Blog

ಪೊಟ್ಯಾಷಿಯಮ್ (K) ಅನ್ನು ಅತ್ಯಗತ್ಯ ಪೋಷಕಾಂಶವೆಂದು ಪರಿಗಣಿಸಲಾಗುತ್ತದೆ ಮತ್ತು ಎಲ್ಲಾ ಜೀವಕೋಶಗಳಲ್ಲಿ ಪ್ರಮುಖ ಅಂಶವಾಗಿದೆ. ನೈಸರ್ಗಿಕವಾಗಿ, ಮಣ್ಣು ಯಾವುದೇ ಇತರ ಪೋಷಕಾಂಶಗಳಿಗಿಂತ ದೊಡ್ಡ ಪ್ರಮಾಣದಲ್ಲಿ ಪೊಟ್ಯಾಷಿಯಮ್ ಅನ್ನು ಹೊಂದಿರುತ್ತದೆ. ಆದರೂ ಪೊಟ್ಯಾಶಿಯಮ್ ನ ಬಹುಪಾಲು ಸಸ್ಯಗಳು ಹೀರಿಕೊಳ್ಳಲು ಲಭ್ಯವಿಲ್ಲದ ರೂಪದಲ್ಲಿರುತ್ತದೆ.

 

ಪೊಟ್ಯಾಷಿಯಮ್ ಯುಕ್ತ ಖನಿಜಗಳು ಭೂಮಿಯ ಹೊರಪದರದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿವೆ, ಇವುಗಳು ಬೆಳೆಗಳಿಗೆ ಪೋಷಕಾಂಶಗಳ ಕೊಡುಗೆ ನೀಡುತ್ತದೆ.

 

ಸಸ್ಯಗಳು ಪೊಟ್ಯಾಶಿಯಮ್ ಅಂಶವನ್ನು ಮಣ್ಣಿನ ದ್ರಾವಣದಿಂದ ಮಾತ್ರ ತೆಗೆದುಕೊಳ್ಳಬಹುದು. ಮಣ್ಣಿನಲ್ಲಿರುವ ಬಹುತೇಕ ಪಾಲು ಪೊಟ್ಯಾಷಿಯಮ್ ನೀರಿನಲ್ಲಿ ಕರಗದ ರೂಪದಲ್ಲಿರುತ್ತದೆ. ಆದ್ದರಿಂದ, ಸಸ್ಯದ ಅವಶ್ಯಕತೆಗಳನ್ನು ಪೂರೈಸಲು, ಪೊಟ್ಯಾಸಿಯಮ್ ಯುಕ್ತ ಗೊಬ್ಬರಗಳನ್ನು ಬಳಸುತ್ತಾರೆ. ಇದು ವ್ಯಾಪಕವಾದ ಕೃಷಿ ವ್ಯವಸ್ಥೆಗಳಲ್ಲಿ ಲಭ್ಯವಿರುವ ಪೊಟ್ಯಾಷಿಯಮ್ ಅನ್ನು ಪೂರೈಸಲು ಸಮಕಾಲೀನ ಅಭ್ಯಾಸವಾಗಿದೆ. ಆದರೆ ಇದಕ್ಕೆ ಪರ್ಯಾಯ ಮಾರ್ಗವೆಂದರೆ ಪೊಟ್ಯಾಷ್ ಮೊಬಿಲೈಜರ್‌ಗಳು ಮತ್ತು ಸಾಲ್ಯುಬಿಲೈಜರ್‌ಗಳನ್ನು ಬಳಸಿ ನೈಸರ್ಗಿಕವಾಗಿ ಬೆಳೆಗಳಿಗೆ ಸಿಗುವ ರೀತಿಯಲ್ಲಿ ಪೊಟ್ಯಾಷ್ ಅಂಶವನ್ನು ಪರಿವರ್ತಿಸುವುದು.

 

https://www.youtube.com/watch?v=ZjElTIEcmDI&t=14s

 




Blog




Home    |   About Us    |   Contact    |   
microbi.tv | Powered by Ocat Online Advertising & Content Marketing Service in India