ಮಸಾಲೆ ಪದಾರ್ಥದಲ್ಲಿ ಒಂದಾಗಿರುವ ಶುಂಠಿ ಬೆಳೆಯಿಂದ ರೈತರು ಹೆಚ್ಚು ಆದಾಯ ಪಡೆಯುವ ಸಲುವಾಗಿ,ಶುಂಠಿ ಬಯಸುವ ಹೆಚ್ಚು ಪೋಷಕಾಂಶವನ್ನ ಸಾವಯವದಲ್ಲಿ ನೀಡದೆ, ರಾಸಾಯನಿಕ ಗೊಬ್ಬರ ನೀಡುತ್ತಾರೆ. ಇದರಿಂದ ಬೆಳೆ ವಿಷವಾಗುತ್ತೆ, ಕೃಷಿ ಭೂಮಿ ಬರಡಾಗುತ್ತದೆ. ಇಲ್ಲೊಬ್ರು ಕೃಷಿಕರು, ಒಂದು ಕಡೆ ರಾಸಾಯನಿಕ ಗೊಬ್ಬರ, ಮತ್ತೊಂದೆಡೆ ಪರೀಕ್ಷಾರ್ಥವಾಗಿ ಸಾವಯವದಲ್ಲಿ ಶುಂಠಿ ಬೆಳೆದಿದ್ದಾರೆ.
ಕೃಷಿಕನ ಪರಿಚಯ:
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ತೆರಿಗೆನಹಳ್ಳಿ ಗ್ರಾಮದ ಕೃಷಿಕ ಮೋಹನ ಅವರು, ಒಂದು ಎಕರೆಯಲ್ಲಿ ರಾಸಾಯನಿಕ ಗೊಬ್ಬರ ಬಳಸಿದ್ರೆ, 10 ಗುಂಟೆಯಲ್ಲಿ ಸಾವಯವದಿಂದ ಶುಂಠಿ ಬೆಳೆದಿದ್ದಾರೆ. ಈ ಎರಡರ ನಡುವಿನ ವ್ಯತ್ಯಾಸ ಕಂಡು ಸ್ವತ: ಕೃಷಿಕ ನಿಬ್ಬೆರಗಾಗಿದ್ದಾರೆ.
ರಾಸಾಯನಿಕ ಶುಂಠಿ:
ನಾಲ್ಕು ತಿಂಗಳಿಂದ ರಾಸಾಯನಿಕದಲ್ಲಿ ಬೆಳೆಯುತ್ತಿರುವ ಶುಂಠಿಯಲ್ಲಿ, ಸರಿಸುಮಾರು 17 ರಿಂದ 18 ಮರಿಗಳಿದ್ದು, ರೋಗಗಳು ಹೆಚ್ಚಾಗಿವೆ. ಯಾಕಂದ್ರೆ ಕೃಷಿ ಭೂಮಿ ರಾಸಾಯನಿಕ ಬಳಕೆಯಿಂದ, ಪೋಷಕಾಂಶದಿಂದ ವಂಚಿತವಾಗಿ ಅಫಲವತ್ತಾಗಿದೆ. ಎಷ್ಟೇ ನೀರು ಕೊಟ್ಟರೂ ಸಾಕಾಗುವುದಿಲ್ಲ.. ಇಂತಹ ಫಲಿತಾಂಶ ಪಡೆಯಲು ಕೃಷಿಕ ಮಾಡಿರುವ ಖರ್ಚು ಹೆಚ್ಚಾಗಿದೆ.
ಸಾವಯವ ಶುಂಠಿ:
4 ತಿಂಗಳಿಂದ ಸಾವಯವದಲ್ಲಿ ಬೆಳೆಯುತ್ತಿರುವ ಶುಂಠಿ, ಯಾವುದೇ ರೋಗಗಳಿಗೆ ಮಣಿಯದೆ 25 ಮರಿಗಳಿಂದ ಸಮೃದ್ಧಗೊಂಡಿದೆ. ಇನ್ನು ಈ ಕೃಷಿ ಭೂಮಿ ಎರೆಹುಳುಗಳನ್ನ ಹೊತ್ತು ಫಲವತ್ತಾಗಿದೆ. ಇಂತಹ ಫಲಿತಾಂಶಕ್ಕೆ ಕೃಷಿಕ ಖರ್ಚು ಮಾಡಿದ್ದು ಮಾತ್ರ ಬಹಳ ಕಡಿಮೆ.
ಒಟ್ಟಿನಲ್ಲಿ ಮಣ್ಣಿನಿಂದಲೇ ಹೆಚ್ಚು ಪೋಷಕಾಂಶ ಸವಿಯುವ ಶುಂಠಿ ಬೆಳೆಗೆ, ಪೋಷಕಾಂಶದ ಕೊರತೆಯಾಗದಂತೆ ನೋಡಿಕೊಳ್ಳುವುದು ಉತ್ತಮ. ಆಗ ಕೃಷಿಕ ಅಂದುಕೊಂಡ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=qAqXSOSbMDo
#organicginger #ginger #organicfarming #organicagriculture #HowfarmerearnsinLakhsinarecanut #Organicfarmingginger #Howtogrowhealthyginger #trees #Whichfertilizerisbestforginger
Blog