Blog

       ಕ್ಯಾಪ್ಸಿಕಂ ಅಥವಾ ದಪ್ಪ ಮೆಣಸಿನಕಾಯಿ ಒಂದು ಜನಪ್ರಿಯ ಬೆಳೆಯಾಗಿದೆ. ವಿವಿಧ ಬಣ್ಣಗಳು ಮತ್ತು ಗಾತ್ರಗಳಲ್ಲಿ ಬರುವ ಈ ದೊಡ್ಡ ಮೆಣಸಿನಕಾಯಿಯನ್ನು ಪ್ರಪಂಚದಾದ್ಯಂತದ ಅನೇಕ ಅಡುಗೆಗಳಲ್ಲಿ ಬಳಸಲಾಗುತ್ತದೆ. ಇದನ್ನು ಸಲಾಡ್‌ಗಳು ಮತ್ತು ಸ್ಯಾಂಡ್‌ವಿಚ್‌ಗಳಿಂದ ಹಿಡಿದು ಸೂಪ್‌ಗಳು ಮತ್ತು ಬಜ್ಜಿ, ಹೀಗೆ ವಿವಿಧ ರೀತಿಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಇದು ವಿಟಮಿನ್ ಸಿ ಮತ್ತು ಇತರ ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ. ಇಂತಹ ಬೆಳೆಯನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಇಲ್ಲೊಬ್ಬ ರೈತರು ಅದ್ಭುತವಾಗಿ ಬೆಳೆದಿದ್ದಾರೆ.

 

       ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಬರಗೂರು ಗ್ರಾಮದ ಯುವ ರೈತ ಶಿವು 4 ಎಕರೆಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇವರು ಸಾವಯವ ಕೃಷಿ ಪದ್ಧತಿಯಲ್ಲಿ ಕ್ಯಾಪ್ಸಿಕಂ ಬೆಳೆದಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಪದ್ಧತಿಯಲ್ಲಿ 1.5 ಎಕರೆಯಲ್ಲಿ ಕ್ಯಾಪ್ಸಿಕಂ ಬೆಳೆದಿದ್ದಾರೆ. ಸಾವಯವ ಕೃಷಿಯಿಂದ ಕೃಷಿ ಮಣ್ಣು ಮೃದುವಾಗಿ ಎರೆಹುಳುಗಳು ಅಧಿಕವಾಗಿ ಉತ್ಪತ್ತಿಯಾಗಿವೆ.

 

ಕ್ಯಾಪ್ಸಿಕಂ ಅಲ್ಲದೇ 4 ಎಕರೆಯಲ್ಲಿ ಆಲೂಗಡ್ಡೆಗೂ ಕೂಡ ಡಾ.ಸಾಯಿಲ್ ಬಳಸಿದ್ದಾರೆ. ಇದರಿಂದ ಖರ್ಚು ಕೂಡ ಕಡಿಮೆಯಾಗಿದೆ. ಮೊದಲು 3-4 ಲಕ್ಷ ಖರ್ಚು ಬರುತ್ತಿತ್ತು ಆದರೆ ಈಗ ಕೇವಲ 1.5 ಲಕ್ಷ ಖರ್ಚು ಬರುತ್ತಿದೆ ಎನ್ನುತ್ತಾರೆ ರೈತ ಶಿವು. ನಾಟಿ ಮಾಡುವಾಗ ಡಾ.ಸಾಯಿಲ್ ಬಳಸಿ ಬೀಜೋಪಚಾರ ಮಾಡಿದ್ದಾರೆ. ಇದರಿಂದ ಉತ್ತಮವಾದ ಬೆಳವಣಿಗೆ ಕಂಡುಬಂದಿದೆ. ಬಿಳಿಬೇರುಗಳು ಅಭಿವೃದ್ಧಿಯಾಗಿವೆ. ಬಿಳಿಬೇರುಗಳು ಹೆಚ್ಚಾಗುವುದರಿಂದ ಗಿಡಗಳ ಪೋಷಕಾಂಶ ಮತ್ತು ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ.

 

       ಈಗಾಗಲೇ 4 ಕೊಯ್ಲು ಮಾಡಿದ್ದು, ಇದು 5ನೇ ಕೊಯ್ಲಾಗಿದೆ. ಆದರೂ ಕ್ಯಾಪ್ಸಿಕಂ ಗಾತ್ರದಲ್ಲಿ ಮತ್ತು ಬಣ್ಣದಲ್ಲಿ ಉತ್ತಮವಾಗಿ ಬಂದಿದ್ದು ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆ ಸಿಗುವ ನಿರೀಕ್ಷೆಯಲ್ಲಿ ಇದ್ದಾರೆ. ಶಿವು ಅವರ ಬೆಳೆ ನೋಡಿ ಸುಮಾರು 50-60 ರೈತರು ಡಾ.ಸಾಯಿಲ್ ಬಳಸಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಹೀಗೆ ಡಾ.ಸಾಯಿಲ್ ಬಳಕೆಯಿಂದಾಗಿ ಸಾವಯವ ಕೃಷಿ ಸುಲಭವಾಗಿ, ಹೆಚ್ಚು ಇಳುವರಿ ಪಡೆಯಲು ಸಹಾಯವಾಗುತ್ತಿದೆ.

 

ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=QPizQXyNwGs&list=PLuN9VcGQAtK43tNyT4gEBjhv9WyVANRxl&index=4

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #soil  #organicspray  #soilerosion  #soilfertility  #capsicum  #organiccapsicum  #dishes  #spices  #spicy  #pepper  



Blog




Home    |   About Us    |   Contact    |   
microbi.tv | Powered by Ocat Online Advertising Service in India