Blog

       ಲವಂಗವು ವಿಶ್ವದಾದ್ಯಂತ ಒಂದು ಪ್ರಖ್ಯಾತ ಮಸಾಲೆ ಪದಾರ್ಥವಾಗಿದ್ದು, ಶತಶತಮಾನಗಳಿಂದಲೂ ಅಡುಗೆ ಮತ್ತು ಸಾಂಪ್ರದಾಯಿಕ ಔಷಧದಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಬೆಳೆ ಇಂಡೋನೇಷ್ಯಾದ ಮೊಲುಕ್ಕಾಸ್ ಅಥವಾ ಸ್ಪೈಸ್ ದ್ವೀಪಗಳಿಗೆ ಸ್ಥಳೀಯವಾಗಿದೆ. ಆದರೆ ಈಗ ಭಾರತ, ಶ್ರೀಲಂಕಾ, ಮಡಗಾಸ್ಕರ್ ಮತ್ತು ಜಾಂಜಿಬಾರ್ ಸೇರಿದಂತೆ ಉಷ್ಣವಲಯದ ಹಲವಾರು ದೇಶಗಳಲ್ಲಿ ಬೆಳೆಯಲಾಗುತ್ತದೆ. ಅಧಿಕ ಪರಿಮಳ ಮತ್ತು ರುಚಿಯಲ್ಲಿ ಗಾಢತೆಯನ್ನು ಹೊಂದಿರುವ ಲವಂಗವನ್ನು ಅನೇಕ ಆಹಾರಗಳಲ್ಲಿ, ವಿಶೇಷವಾಗಿ ಮಾಂಸ ಮತ್ತು ಬೇಕರಿ ಉತ್ಪನ್ನಗಳಲ್ಲಿಯೂ ಹೆಚ್ಚಾಗಿ ಬಳಸಲಾಗುತ್ತದೆ. ಲವಂಗ ಬೆಳೆಯುವುದರಿಂದ ರೈತರು ಉತ್ತಮ ಆದಾಯ ಗಳಿಸುವ ಸಾಧ್ಯತೆ ಇದೆ. ಹಾಗಾದರೆ ಇದನ್ನು ಬೆಳೆಯುವ ರೀತಿ ಹೇಗೆ? ವಾತಾವರಣ ಹೇಗಿರಬೇಕು?

 

ಲವಂಗ ಬೆಳೆ

 

       ಮರಳು ಮಿಶ್ರಿತ ಬೂದು ಮಣ್ಣು ಅಥವಾ ಕೆಂಪು ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ನೀರು ಬಸಿದು ಹೋಗುವಂತಹ ಮಣ್ಣು ಸೂಕ್ತ. ಮಣ್ಣಿನ pH 6.5 ರಿಂದ 7.5 ವರೆಗೆ ಇರಬೇಕು. ಇಂತಹ ವಾತಾವರಣದಲ್ಲಿ ಲವಂಗ ಮರ ಉತ್ತಮವಾಗಿ ಬೆಳೆಯುತ್ತದೆ. ಇದೊಂದು ನೆರಳಿನಲ್ಲಿ ಬೆಳೆಯುವ ಬೆಳೆಯಾಗಿರುವುದರಿಂದ ತೆಂಗು, ಅಡಿಕೆ ಅಥವಾ ಕಾಫಿಯ ಜೊತೆ ಬೆಳೆಯುವುದು ಉತ್ತಮ. ಇದನ್ನು ಎರಡು ರೀತಿಯಲ್ಲಿ ಸಸ್ಯಾಭಿವೃದ್ಧಿ ಮಾಡಲಾಗುತ್ತದೆ. ಒಂದು ಲವಂಗ ಬೀಜದಿಂದ ಮತ್ತೊಂದು ಮರದ ಭಾಗದಿಂದ ಅಥವಾ softwood cutting ಇಂದ ಸಸ್ಯಾಭಿವೃದ್ಧಿ ಮಾಡಿಕೊಳ್ಳಬಹುದು.

 

       ಭೂಮಿ ಸಿದ್ಧತೆ ಮಾಡಿ ಅಲ್ಲಿಗೆ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ, ಗೊಣ್ಣೆಹುಳುಗಳ ಕಾಟ ಇದ್ದರೆ ಮೆಟಾರೈಜಂ ಇತ್ಯಾದಿಗಳನ್ನು ಹಾಕಬೇಕು. ಗಿಡಗಳನ್ನು ಡಾ.ಸಾಯಿಲ್ ಬೀಜೋಪಚಾರ್ ಬಳಸಿ ಬೀಜೋಪಚಾರ ಮಾಡಿ ನಾಟಿ ಮಾಡುವುದರಿಂದ ಬೇರುಗಳ ಅಭಿವೃದ್ಧಿ ಮತ್ತು ಗಿಡಗಳ ಬೆಳವಣಿಗೆ ಉತ್ತಮವಾಗುತ್ತದೆ. ಗಿಡದಿಂದ ಗಿಡಕ್ಕೆ 6-7 ಮೀಟರ್ ಅಂತರ ಕೊಡಬೇಕು. ಈ ಅಂತರದಲ್ಲಿ ಕೆಲವು ವರ್ಷಗಳ ತನಕ ಅಂತರ ಬೆಳೆಗಳನ್ನು ಬೆಳೆಯಬಹುದು.

