ಕೃಷಿ ಭೂಮಿಯ ವೈಜ್ಞಾನಿಕ, ನೈಸರ್ಗಿಕ ಸಿದ್ಧತೆ ಹೇಗೆ?
ಯಾವುದೇ ಬೆಳೆ ಬೆಳೆಯಲು ಭೂಮಿ ಸಿದ್ಧತೆ ತುಂಬಾ ಮುಖ್ಯ. ಕೃಷಿಯಲ್ಲಿ ಬೆಳೆಗಳ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಮತ್ತು ಇಳುವರಿಯನ್ನು ಹೆಚ್ಚಿಸಲು ಭೂಮಿಯನ್ನು ಸಿದ್ಧಪಡಿಸುವುದು ಒಂದು ಅತ್ಯಗತ್ಯ ಹಂತ. ಆದರೆ ಕೇವಲ ಉಳುಮೆ ಮಾಡಿ ಭೂಮಿ ಸಿದ್ಧತೆ ಎನ್ನುವುದು ತಪ್ಪು. ಭೂಮಿ ಸಿದ್ಧತೆ ಅಂದರೇನು? ಅದರ ಮಹತ್ವ ಏನು? ಭೂಮಿ ಸಿದ್ಧತೆ ಮಾಡುವ ರೀತಿ ಹೇಗೆ? ಭೂಮಿ ಸಿದ್ಧತೆ ಮಾಡುವುದರ ಬಗ್ಗೆ ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಕೆ ಆರ್ ಹುಲ್ಲುನಾಚೇಗೌಡರು ಏನು ಹೇಳುತ್ತಾರೆ? ನೋಡೋಣ ಬನ್ನಿ.
|
ರೈತನ ಶತ್ರು ಗೊಣ್ಣೆ ಹುಳು(ಬೇರು ಹುಳು) ನಿಯಂತ್ರಣ ಹೀಗೆ ಮಾಡಿ?
ಗೊಣ್ಣೆ ಹುಳು/ಬೇರು ಹುಳು ಮಣ್ಣಿನಲ್ಲಿ ಜೀವಿಸುವ ಒಂದು ಕೀಟ. ಇದೊಂದು ಲಾರ್ವಾ ಆಗಿದೆ. ಬೆಳೆಗಳ ಬೇರನ್ನು ತಿಂದು ಅವುಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇದು ಎಲ್ಲಾ ಬೆಳೆಗಳನ್ನು ಆಕ್ರಮಿಸುವುದರಿಂದ ರೈತರಿಗೆ ಇನ್ನಿಲ್ಲದಂತೆ ಬಾಧಿಸಿ, ನಷ್ಟ ತರುವ ಕೀಟವಾಗಿದೆ. ಹಾಗಾದರೆ ಗೊಣ್ಣೆ ಹುಳುವನ್ನು ನಿಯಂತ್ರಣ ಮಾಡುವುದು ಹೇಗೆ? ರಾಸಾಯನಿಕ ಬಳಸದೇ ಸಾವಯವ ಪದ್ಧತಿಯಲ್ಲಿ ನಿಯಂತ್ರಣ ಹೇಗೆ?
|
ರೈತರು ಉತ್ತಮ ಆದಾಯಗಳಿಸುವ ಮಾರ್ಗ ಈ ಫಾರ್ಮುಲಾ
ಇಂದು ಕೃಷಿಯೆಂದರೆ ಲಾಸು, ರೈತ ಎಂದರೆ ಬಡವ ಅನ್ನುವಂತಾಗಿದೆ. ಇದಕ್ಕೆ ಕಾರಣ ಖರ್ಚು ಅಧಿಕ, ಆದಾಯ ಕಡಿಮೆಯಾಗಿರುವುದು. ಎಷ್ಟೇ ದುಡಿದರೂ ನಷ್ಟದಲ್ಲೇ ಬದುಕುವಂತಾಗಿದೆ. ಹಾಗಾದರೆ ರೈತರು ಆದಾಯ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು?. ಸಾಲ, ನಷ್ಟದ ಸುಳಿಯಿಂದ ಹೊರಬರುವುದು ಹೇಗೆ? ಕೃಷಿ ಭೂಮಿಯನ್ನು ಕೃಷಿಕರು ಹೇಗೆ ಬಳಸಿಕೊಳ್ಳಬೇಕು? ಇದಕ್ಕೆ ಒಂದು ಸೂತ್ರ ಕೂಡ ಇದೆ. 33+33+33+1 ಕೃಷಿ ಸೂತ್ರ.
|
ಸಾವಯವದಲ್ಲಿ ಮೆಣಸಿನಕಾಯಿ ಕೃಷಿ: ಎಷ್ಟು ಲಾಭ..?
