ಇಂಗ್ಲೀಷ್ ಕ್ರಾಪ್ ಗಳನ್ನು ಬೆಳೆದು ತಿಂಗಳಿಗೆ 1 ಲಕ್ಷ ಆದಾಯ
ಕೃಷಿ ಕೇವಲ ವಯಸ್ಸಾದವರಿಗಲ್ಲ, ಯುವಜನತೆಯೂ ಕೃಷಿಯಲ್ಲಿ ತೊಡಗಿಕೊಳ್ಳತ್ತಿದೆ. ಯುವ ಜನತೆ ಯಾವುದೇ ಕ್ಷೇತ್ರದಲ್ಲಿ ಬಂದರೂ ಅಲ್ಲಿ ಹೊಸ ಪ್ರಯೋಗ ಮತ್ತು ಪ್ರಯತ್ನಗಳು ನಡೆಯುತ್ತವೆ. ಇಲ್ಲೊಬ್ಬ ಯುವ ರೈತ ನಿರಂತರ ಆದಾಯಗಳಿಸಲು ಇಂಗ್ಲೀಷ್ ಬೆಳೆಗಳನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.
|
2 ಸಾವಿರ ರೂ. ಖರ್ಚು ಮಾಡಿ 10 ಟನ್ ಗೊಬ್ಬರ ಉತ್ಪಾದನೆ
ಇಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಗೊಬ್ಬರ ಸಿಗುವುದು ಬಹಳ ಕಷ್ಟ. ಕಲಬೆರಕೆ ಗೊಬ್ಬರಗಳನ್ನು ಕೊಟ್ಟು ಮೋಸ ಮಾಡುವುದು ತುಂಬಾ ಸಾಮಾನ್ಯವಾಗಿದೆ. ಅದರಲ್ಲೂ ಕೊಟ್ಟಿಗೆ ಗೊಬ್ಬರ ದುಬಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಸ್ವತಃ ಗೊಬ್ಬರ ತಯಾರಿಸಿಕೊಳ್ಳುವುದು ರೈತರಿಗೆ ಲಾಭಕರ. ಇಲ್ಲೊಬ್ಬ ರೈತ ಹಸಿರೆಲೆ ಗೊಬ್ಬರ ಬೆಳೆದಿದ್ದಾರೆ. ಇದರಿಂದ ಆಗುವ ಲಾಭಗಳೇನು? ಬನ್ನಿ ತಿಳಿಯೋಣ.
|
ಅಡಿಕೆ ಬೆಳೆಗಾರರಿಗೆ ಸಿಕ್ಕ ಒಂದೇ ಒಂದು ತರಬೇತಿ ಅವರ ತೋಟದ ಹಣೆಬರಹವನ್ನೇ ಬದಲಿಸಿತು
ದಾವಣಗೆರೆಯ ನಾಗರಕಟ್ಟೆ ಗ್ರಾಮದ ರೈತರಾದ ನಟರಾಜ್ ಮತ್ತು ಮಂಜಣ್ಣ ಕಳೆದ ಎರಡು ವರ್ಷಗಳಿಂದ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಕೆ ಆರ್ ಹುಲ್ಲುನಾಚೇಗೌಡರ ತರಬೇತಿಯ ನಂತರ ಸಾವಯವ ದಾರಿಯಲ್ಲಿ ಸಾಗಿದ್ದಾರೆ. ರಾಸಾಯನಿಕ ಗೊಬ್ಬರ ಬಳಸಿ ಕೃಷಿ ಮಾಡುತ್ತಿದ್ದಾಗ ಕಡಿಮೆ ಇದ್ದ ಇಳುವರಿ ಈಗ ಅಧಿಕವಾಗಿದ್ದು, ತೋಟ ರೋಗಗಳಿಂದಲೂ ಮುಕ್ತವಾಗಿವೆ. ಹಿಂದೆಲ್ಲಾ ರೋಗಗಳು ಬಂದು ಮರಗಳು ಸಾಯುತ್ತಿದ್ದವು. ಆದರೆ ಈಗ ರೋಗ ಬಂದರೂ ತಡೆದುಕೊಳ್ಳುವ ಶಕ್ತಿ ಹೆಚ್ಚಾಗಿದೆ ಎನ್ನುತ್ತಾರೆ ರೈತರು.
|
ಕೃಷಿಗೆ ಭೂಮಿ ಸಿದ್ಧತೆ ಮಾಡುವುದು ಹೇಗೆ? ಬರಿ ಉಳುಮೆ ಮಾಡಿದರೆ ಸಾಕಾ?
ಬಹುತೇಕ ರೈತರು ಉಳುಮೆ ಮಾಡುವುದನ್ನೇ ಭೂಮಿ ಸಿದ್ಧತೆ ಎಂದುಕೊಂಡಿದ್ದಾರೆ. ಆದರೆ ಇದು ಸಿದ್ಧತೆಯ ಒಂದು ಭಾಗ ಅಷ್ಟೇ. ಮಣ್ಣು ಫಲವತ್ತಾಗಿದ್ದರೆ ಮಾತ್ರ ಬೆಳೆ ಬೆಳೆಯಲು ಯೋಗ್ಯವಾಗಿರುತ್ತದೆ. ಸಾವಯವ ಇಂಗಾಲ ಹೆಚ್ಚಿದ್ದರೆ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ. ಇದನ್ನೆಲ್ಲಾ ಬೆಳೆ ಬೆಳೆಯುವ ಮೊದಲು ಉಳುಮೆ ಜತೆ ಮಾಡಿದರೆ ಮಣ್ಣು ಫಲವತ್ತಾಗುತ್ತದೆ. ಇದರ ಬಗ್ಗೆ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಕೆ.ಆರ್ ಹುಲ್ಲುನಾಚೇಗೌಡರು ವಿವರವಾಗಿ ತಿಳಿಸಿದ್ದಾರೆ.
|
ಬಾಳೆ ಬೆಳೆ ಬೆಳೆಯುವ ಮುನ್ನ ನಿಮ್ಮ ಕೃಷಿ ಭೂಮಿ ಹೀಗೆದೆಯಾ ಎಂದು ಪರೀಕ್ಷಿಸಿ
ಭಾರತದಲ್ಲಿ ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆ ಎಂದರೆ ಅದು ಬಾಳೆ. ಪ್ರತಿಯೊಬ್ಬರೂ ತಿನ್ನಲು ಬಯಸುವ ಬಾಳೆ ಹಣ್ಣಿನಲ್ಲಿ ಕೆಲ ಖನಿಜಾಂಶಗಳು, ಜೀವಸತ್ವಗಳ ಪ್ರಮಾಣ ಹೆಚ್ಚಿರುವುದರಿಂದ ಆರೋಗ್ಯಕ್ಕೆ ಇದು ತುಂಬಾ ಒಳಿತು. ಬಾಳೆ ಬೆಳೆಯನ್ನು ಬೆಳೆಯುವಾಗ ಕೃಷಿಕರು ಅದರದೆ ಆದ ಕೆಲವೊಂದು ನಿಯಮಗಳನ್ನು ಪಾಲಿಸಿ ಬೆಳೆದರೆ ಉತ್ತಮ ಇಳುವರಿಗೆ ಸಹಾಯಕ.
|
ದಾಳಿಂಬೆ ಬೆಳೆಯಲು ಈ ವಿಧಾನವನ್ನು ಅನುಸರಿಸಿದರೆ ಅಧಿಕ ಲಾಭ
ಮಹಾರಾಷ್ಟ್ರದಲ್ಲಿ ರೈತರೊಬ್ಬರು ಸಾವಯವ ಪದ್ಧತಿಯಲ್ಲಿ ದಾಳಿಂಬೆ ಬೆಳೆದಿದ್ದಾರೆ. ರಾಸಾಯನಿಕ ಕೃಷಿಗಿಂತ ಉತ್ತಮವಾದ ಫಸಲು ಬರುತ್ತಿದೆ. ಕೃಷಿ ಮಣ್ಣಿನಲ್ಲಿ ಬದಲಾವಣೆ ಕಂಡಿದ್ದಾರೆ.
|
ಹೀಗೆ ಮಾಡಿದರೆ 1 ಚದರಡಿಯಲ್ಲಿ ಏನಿಲ್ಲವೆಂದರೂ 15 ಎರೆಹುಳು ಸಿಗುತ್ತೆ..!
ಶಿರಾ: ಭಾರತದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಎಷ್ಟೋ ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನಾಧಾರವಾಗಿದೆ.ಅಡಿಕೆಗೆ ರೇಟು ಸಿಕ್ಕರೆ ಮಾತ್ರ ರೈತ ಲಕ್ಷ ಲಕ್ಷ ಹಣ ಎಣಿಸುವುದರಲ್ಲಿ ಅನುಮಾನವಿಲ್ಲ.ಆದರೆ ಅಡಿಕೆಯಲ್ಲಿ ಸೂಕ್ಷ್ಮವಾಗಿ ಗಮನಿಸಿ ಮಾಡ ಬೇಕಾದ ವೈಜ್ಞಾನಿಕ ಕೃಷಿ ಮಾಹಿತಿಗಳು ತುಂಬಾ ಇದೆ. ಅಡಿಕೆಯಲ್ಲಿ ಹೆಚ್ಚಾಗಿ ಬೆಳೆಗಳಿಗೆ ಆವರಿಸಿಕೊಳ್ಳುವ ಹರಳು ಉದುರುವ ಸಮಸ್ಯೆ, ಹಂಡೊಡಕದ ಸಮಸ್ಯೆ, ಅಣಬೆ ರೋಗದ ಸಮಸ್ಯೆ, ಸುಳಿರೋಗ, ಹೀಗೆ ಹಲವಾರು ತೊಂದರೆಗಳಿರುತ್ತವೆ.ಇವೆಲ್ಲಾ ರೋಗಗಳು ಬೆಳೆಗಳಿಗೆ ಆವರಿಸಿಕೊಳ್ಳಬಾರದು ಎಂದರೆ ರೈತ ತನ್ನ ಕೃಷಿಯಲ್ಲಿ ಬದಲಾವಣೆ ಕಾಣಬೇಕು.ಅದುವೇ ವೈಜ್ಞಾನಿಕ ಕೃಷಿ ಸಾವಯವ ಕೃಷಿ.
