಾಳಾಗಿವೆ. ಪೋಷಕಾಂಶಗಳ ಕೊರತೆಯಿಂದಾಗಿ ಮರಗಳ ಬೆಳವಣಿಗೆ ಕುಂಠಿತವಾಗಿದ್ದವು. ಕೊಳೆರೋಗವೂ ಬಂದು ಹಲವು ಮರಗಳು ನಾಶವಾದವು.


ಈಗ ಡಾ.ಸಾಯಿಲ್ ಬಳಸಿದ ಮೇಲೆ ಮರಗಳು ಚೇತರಿಸಿಕೊಂಡು ಬೆಳೆಯುತ್ತಿವೆ ಎನ್ನುತ್ತಾರೆ ಬಸುರಾಜ್. ಹಾಗಾಗಿ ಡಾ.ಸಾಯಿಲ್ ಬಳಸಿಯೇ ಸಾವಯವ ಕೃಷಿ ಮಾಡುವುದಾಗಿ ನಿರ್ಧರಿಸಿದ್ದಾರೆ. ರಾಸಾಯನಿಕ ಬಳಸಿದ್ದಾಗ ಮಣ್ಣು ಇಷ್ಟು ಉತ್ತಮವಾಗಿರಲಿಲ್ಲ, ಬೆಳವಣಿಗೆ ಕೂಡ ಕಡಿಮೆಯಿತ್ತು. ಆದರೆ ಈಗ ಸಾವಯವ ಕೃಷಿಯಿಂದ ಉತ್ತಮವಾಗಿದೆ ಎಂಬುದು ಬಸುರಾಜ್ ಅವರಿಗೆ ಮನದಟ್ಟಾಗಿದೆ.


       ರೈತರು ಸಾವಯವ ಕೃಷಿ ಅಳವಡಿಸಿಕೊಂಡು ಬದಲಾವಣೆ ಮಾಡಿಕೊಳ್ಳಬೇಕು ಎಂಬುದು ಇವರ ಅಭಿಪ್ರಾಯ. ಬಸುರಾಜ್ ಭಟ್ ಅವರು ಸಾಕಷ್ಟು ತಪ್ಪುಗಳನ್ನು ಮಾಡಿ, ಅದರಿಂದ ಕಲಿತು ಬದಲಾವಣೆ ಮಾಡಿಕೊಂಡಿದ್ದಾರೆ. ಇದು ರೈತರಿಗೆ ಪಾಠ. ಕೃಷಿ ವಿಧಾನಗಳು, ತಂತ್ರಜ್ಞಾನಗಳನ್ನು ಅರಿತು ಕೃಷಿ ಮಾಡಿದರೆ ಕೃಷಿಯಲ್ಲಿ ಯಶಸ್ವಿಯಾಗಬಹುದು. ಗೊಣ್ಣೆಹುಳುವನ್ನು ಹತೋಟಿಗೆ ತರಲು ಸಾವಯವ ಪದ್ಧತಿಯಲ್ಲೇ ವಿಧಾನಗಳನ್ನು ಅನುಸರಿಸಿದ್ದಾರೆ.

 

ಬಸುರಾಜ್ ಅವರ ಸಂದರ್ಶನ ನೋಡಲು, ಗೊಣ್ಣೆಹುಳು ಮತ್ತು ರೋಗಗಳನ್ನು ಹತೋಟಿಗೆ ತರಲು ಇವರು ಅನುಸರಿಸುತ್ತಿರುವ ವಿಧಾನಗಳನ್ನು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

 

https://www.youtube.com/watch?v=Wh4u2-AJ1Vs

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 




Blog




Home    |   About Us    |   Contact    |   
microbi.tv | Powered by Ocat Online Advertising Service in India