 

ಕಟಾವು ಮತ್ತು ಮಾರುಕಟ್ಟೆ

 

       ನಾವು ಬಳಸುವ ಲವಂಗವು ಮರದಲ್ಲಿ ಬಿಡುವ ಹೂಗಳಾಗಿದ್ದು, ಇದು ಮೊಗ್ಗಾಗಿದ್ದಾಗಲೇ ಕಿತ್ತು ಒಣಗಿಸಬೇಕು. ಹೂ ಅರಳಿದರೆ ಅಂತಹ ಲವಂಗವೂ ವ್ಯರ್ಥ ಮತ್ತು ಮಾರುಕಟ್ಟೆಯಲ್ಲಿ ಯಾವುದೇ ಮೌಲ್ಯ ಇರುವುದಿಲ್ಲ. 4-5 ವರ್ಷದಿಂದ ಇದರ ಇಳುವರಿ ಪ್ರಾರಂಭವಾದರೂ, ಪೂರ್ತಿ ಇಳುವರಿ 15 ವರ್ಷಗಳ ನಂತರವೇ ಆರಂಭವಾಗುತ್ತದೆ. ಆದರೆ 100 ವರ್ಷಗಳವರೆಗೆ ಇಳುವರಿ ನೀಡುತ್ತದೆ. ಹಾಗಾಗಿ ಇದೊಂದು ಉತ್ತಮ ಧೀರ್ಘಕಾಲೀನ ಬೆಳೆಯಾಗಿದೆ. ಒಂದು ಮರದಿಂದ ಸುಮಾರು 5-6 kg ಯವರೆಗೆ ಇಳುವರಿ ಪಡೆಯಬಹುದಾಗಿದೆ. 750-850 ರೂ. ವರೆಗೆ 1 kg ಲವಂಗದ ಬೆಲೆ ಇರುವುದರಿಂದ ಸೂಕ್ತ ನಿರ್ವಹಣೆ ಮಾಡಿದಲ್ಲಿ ರೈತರು ಉತ್ತಮ ಆದಾಯ ಗಳಿಸಬಹುದಾಗಿದೆ. ಲವಂಗ ಮರಗಳಿಗೆ ರೋಗಗಳು ಮತ್ತು ಕೀಟಬಾಧೆ ಕಡಿಮೆ ಮತ್ತು ನಿರ್ವಹಣಾ ವೆಚ್ಚವೂ ಹೆಚ್ಚು ದುಬಾರಿಯೇನಲ್ಲ.

 

       ರೈತರಿಗೆ ಇಷ್ಟೆಲ್ಲಾ ಪ್ರಯೋಜನಗಳನ್ನು ಕೊಡುವ ಈ ಬೆಳೆಯ ಕಟಾವು ಒಂದು ಸವಾಲಿನ ಕೆಲಸ. ಸರಿಯಾದ ಸಮಯದಲ್ಲಿ ಕಟಾವು ಮಾಡದಿದ್ದರೆ ಲವಂಗ ಹಾಳಾಗುತ್ತದೆ. ಪ್ರತಿಯೊಂದು ಮೊಗ್ಗನ್ನು ಆರಿಸಿ ಕೈಯಿಂದಲೇ ಕಟಾವು ಮಾಡಬೇಕಿರುವುದರಿಂದ ನುರಿತ ಕೆಲಸಗಾಗರರ ಅವಶ್ಯಕತೆ ಇರುತ್ತದೆ. ಮರಗಳು ಎತ್ತರವಾಗಿ ಬೆಳೆದ ಮೇಲೆ ತುದಿಯಲ್ಲಿರುವ ಹೂಗಳನ್ನು ಕಟಾವು ಮಾಡುವುದು ದುಬಾರಿ ಮತ್ತು ಅಪಾಯಕಾರಿಯಾಗುತ್ತದೆ.

 

ಲವಂಗ ಕೃಷಿಯ ಸಮಗ್ರ ಮಾಹಿತಿಗಾಗಿ ಮತ್ತು ಉತ್ತಮ ಇಳುವರಿ ಪಡೆಯಲು ಅನುಸರಿಸಬೇಕಾದ ಕ್ರಮಗಳಿಗಾಗಿ ಕೆಳಗಿನ ವೀಡಿಯೋ ನೊಡಿ.

https://www.youtube.com/watch?v=mynCigreel0&list=PLuN9VcGQAtK7oisEShNo44mvl_N89CcKy&index=9

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #soil  #organicspray  #soilerosion  #soilfertility  #integratedfarming  #clove  #clovefarming  #organicclove  #laung  #organiclaung  



Blog




Home    |   About Us    |   Contact    |   
microbi.tv | Powered by Ocat Online Catalog - Web Promotion Service in India | Member of Ocat Platform