Blog

ಯಾವುದೇ ಬೆಳೆಯಾಗಲಿ ಮಣ್ಣು ಫಲವತ್ತಾಗಿದ್ದರೆ ಬೆಳೆಯೂ ಉತ್ತಮ ಮತ್ತು ಪೌಷ್ಟಿಕವಾಗಿರುತ್ತದೆ. ಕೃಷಿಯ ಮೂಲವೇ ಮಣ್ಣು. ಮಣ್ಣು ಸಕಲ ಜೀವಿಗಳಿಗೂ ಆಗರ. ಇಂತಹ ಮಣ್ಣನ್ನು ಕಾಪಾಡುವುದು ಮತ್ತು ಫಲವತ್ತಾಗಿಡುವುದು ಎಲ್ಲರ ಜವಾಬ್ದಾರಿ. ಅದರಲ್ಲೂ ಕೃಷಿಮಣ್ಣು ಫಲವತ್ತತೆ ಕಳೆದುಕೊಂಡರೆ ಆಹಾರಕ್ಕೆ ಹಾಹಾಕಾರ ಉಂಟಾಗುತ್ತದೆ, ಆಹಾರಕ್ಕಾಗಿ ಯುದ್ಧಗಳೂ ನಡೆಯುತ್ತವೆ. ಇಂತಹ ದೊಡ್ಡ ಜವಾಬ್ದಾರಿ ಇರುವುದು ರೈತನ ಮೇಲೆ ಎಂದರೆ ತಪ್ಪಾಗಲಾರದು. ಆದರೆ ಮಣ್ಣಿನ ಮಹತ್ವ ತಿಳಿಯದೆ ಬಹುತೇಕ ರೈತರು ಕೃಷಿ ಮಾಡುತ್ತಿರುವುದು ದುರದೃಷ್ಟ. ಕೃಷಿ ಮಣ್ಣು ಜೀವಂತವಾಗಿದ್ದರೆ ಏನು ಲಾಭ? ಇದರಿಂದ ಬೆಳೆಗೆ ಹೇಗೆ ಸಹಾಯ? ಕಬ್ಬು ಇಳುವರಿ ಹೆಚ್ಚಿಸಲು ಹೇಗೆ ಸಾಧ್ಯ? ಆದಾಯವನ್ನು ಹೆಚ್ಚಿಸುವುದು ಹೇಗೆ? ನೋಡೋಣ ಬನ್ನಿ.

 

ಮಣ್ಣಿನ ಮಹತ್ವ

       ಮಂಡ್ಯ ಜಿಲ್ಲೆಯ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಸಾವಯವ ಕೃಷಿ ಮಾರ್ಗದರ್ಶಕರಾದ ಜೋಗಿಗೌಡ ಅವರು ರೈತರ ಕಬ್ಬಿನ ಜಮೀನಿಗೆ ಭೇಟಿ ನೀಡಿ 80-100 ಟನ್ ಇಳುವರಿ ತೆಗೆಯಲು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿದರು. ಇದರಲ್ಲಿ ಮಣ್ಣಿನ ಪಾತ್ರ ಮತ್ತು ಅದರ ಸಂರಕ್ಷಣೆಯ ಬಗ್ಗೆ ತಿಳಿಸಿದರು. ಯಾವುದೇ ಬೆಳೆ ಪೋಷಕಾಂಶಗಳನ್ನು ಹೀರಿಕೊಳ್ಳಲು ಬೇರುಗಳು ಆಳಕ್ಕೆ ಹೋಗಬೇಕು. ಇದಕ್ಕಾಗಿ ಮಣ್ಣು ಸಡಿಲವಾಗಿ ಗಾಳಿಯಾಡುವಂತಿರಬೇಕು ಮತ್ತು ಫಲವತ್ತಾಗಿರಬೇಕು. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣು ಗಟ್ಟಿಯಾಗಿ ಗಾಳಿ ಮತ್ತು ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕುಂಠಿತವಾಗಿದೆ. ಕೃಷಿ ಮಣ್ಣು ಫಲವತ್ತಾಗಲು ಎರೆಹುಳುಗಳು ಮತ್ತು ಸೂಕ್ಷ್ಮಜೀವಿಗಳು ಹೆಚ್ಚಾಗಬೇಕು. ಆದರೆ ರಾಸಾಯನಿಕಗಳು ಇವುಗಳನ್ನು ಕೊಂದು, ಮಣ್ಣಿನ ಫಲವತ್ತತೆ ಹಾಳು ಮಾಡುತ್ತವೆ.

 

ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಹೇಗೆ?

