Blog

       ನೇಂದ್ರ ಬಾಳೆ ಕೇರಳದ ಒಂದು ಬಾಳೆ ತಳಿ. ದೊಡ್ಡ ಬಾಳೆಹಣ್ಣನ್ನು ಬಿಡುವ ಈ ತಳಿ, ಹೆಚ್ಚು ವಾಣಿಜ್ಯ ಬೆಲೆಯನ್ನು ಹೊಂದಿದೆ. ಈ ಬೆಳೆ ಹೆಚ್ಚು ಪೋಷಕಾಂಶಗಳನ್ನು ಕೇಳುವುದರಿಂದ ಮಣ್ಣಿನ ಫಲವತ್ತತೆ ತುಂಬಾ ಮೂಖ್ಯ. ಮೈಸೂರಿನ ರೈತರೊಬ್ಬರು ಯಶಸ್ವಿಯಾಗಿ ನೇಂದ್ರ ಬಾಳೆ ಬೆಳೆಯುತ್ತಿದ್ದಾರೆ. ಸಾವಯವ ಕೃಷಿ ಅಳವಡಿಸಿಕೊಂಡು ಬಾಳೆ ಬೆಳೆಯುತ್ತಿರುವ ಇವರು ನಿರ್ವಹಣೆಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

 

       ಮೈಸೂರು ಜಿಲ್ಲೆ  H.D ಕೋಟೆ ತಾಲ್ಲೂಕಿನ ಇಟ್ನಾ ಕಾಲೋನಿಯ ರೈತ ಶಿವಣ್ಣ ಮೂಲತಃ ಕೃಷಿ ಕುಟುಂಬದವರು. ಮೊದಲೆಲ್ಲಾ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕೃಷಿ ಮಾಡುತ್ತಿದ್ದ ಇವರು, ಇಂದು ಸಾವಯವದ ಕಡೆ ವಾಲಿದ್ದಾರೆ. ಸ್ನೇಹಿತರಿಂದ ತಿಳಿದು ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. 2 ತಿಂಗಳ ಬಾಳೆ ಗಿಡಗಳು ಉತ್ಕೃಷ್ಟವಾಗಿ ಬೆಳೆದಿವೆ. ಸಾವಯವ ಕೃಷಿಯಲ್ಲಿ ಖರ್ಚು ಕಡಿಮೆ, ಬೆಳವಣಿಗೆ ಉತ್ತಮ ಎನ್ನುವುದು ಶಿವಣ್ಣ ಅವರ ನಿಲುವು.

 

ಬಾಳೆಯಲ್ಲಿ ಅಂತರಬೆಳೆ

 

       ಶಿವಣ್ಣ ಅವರು ಅಂತರ್ಬೆಳೆಯಾಗಿ ಬೀನ್ಸ್ ಬೆಳೆದಿದ್ದಾರೆ. ಇದನ್ನು ಮನೆಗೆ ಕೂಡ ಉಪಯೋಗಿಸಿ, ಉಳಿದಿದ್ದನ್ನು ಮಾರಬಹುದು, ಇದರಿಂದ ಸ್ವಲ್ಪ ಆದಾಯ ಗಳಿಸಬಹುದು ಎನ್ನುತ್ತಾರೆ. ಇದರ ಜತೆ ಇದೊಂದು ಗೊಬ್ಬರದ ಮೂಲವೂ ಆಗಿದೆ. ಗಿಡ ಮತ್ತು ಎಲೆಗಳನ್ನು ಅಲ್ಲೇ ಮಲ್ಚ್ ಮಾಡುವುದರಿಂದ ಉಚಿತ ಗೊಬ್ಬರ ಪೂರೈಕೆಯಾಗುತ್ತದೆ.

 

       ಸಾವಯವ ಕೃಷಿ ಅಳವಡಿಸಿಕೊಂಡಿದ್ದರಿಂದ ಬಾಳೆ ಉತ್ಕೃಷ್ಟವಾಗಿದೆ ಮತ್ತು ಖರ್ಚು ಕಡಿಮೆಯಾಗಿದೆ. ಸಾವಯವ ಕೃಷಿ ಜತೆ ಸಮಗ್ರ ಕೃಷಿ ಅಳವಡಿಸಿಕೊಳ್ಳುವುದು ಉತ್ತಮ ಆಯ್ಕೆ. ಇದರಿಂದ ರೈತರು ವರ್ಷ ಪೂರ್ತಿ ಕಾಯದೇ ನಿರಂತರವಾಗಿ ಆದಾಯಗಳಿಸಿಕೊಂಡು ಆರ್ಥಿಕವಾಗಿ ಸದೃಢರಾಗಬಹುದು.

 

https://www.youtube.com/watch?v=JZJXPHnIDm0&list=PLuN9VcGQAtK59OosL4SdibDzBLMxYn7J5&index=5

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #soil  #fruits  #banana  #bananaplantation  #beans  #intercrops  



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies