Blog

ಕೃಷಿ ಕೇವಲ ವಯಸ್ಸಾದವರಿಗಲ್ಲ, ಯುವಜನತೆಯೂ ಕೃಷಿಯಲ್ಲಿ ತೊಡಗಿಕೊಳ್ಳತ್ತಿದೆ. ಯುವ ಜನತೆ ಯಾವುದೇ ಕ್ಷೇತ್ರದಲ್ಲಿ ಬಂದರೂ ಅಲ್ಲಿ ಹೊಸ ಪ್ರಯೋಗ ಮತ್ತು ಪ್ರಯತ್ನಗಳು ನಡೆಯುತ್ತವೆ. ಇಲ್ಲೊಬ್ಬ ಯುವ ರೈತ ನಿರಂತರ ಆದಾಯಗಳಿಸಲು ಇಂಗ್ಲೀಷ್ ಬೆಳೆಗಳನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.

 

       ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಲ್ಲಸಂದ್ರ ಗ್ರಾಮದ ಯುವ ರೈತ ಮನೋಹರ್ ಇಂಜಿನಿಯರಿಂಗ್ ಮುಗಿಸಿದ್ದರೂ, ಕೃಷಿಯನ್ನೇ ಮೂಲ ಕಸುಬಾಗಿ ಮಾಡಿಕೊಂಡಿದ್ದಾರೆ. ಗುಲಾಬಿಗೆ ಹೆಸರುವಾಸಿಯಾಗಿರುವ ಹೊಸಕೋಟೆಯಲ್ಲಿ ಇವರು ಮಾಡುತ್ತಿರುವುದು ಸಾಹಸ ಎನ್ನಬಹುದು. ಮಾರುಕಟ್ಟೆ ಇಲ್ಲದಿದ್ದರೂ ತಾವೇ ಸ್ವತಃ ಮಾರ್ಕೆಟ್ ನಿರ್ಮಿಸಿಕೊಂಡಿದ್ದಾರೆ.

 

ಆರಂಭದಲ್ಲಿ ಸೊಪ್ಪುಗಳನ್ನು ಬೆಳೆಯುತ್ತಿದ್ದ ಮನೋಹರ್ ಅವರು, ನಂತರ ಕೇಲ್, ರೆಡ್ ಕ್ಯಾಬೇಜ್, ಸೆಲರಿ, ಬೇಸಿಲ್ ಮತ್ತು ಪಾರ್ಸ್ಲಿ ಬೆಳೆಗಳನ್ನು ತಮ್ಮ 2 ಎಕರೆ ಜಮೀನಿನಲ್ಲಿ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ದೇಶೀಯ ಸೊಪ್ಪು, ತರಕಾರಿ ಬೆಳೆಗಳನ್ನು ಬೆಳೆದು ಬೆಲೆ ಸಿಗದೇ ಇದ್ದಾಗ ಆಗುವ ನಷ್ಟಗಳನ್ನು ನೋಡಿ ವಿದೇಶಿ ಬೆಳೆಗಳನ್ನು ಬೆಳೆಯತೊಡಗಿದ್ದಾರೆ. ಮಾರುಕಟ್ಟೆ ಇಲ್ಲದ ಬೆಳೆ ಬೆಳೆದು ಆದಾಯ ಗಳಿಸುವುದು ತುಂಬಾ ಕಷ್ಟ. ಆದರೂ ಮನೋಹರ್ ಅವರು ಈ ಸಾಹಸಕ್ಕೆ ಕೈ ಹಾಕಿರುವುದು ಶ್ಲಾಘನೀಯ. ಧೈರ್ಯ ಮಾಡಬೇಕು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದು ಇವರ ಮನಸ್ಥಿತಿ.

 

ಒಳ್ಳೆ ಗುಣಮಟ್ಟ ಮತ್ತು ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ತಲುಪಿಸಿದರೆ ಉತ್ತಮ ಆದಾಯ ಗಳಿಸಬಹುದು ಎನ್ನುವ ರೈತ ಮನೋಹರ್, ಈಗ ಸಾವಯವ ಕೃಷಿಯ ಮೊರೆ ಹೋಗಿದ್ದಾರೆ. ಮೊದಲೆಲ್ಲಾ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕೃಷಿ ಮಾಡುತ್ತಿದ್ದರು. ಆಗ ಖರ್ಚು ಹೆಚ್ಚಿತ್ತು, ಈಗ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಮಾಡುತ್ತಿರುವುದರಿಂದ ಖರ್ಚಿನಲ್ಲಿ ಇಳಿಕೆ ಕಂಡಿದ್ದಾರೆ. ಬೆಳೆಗಳು ಚಳಿಗಾಲದಲ್ಲಿ ಹೆಚ್ಚು ರೋಗಗಳಿಗೆ ಈಡಾಗುತ್ತಿದ್ದವು. ಸಾವಯವ ಕೃಷಿಗೆ ಬಂದ ಮೇಲೆ ರೋಗಗಳು ಕಡಿಮೆಯಾಗಿ, ಬೆಳವಣಿಗೆ ಉತ್ತಮವಾಗಿವೆ.

 

       ಬೆಳೆಗಳ ಗುಣಮಟ್ಟ ಮತ್ತು ಪ್ರಮಾಣ ಹೆಚ್ಚಾಗಿವೆ. ಪ್ರತಿದಿನ ಪ್ರತಿ ಸೊಪ್ಪನ್ನು 20-25 ಕೆ.ಜಿ ಕಟಾವು ಮಾಡಿ ಮಾರಾಟ ಮಾಡುತ್ತಾರೆ. ಇಂಗ್ಲೀಷ್ ಬೆಳೆ ಬೆಳೆಯುತ್ತಿರುವ ಇವರು ತಿಂಗಳಿಗೆ 1 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಖರ್ಚು ಕಳೆದು 70 ಸಾವಿರ ನಿವ್ವಳ ಆದಾಯ ಗಳಿಸುತ್ತಿದ್ದಾರೆ. ಗ್ರಾಹಕರ ಬೇಡಿಕೆ ಅರಿತು ಕೃಷಿ ಮಾಡಿದರೆ ಅನೇಕ ಲಾಭಗಳಿದ್ದು,  ಇದಕ್ಕೆ ಮನೋಹರ್ ಸಾಕ್ಷಿಯಾಗಿದ್ದಾರೆ.

 

ಮನೋಹರ್ ಅವರ ಸಂದರ್ಶನ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=X_RSapl5OXg

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

► Follow us on Instagram: https://www.instagram.com/microbiagrotech/

 

ಬರಹ: ರವಿಕುಮಾರ್


 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #kale  #exoticcrops  #redcabbage  #parsley  #basil  #celery  



Blog




Home    |   About Us    |   Contact    |   
microbi.tv | Powered by Ocat Online Advertising Service in India