       ಮೊದಲು ರಾಸಾಯನಿಕಗಳ ಬಳಕೆ ಕಡಿಮೆ ಮಾಡಿ, ಕ್ರಮೇಣ ನಿಲ್ಲಿಸಬೇಕು. ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು. ಇದರಿಂದ ಮಣ್ಣು ರಾಸಾಯನಿಕ ಮುಕ್ತವಾಗಿ ಉಪಕಾರಿ ಸೂಕ್ಷ್ಮಜೀವಿಗಳಿಗೆ ಸೂಕ್ತವಾದ ವಾತಾವರಣ ಸೃಷ್ಟಿಯಾಗುತ್ತದೆ. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನಲ್ಲಿ ಜೈವಿಕ ಕ್ರಿಯೆ ಪುನಾರಂಭಗೊಂಡು, ಎರೆಹುಳುಗಳು ಉತ್ಪತ್ತಿಯಾಗುತ್ತವೆ. ಮಣ್ಣನ್ನು ಫಲವತ್ತು ಮಾಡಲು ಕಳೆ ಮತ್ತಿತರ ತ್ಯಾಜ್ಯಗಳನ್ನು ಜಮೀನಿನ ಹೊರಗೆ ಬಿಸಾಡದೇ ಮಣ್ಣಿಗೆ ಮಲ್ಚ್ ಮಾಡಬೇಕು. ಇದರಿಂದ ಮಣ್ಣು ಪೋಷಕಾಂಶಗಳಿಂದ ಕೂಡುತ್ತದೆ. ಇಲ್ಲಿ ಬೆಳೆಯುವ ಬೆಳೆಗಳು ಉತ್ಕೃಷ್ಟವಾಗಿ ಬೆಳೆಯುತ್ತವೆ.

 

ಕಬ್ಬಿನ ಇಳುವರಿ ಹೆಚ್ಚಿಸುವುದು ಹೇಗೆ?

       ರೈತರು ಮಾಡುವ ತಪ್ಪೇನು ಎಂದರೆ ಬೆಳೆಯಲ್ಲಿ ಅಂತರ ಕಡಿಮೆ ಕೊಡುವುದು. ಸಾಮಾನ್ಯವಾಗಿ ಸಾಲಿನಿಂದ ಸಾಲಿಗೆ 3 ರಿಂದ 4 ಅಡಿ ಅಂತರ ಕೊಟ್ಟು ಕಬ್ಬು ಬೆಳೆಯುತ್ತಾರೆ. ಹೀಗೆ ಮಾಡುವುದರಿಂದ ಕಬ್ಬಿನ ಬೆಳವಣಿಗೆಗೆ ಸಾಕಷ್ಟು ಗಾಳಿ, ಬೆಳಕು ಸಿಗದೇ ತೂಕ ಮತ್ತು ಸಕ್ಕರೆ ಅಂಶ ಕಡಿಮೆಯಾಗುತ್ತದೆ. 10 ಅಡಿ ಅಂತರ ಕೊಟ್ಟು ಕಬ್ಬು ಬೆಳೆಯುವುದರಿಂದ ಗಾಳಿ, ಬೆಳಕು ಚೆನ್ನಾಗಿ ಸಿಕ್ಕಿ ಕಬ್ಬಿನ ಗಾತ್ರ ಮತ್ತು ಸಕ್ಕರೆ ಅಂಶ ಆಧಿಕವಾಗಿ ಇಳುವರಿ ಉತ್ತಮವಾಗುತ್ತದೆ. ಈಗ ಅಂತರ ಹೆಚ್ಚಾಗಿರುವುದರಿಂದ ಮಧ್ಯೆ ಅಂತರ ಬೆಳೆಗಳನ್ನು ಬೆಳೆದು ಹೆಚ್ಚುವರಿ ಆದಾಯ ಗಳಿಸಬಹುದು. ದ್ವಿದಳ ಧಾನ್ಯಗಳನ್ನು ಬೆಳೆದರೆ ಸಾರಜನಕ ಸ್ಥಿರೀಕರಣವಾಗಿ ಕಬ್ಬಿಗೆ ಉಚಿತವಾಗಿ ಪೋಷಕಾಂಶಗಳು ಪೂರೈಕೆಯಾಗುತ್ತವೆ.

 

       ಮೈಕ್ರೋಬಿ ಫೌಂಡೇಶನ್ ಮತ್ತು ಮೈಕ್ರೋಬಿ ಆಗ್ರೋಟೆಕ್ ಸಹಭಾಗಿತ್ವದಲ್ಲಿ ರೈತರಿಗೆ ಉಚಿತ ಕೃಷಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ನಡೆಸಲಾಗುತ್ತಿದೆ. ರೈತರು ತಮ್ಮ ತಾಲ್ಲೂಕಿನ ಪ್ರತಿನಿಧಿಗಳಿಂದ ಇದರ ಲಾಭ ಪಡೆಯಬಹುದು.

 

https://www.youtube.com/watch?v=FAxaGBYlzMI

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #soil  #soiltest  #fertilesoil  #soilfertiliy  #skilldevelopment  #agriskills  



Blog




Home    |   About Us    |   Contact    |   
microbi.tv | Powered by Ocat Online Advertising Service in India