ದ್ವಿದಳ ಧಾನ್ಯಗಳಿಂದ ಹಸಿರೆಲೆ ಗೊಬ್ಬರ ಎಷ್ಟು ಲಾಭಕರ?
ಹಸಿರೆಲೆ ಗೊಬ್ಬರದ ಸಸ್ಯಗಳು ತ್ವರಿತವಾಗಿ ಬೆಳೆದು ಕಡಿಮೆ ಅವಧಿಯಲ್ಲಿ ಹೆಚ್ಚು ಸೊಪ್ಪನ್ನು ಕೊಡುವಂತಿರಬೇಕು.
|
ಹಸಿರೆಲೆ ಗೊಬ್ಬರವಾಗಿ ಸೆಣಬು ಎಷ್ಟು ಪ್ರಯೋಜನಕಾರಿ?
- ಹಸಿರೆಲೆ ಗೊಬ್ಬರದ ಸಸ್ಯಗಳು ಮಣ್ಣಿನ ಮೇಲೆ ಹೊದಿಕೆಯಾಗಿರುವುದರಿಂದ ಮಳೆಯ ನೀರು ಹೆಚ್ಚಾಗಿ ಇಂಗಿ, ಮಣ್ಣು ಕೊಚ್ಚಿಹೋಗುವುದು ಕಡಿಮೆಯಾಗುವುದಲ್ಲದೆ, ಮಣ್ಣಿನಲ್ಲಿ ತಾಪ ಕಡಿಮೆಯಾಗಿರುವುದು.
|
ಕಬ್ಬಿನ ರವದಿಯನ್ನು ಸುಡುವ ಬದಲು ಸುಲಭವಾಗಿ ಮೌಲ್ಯವರ್ಧನೆ ಮಾಡಿ
ಕಬ್ಬಿನಲ್ಲಿಹೆಚ್ಚು ಇಳುವರಿ ಪಡೆಯುವ ಆತುರದಲ್ಲಿ ಮಣ್ಣಿಗೆ ಟನ್ ಗಟ್ಟಲೆ ರಾಸಾಯನಿಕ ಗೊಬ್ಬರಗಳನ್ನು ಸುರಿದು ಅಪಾಯ ತಂದು ಕೊಳ್ಳುತ್ತೇವೆ. ಅಲ್ಲದೆ ಕಬ್ಬಿನ ರವದಿಗಳನ್ನು ಹೊಲದಲ್ಲಿಯೇ ಸುಟ್ಟು ಅನೇಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದ್ದೇವೆ.
|
ಸೈನೋ ಬ್ಯಾಕ್ಟೀರಿಯಾ ಎಂಬ ರೈತ ಸ್ನೇಹಿ ಸೂಕ್ಷ್ಮಾಣು
ಪ್ರಯೋಜನಕಾರಿ ಸೂಕ್ಷ್ಮಜೀವಿಗಳು ಇತರ ನಿರ್ವಹಣಾ ಕ್ರಮಗಳಿಗೆ ಪರ್ಯಾಯವಾಗಿವೆ. ಸೈನೋ ಬ್ಯಾಕ್ಟೀರಿಯಾವು ವಾತಾವರಣದ ಸಾರಜನಕವನ್ನು ಸ್ಥಿರೀಕರಣಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ, ಸಾವಯವ ತ್ಯಾಜ್ಯಗಳು ಮತ್ತು ಅವಶೇಷಗಳನ್ನು ಕಳೆಸುತ್ತದೆ. ಕೀಟನಾಶಕಗಳು ಮತ್ತು ಇತರ ವಿಷಯುಕ್ತ ಪದಾರ್ಥಗಳನ್ನು ಮಣ್ಣಿನಲ್ಲಿ ನಿರ್ವಿಷಗೊಳಿಸುತ್ತದೆ. ಪೋಷಕಾಂಶಗಳ ಲಭ್ಯತೆಯ ವೇಗವರ್ಧಿಸುತ್ತದೆ, ಮಣ್ಣು ಮತ್ತು ನೀರಿನಲ್ಲಿ ರೋಗಕಾರಕ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ನಿಗ್ರಹಿಸುತ್ತದೆ ಮತ್ತು ಅಂತಹ ಕೆಲವು ಜೈವಿಕ ಸಕ್ರಿಯ ಸಂಯುಕ್ತಗಳನ್ನು ಉತ್ಪಾದಿಸುತ್ತದೆ. ಸಸ್ಯಗಳ ಬೆಳವಣಿಗೆಗೆ ಕೊಡುಗೆ ನೀಡುತ್ತವೆ.
|
ಬೆವೇರಿಯಾ ಬೆಸ್ಸಿಯಾನಾ-ಇದು ಜೈವಿಕ ಕೀಟನಾಶಕ
ಬೆವೇರಿಯಾ ಬೆಸ್ಸಿಯಾನಾ ಎಂಬುದು ಶಿಲೀಂಧ್ರವಾಗಿದ್ದು, ಇದು ಪ್ರಪಂಚದಾದ್ಯಂತ ಮಣ್ಣಿನಲ್ಲಿ ನೈಸರ್ಗಿಕವಾಗಿ ಬೆಳೆಯುತ್ತದೆ ಮತ್ತು ವಿವಿಧ ಆರ್ತ್ರೋಪಾಡ್ ಜಾತಿಯ ಕೀಟಗಳ ಮೇಲೆ ಪರಾವಲಂಬಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ವೈಟ್ ಮಸ್ಕಾರ್ಡಿನ್ ಕಾಯಿಲೆಗೆ ಕಾರಣವಾಗುತ್ತದೆ.
|
ಪೊಟ್ಯಾಷ್ ಮೊಬಿಲೈಜರ್‌ಗಳು ಮತ್ತು ಸಾಲ್ಯುಬಿಲೈಜರ್‌ಗಳು ಮಾಡುವುದೇನು?
ಪೊಟ್ಯಾಷಿಯಮ್ (K) ಅನ್ನು ಅತ್ಯಗತ್ಯ ಪೋಷಕಾಂಶವೆಂದು ಪರಿಗಣಿಸಲಾಗುತ್ತದೆ ಮತ್ತು ಎಲ್ಲಾ ಜೀವಕೋಶಗಳಲ್ಲಿ ಪ್ರಮುಖ ಅಂಶವಾಗಿದೆ. ನೈಸರ್ಗಿಕವಾಗಿ, ಮಣ್ಣು ಯಾವುದೇ ಇತರ ಪೋಷಕಾಂಶಗಳಿಗಿಂತ ದೊಡ್ಡ ಪ್ರಮಾಣದಲ್ಲಿ ಪೊಟ್ಯಾಷಿಯಮ್ ಅನ್ನು ಹೊಂದಿರುತ್ತದೆ. ಆದರೂ ಪೊಟ್ಯಾಶಿಯಮ್ ನ ಬಹುಪಾಲು ಸಸ್ಯಗಳು ಹೀರಿಕೊಳ್ಳಲು ಲಭ್ಯವಿಲ್ಲದ ರೂಪದಲ್ಲಿರುತ್ತದೆ.
|
ಅಜಟೋಬ್ಯಾಕ್ಟರ್ ಇದ್ದರೆ-ಲಾಭಗಳ ಸುರಿಮಳೆ
ಮಣ್ಣಿನಲ್ಲಿ ಅಜಟೋಬ್ಯಾಕ್ಟರ್ ಉಪಸ್ಥಿತಿ ಸಸ್ಯಗಳ ಮೇಲೆ ಪ್ರಯೋಜನಕಾರಿ ಪರಿಣಾಮಗಳನ್ನುಹೊಂದಿದೆ, ಆದರೆ ಈ ಬ್ಯಾಕ್ಟೀರಿಯಾಗಳ ಸಮೃದ್ಧತೆಯು ಅನೇಕ ಅಂಶಗಳಿಗೆ ಸಂಬಂಧಿಸಿದೆ, ಮಣ್ಣಿನ ಭೌತ-ರಾಸಾಯನಿಕ (ಉದಾ. ಸಾವಯವ ವಸ್ತು, pH, ತಾಪಮಾನ, ಮಣ್ಣಿನ ತೇವಾಂಶ) ಮತ್ತು ಸೂಕ್ಷ್ಮ ಜೀವವಿಜ್ಞಾನದ ಗುಣಲಕ್ಷಣಗಳು. ಮಣ್ಣಿನ ಪ್ರೊಫೈಲ್ ನ ಆಳಕ್ಕೆ ಅನುಗುಣವಾಗಿ ಅದರ ಸಮೃದ್ಧಿ ಬದಲಾಗುತ್ತದೆ. ಅಜೋಟೋಬ್ಯಾಕ್ಟೀರಿಯಾಗಳು ಸುತ್ತಮುತ್ತಲಿನ ಮಣ್ಣಿನಲ್ಲಿ ಇರುವುದಕ್ಕಿಂತ ಸಸ್ಯಗಳ ಬೇರಿನ ಹೊರವಲಯದಲ್ಲಿ ಹೆಚ್ಚು ಹೇರಳವಾಗಿವೆ ಮತ್ತು ಈ ಸಮೃದ್ಧಿಯು ಬೆಳೆ ಜಾತಿಯ ಮೇಲೆ ಅವಲಂಬಿತವಾಗಿರುತ್ತದೆ.
|
ಬಿದಿರು ಬೆಳೆದರೆ ಲಕ್ಷ ಲಕ್ಷ ಹಣ..!
ಬಿದಿರು ಒಂದು ಅರಣ್ಯ ಕೃಷಿ. ಹಿಂದೆಲ್ಲಾ ಅತ್ಯಲ್ಪ ಮಂದಿ ಬಿದಿರು ಬೆಳೆದರೂ ಅದನ್ನು ಒಂದು ವಾಣಿಜ್ಯ ಬೆಳೆಯಾಗಿ ಕಂಡದ್ದು ತೀರಾ ಕಡಿಮೆ. ಏಕೆಂದರೆ, ಬಿದಿರು ಕಡಿಯಲು, ಸಾಗಿಸಲು ಮತ್ತು ಕಡಿದ ಬಿದಿರನ್ನು ಮಾರಾಟ ಮಾಡಲು ಸರ್ಕಾರದಿಂದ ಪರವಾನಗಿ ಅಥವಾ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಹೀಗಾಗಿ ಅಲ್ಲಿ ಇಲ್ಲಿ ಕೆಲವರು ಬೆಳೆದರೂ ತಮ್ಮ ಮನೆಯ ಉಪಯೋಗಕ್ಕೆ ಆಗುವಷ್ಟನ್ನು ಮಾತ್ರ ಬೆಳೆದುಕೊಳ್ಳುತ್ತಿದ್ದರು. ಆದರೆ, ಬಿದಿರಿನ ಮೇಲಿದ್ದ ಎಲ್ಲ ಕಾನೂನು ನಿರ್ಬಂಧಗಳನ್ನು ಹಲವು ವರ್ಷಗಳ ಹಿಂದೆಯೇ ಸರ್ಕಾರ ತೆರವುಗೊಳಿಸಿದೆ. ಹೀಗಾಗಿ ಈಗ ಯಾರುಬೇಕಾದರೂ ಬಿದಿರು ಬೆಳೆಯಬಹುದು. ಅಷ್ಟೇ ಅಲ್ಲದೆ ಪ್ರತಿ ಬಿದಿರು ಗಿಡದ ನಿರ್ವಹಣೆಗೆ ಸರ್ಕಾರದಿಂದ ಪ್ರೋತ್ಸಾಹ ಧನ ಕೂಡ ಸಿಗುತ್ತದೆ.
|
ಹತ್ತಿ ಬೆಳೆಗಾರರು ಮಾಡಲೇ ಬೇಕಾದ ಅತಿಮುಖ್ಯ ಕೆಲಸ
ಕರ್ನಾಟಕದಲ್ಲಿ ಹತ್ತಿ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ರಾಯಚೂರು ಕೂಡ ಒಂದು. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಎಷ್ಟೋ ಜನರ ಆದಾಯದ ಮೂಲ ಹತ್ತಿ ಬೆಳೆಯಾಗಿದೆ. ಹತ್ತಿ ಬೆಳೆಯಲ್ಲಿ ಉತ್ತಮ ಆದಾಯ ಗಳಿಸಲು ರೈತರು ಮಾಡಬೇಕಿರುವ ಕೆಲಸಗಳೇನು? ಈ ಬಗ್ಗೆ ಕೆಲವು ರೈತರು ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
|
ಬಾಳೆ ಉತ್ಕೃಷ್ಟವಾಗಿ ಬೆಳೆಯಲು ಒಂದೇ ಎಣ್ಣೆ..!
ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆ ಎಂದರೆ ಅದು ಬಾಳೆ. ಪ್ರತಿಯೊಬ್ಬರೂ ತಿನ್ನಲು ಬಯಸುವ ಬಾಳೆಹಣ್ಣು ಕೆಲ ಖನಿಜಾಂಶಗಳು ಹಾಗೂ ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಸಾವಯವ ತ್ಯಾಜ್ಯಗಳನ್ನು ಒದಗಿಸಿಕೊಡುವ ಬಾಳೆ ಬೆಳೆ, ಕೃಷಿ ಭೂಮಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ಬಾಳೆಯನ್ನು ಕೆಲ ರೈತರು ಅಂತರ ಬೆಳೆಯಾಗಿ ಬೆಳೆಯುತ್ತಾರೆ. ಹೆಚ್ಚಿನವರು ಮುಖ್ಯ ಬೆಳೆಯಾಗಿ ಬೆಳೆಯುತ್ತಾರೆ. ಬಾಳೆ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಬೇಕಾದರೆ ರೈತರು ಒಂದಿಷ್ಟು ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವುದು ಉತ್ತಮ.
|
ಬೆಳೆ ಇಳುವರಿ ಹೆಚ್ಚಲು ಮಣ್ಣಿಗೆ ಏನು ಮಾಡಬೇಕು..?
ಮಣ್ಣು ಸಕಲ ಜೀವ ಸಂಕುಲದ ಸಂಪತ್ತು. ಮಣ್ಣು ಉಳಿದರೆ ಮಾತ್ರ ಬೆಳೆ ಉಳಿಯುವುದು. ಕೃಷಿಯಲ್ಲಿ ಯಶಸ್ಸು ಸಾಧಿಸಬೇಕೆಂದರೆ, ಕೃಷಿ ಮಣ್ಣು ಚೆನ್ನಾಗಿ ಆರೋಗ್ಯವಾಗಿದ್ದರೆ ಸಾಕು, ಬೆಳೆದ ಬೆಳೆಯಲ್ಲಾ ಬಂಗಾರವಾಗಿ ಬಿಡುತ್ತೆ. ಹಾಗಾದ್ರೆ ಕೃಷಿ ಮಣ್ಣು ಆರೋಗ್ಯವಾಗಿರಬೇಕೆಂದರೆ ರೈತರು ಏನೆಲ್ಲಾ ಮಾಡಬೇಕು ಗೊತ್ತಾ?
|
ಮರಗಡ್ಡಿಪದ್ಧತಿಯಲ್ಲಿ ರೇಷ್ಮೆ ಬೆಳೆದ ರೈತ ಸಕ್ಸಸ್..!
ದಶಕಗಳ ಹಿಂದೆ ಬಂಗಾರದ ಬೆಳೆ ಎಂದೇ ಪ್ರಸಿದ್ಧಿ ಪಡೆದಿದ್ದ ರೇಷ್ಮೆ ಬೆಳೆ ಇಂದಿಗೂ ಲಾಭದಾಯಕ ಬೆಳೆಯೇ ಆಗಿದ್ದು, ಕೆಲವು ಸುಧಾರಿತ ಕ್ರಮಗಳನ್ನು ಸರಕಾರ ಕೈಗೊಂಡರೆ ರೇಷ್ಮೆಯನ್ನು ಪುನಶ್ಚೇತನಗೊಳಿಸಲು ಸಾಧ್ಯವಿದೆ ಎಂಬುದು ರೇಷ್ಮೆ ಕೃಷಿಕರ ಅಭಿಪ್ರಾಯ. ರೇಷ್ಮೆ ಹುಳುಗಳನ್ನು ರೈತರು ಸಾಕಣೆ ಮಾಡಿದರೆ, ಆ ಹುಳುಗಳೇ ರೈತರನ್ನು ಸಲಹುತ್ತಿದ್ದವು. ಅಷ್ಟರ ಮಟ್ಟಿಗೆ ರೇಷ್ಮೆ ಕೃಷಿ ರೈತ ಕುಟುಂಬಗಳ ಕೈ ಹಿಡಿದಿತ್ತು. ವರ್ಷದಲ್ಲಿ 6 ರಿಂದ 8 ಬೆಳೆ ಬೆಳೆಯುತ್ತಿದ್ದ ರೈತರು, ಕೈತುಂಬ ಹಣ ಗಳಿಸಿ ಖುಷಿಯಾಗಿರುತ್ತಿದ್ದರು. ಈ ಹಣದಿಂದಲೇ ಮದುವೆ, ಮನೆ ನಿರ್ಮಾಣ, ಜಮೀನು ಖರೀದಿಯಂತಹ ವ್ಯವಹಾರ ನಡೆಯುತ್ತಿತ್ತು.
|
20 ವರ್ಷದಿಂದ ಇಳುವರಿ ನೀಡದ ತೆಂಗು, 1 ದ್ರವದ ಬಳಕೆಯಿಂದ 1 ಲಕ್ಷ ಆದಾಯ..!
ಭಾರತದಲ್ಲಿ ಅಡಿಕೆ, ಬಾಳೆ, ಏಲಕ್ಕಿ, ಕಾಳು ಮೆಣಸು ಜತೆಗೆ ತೆಂಗು ಕೂಡಾ ಕೃಷಿಯ ಭಾಗದಲ್ಲಿ ಒಂದು. ಕೆಲವೆಡೆ ತೆಂಗು, ಜನರ ಜೀವನಾಧಾರವಾಗಿದೆ. ಅದೆಷ್ಟೋ ರೈತರ ಜೀವನದ ಪ್ರಮುಖ ಬೆಳೆಯಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರುವ ತೆಂಗು ಕೃಷಿಗೊಂದೇ ಅಲ್ಲ ದೇವರೆಂದೂ ಪೂಜಿಸಲಾಗುತ್ತದೆ. ತೆಂಗಿನ ಮರ ಭಾರತೀಯರ ಪೂಜ್ಯ ಭಾಗ, ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗು ಮನುಷ್ಯನಿಗೆ ಬಹುಪಯೋಗಿ. ತೆಂಗಿನ ಮರದಿಂದ ಎಲೆ,ಗರಿ, ಕಾಯಿ, ಕತ್ತ, ಕಾಂಡ, ಎಲ್ಲ ಉಪಯೋಗಕಾರಿಯಾಗಿವೆ. ತೆಂಗಿನ ಮರದ ಪ್ರತಿಯೊಂದು ಭಾಗವೂ ಉಪಕಾರಿಯಾಗಿದ್ದರಿಂದ ಇದನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ.
|
ಮುರ್ರಾ ಎಮ್ಮೆ ಹಾಲಿನಿಂದ ತಿಂಗಳಿಗೆ 3,60,000 ಆದಾಯ..!
ಕೃಷಿಯ ಜತೆಗೆ ಉಪಕಸುಬುಗಳು ರೈತನಿಗೆ ಆದಾಯ ಹೆಚ್ಚಿಸುವ ಮಾರ್ಗಗಳು, ರೈತರು ಉಪಕಸುಬುಗಳ ಆಯ್ಕೆಯಲ್ಲಿ ಹೆಚ್ಚಿನ ನಿಗಾ ವಹಿಸಬೇಕಾಗುತ್ತೆ. ಅದರಲ್ಲಿ ಮುರ್ರಾ ಎಮ್ಮೆ ತಳಿ ಉಪಕಸುಗಳಲ್ಲಿ ಆದಾಯ ಹೆಚ್ಚಿಸುವ ಒಂದು ಬ್ರ್ಯಾಂಡ್ ಅಂತ ಹೇಳಿದ್ರೆ ತಪ್ಪಾಗಲಾರದು. ಹೌದು ಹರಿಯಾಣ ರಾಜ್ಯದ ತಳಿಯಾಗಿರುವ ಮುರ್ರಾ ಹೆಚ್ಚು ಹಾಗೂ ಗುಣಮಟ್ಟದ ಹಾಲು ಕೊಡುವ ಎಮ್ಮೆ ತಳಿ. ಇದು ರೈತನ ಜೇಬು ತುಂಬಿಸುವ ನಂ 1 ಉಪಕಸುಬಾಗಿದೆ.
|
ಕಬ್ಬು ಬೆಳೆ ಚಲೋ ಬರಲು ಇಷ್ಟು ಮಾಡಿ ಸಾಕು
ಕಬ್ಬು ಒಂದು ವಾಣಿಜ್ಯ ಬೆಳೆ. ಕರ್ನಾಟಕದ ಹಲವು ಭಾಗಗಳಲ್ಲಿ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರಮುಖ ಬೆಳೆಯಾಗಿದೆ. ಎಷ್ಟೋ ರೈತರ ಆದಾಯ ಕಬ್ಬಿನ ಮೇಲೆ, ಅದರಿಂದ ಬರುವ ಆದಾಯದ ಮೇಲೆ ಅವಲಂಬಿತವಾಗಿದೆ. ಕಬ್ಬಿನ ಗುಣಮಟ್ಟ ಮತ್ತು ಇಳುವರಿಯ ಮೇಲೆ ಎಷ್ಟೋ ಜನರ ಬದುಕು ನಿಂತಿದೆ. ಇದನ್ನು ಅರಿತು ಮೈಕ್ರೋಬಿ ಸಂಸ್ಥೆಯ ಮುಖ್ಯಸ್ಥರು ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೇಗೌಡರು ನಾಡಿನಾದ್ಯಂತ ಸಂಚರಿಸಿ ರೈತರಿಗೆ ಎಕರೆಗೆ 80-100 ಟನ್ ಇಳುವರಿ ಪಡೆಯಬಹುದಾದ ಹೊಸ ತಂತ್ರಜ್ಞಾನವನ್ನು ಪರಿಚಯಿಸಿ, ಇದನ್ನು ಅಳವಡಿಸಿಕೊಳ್ಳಲು ಪ್ರೇರೆಪಿಸುತ್ತಿದ್ದಾರೆ. ಇವರ ಮಾರ್ಗದರ್ಶನದಲ್ಲೇ ಇಲ್ಲೊಬ್ಬ ರೈತರು ಕಬ್ಬು ಬೆಳೆದಿದ್ದಾರೆ.
|
25 ಎಕರೆಯಲ್ಲಿ ಟೊಮ್ಯಾಟೊ ಬೆಳೆಯಲು ಬಳಸಿದ್ದು 1 ತಂತ್ರಜ್ಞಾನ..!
ಟೊಮ್ಯಾಟೋಗೆ ಪ್ರಸಿದ್ಧಿಯಾಗಿರುವುದು ಕೋಲಾರ ಜಿಲ್ಲೆ. ಬಹುತೇಕ ಜಮೀನುಗಳಲ್ಲಿ ಟೊಮ್ಯಾಟೋ ಬೆಳೆಯನ್ನು ನೋಡಬಹುದು. ಇದೇ ಜಿಲ್ಲೆಯ ಯುವಕರೊಬ್ಬರು ಉದ್ಯೋಗದ ಜೊತೆ ಟೊಮ್ಯಾಟೋ ಬೆಳೆ ಬೆಳೆದು ಕೃಷಿ ಮಾಡುತ್ತಿದ್ದಾರೆ. ಇವರು ಸಾವಯವ ಪದ್ಧತಿ ಅನುಸರಿಸಿ ತಮ್ಮ 1 ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದಾರೆ.
|
ಎರೆಹುಳಗಳ ಸಾಮ್ರಾಜ್ಯ ಸೃಷ್ಟಿಯಾಗಬೇಕೆ?
ಎರೆಹುಳು ರೈತನ ಮಿತ್ರ. ಕೃಷಿಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಎರೆಹುಳು ಇದ್ದರೆ ಮಣ್ಣು ಫಲವತ್ತಾಗುತ್ತದೆ. ಮಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚುತ್ತವೆ. ಕೃಷಿಭೂಮಿಯಲ್ಲಿ ಯಥೇಚ್ಛವಾಗಿ ಇರಬೇಕಾಗಿದ್ದ ಎರೆಹುಳು ಇತ್ತೀಚಿನ ದಿನಗಳಲ್ಲಿ ಕಾಣೆಯಾಗಿದೆ. ಕಾರಣ ರಾಸಾಯನಿಕ ಗೊಬ್ಬರಗಳ ಬಳಕೆ. ಎರೆಹುಳುಗಳು ಕಡಿಮೆ ಇವೆ ಎಂದರೆ ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತಿವೆ ಎಂದು ತಿಳಿಸುತ್ತದೆ. ಅಂದರೆ ಫಲವತ್ತತೆ ಇಲ್ಲದ ಮಣ್ಣು. ಫಲವತ್ತತೆ ಇಲ್ಲದ ಭೂಮಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು.
|
ಬೆಟ್ಟದ ನೆಲ್ಲಿಯನ್ನು ಮುಖ್ಯಬೆಳೆಯಲ್ಲಿ ಹೀಗೆ ಬೆಳೆಯಿರಿ..!
ಬೆಟ್ಟದ ನೆಲ್ಲಿ ಎಂದ ತಕ್ಷಣ ಬಾಯಿ ನೀರೂರಲು ಶುರುವಾಗುತ್ತೆ. ನೆಲ್ಲಿಕಾಯಿಯಲ್ಲಿ ನಾವು ಎರಡು ವಿಧವಾದ ನೆಲ್ಲಿಯನ್ನು ನೋಡುತ್ತೆವೆ. ಒಂದು ನಾಡಿನ ನೆಲ್ಲಿಕಾಯಿ, ಮತ್ತೊಂದು ಹೆಚ್ಚಾಗಿ ಗುಡ್ಡ ಗಾಡುಗಳಲ್ಲಿ ಬೆಳೆದು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಬೆಟ್ಟದ ನೆಲ್ಲಿ.ಚಿಕ್ಕವಯಸ್ಸಿನಲ್ಲಿ ನೆಲ್ಲಿಕಾಯಿಯ ರುಚಿಯನ್ನು ಉಪ್ಪು, ಖಾರದೊಂದಿಗೆ ಸ್ನೇಹಿತರ ಜತೆ ಚಪ್ಪರಿಸಿ ತಿಂದಿರುವ ನೆನಪುಗಳು ನಮಗುಂಟು. ಮನೆಯ ಹಿತ್ತಲ್ಲಿನಲ್ಲಿ, ಹೊಲಗಳಲ್ಲಿ ಬೆಳೆದಾಗ ಅವುಗಳನ್ನು ಕಿತ್ತು ತಿನ್ನುವುದೇ ಖುಷಿ. ಆದರೆ ಈಗಿನ ದಿನಗಳಲ್ಲಿ ತಂತ್ರಜ್ಞಾನ ಬದಲಾದಂತೆ ಮರ ಗಿಡಗಳನ್ನು ನೋಡುವುದು ಸಹಿತ ಕಡಿಮೆಯಾಗುತ್ತಿರುವುದು ದುಃಖದ ಸಂಗತಿ. ಹಾಗಾದ್ರೆ ಬೆಟ್ಟದ ನೆಲ್ಲಿಯನ್ನು ಕೃಷಿಯಲ್ಲಿ ಬಳಸಿಕೊಂಡಾಗ ರೈತರಿಗೆ ಸಿಗುವ ಲಾಭಗಳೇನು, ಆರೋಗ್ಯಕ್ಕೆ ಎಷ್ಟು ಉಪಕಾರಿ ಎಂದು ಬನ್ನಿ ತಿಳಿಯೋಣ. ಬಾಯಿಗೆ ಒಗರು ಒಗರಾಗಿ ರುಚಿ ಉಣಿಸುವ ಬೆಟ್ಟದ ನೆಲ್ಲಿಕಾಯಿಯು ದೇಹದ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತೆ.
|
ಒಂದೊಂದು ಕಾಳು ಮೆಣಸು 7 ಇಂಚು..!
ಕಾಳು ಮೆಣಸು ಸಾಂಬಾರು ಪದಾರ್ಥಗಳಲ್ಲಿ ಒಂದು. ಮಾರುಕಟ್ಟೆಯಲ್ಲಿ ಸದಾ ಬೇಡಿಕೆಯಲ್ಲಿರುವ ಕಾಳು ಮೆಣಸು ಬೆಳೆಯುವ ಹಂತದಲ್ಲಿ ರೈತರು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸಬೇಕಾಗುತ್ತೆ. ವಾಣಿಜ್ಯ ಬೆಳೆಯಾಗಿ ಬೆಳೆಯಲ್ಪಡುವ ಕಾಳು ಮೆಣಸು, ಸಾಕಷ್ಟು ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಎಷ್ಟೋ ಕಾಯಿಲೆಗಳಿಗೆ ಔಷಧಿಯಾಗಿ ಸೇವಿಸಲಾಗುತ್ತದೆ.
|
20 ಲೀಟರ್ ಗೆ ಅಬ್ಬಾ..! ಎಂತಹ ಟೊಮೇಟೊ
ಕೋಲಾರ ಜಿಲ್ಲೆ ಚಿನ್ನದ ಗಣಿಗೆ ಫೇಮಸ್ ಆದ್ರೆ, ಮತ್ತೊಂದು ಕಡೆ ತರಕಾರಿ ಬೆಳೆಗಳ ರಾಜ ಟೊಮೇಟೊ ಬೆಳೆಯುವುದಕ್ಕೂ ಸಹ ಅಷ್ಟೇ ಫೇಮಸ್.ಹೆಚ್ಚಾಗಿ ಟೊಮೇಟೊ ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಸತತ ಮೂರು ವರ್ಷದಿಂದ ಟೊಮೇಟೊ ಬೆಳೆಯುತ್ತಿರುವ ಈ ಕೃಷಿಕರು ಪ್ರತಿ ಬಾರಿಯೂ ಲಾಭಗಳನ್ನು ಪಡೆಯುತ್ತಾ ಬಂದಿದ್ದಾರೆ.
|
ರಾಸಾಯನಿಕ ಗೊಬ್ಬರದ ಹಂಗಿಲ್ಲದೆ ಸದ್ದು ಮಾಡುತ್ತಿದೆ ಅಡಿಕೆ ತೋಟ
ರಾಸಾಯನಿಕ ಬಳಸದೆ ಕೃಷಿ ಮಾಡಲಾಗುವುದಿಲ್ಲ ಎನ್ನುವ ಜನರ ಮಧ್ಯೆ, ಇವರು ಮೊದಲಿನಿಂದಲೂ ನೈಸರ್ಗಿಕ ಮತ್ತು ಸಾವಯವ ಕೃಷಿ ಮಾಡಿಕೊಂಡು ಬಂದಿದ್ದಾರೆ. ಹಲವಾರು ವರ್ಷಗಳಿಂದ ವಿಷಮುಕ್ತ ಆಹಾರ ಬೆಳೆಯುತ್ತಿದ್ದಾರೆ. 20 ವರ್ಷದ ಅಡಿಕೆ ತೋಟದ ಮಾಲೀಕರು ಇವರು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಇಟಗಿ ಗ್ರಾಮದ ರೈತರಾದ ಪರಮೇಶಪ್ಪ ಮುದ್ದಿಯವರು 1964 ರಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಸಾವಯವ ಕೃಷಿ ಮೂಲಕ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
|
ಬೆಳೆಗಳ ಆರೋಗ್ಯಕ್ಕೆ ಮದ್ದು ಈ Bordeaux ಮಿಶ್ರಣ
ಮಳೆಗಾಲದಲ್ಲಿ ಕೇವಲ ಮನುಷ್ಯರಿಗಷ್ಟೇ ಅಲ್ಲ, ಬೆಳೆಗಳಿಗೂ ರೋಗ-ರುಜಿನಗಳು ಹೆಚ್ಚಾಗುತ್ತವೆ. ಶೀತದಿಂದಾಗಿ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಅಡಿಕೆಯಲ್ಲಿ ಕೊಳೆರೋಗದಂತಹ ರೋಗಗಳು ಲಗ್ಗೆಯಿಡುವ ಸಾಧ್ಯತೆ ಇರುತ್ತದೆ. ಹಾಗಾದರೆ ಮಳೆ ಹೆಚ್ಚಾದಾಗ ತೋಟದಲ್ಲಿನ ಬೆಳೆಗಳನ್ನು ಶೀತದಿಂದ ಬರುವ ರೋಗಗಳಿಂದ ರಕ್ಷಿಸಿಕೊಳ್ಳುವುದು ಹೇಗೆ?
|
ನೂರು ಎಕರೆಗೆ ಸೆಡ್ಡು ಹೊಡೆಯಿತು, ಮೂರು ಎಕರೆ ಬೆಳೆ..!
ಸಮಗ್ರ ಬೆಳೆ ಪದ್ಧತಿ ಅನುಸರಿಸುವುದರಿಂದ ರೈತರಿಗೆ ಸಾಕಷ್ಟು ಅನಕೂಲಗಳಿವೆ. ಅದು ಹೇಗೆಂದರೆ ಹಲವು ಬೆಳೆ ಬೆಳೆದಾಗ ಒಂದೊಂದು ಬೆಳೆಯಿಂದಲೂ, ಒಂದೊಂದು ರೀತಿಯ ಆದಾಯ ಸಿಗುತ್ತದೆ. ಅದಷ್ಟೆ ಅಲ್ಲದೆ ವಾತಾವರಣದ ವೈಪರೀತ್ಯದಿಂದಾಗಿ ಒಂದು ಬೆಳೆ ಹಾಳಾದರೂ ಸಹಿತ, ರೈತರಿಗೆ ಒಂದಲ್ಲಾ ಒಂದು ಬೆಳೆಯಿಂದ ಲಾಭ ಸಿಗುವುದು ಕಟ್ಟಿಟ್ಟ ಬುತ್ತಿ.
|
ಹೆಚ್ಚು ಜಮೀನಿಗೆ ಕಡಿಮೆ ನೀರು ಬಳಕೆ, ಕಡಿಮೆ ಖರ್ಚು..!
ಕೃಷಿಯಲ್ಲಿ ಹೆಚ್ಚು ಕ್ರಮ ತೆಗೆದುಕೊಳ್ಳಬೇಕಾದ ವಿಷಯಗಳ ಪೈಕಿ ನೀರು ನಿರ್ವಹಣೆ ಕೂಡ ಒಂದು, ಕೃಷಿಯಲ್ಲಿ ನೀರಿನ ಬಳಕೆ ಹೆಚ್ಚಾದರೂ ಸಮಸ್ಯೆ, ಅತಿ ಕಡಿಮೆಯಾದರೂ ಸಮಸ್ಯೆ. ಹೀಗಿರುವಾಗ ನೀರಿನ ನಿರ್ವಹಣೆಗೆ ಕೃಷಿಕರು ಹನಿ ನೀರಾವರಿ ಪದ್ಧತಿ ಬಳಕೆ ಮಾಡುವುದು ಉತ್ತಮ.
|
ಹೀಗೆ ಬಾಳೆ ಬೆಳೆದರೆ 10 ರಿಂದ 20 ವರ್ಷ ಇಳುವರಿ ಗ್ಯಾರಂಟಿ..!
ಭಾರತದಲ್ಲಿ ಮಾವಿನ ನಂತರ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ಪ್ರಮುಖ ಬೆಳೆ ಬಾಳೆ. ಉತ್ಪಾದನೆ ಮತ್ತು ಇಳುವರಿಯಲ್ಲಿ ಇದಕ್ಕೆ ಎರಡನೇ ಸ್ಥಾನವಿದೆ. ಸುಮಾರು 50ಕ್ಕೂ ಹೆಚ್ಚು ತಳಿಗಳನ್ನು ಬಾಳೆಯಲ್ಲಿ ಕಾಣಬಹುದು. ಪ್ರಮುಖ ಹಣ್ಣಿನ ಬೆಳೆಯಾದ ಬಾಳೆ ಮನುಷ್ಯನ ಆರೋಗ್ಯ ವೃದ್ಧಿಸಲು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ ಮತ್ತು ಕೃಷಿ ಭೂಮಿಗೆ ಬಹಳಷ್ಟು ತ್ಯಾಜ್ಯಗಳನ್ನು ನೀಡುವುದರ ಜತೆಗೆ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಸಹಾಯಕ.
|
ಕುರಿ ಸಾಕಾಣಿಕೆಗಿಂತ ಮೇಕೆ ಸಾಕಾಣಿಕೆಯೇ ಮೇಲು..!
ಮೇಕೆ ಸಾಕಾಣಿಕೆ ಇಂದು ಕೇವಲ ಉಪಕಸುಬಾಗಿ ಉಳಿದಿಲ್ಲ. ಮೇಕೆ ಸಾಕಾಣಿಕೆಯೂ ದೊಡ್ಡ ಉದ್ಯಮವಾಗಿ ಬದಲಾಗುತ್ತಿದೆ. ಅದರಲ್ಲಿ ಲಕ್ಷಾಂತರ ಆದಾಯ ಇರುವ ಕಾರಣಕ್ಕೆಜನರು ಕೃಷಿಯ ಜೊತೆಗೆಮೇಕೆಸಾಕಾಣಿಕೆ ಮಾಡುತ್ತಿದ್ದಾರೆ. ಕೆಲವರು ಮೇಕೆ ಹಾಲಿಗಾಗಿ ಸಾಕಿದರೆ, ಇನ್ನೂ ಕೆಲವರು ಮಾಂಸಕ್ಕಾಗಿ ಸಾಕುತ್ತಾರೆ. ಅದೇನೇ ಇರಲಿ, ಉದ್ಯಮ ಆರಂಭಿಸುವ ಮೊದಲು, ಮೇಕೆ ಹಾಲಿಗಾಗಿ ಸಾಕಾಣಿಕೆ ಮಾಡುತ್ತಿದ್ದರೆ, ಯಾವ ಮೇಕೆ ತಳಿ ಉತ್ತಮ. ಮಾಂಸಕ್ಕಾಗಿ ಮೇಕೆ ಸಾಕುತ್ತಿದ್ದರೆ, ಅದಕ್ಕೆ ಯಾವ ತಳಿ ಬೇಕು ಎಂಬುದನ್ನು ತಿಳಿದುಕೊಳ್ಳಬೇಕು.
|
ಕೋಳಿಗೊಬ್ಬರ ನೀಡುವ ಮುನ್ನ ಇರಲೇ ಬೇಕು ಎಚ್ಚರ..!
ಸಾವಯವ ಕೃಷಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಕೋಳಿಗೊಬ್ಬರ ಬೇಡಿಕೆ ಹೆಚ್ಚಿಸಿಕೊಳ್ಳತೊಡಗಿದೆ. ಕೋಳಿ ಹಿಕ್ಕೆ ಹಾಗೂ ದುರ್ವಾಸನೆಯಿಂದ ಕೆಲವೇ ವರ್ಷಗಳ ಹಿಂದೆ ಅವಕೃಪೆಗೆ ಒಳಗಾಗಿದ್ದ ಕೋಳಿ ಗೊಬ್ಬರ ಇಂದು ಟನ್ ಗಟ್ಟಲೇ ವ್ಯಾಪರವಾಗುತ್ತಿದೆ. ಆದರೆ ಕೋಳಿ ಗೊಬ್ಬರ ಬಳಸುವ ಮುನ್ನ ಕೃಷಿಕರು ವಹಿಸಿಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳು ಅತಿ ಮುಖ್ಯ.
|
ಬೀಜೋಪಚಾರದಿಂದ ಶೇಂಗಾ 80 ಚೀಲ ಬಂತು..!
ಡಾ.ಸಾಯಿಲ್ ಬೀಜೋಪಚಾರಗಳಿಂದ ಬೆಳೆದ ಬೆಳೆಗಳಲ್ಲಿ ನಷ್ಟ ಎಂಬುದೇ ಇಲ್ಲ. ರೈಜೋಬಿಯಂ, ಅಜೋಸ್ಪಿರಿಲಂ, ಅಜಟೋಬ್ಯಾಕ್ಟರ್ ಹೀಗೆ ಆಯಾ ಬೆಳೆಗೆ ತಕ್ಕಂತಹ ಬೀಜೋಪಚಾರಗಳು ಡಾ.ಸಾಯಿಲ್ ನಲ್ಲಿ ಲಭ್ಯವಿದ್ದು, ಪ್ರತಿ ಬೆಳೆಯಲ್ಲಿಯೂ ಉತ್ಕೃಷ್ಟವಾಗಿ ಇಳುವರಿ ಬರಲು ಸಹಾಯಕವಾಗಿದೆ.
|
6 ಎಕರೆ ಅಡಿಕೆ, 10 ವರ್ಷದ ತೋಟ, 500 ಗಿಡಗಳು ಭಸ್ಮ…!
ಅಡಿಕೆ ರೈತರಿಗೆ ಲಾಭತರುವ ಬೆಳೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಅತಿ ಹೆಚ್ಚು ನಿರ್ವಹಣೆಯಿಲ್ಲದೆ ಬೆಳೆಯಬಹುದು. ಆದರೆ ಮೂಲಭೂತ ನಿರ್ವಹಣೆಯಲ್ಲಿ ಎಡವಿದರೆ ಸಮಸ್ಯೆಗಳು ಕಾಣಿಸಿಕೊಂಡು ಇಳುವರಿ ಕಡಿಮೆಯಾಗುವುದಂತೂ ಸತ್ಯ. ಇಲ್ಲೊಬ್ಬ ರೈತರ ಅಡಿಕೆ ತೋಟದಲ್ಲಿ ಕಾಣಿಸಿಕೊಂಡ ಸಮಸ್ಯೆಗಳಿಂದಾಗಿ 500 ಗಿಡಗಳು ನಾಶಗೊಂಡಿದ್ದಾವೆ. ಇದಕ್ಕೆ ಪರಿಹಾರ ಏನು? ಸಮಸ್ಯೆಗಳ ಮೂಲ ಹುಡುಕುವುದು ಹೇಗೆ? ನೋಡೋಣ ಬನ್ನಿ….
|
ಶ್ರೀಗಂಧ: ಕೋಟಿಗಳ ಲೆಕ್ಕ ಸತ್ಯವೇ?
ಶ್ರೀಗಂಧ ತನ್ನ ಪರಿಮಳ ಮತ್ತು ದುಬಾರಿ ಬೆಲೆಗೆ ಜನಪ್ರಿಯ. ಶ್ರೀಗಂಧ ಅತ್ಯಂತ ದುಬಾರಿ ಮರಗಳಲ್ಲೊಂದು. ಇವು slow growing ಅಥವಾ ನಿಧಾನವಾಗಿ ಬೆಳೆಯುವ ಮರಗಳಾಗಿವೆ ಸಾಮಾನ್ಯವಾಗಿ 15ರಿಂದ 20 ವರ್ಷಗಳು ಬೇಕಾಗುತ್ತದೆ ಮತ್ತು ಕೆಲವು ಪ್ರದೇಶಗಳಲ್ಲಿ ಮಾತ್ರ ಬೆಳೆಯುತ್ತವೆ. ಹಾಗಾಗಿ ಇದರ ಬೆಲೆ ದುಬಾರಿ. ಶ್ರೀಗಂಧ ಬೆಳೆದರೆ ಕೋಟಿ ಆದಾಯ ಮಾಡಬಹುದು ಎಂದು ಹೇಳುತ್ತಾರೆ, ಅದು ನಿಜವೇ?
|
ಮೇಕೆ ಸಾಕಾಣಿಕೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ತಂತ್ರಗಾರಿಕೆ..!
ಇವರು ಒಬ್ಬ ಮೆಕ್ಯಾನಿಕಲ್ ಇಂಜಿನಿಯರ್. ಹಾಲಿ ವೃತ್ತಿಯಲ್ಲಿ ಫಾರ್ಮರ್, ಉಪ ಕಸುಬು ಮೇಕೆ ಸಾಕಾಣಿಕೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಕೆಲಸಕ್ಕೆ ರಾಜೀನಾಮೆ ನೀಡಿ, ಈಗ ಪೂರ್ತಿ ಕೃಷಿ, ಮೇಕೆ ಸಾಕಾಣಿಕೆಗೆ ಸಮಯ ನೀಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವ ಬದಲು, ಈಗ ತಮ್ಮ ಸಮಯದ ಸ್ವಾತಂತ್ರ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಮೇಕೆ ಸಾಕಾಣಿಕೆಯಲ್ಲಿ ಹೇಗೆ ತೊಡಗಿಸಿಕೊಂಡಿದ್ದಾರೆ ನೋಡೋಣ ಬನ್ನಿ…
|
ಬದನೆಯ ಕಾಯಿಕೊರಕಕ್ಕೆ ರಾಸಾಯನಿಕ ಸ್ಪ್ರೇ ಬೇಡ, ಸಾವಯವದಲ್ಲಿದೆ ನಿಯಂತ್ರಣ..!
ನಮ್ಮ ಭಾರತ ದೇಶ ಬದನೆ ಬೆಳೆಯಲ್ಲಿ 2ನೇ ಸ್ಥಾನವನ್ನು ಹೊಂದಿದೆ. ಆದರೆ ಬದನೆಯಲ್ಲಿ ಹೆಚ್ಚಾಗಿ ಕಾಡುವ ಕಾಯಿಕೊರಕ ಹುಳುವಿನಿಂದ ಬದನೆ ಬೆಳೆ ನಾಶವಾಗುತ್ತಿದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದರಲ್ಲಿ ಕೃಷಿಕರು ಹೈರಾಣಾಗಿ ಹೋಗುತ್ತಿದ್ದಾರೆ. ಇವುಗಳ ನಿಯಂತ್ರಣಕ್ಕೆ ರೈತರು ಬಳಸುತ್ತಿರುವ ರಾಸಾಯನಿಕ ಸ್ಪ್ರೇಗಳಿಂದ ಹುಳುಗಳ ತಡೆಗಟ್ಟುವಿಕೆಯ ಬದಲು ಬೆಳೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಕೃಷಿ ಭೂಮಿಯನ್ನು ದಿನೇದಿನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳು, ರಾಸಾಯನಿಕ ಸ್ಪ್ರೇಗಳು, ಮಣ್ಣಿನ ಆರೋಗ್ಯ ಮನುಷ್ಯನ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತಿರುವುದು ನಿಮಗೆಲ್ಲಾ ತಿಳಿದಿರುವ ವಿಚಾರ.
|
ರಿಂಗ್ ಪಿಟ್ ತಂತ್ರ-ಅಧಿಕ ಇಳುವರಿಯ ಮಂತ್ರ
ಕಬ್ಬು ನಮ್ಮ ದೇಶದ ಒಂದು ಪ್ರಮುಖ ವಾಣಿಜ್ಯ ಬೆಳೆ. ಉಷ್ಣವಲಯದಲ್ಲಿ ಬೆಳೆಯಲಾಗುವ ಒಂದು ಬಹುವಾರ್ಷಿಕ ಬೆಳೆ ಇದಾಗಿದೆ. ಬ್ರೆಜಿಲ್ ಮತ್ತು ಭಾರತ ಅತಿ ಹೆಚ್ಚು ಕಬ್ಬು ಬೆಳೆಯುವ ದೇಶಗಳಾಗಿವೆ. ಕಬ್ಬನ್ನು ಸಕ್ಕರೆ ತಯಾರಿಸಲು ಬಳಸುವುದಲ್ಲದೆ, ಜಾನುವಾರುಗಳಿಗೆ ಮೇವಾಗಿ ಕೂಡ ಬಳಸಲಾಗುತ್ತದೆ. ಕಬ್ಬನ್ನು ಬೆಳೆಯಲು ಹಲವು ವಿಧಾನಗಳಿವೆ. ಸಾಮಾನ್ಯವಾಗಿ ಬೆಳೆಯುವ 4 ಅಡಿ ಅಂತರದ ವಿಧಾನ, ಜೋಡಿ ಸಾಲು ಪದ್ಧತಿ, ಇತ್ಯಾದಿ. ನಾವು ಇಲ್ಲಿ ಹೇಳಲು ಹೊರಟಿರುವುದು ರಿಂಗ್ ಪಿಟ್ ವಿಧಾನದ ಬಗ್ಗೆ. ಇಲ್ಲೊಬ್ಬ ರೈತರು ಈ ಮಾದರಿಯಲ್ಲಿ ಕಬ್ಬು ಬೆಳೆದಿದ್ದಾರೆ. ಹೇಗೆ ಮಾಡಿದ್ದಾರೆ? ಇದರಿಂದ ಇವರಿಗೆ ಲಾಭವಾಗಿದೆಯಾ? ತಿಳಿಯೋಣ ಬನ್ನಿ.
|
ಅಡಿಕೆ ಸಸಿಗಳಲ್ಲಿ ಎಲೆಚುಕ್ಕೆ ರೋಗ ಬಂದ್ರೆ ತಕ್ಷಣ ಹೀಗೆ ಮಾಡಿ..!
ಅಡಿಕೆ ಸಸಿಗಳಲ್ಲಿ ಕಾಣಿಸಿಕೊಳ್ಳುವ ಎಲೆಚುಕ್ಕೆರೋಗದಿಂದ ಬೆಳೆ ಬೆಳೆಯುವ ಹಂತದಲ್ಲಿಯೇ ಕುಗ್ಗುವಿಕೆ ಶುರುವಾಗಿಬಿಡುತ್ತೆ. ಉಷ್ಣಾಂಶ ಕಡಿಮೆ ಆದಾಗ, ಕೊಟ್ಟಿಗೆ ಗೊಬ್ಬರ ಕಳಿಯದೆ ಕೃಷಿ ಭೂಮಿಗೆ ನೀಡಿದಾಗ ಈ ಸಮಸ್ಸೆ ಉದ್ಭವಿಸುವುದು ಸಹಜ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ, ಸಸಿಗಳು ಬೆಳೆಯುವ ಸಮಯದಲ್ಲಿಯೇ ಇದು ಆವರಿಸಿಕೊಂಡರೆ ರೈತರ ಬೆಳೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾದ್ರೆ ಇದಕ್ಕೆ ಪರಿಹಾರವೇನು ಎಂಬುದನ್ನು ನೋಡುವುದಾದರೆ, ಸಾವಯವ ಕೃಷಿ ಪದ್ಧತಿಯಲ್ಲಿಯೇ ಎಲೆ ಚುಕ್ಕೆ ರೋಗದಿಂದ ಅಡಿಕೆ ಸಸಿಗಳನ್ನು ಕಾಪಾಡಿಕೊಳ್ಳಬಹುದು. ಯಾವುದೆ ರಾಸಾಯನಿಕ ಸ್ಪ್ರೇಗಳನ್ನು ಬಳಸುವ ಅವಶ್ಯಕತೆ ಇರುವುದಿಲ್ಲ.
|
ಕೀಟಗಳ ಹಾವಳಿ ತಡೆಯಲು 5 ಸುಲಭ ಸೂತ್ರಗಳು..!
ಬೆಳೆಗಳನ್ನು ನಾವು ರೋಗದಿಂದ ಕಾಪಾಡಿಕೊಳ್ಳಬಹುದು. ಆದರೆ ಈ ಕೀಟಗಳ ಹಾವಳಿಯಿಂದ ಉಳಿಸಿಕೋಳ್ಳುವುದು ಕಷ್ಟ ಸಾಧ್ಯ. ಹಾಗಿದ್ದಾಗ ಕೃಷಿಕರು ಹೆಚ್ಚಾಗಿ ರಾಸಾಯನಿಕ ಕೀಟನಾಶಕಗಳನ್ನು ಬಳಸಿ ಕೀಟಗಳ ನಿಯಂತ್ರಣ ಮಾಡಲು ಹೋಗಿ ಇಡೀ ಬೆಳೆಯನ್ನೇ ನಾಶ ಮಾಡಿಕೊಳ್ಳುತ್ತಾರೆ. ರಾಸಾಯನಿಕ ಕೀಟನಾಶಕಗಳಿಲ್ಲದೆ ಬೇರೆ ಮಾರ್ಗವೇ ಇಲ್ಲ ಎಂಬ ಕಲ್ಪನೆಯಿಂದ ಬೆಳೆಯನ್ನು ವಿಷಕ್ಕೆ ತುತ್ತಾಗಿಸುತ್ತಾರೆ.
|
ಪರಂಗಿ ಬೆಳೆಯನ್ನು ಕಾಡುವ ಒಂದು ದೊಡ್ಡ ಸಮಸ್ಯೆಯೆಂದರೆ Papaya ringspot virus
ಪರಂಗಿಹಣ್ಣು ರೈತರಿಗೆ ಹೆಚ್ಚು ಲಾಭ ತಂದುಕೊಡುವ ಒಂದು ಹಣ್ಣಿನ ಬೆಳೆ. ಪಪ್ಪಾಯ ಬೆಳೆಯುವುದು ಸುಲಭ ಮತ್ತು ನಿರ್ವಹಣೆ ಕಡಿಮೆ. ಆರೋಗ್ಯಕಾರಿ ಪ್ರಯೋಜನ ಮತ್ತು ವಾಣಿಜ್ಯ ಮೌಲ್ಯದಿಂದಾಗಿ ಮಾರುಕಟ್ಟೆಯಲ್ಲಿ ಪರಂಗಿ ಹಣ್ಣಿಗೆ ತುಂಬಾ ಬೇಡಿಕೆ ಇದೆ. ನಿರ್ವಹಣೆ ಮತ್ತು ಸಸಿಯ ಆಯ್ಕೆಯಲ್ಲಿ ಎಡವುತ್ತಿರುವ ರೈತರು ಪರಂಗಿ ಬೆಳೆಯುವಾಗ ಹೆಚ್ಚು ನಷ್ಟಕ್ಕೊಳಗಾಗುತ್ತಿದ್ದಾರೆ. ಹಾಗಾದರೆ ಪರಂಗಿಯಲ್ಲಿ ಉತ್ತಮ ಇಳುವರಿ ಪಡೆಯಲು ರೈತರು ಏನು ಮಾಡಬೇಕು? ರೋಗಗಳನ್ನು ಗುರುತಿಸುವುದು ಹೇಗೆ? ನಿರ್ವಹಣೆಗೆ ಏನು ಮಾಡಬೇಕು?
|
1 ವರ್ಷದ ಅಡಿಕೆ ತೋಟದಲ್ಲಿ ಸಮಸ್ಯೆಗಳು ಸೃಷ್ಟಿಯಾಗಿದ್ದು ಹೇಗೆ?
ಅಡಿಕೆ ಇಂದು ಅತಿ ಹೆಚ್ಚು ಬೇಡಿಕೆಯಲ್ಲಿರುವ ಬೆಳೆ. ಇದರ ಅನೇಕ ಉಪಯೋಗಗಳಿಂದ ರೈತರಿಗೆ ಒಳ್ಳೆ ಲಾಭ ಸಿಗುತ್ತಿದೆ. ಆದರೆ ರೈತರು ಗೊತ್ತೋ ಗೊತ್ತಿಲ್ಲದೆಯೋ ಮಾಡುವ ಸಣ್ಣ ತಪ್ಪುಗಳಿಂದ, ಅಡಿಕೆ ತೋಟವನ್ನು ರೋಗ-ರುಜಿನಗಳಿಗೆ ತುತ್ತಾಗುವಂತೆ ಮಾಡಿಕೊಳ್ಳುತ್ತಾರೆ. ಇಲ್ಲೊಬ್ಬ ರೈತರು ತಮ್ಮ ಅಡಿಕೆ ತೋಟದಲ್ಲಿ ಕಾಣಿಸಿಕೊಂಡ ರೋಗಕ್ಕೆ ಮೈಕ್ರೋಬಿ ತಂಡದಿಂದ ಪರಿಹಾರ ಪಡೆದಿದ್ದಾರೆ.
|
ಸಾವಯವ ಕೃಷಿಕರ 3 ಪ್ರಮಾದಗಳು..!
ಕೃಷಿಯಲ್ಲಿ ನೈಸರ್ಗಿಕ ಮತ್ತು ಸಾವಯವ ಕೃಷಿ ಶ್ರೇಷ್ಠ. ಆದರೆ ಸಾವಯವ ಕೃಷಿಯಲ್ಲೂ ಅದೇ ರಾಗ ಅದೇ ಗೋಳು, ಡಾ.ಸಾಯಿಲ್ ಬಳಸಿದ್ರೂ, ಅದ್ರಲ್ಲೂ ಸಹ ರಾಸಾಯನಿಕ ಕೃಷಿಯಷ್ಟೆ ಇಳುವರಿ ಬರೋದು. ಏನೂ ವ್ಯತ್ಯಾಸ ಇಲ್ಲ ಅನ್ನೋ ಎಷ್ಟೋ ರೈತರಿಗೆ ಉತ್ತರ ಇಲ್ಲಿದೆ.
|
ಕರ್ನಾಟಕ ರೈತ ಸಿರಿ ಯೋಜನೆ ಯಾರಿಗೆಲ್ಲಾ ಲಾಭ? ಅರ್ಜಿ ಸಲ್ಲಿಕೆ ಹೇಗೆ..?
ರೈತರ ಏಳಿಗೆಗಾಗಿ ಸರ್ಕಾರ ಹೊಸಹೊಸ ಸ್ಕೀಮ್ಗಳನ್ನು ಜಾರಿಗೆ ತರುತ್ತಿದೆ. ಅದರಲ್ಲಿ ರೈತಸಿರಿ ಯೋಜನೆ ಕೂಡ ಒಂದಾಗಿದೆ.
|
ಜೇನು ಹುಳುಗಳಿಗೆ ಬೇಕು ಸಾವಯವ ಊಟ..!
ಜೇನುನೊಣಗಳಿಲ್ಲದೆ ಮನುಷ್ಯನ ಜೀವನ ಊಹಿಸುವುದೇ ಕಷ್ಟ. ಯಾಕೆಂದರೆ, ಬರೀ ಜೇನು ಕೊಡುವ ಕೆಲಸವನ್ನು ಮಾತ್ರ ಈ ನೊಣಗಳು ಮಾಡುತ್ತಿಲ್ಲ. ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲೂ ಇವುಗಳದ್ದು ಬಹುದೊಡ್ಡ ಪಾತ್ರ. ಮನುಷ್ಯ ತಿನ್ನುವ ಬಹುತೇಕ ಹಣ್ಣು, ಹಂಪಲು, ತರಕಾರಿ ಸೇರಿದಂತೆ ಎಲ್ಲಾ ಆಹಾರಗಳ ಹಿಂದೆ ಇರುವುದು ಇದೇ ಜೇನುನೊಣಗಳ ಪರಾಗ ಸ್ಪರ್ಶದ ಪ್ರಯತ್ನ.
|
ಕುಸುಮ್ ಯೋಜನೆಯಿಂದ ಯಾವ ಕೃಷಿಕರಿಗೆ ಲಾಭ?
ಕೇಂದ್ರ ಸರ್ಕಾರ ಹೆಚ್ಚಾಗಿ ಕೃಷಿ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ರೈತರನ್ನು ಗಮನದಲ್ಲಿಟ್ಟುಕೊಂಡು ಹಲವಾರು ಯೋಜನೆಗಳನ್ನು ಘೋಷಿಸಲಾಯಿತು. ಅದರಲ್ಲಿ ಬಂಜರು ಭೂಮಿಯಿಂದಲೂ ಹಣ ಸಂಪಾದಿಸಬಹುದಾದ ಯೋಜನೆಯೂ ಕೂಡ ಒಂದು. ಇದು ರೈತರ ಆದಾಯವನ್ನು ಹೆಚ್ಚಿಸುತ್ತದೆ. ಈ ಯೋಜನೆಗಳಲ್ಲಿ ಒಂದು ಕಿಸಾನ್ ಸಮ್ ಯೋಜನೆ. ಅದುವೇ ಕುಸುಮ್ ಯೋಜನೆ.
|
1 ವರ್ಷದಿಂದ ಭೂಮಿಯಲ್ಲಿ ಅವಿತಿರುವ ಬೇರುಹುಳುವನ್ನು ಕೊಲ್ಲುವುದು ಹೇಗೆ?
ಬೆಳೆಗಳಿಗೆ ಮಾರಕವಾಗಿರುವ ಬೇರುಹುಳುಗಳು ಅಡಿಕೆ, ತಾಳೆ, ತೆಂಗು , ಕಬ್ಬು, ಬಾಳೆ, ನೆಲಗಡಲೆ, ಭತ್ತ, ಗೋಧಿ, ಗೆಣಸು, ತೇಗದ ಮರ, ಕಬ್ಬು ಇತ್ಯಾದಿ ಬೆಳೆಗಳನ್ನು ನಾಶಮಾಡಿಬಿಡುತ್ತವೆ. ನಮ್ಮ ಕೃಷಿ ಭೂಮಿಯಲ್ಲಿ ಮೂರು ರೀತಿಯ ಬೇರುಹುಳುಗಳನ್ನು ನೋಡಬಹುದು. ಬೇರೆ ಬೇರೆ ಋತುಮಾನಗಳಲ್ಲಿ ಕಾಣಿಸಿಕೊಳ್ಳುವ ಇವುಗಳು ಹೆಚ್ಚಾಗಿ ಮಳೆಗಾಲದಲ್ಲಿ ಸಂತಾನ ಅಭಿವೃದ್ಧಿ ಹೆಚ್ಚಿಸಿಕೊಳ್ಳುತ್ತವೆ.
|
ಶ್ರೀಗಂಧ ಬೆಳೆಯುವ ಮುನ್ನ ಈ ವಿಷಯ ತಿಳಿದರೆ ಕೋಟಿ ಆದಾಯ..!
ಶ್ರೀಗಂಧ ಮರವು ಅತ್ಯಂತ ಶ್ರೇಷ್ಠ ಮರ ಮತ್ತು ಅತ್ಯಂತ ಬೆಲೆ ಬಾಳುವ ಮರ. ಕಾಂಡ, ಬೇರು , ಎಲೆ, ಬೀಜ, ಪ್ರತಿಯೊಂದು ಭಾಗವೂ ತುಂಬಾನೇ ಬೆಲೆ ಬಾಳುವಂತವಾಗಿವೆ. ಹಿಂದೆ ಶ್ರೀಗಂಧ ಬೆಳೆಯುವುದು ಕಾನೂನು ಪ್ರಕಾರ ನಿಷಿದ್ಧವಾಗಿತ್ತು. ಆದರೆ ಈಗ ಕಾನೂನನ್ನು ಸಡಿಲಿಕೆ ಮಾಡಿದ್ದು, ಖಾಸಗಿ ಭೂಮಿಯಲ್ಲಿ ಬೆಳೆಸಬಹುದು. ಇದನ್ನು ಸರ್ಕಾರವೇ ನೇರವಾಗಿ ಖರೀದಿ ಮಾಡುತ್ತದೆ.
|
ಸಾವಯವ ಕಳೆನಾಶಕ ತಯಾರಿಸುವ ಸುಲಭ ವಿಧಾನ
ಸಾವಯವ ಕೃಷಿ ಪದ್ಧತಿಯಲ್ಲಿ ಕೀಟಬಾಧೆ, ರೋಗಬಾಧೆ, ಕಳೆ ನಿಯಂತ್ರಣ ಕಷ್ಟ ಎಂದುಕೊಳ್ಳುವ ರೈತರು, ಈ ವಿಚಾರಗಳನ್ನು ತಿಳಿದುಕೊಳ್ಳಲೇ ಬೇಕು. ಇವುಗಳ ನಿಯಂತ್ರಣ ತುಂಬಾ ಸರಳವಾಗಿದ್ದು, ಸಾವಯವ ಕೃಷಿಯಲ್ಲಿ ಸರಳ ಸಾಧನಗಳಿಂದ ನಿಯಂತ್ರಿಸಬಹುದಾಗಿದೆ.
|
ಬೆಂಬಲ ಬೆಲೆ ಸಿಗದೆ ಆರ್ಥಿಕ ಕಷ್ಟ ಅನುಭವಿಸುವ ರೈತರಿಗೆ ಇದೊಂದೇ ದಾರಿ
ಈ ದಂಪತಿಯ ಸಾವಯವ ಕೃಷಿ ಪದ್ಧತಿ ಊರಿಗೆ ಮಾದರಿಯಾಗಿದೆ. ಬಳ್ಳಾರಿ ಜಿಲ್ಲೆ , ಸಂಡೂರು ತಾಲೂಕಿನ ದಂಪತಿಯಾದ ಅಕ್ಕನಾಗಮ್ಮ, ಶಿವಕುಮಾರ್ ಸಾವಯವ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಿ, ಎರಡೂವರೆ ಎಕರೆಯಲ್ಲಿ ಸುಮಾರು 7 ಬೆಳೆಗಿಂತ ಹೆಚ್ಚು ಬೆಳೆಯನ್ನು ಬೆಳೆಯುತ್ತಿದ್ದಾರೆ. ಮುಖ್ಯ ಬೆಳೆಯಾಗಿ ಅಡಿಕೆ, ಅದರಲ್ಲಿ ಅಂತರ ಬೆಳೆಯಾಗಿ ಬಾಳೆ , ಈರುಳ್ಳಿ, ತರಕಾರಿ ಬೆಳೆಗಳಿದ್ದು ಎಲ್ಲಾ ಬೆಳೆಗಳಿಗೂ ಡಾ.ಸಾಯಿಲ್ ದ್ರವರೂಪದ ಜೈವಿಕ ಗೊಬ್ಬರವನ್ನು ಬಳಸುತ್ತಿದ್ದಾರೆ.
|
ಗುಲಾಬಿ ಬೆಳೆಯ ನುಸಿ ಕೀಟಕ್ಕೆ ಸುಲಭ ಪರಿಹಾರ ಇಲ್ಲಿದೆ
ಹೂ ಬೆಳೆಯಯಲ್ಲಿ ಕೀಟಗಳ ಹಾವಳಿ ಹೆಚ್ಚಾಗಿರುತ್ತೆ. ಸುಗಂಧಭರಿತ ಪರಿಮಳ ಸೂಸುವ ಹೂಗಳು ಕೀಟಗಳ ಬಾಧೆಗೆ ತುತ್ತಾಗುವುದು ಸಹಜ. ಹೀಗಾಗಿ ಹೂ ಬೆಳೆಯಲ್ಲಿ ಕೀಟಬಾಧೆ ತಡೆಗೆ ಕೃಷಿಕರು ರಾಸಾಯನಿಕ ಸ್ಪ್ರೇ ಗಳಿಗೆ ಮೊರೆ ಹೋಗುತ್ತಾರೆ. ಕೀಟ ಬಾಧೆಯ ತಡೆಯುವಲ್ಲಿ ವಿಫಲವಾಗಿ ರಾಸಾಯನಿಕದ ವಿಷದಿಂದ ಇಡೀ ಬೆಳೆಯನ್ನೇ ನಾಶ ಮಾಡಿಕೊಳ್ಳುತ್ತಾರೆ. ಹಾಗಾದ್ರೆ ರಾಸಾಯನಿಕ ಸ್ಪ್ರೇಗಳನ್ನು ಬಳಸದೆ ಗುಲಾಬಿ ತೋಟದಲ್ಲಿ ನುಸಿ ಕೀಟ ಬಾಧೆಯನ್ನು ತಡೆಗಟ್ಟುವುದು ಹೇಗೆ?.
|
ಜೇನು ಹುಳು ಕಚ್ಚಿದಾಗ ಮಾಡಿಕೊಳ್ಳುವ ಮನೆ ಮದ್ದು…
ಜೇನುಹುಳುವಿನ ಸಿಟ್ಟು ನಿಮಗೆ ಗೊತ್ತೇ ಇದೆ. ಜೇನು ಹುಳ ಹಾಗೆಲ್ಲ ಸುಮ್ಮನೆ ಕಚ್ಚುವುದಿಲ್ಲ. ನಾವೇನಾದರೂ ಅವಕ್ಕೆ ತೊಂದರೆ ಮಾಡಿದರೆ ಮಾತ್ರ ಅವು ಸಿಟ್ಟಿಗೇಳುತ್ತವೆ. ಜೀನಿನ ಗುಂಪಿನಲ್ಲಿ ಯಾವುದೇ ಒಂದು ಹುಳಕ್ಕೆ ತೊಂದರೆಯಾದರೂ ಸಾಕು. ಅವು ಗುಂಪಾಗಿ ಬಂದು ದಾಳಿ ಮಾಡುತ್ತವೆ. ಜೇನು ಹುಳ ಕಚ್ಚಿದರೆ ನಿರ್ಲಕ್ಷ್ಯ ಮಾಡುವಂತಿಲ್ಲ, ಬಹಳ ಹುಳು ಕಚ್ಚಿದಾಗ ವೈದ್ಯರ ಬಳಿ ಹೋಗಲೇ ಬೇಕು, ಜೇನು ಕಚ್ಚಿದಾಗ ಅದರ ಮುಳ್ಳು ಕಚ್ಚಿದ ಜಾಗದಲ್ಲಿ ಇರುತ್ತದೆ. ಅದನ್ನು ತಕ್ಷಣ ತೆಗೆಯಬೇಕು. ಆ ಮುಳ್ಳನ್ನು ತೆಗೆಯದಿದ್ದರೆ ನಂಜು ಹೆಚ್ಚುತ್ತದೆ. ಕಚ್ಚಿದ ಜಾಗ ಬಹಳ ಊದಿಕೊಳ್ಳುತ್ತದೆ.
|
ಬೆಟ್ಟದ ನೆಲ್ಲಿಯನ್ನು ಮುಖ್ಯಬೆಳೆಯಲ್ಲಿ ಹೀಗೆ ಬೆಳೆದರೆ ಸಮೃದ್ಧ ಆದಾಯ..!
ಬೆಟ್ಟದ ನೆಲ್ಲಿ ಎಂದ ತಕ್ಷಣ, ಬಾಯಲ್ಲಿ ನೀರೂರಲು ಶುರುವಾಗುತ್ತೆ. ನಾವು ಎರಡು ವಿಧವಾದ ನೆಲ್ಲಿಯನ್ನು ನೋಡುತ್ತೆವೆ. ಒಂದು ನಾಡಿನ ನೆಲ್ಲಿಕಾಯಿ, ಮತ್ತೊಂದು ಹೆಚ್ಚಾಗಿ ಗುಡ್ಡ ಗಾಡುಗಳಲ್ಲಿ ಬೆಳೆದು, ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಬೆಟ್ಟದ ನೆಲ್ಲಿ. ಚಿಕ್ಕವಯಸ್ಸಿನಲ್ಲಿ ನೆಲ್ಲಿಕಾಯಿಯ ರುಚಿಯನ್ನು ಉಪ್ಪು, ಖಾರದೊಂದಿಗೆ ಸ್ನೇಹಿತರ ಜತೆ ಚಪ್ಪರಿಸಿ ತಿಂದಿರುವ ನೆನಪುಗಳು ನಮಗುಂಟು. ಮನೆಯ ಹಿತ್ತಲ್ಲಿನಲ್ಲಿ, ಹೊಲಗಳಲ್ಲಿ ಬೆಳೆದಾಗ, ಅವುಗಳನ್ನು ಕಿತ್ತು ತಿನ್ನುವುದೇ ಖುಷಿ. ಆದರೆ ಈಗಿನ ದಿನಮಾನದಲ್ಲಿ, ತಂತ್ರಜ್ಞಾನ ಬದಲಾದಂತೆ ಮರ ಗಿಡಗಳನ್ನು ನೋಡುವುದೂ ಸಹಿತ ಕಡಿಮೆಯಾಗುತ್ತಿರುವುದು ದುಃಖದ ಸಂಗತಿ. ಹಾಗಾದ್ರೆ ಬೆಟ್ಟದ ನೆಲ್ಲಿಯನ್ನು ಕೃಷಿಯಲ್ಲಿ ಬಳಸಿಕೊಂಡಾಗ, ರೈತರಿಗೆ ಸಿಗುವ ಲಾಭಗಳೆಷ್ಟು ಗೊತ್ತಾ?
|
6,500 ರೂ.ಗೆ 10 ಟ್ರ್ಯಾಕ್ಟರ್ ಲೋಡ್ ಅರಿಶಿನ ಸಿಕ್ಕಿದ್ದು ಹೇಗೆ..?
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ , ರಬಕವಿ ಬನಹಟ್ಟಿ ತಾಲೂಕಿನ ಕೃಷಿಕ ಸುರೇಶ್ ಜಾಲಿಕಟ್ಟಿ ಅವರ ಅರಿಶಿನ ಬೆಳೆಯಲ್ಲಿ, ಯವುದೇ ತರಹದ ರೋಗ, ಕೀಟ ಬಾಧೆಯ ತೊಂದರೆಯಿಲ್ಲ. ಅರಿಶಿನ ಬೆಳೆ ಆರೋಗ್ಯವಾಗಿ ಬೆಳೆದು, ಹೆಚ್ಚಿನ ಇಳುವರಿ ನೀಡಿದೆ.
|
ಕಬ್ಬು: ಅಧಿಕ ಇಳುವರಿಗೆ 4 ಅಂಶಗಳು
ಸಕ್ಕರೆ, ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಎಲ್ಲಿ ನೋಡಿದ್ರೂ ಪಾಕದಿಂದ ಮಾಡಿದ ತಿನಿಸುಗಳು, ಪಾನೀಯಗಳು. ಬಿಸ್ಕಟ್, ಫ್ರೂಟ್ ಜ್ಯೂಸ್, ಹೀಗೆ ಹೋದ್ರೆ ದೊಡ್ಡ ಪಟ್ಟಿ ಆಗಿ ಬಿಡುತ್ತೆ. ಎಲ್ಲರಿಗೂ ಗೊತ್ತಿರೋ ವಿಷಯ ಅಂದ್ರೆ, ಸಕ್ಕರೆ ತಯಾರಾಗೋದು ಕಬ್ಬಿನಿಂದ. ಇದೊಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕಬ್ಬಿಗೆ ಎಂದೂ ಕಡಿಮೆಯಾಗದಂತಹ ಡಿಮ್ಯಾಂಡ್ ಇದೆ. ಕಬ್ಬು ಬೆಳೆದರೆ ಮಾರ್ಕೆಟ್ ಮಾಡುವುದು ಕಷ್ಟದ ವಿಷಯವಲ್ಲ. ಹೆಚ್ಚು ಕಬ್ಬು ಹೆಚ್ಚು ಲಾಭ. ಆದರೆ ಇಲ್ಲಿ ಪ್ರಶ್ನೆ ಇರುವುದು ಕಬ್ಬಿನ ಇಳುವರಿ ಹೆಚ್ಚಿಸಲು ಏನು ಮಾಡ್ಬೇಕು ಅಂಥ. ಏನು ಮಾಡಿದರೆ, ಯಾವ ತಪ್ಪುಗಳನ್ನು ಸರಿ ಮಾಡಿಕೊಂಡರೆ ಇಳುವರಿ ಹೆಚ್ಚಿಸಿಕೊಳ್ಳಬಹುದು.
|
|