|
2 ವರ್ಷದ ಹಿಂದೆ ಕಣ್ಣಿಗೆ ಬಿದ್ದ ಆಪತ್ಬಾಂಧವ..!
ದಾವಣಗೆರೆ : 2 ವರ್ಷದ ಹಿಂದೆ ರಾಸಾಯನಿಕ ಬಳಸುತ್ತಿದ್ದ ಕೃಷಿಕ ಬಸವನಗೌಡರು, ಲಾಭಕ್ಕಿಂತ ನಷ್ಟಗಳನ್ನು ಅನುಭವಿಸಿದ್ದೆ ಜಾಸ್ತಿ. ಎರೆಹುಳುಗಳ ಮಾರಣಹೋಮ, ಸುಳಿರೋಗ, ದಿನೇ ದಿನೇ ಮಣ್ಣಿನ ಫಲವತ್ತತೆ ಹಾಳು. ಹೀಗೆ ಒಂದಲ್ಲ ಒಂದು ಸಮಸ್ಯೆಯಿಂದ ಇಡೀ ಅಡಿಕೆ ತೋಟವೇ ರೋಗಕ್ಕೆ ಸಿಲುಕಿತ್ತು.
|
ಬೀನ್ಸ್ ಬೆಳೆಯಲ್ಲಿ ಭರ್ಜರಿ ಇಳುವರಿಗೆ ಇಷ್ಟು ಮಾಡಿದರೆ ಸಾಕು
ಬೀನ್ಸ್ ಬೆಳೆಯಲ್ಲಿ ಲಾಭ ಕಾಣುತ್ತಿರವ ಕೃಷಿಕ ತಿಲಕ್ ಅವರು, ರಾಸಾಯನಿಕ ಕೃಷಿ ನಿಲ್ಲಿಸಿ ಸಾವಯವ ಕೃಷಿಗೆ ಕಾಲಿಟ್ಟರು. ಸಾವಯವ ಕೃಷಿಯಲ್ಲಿ ಇವರು ಆಯ್ಕೆ ಮಾಡಿಕೊಂಡ ಡಾ.ಸಾಯಿಲ್ ಜೈವಿಕ ಗೊಬ್ಬರಗಳು ರೈತನ ಕನಸನ್ನು ನನಸು ಮಾಡಿ, ಬೀನ್ಸ್ ಬೆಳೆಯಲ್ಲಿ ಲಾಭ ತಂದುಕೊಟ್ಟಿವೆ.
|
ರಸಗೊಬ್ಬರ vs ಸಾವಯವ ಗೊಬ್ಬರ. ಯಾವುದರ ಬಳಕೆಯಿಂದ ಕೃಷಿ ಖರ್ಚು ಕಡಿಮೆ?
ಕೃಷಿಯಲ್ಲಿ ಲಾಭಗಳಿಸಲು ಕೃಷಿಯನ್ನು ಉದ್ದಿಮೆಯಾಗಿ ನೋಡಬೇಕು. ಲಾಭ-ನಷ್ಟಗಳ ಲೆಕ್ಕಾಚಾರ ಹಾಕಬೇಕು. ಪ್ರತಿಯೊಬ್ಬ ರೈತನೂ ಉದ್ಯಮಿಯಾಗಬೇಕು. ರೈತ ತಾನು ಬೆಳೆದ ಬೆಳೆಯನ್ನು ಉತ್ತಮ ಬೆಲೆ ಸಿಗುವ ಕಡೆ ಮಾರಾಟ ಮಾಡಬೇಕು. ಯಾವುದೇ ಬಿಸ್ನೆಸ್ ನಲ್ಲಿ ಲಾಭ ಹೆಚ್ಚಿಸಲು ಖರ್ಚು ಕಡಿಮೆ ಮಾಡಬೇಕಾಗುತ್ತದೆ. ನಿರ್ವಹಣೆಯ ಅಧ್ಯಯನ ಮಾಡಬೇಕಾಗುತ್ತದೆ.
|