Blog

ದಶಕಗಳ ಹಿಂದೆ ಬಂಗಾರದ ಬೆಳೆ ಎಂದೇ ಪ್ರಸಿದ್ಧಿ ಪಡೆದಿದ್ದ ರೇಷ್ಮೆ ಬೆಳೆ ಇಂದಿಗೂ ಲಾಭದಾಯಕ ಬೆಳೆಯೇ ಆಗಿದ್ದುಕೆಲವು ಸುಧಾರಿತ ಕ್ರಮಗಳನ್ನು ಸರಕಾರ ಕೈಗೊಂಡರೆ ರೇಷ್ಮೆಯನ್ನು ಪುನಶ್ಚೇತನಗೊಳಿಸಲು ಸಾಧ್ಯವಿದೆ ಎಂಬುದು ರೇಷ್ಮೆ ಕೃಷಿಕರ ಅಭಿಪ್ರಾಯರೇಷ್ಮೆ ಹುಳುಗಳನ್ನು ರೈತರು ಸಾಕಣೆ ಮಾಡಿದರೆ ಹುಳುಗಳೇ ರೈತರನ್ನು ಸಲಹುತ್ತಿದ್ದವುಅಷ್ಟರ ಮಟ್ಟಿಗೆ ರೇಷ್ಮೆ ಕೃಷಿ ರೈತ ಕುಟುಂಬಗಳ ಕೈ ಹಿಡಿದಿತ್ತು. ವರ್ಷದಲ್ಲಿ 6 ರಿಂದ 8 ಬೆಳೆ ಬೆಳೆಯುತ್ತಿದ್ದ ರೈತರು, ಕೈತುಂಬ ಹಣ ಗಳಿಸಿ ಖುಷಿಯಾಗಿರುತ್ತಿದ್ದರು ಹಣದಿಂದಲೇ ಮದುವೆಮನೆ ನಿರ್ಮಾಣಜಮೀನು ಖರೀದಿಯಂತ ವ್ಯವಹಾರ ನಡೆಯುತ್ತಿತ್ತು.

 

ಆದರೆ ಹಿಂದಿನ ಕಾಲದಲ್ಲಿದ್ದ ಕೃಷಿ ಈಗ ಇಲ್ಲ.ರಾಸಾಯನಿಕಗಳ ಬಳಕೆ ಕೃಷಿ ಭೂಮಿಯನ್ನು ಹಿಂಡಿ ಹಿಪ್ಪೆ ಮಾಡುತ್ತಿದೆಇದನ್ನು ಅರಿತಿರುವ ಇಲ್ಲೊಬ್ಬ ಕೃಷಿಕ ಹಿಪ್ಪುನೇರಳೆ ಬೆಳೆಯನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಮಾಡುತ್ತಿದ್ದು, 20 ದಿನದ ಬೆಳೆಯಲ್ಲಿಯೇ ಗಣನೀಯ ಲಾಭಗಳನ್ನು ಕಂಡಿದ್ದಾರೆ. ಬೆಳೆ ಆರೋಗ್ಯವಾಗಿ ರೋಗ ಕೀಟಗಳ ಸಮಸ್ಯೆ ಇಲ್ಲದೆ ಬೆಳೆಯುತ್ತಿದ್ದು, ಸಾವಯವ ಕೃಷಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರದಿಂದ ಬೆಳೆ, ಭೂಮಿ ಆರೋಗ್ಯವಾಗಿದೆ.

 

ಮತ್ತೊಂದು ವಿಶೇಷವೆಂದರೆ, ಕೃಷಿಕ ರೇಷ್ಮೆ ಬೆಳೆಯನ್ನು ಮರಗಡ್ಡಿ ಪದ್ಧತಿಯಲ್ಲಿ ಬೆಳೆಯುತ್ತಿರುವುದು ರೈತನಿಗೆ ತುಂಬಾ ಲಾಭದಾಯಕ.ಮೊದಲಬಾರಿಗೆ ರೇಷ್ಮೆ ಬೆಳೆಯನ್ನು ಮರಗಡ್ಡಿ ಪದ್ಧತಿಯಲ್ಲಿ ಬೆಳೆಯಬಹುದೆಂದು ತೋರಿಸಿಕೊಟ್ಟವರು ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರು, ಮೈಕ್ರೋಬಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಕೆ ಆರ್ ಹುಲ್ಲುನಾಚೇಗೌಡರು. ಇದನ್ನು ಅರಿತಿರುವ ರೈತರು, ಮರಗಡ್ಡೆಯಲ್ಲಿ ರೇಷ್ಮೆ ಬೆಳೆಯುತ್ತಿರುವುದರಿಂದ ಅನುಕೂಲಗಳು ಜಾಸ್ತಿ. ಈ ಬಗ್ಗೆ ಸಾವಯವ ಕೃಷಿಕ ತಮ್ಮ ಬೆಳೆಯ ಪರಿಚಯ ಹಾಗೂ ಕೃಷಿ ಭೂಮಿಯ ಬಗ್ಗೆ ಪ್ರಾಯೋಗಿಕವಾಗಿ ಮೈಕ್ರೋಬಿ ಟಿವಿ ಮುಖಾಂತರ ತೋರಿಸಿಕೊಟ್ಟಿದ್ದಾರೆ.

ವೀಡೀಯೋವೀಕ್ಷಣೆಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://www.youtube.com/watch?v=BwUuU289pjg

 

ರೇಷ್ಮೆ ಕೃಷಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಹಲವಾರು ಸುಧಾರಿತ ಕ್ರಮಗಳನ್ನು ರೇಷ್ಮೆ ಇಲಾಖೆ ಕೈಗೊಂಡಿದೆರೇಷ್ಮೆ ಕೃಷಿ ವಿಸ್ತರಿಸಲು ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಇದನ್ನು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು.

ಸರಕಾರ ರೇಷ್ಮೆ ಗಿಡಗಳನ್ನು ಸುಲಭ ಬೆಲೆಗೆ ದೊರೆಯುವಂತೆ ಮಾಡುವುದರಿಂದ ಹಿಡಿದು ಹುಳು ಸಾಕಣೆ ಮನೆಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿಕೊಳ್ಳಲು, ಸಹಾಯಧನ ವಿತರಿಸುವ ತನಕ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಸಹಾಯಧನವನ್ನು ನೇರವಾಗಿ ರೇಷ್ಮೆ ಬೆಳೆಗಾರರಿಗೆ ಜಮೆ ಮಾಡುವ ಕಾರ್ಯವನ್ನು ಮಾಡುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯನ್ನು  ಸಂಪರ್ಕಿಸಬಹುದು.

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

ಬರಹ: ವನಿತಾ ಪರಸನ್ನವರ್


 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies