Blog

       ಇಂದು ನಮ್ಮ ದೇಶದ ಪ್ರಮುಖ ಮಸಾಲೆ ಬೆಳೆಯಾಗಿರುವ ಮೆಣಸಿನಕಾಯಿ ಪೋರ್ಚುಗೀಸ್ ವ್ಯಾಪಾರಿಗಳ ಮೂಲಕ 1498ರಲ್ಲಿ ಭಾರತಕ್ಕೆ ಪರಿಚಯವಾಯಿತು. ಇದರ ಮಸಾಲೆಯುಕ್ತ ರುಚಿ, ಆಕರ್ಷಕವಾದ ಬಣ್ಣ ಮತ್ತು ಸುವಾಸನೆಯಿಂದಾಗಿ ಪ್ರತಿ ಭಾರತೀಯ ಪಾಕಪದ್ಧತಿಯಲ್ಲಿ ಮೆಣಸಿನಕಾಯಿ ಅನಿವಾರ್ಯ ಸ್ಥಾನ ಪಡೆದಿದೆ. ಮೆಣಸಿನಕಾಯಿಯು ಭಾರತದಲ್ಲಿ ಬೆಳೆಯುವ ಅತ್ಯಮೂಲ್ಯ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ ಮತ್ತು ಭಾರತದಲ್ಲಿ ಬೆಳೆಯುವ ಅತ್ಯಂತ ಸಾಮಾನ್ಯವಾದ ಮಸಾಲೆಯಾಗಿದೆ. ಇಂದು ಮೆಣಸಿನಕಾಯಿ ಭಾರತದ ಸಾರ್ವತ್ರಿಕ ಮಸಾಲೆಯಾಗಿದೆ. ಇದನ್ನು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಪ್ರಪಂಚದ ಒಟ್ಟು ಉತ್ಪಾದನೆಗೆ ಭಾರತವು ಸುಮಾರು 36% ಕೊಡುಗೆ ನೀಡುತ್ತದೆ.

 

       ತಮಿಳುನಾಡಿನ ಹೊಸೂರು ತಾಲ್ಲೂಕಿನ ಯುವ ರೈತ ಹರೀಶ್ 5-6 ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಮೆಣಸಿನಕಾಯಿ ಬೆಳೆದಿರುವ ಇವರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಸಂತೃಪ್ತಿ ಹೊಂದಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿ ಮೆಣಸಿನಕಾಯಿ ಬೆಳೆದಿದ್ದರಿಂದ ಬೆಳವಣಿಗೆ ಉತ್ತಮವಾಗಿ ಬಂದಿದೆ. ಯೂಟ್ಯೂಬ್ ನಲ್ಲಿ ನೋಡಿ ಡಾ.ಸಾಯಿಲ್ ಬಗ್ಗೆ ತಿಳಿದುಕೊಂಡ ಹರೀಶ್ ಮೈಕ್ರೋಬಿ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ತಿಳಿದುಕೊಂಡಿದ್ದಾರೆ. ನಂತರ ಮೈಕ್ರೋಬಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಹರೀಶ್ ಅವರ ಜಮೀನಿಗೆ ಭೇಟಿ ನೀಡಿ ಸಾವಯವ ಕೃಷಿ, ಮಣ್ಣು ಫಲವತ್ತುಗೊಳಿಸುವ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಇದರಿಂದ ಸಾವಯವ ಪದ್ಧತಿಯಲ್ಲೇ ಮೆಣಸಿನಕಾಯಿಯನ್ನು ಹರೀಶ್ ಬೆಳೆದಿದ್ದಾರೆ.

 

ಇದಾಗಲೇ 3 ಕೊಯ್ಲು ಮಾಡಿದ್ದಾರೆ. ಈಗ 4ನೇ ಕೊಯ್ಲಿನಲ್ಲೂ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ರಾಸಾಯನಿಕ ಪದ್ಧತಿಯಲ್ಲಿ ರಸಗೊಬ್ಬರಗಳನ್ನು ಬಳಸಿ ಬೆಳೆದಿರುವ ಮೆಣಸಿನಕಾಯಿಗಳ ಗಾತ್ರ ಕಡಿಮೆಯಿದ್ದು ಗಿಡಗಳ ಬೆಳವಣಿಗೆ ಕುಂಠಿತವಾಗಿದೆ. ಡಾ.ಸಾಯಿಲ್ ಬಳಸಿರುವ ಜಮೀನಿನಲ್ಲಿ ಕಾಯಿಗಳ ಗಾತ್ರ ದೊಡ್ಡದಾಗಿ ಬಂದಿರುವುದು ರೈತನಿಗೆ ಖುಷಿ ತಂದಿದೆ.

