ಸಮಗ್ರ ಕೃಷಿ ಪದ್ಧತಿ-ಕೃಷಿಕರ ಪಾಲಿಗೆ ವರದಾನ
ಸಮಗ್ರ ಬೆಳೆ ಬೆಳೆಯುವುದರಿಂದ ರೈತರಿಗೆ ಸಾಕಷ್ಟು ಅನುಕೂಲಗಳಿವೆ. ಹಲವು ಬೆಳೆ ಬೆಳೆಯುವುದರಿಂದ, ಒಂದು ಬೆಳೆಯಲ್ಲಿ ನಷ್ಟವಾದರೂ, ಮತ್ತೊಂದು ಬೆಳೆ ಕೈ ಹಿಡಿಯುತ್ತದೆ. ಮತ್ತೊಂದೆಡೆ ನಿರಂತರ ಆದಾಯಕ್ಕೂ ಕಾರಣವಾಗುತ್ತದೆ.
ಇನ್ನು ಕಡಿಮೆ ಭೂಮಿ ಹೊಂದಿರುವ ರೈತರು, ಇಷ್ಟು ಭೂಮಿಯಲ್ಲಿ ವಿವಿಧ ಬೆಳೆ ಬೆಳೆಯುವುದರಿಂದ ಹೆಚ್ಚಿನ ಇಳುವರಿ ಸಿಗುವುದಿಲ್ಲ ಎಂದು ಭಾವಿಸಿರುತ್ತಾರೆ. ಆದ್ರೆ ಅಂತರ ಬೆಳೆ ಬೆಳೆದಾಗಲೇ ಇನ್ನು ಹೆಚ್ಚು ಇಳುವರಿ ಪಡೆಯಬಹುದು ಎಂಬುದು ಸತ್ಯ.
ಸಮಗ್ರ ಬೆಳೆ ನಿರ್ವಹಣೆ:
ಸಾವಯವ ಕೃಷಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಮಾಡಿದರೆ, ರೈತರಿಗೆ ಹೆಚ್ಚು ಲಾಭ. ಯಾಕಂದ್ರೆ ಇಲ್ಲಿ ಖರ್ಚು ಕಡಿಮೆಯಾಗುತ್ತೆ, ರೋಗ ಮತ್ತು ಕೀಟ ಬಾಧೆ ನಿಯಂತ್ರಣದಲ್ಲಿರುತ್ತದೆ. ಅಷ್ಟೆ ಅಲ್ಲ ಸಮಗ್ರ ಪೋಷಕಾಂಶಗಳು, ಬೆಳೆಗಳಿಗೆ ಸರಳವಾಗಿ ದೊರೆಯುತ್ತದೆ. ಭೂಮಿ ಮತ್ತಷ್ಟು ಫಲವತ್ತಾಗುತ್ತದೆ.
ಕೀಟ ಮತ್ತು ರೋಗ ಬಾಧೆ:
ಸಾವಯವ ಕೃಷಿಯಲ್ಲಿ ಕೀಟ ಮತ್ತು ರೋಗ ಬಾಧೆಯನ್ನ ಕಡಿಮೆ ಖರ್ಚಿನಲ್ಲಿ ನಿಯಂತ್ರಿಸಬಹುದು. ಇದರಿಂದ ಕೃಷಿ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುವುದಿಲ್ಲ. ಜತೆಗೆ ಬೆಳೆಗಳ ರೋಗ ನಿರೋಧಕ ಶಕ್ತಿಗೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹೀಗಾಗಿ ಸರಳವಾಗಿ ಸಾವಯವ ಕೃಷಿಯಲ್ಲಿ ಸಮಗ್ರ ಬೆಳೆಗಳನ್ನ ಕಾಪಾಡಿಕೊಳ್ಳಬಹುದು.
ಒಟ್ಟಾರೆಯಾಗಿ ಕೃಷಿಯಲ್ಲಿ ಕೃಷಿಕರು, ಏಕ ಬೆಳೆ ಪದ್ಧತಿಗೆ ದುಂಬಾಲು ಬೀಳದೆ, ಸಮಗ್ರ ಸಾವಯವ ಕೃಷಿಯತ್ತ ತಮ್ಮ ಚಿತ್ತ ಹರಸಿದರೆ, ಆರ್ಥಿಕವಾಗಿ ಸದೃಢರಾಗುವುದು ನಿಶ್ಚಿತ.
ವರದಿ: ಶ್ವೇತಾ ಕಲಕಣಿ
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://www.youtube.com/watch?v=glToEHYtTZA
|
ಹುರುಳಿ ಕಾಳು ತಿಂದವರಿಗೂ, ಬೆಳೆದವರಿಗೂ ಹಾರ್ಸ್ ಪವರ್...!
ಹುರುಳಿ ಕಾಳು ಬೆಳೆಯಿಂದ ಮನುಷ್ಯನ ಆರೋಗ್ಯಕ್ಕೆ ಏನೆಲ್ಲ ಲಾಭ..? ಹುರುಳಿಯಿಂದ ರೈತನಿಗೆ ಆಗುವ ಲಾಭವೆಷ್ಟು? ಯಾವ ವಿಧಾದಲ್ಲಿ ಹುರುಳಿಕಾಳು ಬೆಳೆದರೆ ರೈತನ ಶ್ರಮಕ್ಕೆ ತಕ್ಕ ಪ್ರತಿಫಲಸಿಗುತ್ತೆ? ಈ ಎಲ್ಲಾ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.
|
ಹಸಿರೆಲೆ ಗೊಬ್ಬರ ಬೆಳೆಗಳ ಪ್ರಯೋಜನಗಳು
ಗೊಬ್ಬರವಾಗಿ ಬಳಸುವ ಬೆಳೆಗಳನ್ನು ಹಸಿರೆಲೆ ಗೊಬ್ಬರ ಎಂದು ಕರೆಯುತ್ತಾರೆ. ಇವುಗಳು ಹೇರಳವಾಗಿ ಬೆಳೆಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ.
|
ಉಪಕಾರಿ ಸೂಕ್ಷ್ಮಜೀವಿಗಳ ಅದ್ಭುತ ಉಡುಗೊರೆಗಳು..!
ಮಣ್ಣು ಅತ್ಯಂತ ಸಂಕೀರ್ಣ ಪರಿಸರ ವ್ಯವಸ್ಥೆ ಮತ್ತು ಪರಿಸರ ಕೇಂದ್ರಿಯ ದೃಪ್ಟಿಕೋನದಿಂದ ಅತ್ಯಮೂಲ್ಯವಾದ ಸಂಪನ್ಮೂಲವಾಗಿದೆ. ಅದರ ಹಲವು ನಿರ್ಣಾಯಕ ಕಾರ್ಯಗಳಿಂದಾಗಿ ಮಣ್ಣು ನಿಸ್ಸಂದೇಹವಾಗಿ ನಮ್ಮ ಅತ್ಯಂತ ಅಗತ್ಯ ಮತ್ತು ಕಾರ್ಯತಂತ್ರದ ಸಂಪನ್ಮೂಲಗಳಲ್ಲಿ ಒಂದಾಗಿದೆ.
|
ಕಬ್ಬಿನಲ್ಲಿ ಕೆಂಪು ಕೊಳೆ ರೋಗದ ನಿಯಂತ್ರಣ ಕ್ರಮಗಳು..!
ಸಿಹಿಯ ಮೂಲ ಕಬ್ಬಾಗಿದ್ದು, ಈ ಬೆಳೆಗೆ ಕೆಂಪು ಕೊಳೆ ರೋಗದ ಭೀತಿ ಹೆಚ್ಚಾಗಿದೆ. ರೈತರು ಕಬ್ಬು ನಾಟಿ ಮಾಡಿದಾಗಿನಿಂದಲೇ, ಇಳುವರಿ ಮೇಲೆ ಇನ್ನಿಲ್ಲದ ಕನಸುಗಳನ್ನ ಹೊತ್ತಿರುತ್ತಾರೆ. ವಿಪರ್ಯಾಸವೇನು ಅಂದ್ರೆ, ರೈತರು ಅಳವಡಿಸಿಕೊಂಡಿರುವ ಅವೈಜ್ಞಾನಿಕ ಪದ್ಧತಿಯಾಗಿರಬಹುದು ಅಥವಾ ವಾತಾವರಣದ ವೈಪರೀತ್ಯದಿಂದ ಕಬ್ಬಿನಲ್ಲಿ ಕೆಂಪು ಕೊಳೆ ರೋಗ ಶುರುವಾಗಿಬಿಡುತ್ತದೆ. ಹಾಗಾದ್ರೆ ಈ ಕೆಂಪು ಕೊಳೆ ರೋಗವನ್ನು ರೈತರು ಹೇಗೆ ಗುರುತಿಸಬೇಕು? ಹೇಗೆ ನಿರ್ವಹಣೆ ಮಾಡಬೇಕು? ಎಂಬ ವಿಚಾರಗಳನ್ನು ಮೊದಲು ಅರಿಯಬೇಕಾಗಿದೆ.
|
ಗಾಡ್ ಪ್ಲ್ಯಾಂಟ್ ಗ್ಲಿರಿಸಿಡಿಯಾ-ಇದು ಬುದ್ಧಿವಂತರ ಐಡಿಯಾ
ವೈಜ್ಞಾನಿಕವಾಗಿ ಗ್ಲಿರಿಸಿಡಿಯಂ ಸ್ಪೆಸಿಯಂ ಎಂಬ ಹೆಸರಿನಿಂದ ಕರೆಸಿಕೊಳ್ಳುವ ಗೊಬ್ಬರ ಗಿಡವಾದ ಗ್ಲಿರಿಸಿಡಿಯಾದ ಉಪಯೋಗಗಳು ಒಂದಲ್ಲ ಎರಡಲ್ಲ. ನೈಸರ್ಗಿಕವಾಗಿ ಭೂಮಿಗೆ ಸಾವಯವ ಗೊಬ್ಬರವನ್ನು ಒದಗಿಸಿಕೊಟ್ಟು ಭೂತಾಯಿಯನ್ನು ಸಮೃದ್ಧವಾಗಿಡುವುದರಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಸದಾ ಕಾಲ ಹಚ್ಚ ಹಸಿರಾಗಿರುವ ಈ ಗಿಡ ಸಾಕಷ್ಟು ಪೋಷಕಾಂಶವನ್ನು ಹೊಂದಿದ್ದು ಕೃತಕ ಗೊಬ್ಬರಗಳಿಗೆ ಸೆಡ್ಡು ಹೊಡೆದು ನಿಂತಿದೆ.
|
ಕಡಿಮೆ ಖರ್ಚಿನಲ್ಲಿ ಅಡಿಕೆಯಿಂದ ಹೆಚ್ಚು ಇಳುವರಿ ಪಡೆಯಲು ಹೀಗೆ ಮಾಡಿ..!
ಅಡಿಕೆ ಬೆಳೆ ಇದೊಂದು ವಾಣಿಜ್ಯ ಬೆಳೆ, ಕೃಷಿಕ ತನ್ನ ನಿರೀಕ್ಷೆಯಂತೆ ಹೆಚ್ಚು ಇಳುವರಿ ಪಡೆದರೆ ಆದಾಯಕ್ಕೆ ಯಾವುದೇ ಕೊರತೆಯಿಲ್ಲ. ಒಂದು ವೇಳೆ ಬೆಳೆ ಪೋಷಕಾಂಶದಿಂದ ವಂಚಿತವಾಗಿ ಅನಾರೋಗ್ಯಕ್ಕೆ ಈಡಾದ್ರೆ, ರೈತ ಹಾಕಿದ ಬಂಡವಾಳ ನೀರಿನಲ್ಲಿ ಹೋಮವಾಗುವುದು ಖಚಿತ.
|
ಸಾವಯವ ಕೃಷಿಯಲ್ಲಿ ಕೀಟಗಳ ನಿಯಂತ್ರಣ
ಬೆಳೆಗಳಿವೆ ಎಂದ ಮೇಲೆ ಅಲ್ಲಿ ಕೀಟಗಳ ಹಾವಳಿ ತಪ್ಪಿದ್ದಲ್ಲ. ರೈತರು ಕೀಟಗಳ ಬಾಧೆಯನ್ನು ತಡೆಯುವಲ್ಲಿ ಹೈರಾಣಾಗಿ ಹೋಗುತ್ತಾರೆ. ಬಹು ವೇಗವಾಗಿ ಬೆಳೆಗಳಮೇಲೆ ದಾಳಿಮಾಡುವ ಈ ಕೀಟಗಳು, ರೈತ ಶ್ರಮದ ಫಲವನ್ನು ಹುರಿದು ಮುಕ್ಕಿ ಹಾಕುತ್ತವೆ. ಇವುಗಳ ಕಾಟಕ್ಕೆ ಪರಿಹಾರ ರೂಪಿಸಿಕೊಳ್ಳಲು ಕೃಷಿಕರು ರಾಸಾಯನಿಕ ಸ್ಪ್ರೇಗಳಿಗೆ ಮೊರೆ ಹೋಗುವುದು ಸಾಮಾನ್ಯವಾಗಿ ಬಿಟ್ಟಿದೆ. ರಾಸಾಯನಿಕ ಸ್ಪ್ರೇಗಳನ್ನು ಬಿಟ್ಟು ಬೇರೆ ಯಾವ ದಾರಿಊ ಇಲ್ಲ ಎಂಬ ಕಲ್ಪನೆಯಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.ಆದರೆ ಸಾವಯವ ಕೃಷಿಯಲ್ಲಿ ಇವುಗಳ ನಿರ್ಮೂಲನೆಯನ್ನು ಮಾಡಿಕೊಳ್ಳಬಹುದು ಎಂಬ ನಿಜ ಸಂಗತಿಯನ್ನು ಕೃಷಿಕರು ಅರಿಯಬೇಕಾಗಿದೆ.
|
ಅಂತರ ಬೆಳೆ-ರೈತರಿಗೆ ಲಾಭದ ಸುರಿಮಳೆ
ಅಂತರ ಬೆಳೆಯು ಒಂದು ಹೊಲ/ತೋಟದಲ್ಲಿ ಎರಡು ಅಥವಾ ಹೆಚ್ಚಿನ ಬೆಳೆಗಳನ್ನು ಏಕಕಾಲದಲ್ಲಿ ಬೆಳೆಸುವುದರಿಂದ ರೈತರಿಗೆ ಸಹಾಯವಾಗುತ್ತದೆ.
|
ಸೂಕ್ಷ್ಮ ನೀರಾವರಿ ಯೋಜನೆ: ಎಲ್ಲಾ ರೈತರಿಗೆ ಹಿಂದಿನಂತೆಯೇ ಸಬ್ಸಿಡಿ-ಬಿ.ಸಿ.ಪಾಟೀಲ್
ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಈ ಹಿಂದೆ ನೀಡುತ್ತಿದ್ದ ಸಬ್ಸಿಡಿಯನ್ನು ಅದೇ ಮಾದರಿಯಲ್ಲಿ ಮುಂದುವರೆಸುತ್ತಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
|