Blog

       ಕಬ್ಬು ಒಂದು ವಾಣಿಜ್ಯ ಬೆಳೆ. ಕರ್ನಾಟಕದ ಹಲವು ಭಾಗಗಳಲ್ಲಿ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರಮುಖ ಬೆಳೆಯಾಗಿದೆ. ಎಷ್ಟೋ ರೈತರ ಆದಾಯ ಕಬ್ಬಿನ ಮೇಲೆ, ಅದರಿಂದ ಬರುವ ಆದಾಯದ ಮೇಲೆ ಅವಲಂಬಿತವಾಗಿದೆ. ಕಬ್ಬಿನ ಗುಣಮಟ್ಟ ಮತ್ತು ಇಳುವರಿಯ ಮೇಲೆ ಎಷ್ಟೋ ಜನರ ಬದುಕು ನಿಂತಿದೆ. ಇದನ್ನು ಅರಿತು ಮೈಕ್ರೋಬಿ ಸಂಸ್ಥೆಯ ಮುಖ್ಯಸ್ಥರು ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೇಗೌಡರು ನಾಡಿನಾದ್ಯಂತ ಸಂಚರಿಸಿ ರೈತರಿಗೆ ಎಕರೆಗೆ 80-100 ಟನ್ ಇಳುವರಿ ಪಡೆಯಬಹುದಾದ ಹೊಸ ತಂತ್ರಜ್ಞಾನವನ್ನು ಪರಿಚಯಿಸಿ, ಇದನ್ನು ಅಳವಡಿಸಿಕೊಳ್ಳಲು ಪ್ರೇರೆಪಿಸುತ್ತಿದ್ದಾರೆ. ಇವರ ಮಾರ್ಗದರ್ಶನದಲ್ಲೇ ಇಲ್ಲೊಬ್ಬ ರೈತರು ಕಬ್ಬು ಬೆಳೆದಿದ್ದಾರೆ.

 

       ಬಾಗಲಕೋಟೆ ಜಿಲ್ಲೆ, ಮುಧೋಳ ತಾಲೂಕಿನ ಮುಗಳ್ಕೋಡ ಗ್ರಾಮದ ರೈತ ರಾಜು ಪರಪ್ಪನವರ್. 24 ಎಕರೆಯ ಮಾಲೀಕರಾದ ಇವರು ಅರಿಶಿಣ, ಕಬ್ಬು, ಬಾಳೆ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಎರಡು ವರ್ಷಗಳಿಂದ ಡಾ.ಸಾಯಿಲ್ ಬಳಸಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ 1.5 ಎಕರೆಯಲ್ಲಿ ಕಬ್ಬು ಬೆಳೆದಿರುವ ಇವರು ಸಾಲಿನಿಂದ ಸಾಲಿಗೆ 5.5 ಅಡಿ ಅಂತರ ಕೊಟ್ಟಿದ್ದಾರೆ. ಸಾಮಾನ್ಯವಾಗಿ 3-3.5 ಅಡಿ ಅಂತರದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಆದರೆ ಈ ರೀತಿ ಅಂತರ ಹೆಚ್ಚು ಕೊಡುವುದರಿಂದ ಎಲ್ಲಾ ಗಿಡಗಳಿಗೆ ಗಾಳಿ-ಬೆಳಕು ಉತ್ತಮವಾಗಿ ದೊರೆಯುತ್ತವೆ. ಇದರ ಪರಿಣಾಮವಾಗಿ ಸಸ್ಯಗಳಲ್ಲಿ ಆಹಾರೋತ್ಪಾದನೆ ಉತ್ತಮವಾಗಿ ಇಳುವರಿ ಹೆಚ್ಚಾಗುತ್ತದೆ. ರೈತ ರಾಜು ಅವರೇ ಹೇಳುವಂತೆ ಸಾವಯವ ಕೃಷಿ ಉತ್ತಮವಾಗಿದ್ದು, ಇದನ್ನೇ ಮುಂದುವರೆಸುವುದಾಗಿ ತಿಳಿಸುತ್ತಾರೆ. 3.5 ತಿಂಗಳ ಕಬ್ಬು ಉತ್ತಮವಾಗಿ ಬೆಳೆದಿದ್ದು ಉತ್ತಮ ಇಳುವರಿಯ ನಿರೀಕ್ಷೆ ಇಟ್ಟಿದ್ದಾರೆ. ಡಾ.ಸಾಯಿಲ್ ಬಳಕೆಯಿಂದ ಮಣ್ಣು ಮೃದುವಾಗಿ ಫಲವತ್ತಾಗಿದೆ  ಎಂದು ತೋರಿಸುತ್ತಾರೆ ರಾಜು ಪರಪ್ಪನವರ್. ಇವರ ಪೂರ್ತಿ ವೀಡಿಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ….

 

https://www.youtube.com/watch?v=1P3TBWxd-hM

 

 

ಬರಹ: ರವಿಕುಮಾರ್

 

 




Blog




Home    |   About Us    |   Contact    |   
microbi.tv | Powered by Ocat Online Advertising & Content Marketing Service in India