 

       ಡಾ.ಸಾಯಿಲ್ ಬಳಕೆಯಿಂದ ಮಣ್ಣಿನಲ್ಲಿ ಎರೆಹುಳು ಉತ್ಪತ್ತಿಯಾಗಿದೆ ಮತ್ತು ಮಣ್ಣು ಮೃದುವಾಗಿದೆ ಎನ್ನುತ್ತಾರೆ ರೈತ ಹರೀಶ್. ರಾಸಾಯನಿಕ ಬಳಸುತ್ತಿದ್ದಾಗ ಹೆಚ್ಚು ನೀರಿನ ಅವಶ್ಯಕತೆ ಇರುತ್ತಿತ್ತು. ಆದರೆ ಈಗ ಕಡಿಮೆ ನೀರಿನಲ್ಲಿ ಕೃಷಿ ಮಾಡಬಹುದಾಗಿದೆ. ಡಾ.ಸಾಯಿಲ್ ಬಳಕೆಯಿಂದ ಮಣ್ಣಿನಲ್ಲಿ ಸೂಕ್ಷ್ಮಜೀವಿಗಳು ವೃದ್ಧಿಯಾಗುವುದರಿಂದ ಮಣ್ಣು ಮೃದುಗೊಂಡು ನೀರು ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ನೀರಾವರಿಯ ಅವಶ್ಯಕತೆ ಕಡಿಮೆಯಾಗಿ ರೈತನಿಗೆ ಅನುಕೂಲವಾಗುತ್ತದೆ. ಖರ್ಚಿನ ವಿಷಯದಲ್ಲೂ ಸಾವಯವ ಕೃಷಿ ರೈತರಿಗೆ ಅನುಕೂಲವಾಗಿದೆ. 1 ಎಕರೆಗೆ ರಾಸಾಯನಿಕ ಪದ್ಧತಿಯಲ್ಲಿ 80 ಸಾವಿರ ಖರ್ಚು ಬಂದರೆ, ಸಾವಯವ ಕೃಷಿಯಲ್ಲಿ ಕೇವಲ 20 ಸಾವಿರ ಖರ್ಚು ಬರುತ್ತದೆ ಎನ್ನುತ್ತಾರೆ ರೈತ ಹರೀಶ್.

 

       ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಕೃಷಿಮಣ್ಣು ಫಲವತ್ತಾಗುವ ಜೊತೆಗೆ ರೈತನ ಮೇಲಿನ ನಿರ್ವಹಣೆಯ ಭಾರ ಕಡಿಮೆಯಾಗುತ್ತದೆ. ಏಕೆಂದರೆ ಮಣ್ಣು ಫಲವತ್ತಾದಾಗ ಬೆಳೆಗಳು ಕಡಿಮೆ ರೋಗ-ರುಜಿನಗಳಿಗೆ ಒಳಗಾಗುತ್ತವೆ. ಪೋಷಕಾಂಶ ಪೂರೈಕೆಗಾಗಿ ಆಗುವ ಖರ್ಚು ಕೂಡ ಕಡಿಮೆಯಾಗುತ್ತದೆ. ಇದರಿಂದ ರೈತ ಕಡಿಮೆ ನಿರ್ವಹಣೆ ಮತ್ತು ಅಧಿಕ ಲಾಭ ಗಳಿಸುವ ಅವಕಾಶ ಲಭಿಸುತ್ತದೆ.

 

ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=towhuaJEx48&list=PLuN9VcGQAtK6242u1JjMG-Ke4PFohq2BH&index=7

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

 ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #soil  #organicspray  #soilerosion  #soilfertility  #dishes  #spices  #spicy  #chilli  #organicchilli  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing