Blog

ಯಾವುದೇ ಬೆಳೆ ಬೆಳೆಯಲು ಭೂಮಿ ಸಿದ್ಧತೆ ತುಂಬಾ ಮುಖ್ಯ. ಕೃಷಿಯಲ್ಲಿ ಬೆಳೆಗಳ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಮತ್ತು ಇಳುವರಿಯನ್ನು ಹೆಚ್ಚಿಸಲು ಭೂಮಿಯನ್ನು ಸಿದ್ಧಪಡಿಸುವುದು ಒಂದು ಅತ್ಯಗತ್ಯ ಹಂತ. ಆದರೆ ಕೇವಲ ಉಳುಮೆ ಮಾಡಿ ಭೂಮಿ ಸಿದ್ಧತೆ ಎನ್ನುವುದು ತಪ್ಪು. ಭೂಮಿ ಸಿದ್ಧತೆ ಅಂದರೇನು? ಅದರ ಮಹತ್ವ ಏನು? ಭೂಮಿ ಸಿದ್ಧತೆ ಮಾಡುವ ರೀತಿ ಹೇಗೆ? ಭೂಮಿ ಸಿದ್ಧತೆ ಮಾಡುವುದರ ಬಗ್ಗೆ ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಕೆ ಆರ್ ಹುಲ್ಲುನಾಚೇಗೌಡರು ಏನು ಹೇಳುತ್ತಾರೆ? ನೋಡೋಣ ಬನ್ನಿ.

 

ಭೂಮಿ ಸಿದ್ಧತೆ ಎಂದರೇನು?

       ಉಳುಮೆ ಮಾಡಿ ಸಾಲು ಹೊಡೆಯುವುದು ಅಥವಾ ಗುಣಿ ತೆಗೆದರೆ ಸಾಲದು. ಬೆಳೆ ಬೆಳೆಯಲು ಸಕಲ ರೀತಿಯಲ್ಲಿ ಮಣ್ಣನ್ನು ಸಿದ್ಧಗೊಳಿಸುವುದನ್ನು ಭೂಮಿಸಿದ್ಧತೆ ಎನ್ನಬಹುದು. ಪೋಷಕಾಂಶಕ್ಕಾಗಿ ತ್ಯಾಜ್ಯಗಳನ್ನು ಮಣ್ಣಿಗೆ ಸೇರಿಸುವುದು, ಮಣ್ಣಿನಲ್ಲಿರುವ ಬೆಳೆಗೆ ಹಾನಿ ಮಾಡುವ ಕೀಟಗಳ ಮೊಟ್ಟೆಗಳು ಮತ್ತು ಕಳೆಗಳನ್ನು ನಾಶಮಾಡಲು ಕ್ರಮ ತೆಗೆದುಕೊಳ್ಳುವುದು ಭೂಮಿ ಸಿದ್ಧತೆಯ ಅಂಶಗಳು. ವೈಜ್ಞಾನಿಕವಾಗಿ ಭೂಮಿಸಿದ್ಧತೆ ಮಾಡಿದರೆ ಬೆಳೆ ಬೆಳೆಯಲು ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ.

 

ಭೂಮಿ ಸಿದ್ಧತೆಗೆ ಏನು ಮಾಡಬೇಕು?

       ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೇಗೌಡರು ಭೂಮಿ ಸಿದ್ಧತೆಯಲ್ಲಿ ಹಸಿರೆಲೆ ಗೊಬ್ಬರದ ಮಹತ್ವ ತಿಳಿಸಿರುತ್ತಾರೆ. ಉಳುಮೆಗೂ ಮುಂಚೆ ಜಮೀನಿಗೆ ದ್ವಿದಳ ಧಾನ್ಯಗಳನ್ನು ಬೆಳೆದು ಹೂ ಬಿಡುವ ಸಮಯದಲ್ಲಿ ಉಳುಮೆ ಮಾಡಿ ಮಲ್ಚ್ ಮಾಡಬೇಕು ಎನ್ನುತ್ತಾರೆ. ದ್ವಿದಳ ಧಾನ್ಯಗಳು ನೈಸರ್ಗಿಕವಾಗಿ ಮಣ್ಣಿಗೆ ಸಾರಜನಕ ಒದಗಿಸುತ್ತವೆ. ಇವುಗಳ ಬೇರುಗಳಲ್ಲಿ ಕಾಣಸಿಗುವ ಗಂಟುಗಳಲ್ಲಿ ಸಾರಜನಕ ಸ್ಥಿರೀಕರಣ ಮಾಡುವ ಬ್ಯಾಕ್ಟೀರಿಯಾಗಳು ಇರುವುದರಿಂದ ಇವು ಮಣ್ಣಿಗೆ ಸಾರಜನಕ ಸೇರಿಸುತ್ತವೆ. ಗಿಡಗಳು ಕಳೆತು ಮುಂದಿನ ಬೆಳೆಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ಕೊಟ್ಟಿಗೆ ಗೊಬ್ಬರ ದುಬಾರಿಯಾಗಿರುವುದರಿಂದ ಪರ್ಯಾಯವಾಗಿ ಹಸಿರೆಲೆ ಗೊಬ್ಬರಗಳನ್ನು ಬೆಳೆಯಬಹುದು ಎನ್ನುತ್ತಾರೆ ಡಾ.ಕೆ.ಆರ್.ಹುಲ್ಲುನಾಚೇಗೌಡರು.

       ಇದಲ್ಲದೇ ಗೊಣ್ಣೆಹುಳು ಇದ್ದರೆ ನಿಯಂತ್ರಿಸಲು ಮೆಟಾರೈಜಿಯಂ ಅಥವಾ ಬೇವಿನ ಹಿಂಡಿಯನ್ನು ಮಣ್ಣಿಗೆ ಕೊಡಬಹುದು. ಕೆಲವೊಂದು ಕಳೆಗಳು ಹಿಂದಿನ ಬೆಳೆಯಿಂದ ಬರುವುದರಿಂದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಹೀಗೆ ಬಿತ್ತನೆಗೂ ಮುಂಚೆ ಬೆಳೆಗಳು ಆರೋಗ್ಯವಾಗಿ ಬರಲು ತೆಗೆದುಕೊಳ್ಳುವ ಕ್ರಮಗಳನ್ನು ಭೂಮಿ ಸಿದ್ಧತೆ ಎನ್ನುತ್ತಾರೆ.

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #soil  #organicspray  #soilerosion  #soilfertility  #integratedfarming  #pest  #pestcontrol  #organicpestcontrol  #metarhizium  #landpreparation  #greenmanure  #legumes  #nitrogenfixation  



Blog




Home    |   About Us    |   Contact    |   
microbi.tv | Powered by Ocat Online Advertising Service in India