ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರು ರಾಜ್ಯದ ಜನರಿಗೆ ಚಿರಪರಿಚಿತ. ಇವರ ಮಗ ಖ್ಯಾತ ಉದ್ಯಮಿ S.S ಗಣೇಶ್ ಅವರು ಉದ್ಯಮ ಜಗತ್ತಿನಲ್ಲಿ ಸಾಧನೆ ಮಾಡಿದವರು. ಇವರು ತಮ್ಮ 120 ಎಕರೆ ತೋಟದಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಮಾಡುತ್ತಿದ್ದಾರೆ.
4500 ತೆಂಗು, 8500 ಮಾವು ಮತ್ತು 1000 ಡ್ರ್ಯಾಗನ್ ಫ್ರೂಟ್ ಗಿಡಗಳನ್ನು ಬೆಳೆದಿದ್ದಾರೆ. ಸಾವಯವ ಕೃಷಿ ಅಳವಡಿಸಿಕೊಂಡ ಮೇಲೆ ಹಸಿರು ಗೊಬ್ಬರವಾಗಿ ದ್ವಿದಳ ಧಾನ್ಯಗಳಾದ ಹುರುಳಿ ಮತ್ತು ಹಲಸಂದೆಯನ್ನು ಬಿತ್ತಿ ಉಳುಮೆ ಮಾಡಿದ್ದಾರೆ. ಇದರಿಂದ ಮಣ್ಣಿಗೆ ಗೊಬ್ಬರ ಸಿಕ್ಕಿ, ತೋಟದ ಮರಗಳಿಗೆ ಪೋಷಕಾಂಶ ಸಿಗುತ್ತದೆ. ಇದಕ್ಕಾಗಿ ಡಾ.ಸಾಯಿಲ್ ಬೀಜೋಪಚಾರ್ ಬಳಸಿ ಬೀಜಗಳಿಗೆ ಬೀಜೋಪಚಾರ ಮಾಡಿದ್ದಾರೆ. ಕಾಯಿ ಬಿಡುವ ಸಮಯದಲ್ಲಿ ಹುರುಳಿ ಮತ್ತು ಹಲಸಂದೆಯನ್ನು ಮಲ್ಚಿಂಗ್ ಮಾಡಿದ್ದಾರೆ.
ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದಾಗ ತೆಂಗಿನ ಮರಗಳು ಮತ್ತು ಮಾವಿನ ಮರಗಳ ಬೆಳವಣಿಗೆ ಕುಂಠಿತವಾಗಿತ್ತು. ರೋಗಗಳು ಕಾಣಿಸಿಕೊಂಡಿದ್ದವು. ಆದರೆ ಡಾ.ಸಾಯಿಲ್ ಬಳಸಿದ ಮೇಲೆ ರೋಗಗಳು ಮಾಯವಾಗಿವೆ. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ನೀರಿನಲ್ಲಿ ಮಿಶ್ರಣ ಮಾಡಿ ಮರಗಳಿಗೆ ಕೊಟ್ಟಿದ್ದಾರೆ. ಇದರಿಂದ ಗಣನೀಯವಾಗಿ ಪರಿವರ್ತನೆ ನೋಡಿದ್ದಾರೆ. ಮಾವು ಮತ್ತು ತೆಂಗಿನ ಮರಗಳು ಹಚ್ಚಹಸಿರಾಗಿ ಕಂಗೊಳಿಸತೊಡಗಿವೆ. ಡ್ರ್ಯಾಗನ್ ಫ್ರೂಟ್ ಕೂಡ ಉತ್ತಮವಾಗಿ ಬೆಳೆದಿದೆ. ಇದಾಗಲೇ 10,000 ತೆಂಗಿನಕಾಯಿಗಳನ್ನು ಕೀಳಲಾಗಿದೆ. ಈಗ ಮತ್ತೆ ಅಷ್ಟೇ ತೆಂಗಿನಕಾಯಿಗಳನ್ನು ಕೀಳಬೇಕಾಗಿದೆ ಎನ್ನುತ್ತಾರೆ ತೋಟ ನೋಡಿಕೊಳ್ಳುತ್ತಿರುವವರು.
ಮಾವಿನ ಮರಗಳಲ್ಲಿ ಮೊದಲು ಕಪ್ಪುಚುಕ್ಕೆ ರೋಗವಿತ್ತು. ಆದರೆ ಡಾ.ಸಾಯಿಲ್ ಬಳಸಿದ ಮೇಲೆ ರೋಗ ಕಡಿಮೆಯಾಗತೊಡಗಿದೆ. ಡ್ರ್ಯಾಗನ್ ಫ್ರೂಟ್ ಕೂಡ 5 ತಿಂಗಳಲ್ಲಿ ಉತ್ತಮವಾಗಿ ಬೆಳೆದಿದೆ. ಇದಕ್ಕೆ ಕಾರಣ ಡಾ.ಸಾಯಿಲ್ ಜೈವಿಕ ಗೊಬ್ಬರಗಳು ಮತ್ತು ಮೈಕ್ರೋಬಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನ ಎನ್ನುತ್ತಾರೆ. ಸಾವಯವ ಕೃಷಿಯಿಂದ ಖರ್ಚು ಕೂಡ ಗಣನೀಯವಾಗಿ ಕಡಿಮೆಯಾಗಿದೆ. ಸಾವಯವ ಕೃಷಿ ಬೆಳೆಗಳ ಆರೋಗ್ಯ, ಮಣ್ಣಿನ ಆರೋಗ್ಯ ಮತ್ತು ಮನುಷ್ಯನ ಆರೋಗ್ಯಕ್ಕೆ ಅತೀ ಮುಖ್ಯ. ಇದರಿಂದ ರೈತರು ಕೃಷಿಯಲ್ಲಿ ಖರ್ಚನ್ನು ಕಡಿಮೆ ಮಾಡಿ ಆದಾಯ ಹೆಚ್ಚಿಸಿಕೊಳ್ಳಬಹುದು.
ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://www.youtube.com/watch?v=jDOqPCqqvNQ&list=PLuN9VcGQAtK4Q2w1-dYDV4FswG2WXHAzD&index=4
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
ಬರಹ: ರವಿಕುಮಾರ್
#kannadablog #drsoil #biofertilizer #microbiagrotech #agricultureblog #agricultureinkannada #organicfarming #sustainablefarming #lowinvestment #soil #organicspray #soilerosion #soilfertility #integratedfarming #samagrakrushi #horticulture #dragonfruit #mango #coconut
Blog