Blog

       ದಾವಣಗೆರೆ ನಾಗರಕಟ್ಟೆ ಗ್ರಾಮದ ರೈತರಾದ ನಟರಾಜ್ ಮತ್ತು ಮಂಜಣ್ಣ ಕಳೆದ ಎರಡು ವರ್ಷಗಳಿಂದ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಕೆ ಆರ್ ಹುಲ್ಲುನಾಚೇಗೌಡರ ತರಬೇತಿಯ ನಂತರ ಸಾವಯವ ದಾರಿಯಲ್ಲಿ ಸಾಗಿದ್ದಾರೆ. ರಾಸಾಯನಿಕ ಗೊಬ್ಬರ ಬಳಸಿ ಕೃಷಿ ಮಾಡುತ್ತಿದ್ದಾಗ ಕಡಿಮೆ ಇದ್ದ ಇಳುವರಿ ಈಗ ಅಧಿಕವಾಗಿದ್ದು, ತೋಟ ರೋಗಗಳಿಂದಲೂ ಮುಕ್ತವಾಗಿವೆ. ಹಿಂದೆಲ್ಲಾ ರೋಗಗಳು ಬಂದು ಮರಗಳು ಸಾಯುತ್ತಿದ್ದವು. ಆದರೆ ಈಗ ರೋಗ ಬಂದರೂ ತಡೆದುಕೊಳ್ಳುವ ಶಕ್ತಿ ಹೆಚ್ಚಾಗಿದೆ ಎನ್ನುತ್ತಾರೆ ರೈತರು.

 

ಮರಗಳು ಸುಳಿಕೊಳೆ, ಬುಡಕೊಳೆ ರೋಗಗಳಿಗೆ ತುತ್ತಾಗಿ ಇಳುವರಿ ಕಡಿಮೆಯಾಗಿತ್ತು. ಎಕರೆಗೆ 40 ಕ್ವಿಂಟಾಲ್ ಅಡಿಕೆಯಷ್ಟೆ ಬಂದಿತ್ತು. ಕಳೆದ ಬಾರಿ 100-110 ಕ್ವಿಂಟಾಲ್ ಬಂದಿದೆ ಎಂದು ರೈತ ನಟರಾಜ್ ಹೆಮ್ಮೆಯಿಂದ ಹೇಳುತ್ತಾರೆ. ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಇಷ್ಟೆಲ್ಲಾ ಲಾಭ ಇದ್ದರೂ, ರಾಸಾಯನಿಕ ಕೃಷಿಯಿಂದ ಹೊರಬರಲು ರೈತರು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ. ಇದಾಗಲೇ ಎರಡು ಬಾರಿ ಕಟಾವು ಮಾಡಿರುವ ರೈತ ನಟರಾಜ್, ಒಟ್ಟು 700 ಮರಗಳಿಂದ 100 ಕ್ವಿಂಟಾಲ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ ಖೇಣಿ ಕೊಟ್ಟಿದ್ದರು ಮತ್ತು ನಂತರ ಬೆಲೆ ಹೆಚ್ಚಾದ್ದರಿಂದ ಹೆಚ್ಚು ಲಾಭಗಳಿಸಲಿಲ್ಲ. ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಆದಾಯ ಪಡೆಯುವ ಭರವಸೆಯಲ್ಲಿದ್ದಾರೆ. ಇದರ ಜತೆ ಈ 300 ಏಲಕ್ಕಿ ಗಿಡಗಳನ್ನು ನೆಟ್ಟು ಸುಸ್ಥಿರ ಕೃಷಿಯತ್ತ ಸಾಗಿದ್ದಾರೆ.


       ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿದ್ದರಿಂದ ಮಣ್ಣು ಮೃದುವಾಗಿ, ಎರೆಹುಳುಗಳ ಸಂಖ್ಯೆ ಹೆಚ್ಚಿವೆ. ಸಂಪನ್ಮೂಲ ವ್ಯಕ್ತಿಯಾದ ಮಹದೇವಪ್ಪ ವರು ಎರೆಹುಳುಗಳ ಮಹತ್ವ ತಿಳಿಸಿದರು. ಇದರಿಂದ ಮಣ್ಣಿನ ಗುಣಧರ್ಮಗಳು ಉತ್ತಮವಾಗುತ್ತವೆ ಎಂದು ತಿಳಿಸಿದರು. ಸಾವಯವ ಗೊಬ್ಬರಗಳ ಜತೆ ಕೃಷಿ ಜ್ಞಾನ ಪಡೆದುಕೊಳ್ಳುವುದು ತುಂಬಾ ಮುಖ್ಯ, ಹಾಗಾಗಿ ಕೃಷಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ಹೊಸ ತಂತ್ರಜ್ಞಾನ ಮತ್ತು ವಿಧಾನಗಳನ್ನು ತಿಳಿದುಕೊಳ್ಳುವಂತೆ ತಿಳಿಸಿದರು.

 

ವೀಡಿಯೋ ನೊಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=asKSttC3W9Y

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 




Blog




Home    |   About Us    |   Contact    |   
microbi.tv | Powered by Ocat Online Advertising Service in India