ಸಾಮಾನ್ಯ ಜಮೀನಿನಲ್ಲೇ ಕೃಷಿ ಮಾಡಲು ಒದ್ದಾಡುವ ಈಗಿನ ರೈತರ ಮಧ್ಯೆ ಇಲ್ಲೊಬ್ಬ ರೈತರು ಕಲ್ಲುಗಾಡಿನಂತಿರುವ ಬೆಟ್ಟದ ಪ್ರದೇಶದಲ್ಲಿ ಅಡಿಕೆ, ಕಾಫಿ ಬೆಳೆದು ಕೃಷಿ ಮಾಡುತ್ತಿದ್ದಾರೆ. ರೋಗಗಳಿಂದ ಕಾಡಿದರೂ ಸಾವಯವ ಕೃಷಿ ಪದ್ಧತಿಯಿಂದ ತೋಟ ನಿರ್ವಹಣೆ ಮಾಡಿ ಯಶಸ್ವಿಯಾಗಿದ್ದಾರೆ. ಇಂತಹ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ರೈತರ ಅನುಭವ ಏನು? ಇವರು ನಿರ್ವಹಣೆ ಹೇಗೆ ಮಾಡುತ್ತಿದ್ದಾರೆ ಬನ್ನಿ ನೋಡೋಣ.
ಚಿಕ್ಕಮಗಳೂರು ತಾಲ್ಲೂಕಿನ ರೈತ ಜಗದೀಶ್ ವೃತ್ತಿಯಲ್ಲಿ ಟೈಲರ್ ಆಗಿದ್ದು, 3 ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕೃಷಿ ಮಾಡುತ್ತಿದ್ದಾಗ ಅಡಿಕೆ ಮರಗಳು ರೋಗಗಳಿಗೆ ತುತ್ತಾಗಿದ್ದವು. ಜಗದೀಶ್ ಅವರು ತೋಟವನ್ನು ತೆಗೆದುಕೊಂಡ ಮೇಲೆ ಸಾವಯವ ಪದ್ಧತಿ ಅನುಸರಿಸುತ್ತಿದ್ದಾರೆ. ರಾಸಾಯನಿಕ ಬಳಸದೇ ಸಾವಯವದಲ್ಲಿ ಅಡಿಕೆ ಮರಗಳನ್ನು ಸುಧಾರಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ತಂದೆಯೇ ಹೇಳಿದರೂ ಬಿಡದೆ ಸಾವಯವ ಕೃಷಿ ಮಾಡುತ್ತಿದ್ದಾರೆ.
ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿದ ಮೇಲೆ, ಹಾಳಾಗಿದ್ದ ಅಡಿಕೆ ಮರಗಳು ಮತ್ತೆ ಚಿಗುರಿ ಹಿಂಗಾರಗಳು ಉತ್ತಮವಾಗಿ ಬೆಳೆಯುತ್ತಿವೆ. ಎಲ್ಲರೂ ಮಾಡುತ್ತಿದ್ದ ಹಾಗೆ ಕೃಷಿ ಮಾಡದೆ, ಬೇರೆ ರೀತಿ ಕೃಷಿ ಮಾಡಿ ಮಾದರಿಯಾಗಬೇಕೆಂಬುದು ಜಗದೀಶ್ ಅವರ ಉದ್ದೇಶ. ಬರಡು ಭೂಮಿಯನ್ನು ಇಂದು ಫಲವತ್ತಾದ ಭೂಮಿಯಾಗಿ ಮಾಡಿದ್ದಾರೆ. ಇದಕ್ಕೆ ಕಾರಣ ಡಾ.ಸಾಯಿಲ್ ಬಳಸಿ ಮಾಡಿದ ಸಾವಯವ ಕೃಷಿ ಎಂದು ತಿಳಿಸುತ್ತಾರೆ.
ನೀರಿನ ವಿಷಯದಲ್ಲೂ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಡಾ.ಕೆ.ಆರ್.ಹುಲ್ಲುನಾಚೆಗೌಡರ ಮಾರ್ಗದರ್ಶನದಂತೆ ಹೆಚ್ಚು ನೀರು ಕೊಡದೆ, ಅವಶ್ಯಕತೆ ಇದ್ದಾಗ ಪರಿಶೀಲಿಸಿ ನೀರು ಕೊಡುತ್ತಿದ್ದಾರೆ. ಡಾ.ಸಾಯಿಲ್ ಬಳಕೆಯಿಂದ ಕಾಫಿ ಬೆಳೆಯೂ ಕೂಡ ಉತ್ತಮವಾಗಿ ಬಂದಿದೆ. ಬೇರೆ ತೋಟಗಳಿಗೆ ಹೋಲಿಸಿದರೆ ಅಧಿಕ ಇಳುವರಿಯನ್ನು ರೈತ ಜಗದೀಶ್ ಪಡೆಯುತ್ತಿದ್ದಾರೆ. ತ್ಯಾಜ್ಯಗಳಿಂದ ಆವೃತವಾಗಿರುವ ಈ ತೋಟದಲ್ಲಿ ಮಣ್ಣು ಮೃದುವಾಗಿ, ಎರೆಹುಳುಗಳು ಹೆಚ್ಚಾಗಿವೆ. ಮಣ್ಣಿನಲ್ಲಿ ನೀರು ಹೀರಿಕೊಳ್ಳುವ ಸಾಮರ್ಥ್ಯ ಕೂಡ ಹೆಚ್ಚಾಗಿದೆ. ಹಾಗಾಗಿ ಕಡಿಮೆ ನೀರಿನಲ್ಲೂ ಬೆಳೆಗಳು ಉತ್ತಮವಾಗಿ ಬೆಳೆಯುತ್ತವೆ. ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿರುವುದರ ಸಂಕೇತ ಇದಾಗಿದೆ.
ತಾವು ಸಾವಯವ ಕೃಷಿ ಮಾಡುತ್ತಿರುವಂತೆ ಇತರ ರೈತರೂ ಡಾ.ಸಾಯಿಲ್ ಬಳಸಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಸಂದೇಶ ಕೊಡುತ್ತಿದ್ದಾರೆ ಜಗದೀಶ್.
ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://www.youtube.com/watch?v=z2K6RHukTrI&list=PLuN9VcGQAtK53jXMCZbN7-g_hKLae3lLZ&index=3
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
ಬರಹ: ರವಿಕುಮಾರ್
#kannadablog #drsoil #biofertilizer #microbiagrotech #agricultureblog #agricultureinkannada #organicfarming #sustainablefarming #lowinvestment #soil #organicspray #soilerosion #soilfertility #integratedfarming #arecafarming #areca #coffee #organiccoffee
Blog