ಇಂದು ನಮ್ಮ ದೇಶದ ಪ್ರಮುಖ ಮಸಾಲೆ ಬೆಳೆಯಾಗಿರುವ ಮೆಣಸಿನಕಾಯಿ ಪೋರ್ಚುಗೀಸ್ ವ್ಯಾಪಾರಿಗಳ ಮೂಲಕ 1498ರಲ್ಲಿ ಭಾರತಕ್ಕೆ ಪರಿಚಯವಾಯಿತು. ಇದರ ಮಸಾಲೆಯುಕ್ತ ರುಚಿ, ಆಕರ್ಷಕವಾದ ಬಣ್ಣ ಮತ್ತು ಸುವಾಸನೆಯಿಂದಾಗಿ ಪ್ರತಿ ಭಾರತೀಯ ಪಾಕಪದ್ಧತಿಯಲ್ಲಿ ಮೆಣಸಿನಕಾಯಿ ಅನಿವಾರ್ಯ ಸ್ಥಾನ ಪಡೆದಿದೆ. ಮೆಣಸಿನಕಾಯಿಯು ಭಾರತದಲ್ಲಿ ಬೆಳೆಯುವ ಅತ್ಯಮೂಲ್ಯ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ ಮತ್ತು ಭಾರತದಲ್ಲಿ ಬೆಳೆಯುವ ಅತ್ಯಂತ ಸಾಮಾನ್ಯವಾದ ಮಸಾಲೆಯಾಗಿದೆ. ಇಂದು ಮೆಣಸಿನಕಾಯಿ ಭಾರತದ ಸಾರ್ವತ್ರಿಕ ಮಸಾಲೆಯಾಗಿದೆ. ಇದನ್ನು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಪ್ರಪಂಚದ ಒಟ್ಟು ಉತ್ಪಾದನೆಗೆ ಭಾರತವು ಸುಮಾರು 36% ಕೊಡುಗೆ ನೀಡುತ್ತದೆ.
|
ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ಪುತ್ರ S.S.ಗಣೇಶ್ ಅವರ ತೋಟದಲ್ಲಿ ಡಾ.ಸಾಯಿಲ್ ಕಮಾಲ್
ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರು ರಾಜ್ಯದ ಜನರಿಗೆ ಚಿರಪರಿಚಿತ. ಇವರ ಮಗ ಖ್ಯಾತ ಉದ್ಯಮಿ S.S ಗಣೇಶ್ ಅವರು ಉದ್ಯಮ ಜಗತ್ತಿನಲ್ಲಿ ಸಾಧನೆ ಮಾಡಿದವರು. ಇವರು ತಮ್ಮ 120 ಎಕರೆ ತೋಟದಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಮಾಡುತ್ತಿದ್ದಾರೆ.
|
ಉತ್ತಮ ಆದಾಯ ಕೊಡುವ ಸಾವಯವ ಎಲೆಕೋಸು
ಎಲೆಕೋಸು ಒಂದು ಬಹುಮುಖ್ಯ ಬೆಳೆಯಾಗಿದ್ದು, ಅನೇಕ ಭಾಗಗಳಲ್ಲಿ ಪ್ರಧಾನವಾದ ಬೆಳೆಯಾಗಿದೆ. ಎಲೆಕೋಸು ಒಂದು ತಂಪಾದ ಋತುವಿನ ಬೆಳೆಯಾಗಿದ್ದು ಬೆಳೆಯಲು ಸುಲಭ ಮತ್ತು ನೆಟ್ಟ 90 ರಿಂದ 120 ದಿನಗಳಲ್ಲಿ ಕೊಯ್ಲು ಮಾಡಬಹುದು. ಎಲೆಕೋಸು ಯಾವಾಗಲು ಬೇಡಿಕೆಯಲ್ಲಿರುವ ಒಂದು ಬೆಳೆಯಾಗಿದೆ. ಹಾಗಾಗಿ ಮಾರುಕಟ್ಟೆ ಇರುವ ಕಡೆ ಬೆಳೆದರೆ ಉತ್ತಮ ಲಾಭ ಗಳಿಸಬಹದು. ಇದನ್ನು ಸಾವಯವ ಪದ್ಧತಿಯಲ್ಲಿ ಬೆಳೆದಿರುವ ರೈತ ತಮ್ಮ ಜಮೀನಿನಲ್ಲಿ ಹಲವು ಲಾಭಗಳನ್ನು ಪಡೆದಿದ್ದಾರೆ.
|
ಕ್ಯಾಪ್ಸಿಕಂ ಬೆಳೆಗಾರನ ಸಂಕಷ್ಟ ಮಾಯ
ಕ್ಯಾಪ್ಸಿಕಂ ಅಥವಾ ದಪ್ಪ ಮೆಣಸಿನಕಾಯಿ ಒಂದು ಜನಪ್ರಿಯ ಬೆಳೆಯಾಗಿದೆ. ವಿವಿಧ ಬಣ್ಣಗಳು ಮತ್ತು ಗಾತ್ರಗಳಲ್ಲಿ ಬರುವ ಈ ದೊಡ್ಡ ಮೆಣಸಿನಕಾಯಿಯನ್ನು ಪ್ರಪಂಚದಾದ್ಯಂತದ ಅನೇಕ ಅಡುಗೆಗಳಲ್ಲಿ ಬಳಸಲಾಗುತ್ತದೆ. ಇದನ್ನು ಸಲಾಡ್‌ಗಳು ಮತ್ತು ಸ್ಯಾಂಡ್‌ವಿಚ್‌ಗಳಿಂದ ಹಿಡಿದು ಸೂಪ್‌ಗಳು ಮತ್ತು ಬಜ್ಜಿ, ಹೀಗೆ ವಿವಿಧ ರೀತಿಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಇದು ವಿಟಮಿನ್ ಸಿ ಮತ್ತು ಇತರ ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ. ಇಂತಹ ಬೆಳೆಯನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಇಲ್ಲೊಬ್ಬ ರೈತರು ಅದ್ಭುತವಾಗಿ ಬೆಳೆದಿದ್ದಾರೆ.
|
ಗುಂಪುಬಾಳೆ ಎಂದರೇನು? ಬೆಳೆಯುವುದು ಹೇಗೆ?
ಬಾಳೆ ಒಂದು ಪ್ರಮುಖ ವಾಣಿಜ್ಯ ಬೆಳೆ. ಸರಿಯಾದ ನಿರ್ವಹಣೆ ಮಾಡಿದರೆ ಒಳ್ಳೆ ಲಾಭ ಮಾಡಬಹುದು. ಆದರೆ ರೈತರು ಇದರಲ್ಲಿ ಎಡವುತ್ತಿದ್ದಾರೆ. ಎಲ್ಲಾರು ಮಾಡುವಂತೆ ಕೃಷಿ ಮಾಡುತ್ತಾ ಇತರ ಪದ್ಧತಿಗಳ ಕಡೆ ಗಮನ ಕೊಡದೇ ನಷ್ಟವಾದರೂ ಹಳೇ ಪದ್ಧತಿ ಮುಂದುವರೆಸುತ್ತಿದ್ದಾರೆ. ಬಾಳೆ ಕೃಷಿಯಿಂದ ಉತ್ತಮ ಇಳುವರಿ ಮತ್ತು ಲಾಭಗಳಿಸಲು ಇರುವ ಒಂದು ಮಾರ್ಗ ಗುಂಪು ಬಾಳೆ.
|
ನಿಮ್ಮ ಜಮೀನಿನಲ್ಲಿ ಗ್ಲಿರಿಸಿಡಿಯಾ(ಗೊಬ್ಬರದ ಗಿಡ) ಇದ್ದರೆ..?
ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಬಳಕೆ ಜತೆ ನೈಸರ್ಗಿಕವಾಗಿ ಬೆಳೆಯುವ ಗಿಡಗಳನ್ನು ಬಳಸಿಕೊಂಡು ಪೋಷಕಾಂಶ ಪೂರೈಕೆ ಮಾಡಲಾಗುತ್ತದೆ. ಸಾವಯವ ಕೃಷಿಯಲ್ಲಿ ಖರ್ಚು ಕಡಿಮೆಯಾಗುತ್ತದೆ, ಇಳುವರಿ ಹೆಚ್ಚಾಗುತ್ತದೆ ಎಂದು ಎಷ್ಟೋ ಸಲ ಕೇಳಿದ್ದೇವೆ. ಅದರಲ್ಲಿ ಮುಖ್ಯವಾದ ಒಂದು ಸಸ್ಯ ಗ್ಲಿರಿಸಿಡಿಯಾ ಅಥವಾ ಗೊಬ್ಬರದ ಗಿಡ. ಇದರಿಂದ ಉಚಿತ ಪೋಷಕಾಂಶ ಹೇಗೆ ಸಿಗುತ್ತದೆ? ಉತ್ತಮ ಇಳುವರಿ ಪಡೆಯಲು ಗೊಬ್ಬರದ ಗಿಡದ ಪ್ರಯೋಜನ ಏನು? ಇವೆಲ್ಲವನ್ನು ಈ ಬ್ಲಾಗ್ ನಲ್ಲಿ ನೋಡೋಣ.
|
ಸಾವಯವ ಅರಿಶಿನ ಮತ್ತು ರಾಸಾಯನಿಕ ಅರಿಶಿನ-ದಂಗು ಬಡಿಸುತ್ತೆ ವ್ಯತ್ಯಾಸ..!
ಸಾಮಾನ್ಯವಾಗಿ ಸಾವಯವ ಕೃಷಿ ಅಳವಡಿಸಿಕೊಂಡರೆ ಉತ್ತಮ ಇಳುವರಿ ಪಡೆಯಲು 2-3 ವರ್ಷ ಬೇಕಾಗುತ್ತದೆ ಎಂಬುದು ಬಹುತೇಕ ಕೃಷಿಕರ ತಪ್ಪು ಕಲ್ಪನೆ. ಇಲ್ಲೊಬ್ಬ ರೈತರು ಮೊದಲನೇ ವರ್ಷದಲ್ಲೇ ಹೆಚ್ಚು ಇಳುವರಿ ಪಡೆದು, ಸತ್ಯ ಏನೆಂಬುದನ್ನು ಸಾಬೀತು ಪಡಿಸಿದ್ದಾರೆ.
|
ರಾಸಾಯನಿಕ ಕೃಷಿಗೆ ವಿದಾಯ ಹೇಳಿದ ಬಾಳೆ ಬೆಳೆಗಾರ ಮಾಡಿದ್ದೇನು?
ನೇಂದ್ರ ಬಾಳೆ ಕೇರಳದ ಒಂದು ಬಾಳೆ ತಳಿ. ದೊಡ್ಡ ಬಾಳೆಹಣ್ಣನ್ನು ಬಿಡುವ ಈ ತಳಿ, ಹೆಚ್ಚು ವಾಣಿಜ್ಯ ಬೆಲೆಯನ್ನು ಹೊಂದಿದೆ. ಈ ಬೆಳೆ ಹೆಚ್ಚು ಪೋಷಕಾಂಶಗಳನ್ನು ಕೇಳುವುದರಿಂದ ಮಣ್ಣಿನ ಫಲವತ್ತತೆ ತುಂಬಾ ಮೂಖ್ಯ. ಮೈಸೂರಿನ ರೈತರೊಬ್ಬರು ಯಶಸ್ವಿಯಾಗಿ ನೇಂದ್ರ ಬಾಳೆ ಬೆಳೆಯುತ್ತಿದ್ದಾರೆ. ಸಾವಯವ ಕೃಷಿ ಅಳವಡಿಸಿಕೊಂಡು ಬಾಳೆ ಬೆಳೆಯುತ್ತಿರುವ ಇವರು ನಿರ್ವಹಣೆಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
|
ಸಾವಯವ ಕೃಷಿ ಬಗೆಗಿನ ಅನುಮಾನಗಳಿಗೆ ಇಲ್ಲಿದೆ ಉತ್ತರ
ರಾಸಾಯನಿಕ ಗೊಬ್ಬರಗಳನ್ನು ಬಿಟ್ಟು ಕೃಷಿಯೇ ಇಲ್ಲ ಎನ್ನುವಂತಿರುವ ಇಂದಿನ ಎಷ್ಟೋ ರೈತರಿಗೆ ಸಾವಯವ ಕೃಷಿಯ ಬಗ್ಗೆ ತಿಳಿದೇ ಇಲ್ಲ. ಗೊತ್ತಿದ್ದವರಿಗೆ ಇದರಿಂದ ಇಳುವರಿ ಕಡಿಮೆ ಬರುತ್ತದೆ ಎಂಬ ಅಪನಂಬಿಕೆ. ಇನ್ನು ಕೆಲವರಿಗೆ ಸಾವಯವ ಕೃಷಿಗೆ ಬರಲು ಭಯ, ಭೂಮಿ ಒಗ್ಗಿಕೊಳ್ಳುವುದಕ್ಕೆ ತುಂಬಾ ಸಮಯ ಹಿಡಿಯುತ್ತದೆ ಎಂದು. ಬಳ್ಳಾರಿಯ ಈ ರೈತರು ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಜೋಳ ಬೆಳೆದಿದ್ದಾರೆ. ಈ ಕೃಷಿಕರ ಅನುಭವ ಹಲವಾರು ಕೃಷಿಕರ ಹತ್ತಾರು ಪ್ರಶ್ನೆಗಳಿಗೆ ಉತ್ತರ ನೀಡಲಿದೆ.
|
ಬೆಣ್ಣೆಹಣ್ಣು(Butter fruit) ಬೆಳೆಯುವುದರಿಂದ ರೈತರಿಗೆ ಏನು ಲಾಭ? ಸಂಪೂರ್ಣ ಮಾಹಿತಿ
ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸುತ್ತಿರುವ ಕಾರಣ ಕೆಲವು ಹಣ್ಣು-ತರಕಾರಿಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಅದರಲ್ಲಿ ಪ್ರಮುಖವಾದ ಒಂದು ಹಣ್ಣು ಬೆಣ್ಣೆ ಹಣ್ಣು ಅಥವಾ ಬಟರ್ ಫ್ರೂಟ್. ನಮ್ಮ ದೇಶದ ಹಣ್ಣಲ್ಲವಾದರೂ ಇತ್ತೀಚೆಗೆ ಹೆಚ್ಚು ರೈತರು ಬೆಣ್ಣೆಹಣ್ಣು ಕೃಷಿಗೆ ಒಲವು ತೋರಿಸುತ್ತಿದ್ದಾರೆ. ಇದಕ್ಕೆ ಕಾರಣ ಬೇಡಿಕೆ ಮತ್ತು ಅದರಿಂದ ಬರುವ ಆದಾಯ. ನೀವು ಕೂಡ ಇದರ ಉಪಯೋಗ ಪಡೆಯಬಹುದು. ಇದರ ಮಾರುಕಟ್ಟೆ ಮತ್ತು ಇದರಿಂದ ರೈತರಿಗೆ ಆಗುವ ಲಾಭಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.
|
ಪ್ರತಿಯೊಬ್ಬ ರೈತರೂ ಈ ವೀಡಿಯೋ ನೋಡಲೇಬೇಕು..!
ಸಾವಯವ ಕೃಷಿ ಮಾಡಲು ಹಿಂಜರಿಯುವ ರೈತರಿಗೆ ಮಾದರಿ ಈ ಆಧುನಿಕ ರೈತ. ಉದ್ಯೋಗದಲ್ಲಿದ್ದರೂ ಕೃಷಿಯನ್ನೂ ಬಿಡದೆ ಸಾವಯವ ಕೃಷಿ ಮಾಡುತ್ತಿದ್ದಾರೆ. ತಮ್ಮ 2.5 ಎಕರೆ ಜಮೀನಿನಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಮೊದಲು ಅವಶ್ಯಕತೆ ಬಿದ್ದಾಗ ಸ್ವಲ್ಪ ರಾಸಾಯನಿಕ ಗೊಬ್ಬರ ಬಳಸಿದರು. ಈಗ ಸಂಪೂರ್ಣವಾಗಿ ಸಾವಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ.
|
IBMನಲ್ಲಿ ಲಕ್ಷ ರೂ. ಸಂಬಳದ ಉದ್ಯೋಗ ಬಿಟ್ಟು ಹಳ್ಳಿಗೆ ಬಂದು ಅಡಿಕೆ ಕೃಷಿ ಮಾಡುತ್ತಿರುವ ಯುವಕ
ಲಾಕ್ ಡೌನ್ ಜನರಿಗೆ ಬದುಕು ಬದಲಿಸಿತು. ಕೊರೋನಾದಿಂದ ತುಂಬಾ ಜನರು ನಗರ ಪ್ರದೇಶಗಳಿಂದ ಹಳ್ಳಿಯೆಡೆ ಬಂದರು. ಎಲ್ಲೋ ಹೋಗಿ ದುಡಿಯುವುದಕ್ಕಿಂತ ಹಳ್ಳಿಯಲ್ಲೇ ಇದ್ದು ದುಡಿಯುವುದು ಮೇಲು ಎಂದು ವಾಪಸ್ಸಾದವರು ಬಹಳ. ನಗರದ ಬ್ಯುಸಿ ಜೀವನಕ್ಕಿಂತ ಹಳ್ಳಿಯ ನಿಸರ್ಗದ ಜೊತೆಯ ಜೀವನ ಎಷ್ಟೋ ಮೇಲು ಎಂದು ಕೆಲವರು ಹಳ್ಳಿಯಲ್ಲೇ ಉಳಿದರು. ಹೀಗೆ ಹಳ್ಳಿ ಜೀವನವೇ ಮೇಲು ಎನ್ನುವ IBM ನಲ್ಲಿ ಕೆಲಸ ಮಾಡುತ್ತಿದ್ದ ಯುವಕ 4-5 ವರ್ಷಗಳ ಹಿಂದೆಯೇ ತಂದೆ ಸತ್ತ ಮೇಲೆ ಲಕ್ಷ ರೂ. ಸಂಬಳ ಬಿಟ್ಟು ಸ್ವಂತ ಊರಿನಲ್ಲಿ ಕೃಷಿ ಮಾಡುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಅಡಿಕೆ ಬೆಳೆಯುತ್ತಿರುವ ಇವರ ಅನುಭವ ತಿಳಿಯೋಣ ಬನ್ನಿ.
|
ಮಣ್ಣು ಫಲವತ್ತಾದರೆ 100 ಟನ್ ಕಬ್ಬು ಪಡೆಯಲು ಸಾಧ್ಯವೇ?
ಯಾವುದೇ ಬೆಳೆಯಾಗಲಿ ಮಣ್ಣು ಫಲವತ್ತಾಗಿದ್ದರೆ ಬೆಳೆಯೂ ಉತ್ತಮ ಮತ್ತು ಪೌಷ್ಟಿಕವಾಗಿರುತ್ತದೆ. ಕೃಷಿಯ ಮೂಲವೇ ಮಣ್ಣು. ಮಣ್ಣು ಸಕಲ ಜೀವಿಗಳಿಗೂ ಆಗರ. ಇಂತಹ ಮಣ್ಣನ್ನು ಕಾಪಾಡುವುದು ಮತ್ತು ಫಲವತ್ತಾಗಿಡುವುದು ಎಲ್ಲರ ಜವಾಬ್ದಾರಿ. ಅದರಲ್ಲೂ ಕೃಷಿಮಣ್ಣು ಫಲವತ್ತತೆ ಕಳೆದುಕೊಂಡರೆ ಆಹಾರಕ್ಕೆ ಹಾಹಾಕಾರ ಉಂಟಾಗುತ್ತದೆ, ಆಹಾರಕ್ಕಾಗಿ ಯುದ್ಧಗಳೂ ನಡೆಯುತ್ತವೆ.
|
ಕೂಳೆ ಕಬ್ಬಿನಲ್ಲಿಯೂ ಅಧಿಕ ಇಳುವರಿ ಪಡೆಯಲು ಸೂಪರ್ ಐಡಿಯಾ
ನಾವು ಯಾವುದೇ ಬೆಳೆಯನ್ನು ಬೆಳೆಯುತ್ತಿದ್ದೇವೆ ಎಂದರೆ, ಆ ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯುತ್ತೇವೆ ಎಂಬ ಭರವಸೆ ಇರಬೇಕು. ಆ ಭರವಸೆಯ ಕನಸು ನನಸಾಗಬೇಕೆಂದರೆ, ರೈತನ ಕೃಷಿ ಪದ್ಧತಿ ಸರಿಯಾಗಿರಬೇಕಾಗುತ್ತದೆ.
|
ಸರ್ಕಾರಕ್ಕೆ ರೈತರು ಸಾಲ ಕೊಡುತ್ತಾರೆ ಎನ್ನುತ್ತಾರೆ ಈ ಕೃಷಿಕ..!
ಅರಿಶಿನವು ಕೇವಲ ಅಡುಗೆ ಮನೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುವುದು ಮಾತ್ರವಲ್ಲ. ಧಾರ್ಮಿಕ ಕಾರ್ಯಗಳಲ್ಲಿ ಮತ್ತು ಆರೋಗ್ಯದ ರಕ್ಷಣೆಯಲ್ಲೂ ಬಹುಪಕಾರಿ.
|
ಬಿತ್ತಿದಂತೆ ಬೆಳೆ-ಬಿತ್ತುವ ಮುನ್ನ ತಪ್ಪದೆ ಬೀಜೋಪಚರಿಸಿ
ಗೋಕಾಕ್: ಬಿತ್ತಿದಂತೆ ಬೆಳೆ ಎನ್ನುವುದು ನಿಜವಾದರೆ, ಬೀಜದಂತೆ ಬೆಳೆ ಅನ್ನುವುದೂ ಸತ್ಯ. ಬೀಜಕ್ಕೆ ಮಾಡುವ ಉಪಚಾರ ಬೆಳೆಗೆ ಹಾಕುವ ಅಡಿಪಾಯವಿದ್ದಂತೆ. ಈ ಸತ್ಯ ರೈತನಿಗೂ ಗೊತ್ತು. ಬೀಜೋಪಚಾರದ ಬಗ್ಗೆ ಅಗತ್ಯ ಮಾಹಿತಿ ಇದ್ದರೆ ಸಾವಯವ ಕೃಷಿಕನ ಹಾದಿ ಸಲೀಸಾಗುತ್ತದೆ.
|
ಈ ಒಂದು ಎಲೆ, ಮೂರು ಪಟ್ಟು ಎಲೆಗೆ ಸಮ..!
ಹಳೇ ಕಾಲದಲ್ಲಿ ಯಾವುದೇ ರಾಸಾಯನಿಕ ಇಲ್ಲದೇ ನೈಸರ್ಗಿಕವಾಗಿ ಸಿಗುವ ತ್ಯಾಜ್ಯಗಳು, ಗೊಬ್ಬರಗಳನ್ನು ಬಳಸಿ ಉತ್ತಮ ಪೋಷಕಾಂಶಗಳುಳ್ಳ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಈಗಿನ ರೈತರು ಕೃತಕವಾಗಿ ಎಷ್ಟೇ ಪೋಷಕಾಂಶ ಒದಗಿಸಿದರೂ ಇಳುವರಿ ಮತ್ತು ಪೋಷಕಾಂಶದಲ್ಲಿ ಕೊರತೆ ಅನುಭವಿಸುತ್ತಿದ್ದಾರೆ. ಮೊದಲಿನಂತೆ ಈಗ ನಾವು ರಾಸಾಯನಿಕ ಗೊಬ್ಬರ ಬಳಸದೇ ಕೃಷಿ ಮಾಡುವುದು ಹೇಗೆ? ಸಾವಯವ ಕೃಷಿಯಿಂದ ಮನುಷ್ಯನ ಆರೋಗ್ಯಕ್ಕೆ ಹೇಗೆ ಸಹಾಯಕಾರಿ?
|
ಎಡದ ಕಬ್ಬು 25 ಟನ್, ಬಲದ ಕಬ್ಬು 60 ಟನ್! ಏನಿದು ಮರ್ಮ?
ಸಾವಯವ ಕೃಷಿ ಎಂದರೆ ಅದು ಕೆಲಸ ಮಾಡಲ್ಲ. ಭೂಮಿ ಹೊಂದಿಕೊಳ್ಳೋದಿಕ್ಕೆ ತುಂಬಾ ವರ್ಷಗಳು ಬೇಕಾಗುತ್ತವೆ ಎಂದು ಹಲವು ರೈತರು ಹೇಳುತ್ತಾರೆ. ಆದರೆ ಇದು ನಿಜವಲ್ಲ, ಮೊದಲ ಬೆಳೆಯಿಂದಲೇ ಉತ್ತಮ ಇಳುವರಿ ಪಡೆಯಬಹುದು. ಬಾಗಲಕೋಟೆಯ ಈ ರೈತ ಇದಕ್ಕೆ ಸಾಕ್ಷಿಯಾಗಿದ್ದಾರೆ.
|
ರಾಸಾಯನಿಕ ಬಳಸದೇ ಕೀಟಗಳ ನಾಶ: ಸಾವಯವ ಅಲೆ, ಮೋಹಕ ಬಲೆ
ಉತ್ತಮ ಲಾಭಕ್ಕಾಗಿ ಉತ್ತಮ ಬೆಳೆ ಬೆಳೆಯುವುದು ತುಂಬಾ ಮುಖ್ಯ. ಉತ್ತಮ ಬೆಳೆ ಬೆಳೆಯಲು ಗಿಡಗಳನ್ನು ರೋಗಗಳು ಮತ್ತು ಕೀಟಗಳಿಂದ ಕಾಪಾಡಬೇಕಾಗುತ್ತದೆ. ಇದಕ್ಕಾಗಿ ರೈತರು ಬಹಳ ವಿಧಾನಗಳನ್ನು ಅನುಸರಿಸುತ್ತಾರೆ. ರೋಗಗಳು ಮತ್ತು ಕೀಟಗಳನ್ನು ತಡೆಯಲು ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಇದು ದುಬಾರಿಯೂ ಹೌದು ಹಾಗೂ ಅಪಾಯಕಾರಿಯು ಹೌದು.
|
ನಿಮ್ಮ ಮನೆಯಲ್ಲಿ ಹಸು, ಎಮ್ಮೆ, ಕುರಿ, ಕೋಳಿಗಳಿದ್ದರೆ ಇದನ್ನು ಬೆಳೆಯಿರಿ
ಅಜೋಲಾವನ್ನು ಮುಖ್ಯವಾಗಿ ಪಶು ಆಹಾರಕ್ಕಾಗಿ ಬಳಸಲಾಗುತ್ತದೆ. ಏಕೆಂದರೆ ಇದು ಡೈರಿ ಪ್ರಾಣಿಗಳಿಗೆ ಪೌಷ್ಠಿಕ ಮತ್ತು ಅಗ್ಗದ ಸಾವಯವ ಆಹಾರವಾಗಿ ಲಭ್ಯವಿದೆ. ಅಜೋಲಾ ಪ್ರೋಟೀನ್ ನಲ್ಲಿ ಸಮೃದ್ಧವಾಗಿದೆ. ಇದಲ್ಲದೆ, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ತಾಮ್ರ, ಮ್ಯಾಂಗನೀಸ್ ಮುಂತಾದ ಅಗತ್ಯ ಖನಿಜಗಳು ಈ ಸಸ್ಯದಲ್ಲಿ ಕಂಡುಬರುತ್ತವೆ.
|
ಕಬ್ಬಿನ ರವದಿಯಲ್ಲಿದೆ ಉತ್ಕೃಷ್ಟ ಗೊಬ್ಬರ..!
ಕಬ್ಬು ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯುವ ಆತುರದಲ್ಲಿ ಮಣ್ಣಿಗೆ ರಾಸಾಯನಿಕ ಗೊಬ್ಬರ ಬಳಸಿ ಹೆಚ್ಚು ಅಪಾಯ ತಂದು ಕೊಳ್ಳುತ್ತೇವೆ. ಅಲ್ಲದೆ ಕಬ್ಬಿನ ರವದಿಯನ್ನು ಹೊಲದಲ್ಲಿಯೇ ಸುಟ್ಟು ಅನೇಕ ರೀತಿಯಾದ ರೋಗಗಳಿಗೆ, ಕಷ್ಟಗಳಿಗೆ ದಾರಿ ಮಾಡಿಕೊಡುತ್ತಿದ್ದೇವೆ. ರವದಿ ಸುಡುವುದನ್ನು, ರಾಸಾಯನಿಕ ಗೊಬ್ಬರ ಬಳಸುವುದನ್ನು ಬಿಟ್ಟು ಮಣ್ಣಿನ ಫಲವತ್ತತೆ ಉಳಿಸಿಕೊಂಡು ಕಬ್ಬಿನ ರವದಿಯನ್ನೇ ಗೊಬ್ಬರವಾಗಿ ಮಾಡಿಕೊಂಡು ಮಣ್ಣಿಗೆ ಬಳಸುವುದು ಒಳ್ಳೆಯದು.
|
ಬೇಸಿಗೆ ಅವಧಿಯಲ್ಲಿ ಕಬ್ಬಿನ ಬೆಳೆಯನ್ನು ನಿರ್ವಹಣೆ ಮಾಡುವುದು ಸುಲಭವಲ್ಲ. ಇರುವ ಅಥವಾ ಲಭ್ಯವಾಗುವ ನೀರಿನ ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಬರದ ಸ್ಥಿತಿ ನಿರ್ವಹಣೆ ಮಾಡಿ ಉತ್ತಮ ಇಳುವರಿ ಪಡೆಯಬಹುದಾಗಿದೆ.
ಬೇಸಿಗೆ ಅವಧಿಯಲ್ಲಿ ಕಬ್ಬಿನ ಬೆಳೆಯನ್ನು ನಿರ್ವಹಣೆ ಮಾಡುವುದು ಸುಲಭವಲ್ಲ. ಇರುವ ಅಥವಾ ಲಭ್ಯವಾಗುವ ನೀರಿನ ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಬರದ ಸ್ಥಿತಿ ನಿರ್ವಹಣೆ ಮಾಡಿ ಉತ್ತಮ ಇಳುವರಿ ಪಡೆಯಬಹುದಾಗಿದೆ.
|
ಮೊದಲು ವೀಕೆಂಡ್ ಕೃಷಿ, ನಂತರ ವೈಜ್ಞಾನಿಕ ಕೃಷಿ, 10 ವರ್ಷದಿಂದ ಉಳುಮೆ ಕಾಣದ ಅಡಿಕೆ ತೋಟ
10 ವರ್ಷದಿಂದ ಉಳುಮೆಯನ್ನೇ ನೋಡದ ತೋಟ? ಈ ರೈತ 10 ವರ್ಷದಿಂದ ತಮ್ಮ ಅಡಿಕೆ ತೋಟದಲ್ಲಿ ಉಳುಮೆಯನ್ನೇ ಮಾಡಿಲ್ಲ. ನೀರು ಮತ್ತು ತ್ಯಾಜ್ಯಗಳ ಉತ್ತಮ ನಿರ್ವಹಣೆಯಿಂದ ಅಡಿಕೆ ತೋಟವನ್ನು ನೋಡಿಕೊಳ್ಳುತ್ತಿದ್ದಾರೆ. ಬೆಂಗಳೂರಿಂದ ಬಂದು ವೀಕೆಂಡ್ ನಲ್ಲಿ ಕೃಷಿ ಮಾಡುತ್ತಿದ್ದ ಈ ರೈತನ ನಿರ್ವಹಣೆಯ ಬಗ್ಗೆ ತಿಳಿಯೋಣ ಬನ್ನಿ.
|
20 ಗುಂಟೆಯಲ್ಲಿ 12 ಬೆಳೆಗಳು. ಲಾಭ ಎಷ್ಟು ಗೊತ್ತಾ..?
ಗೋಕಾಕ್ : ನನ್ನ ಕೃಷಿ ಭೂಮಿ ಚಿಕ್ಕದು, ಇಲ್ಲಿ ಯಾವ ಬೆಳೆ ಬೆಳೆದರೂ ಹೆಚ್ಚು ಲಾಭ ಪಡೆಯಲು ಸಾಧ್ಯವಾಗುವುದಿಲ್ಲ, ಸುಮ್ಮನೆ ಖರ್ಚು ಹೆಚ್ಚು ಎನ್ನುವವರಿಗೆ ಈ ಕೃಷಿಕ ಮಾದರಿಯಾಗಿದ್ದಾರೆ. 20 ಗುಂಟೆಯಲ್ಲಿ 12 ತರಹದ ಹಣ್ಣಿನ ಬೆಳೆಗಳನ್ನು ಬೆಳೆದು ಈಗಾಗಲೇ ಒಂದು ವಾರಕ್ಕೆ 3000 ರೂ.ಗಳಂತೆ ತಿಂಗಳಿಗೆ 12 ಸಾವಿರ ಲಾಭ ಪಡೆಯುತ್ತಿದ್ದಾರೆ.
|
ಇಂಗ್ಲೀಷ್ ಕ್ರಾಪ್ ಗಳನ್ನು ಬೆಳೆದು ತಿಂಗಳಿಗೆ 1 ಲಕ್ಷ ಆದಾಯ
ಕೃಷಿ ಕೇವಲ ವಯಸ್ಸಾದವರಿಗಲ್ಲ, ಯುವಜನತೆಯೂ ಕೃಷಿಯಲ್ಲಿ ತೊಡಗಿಕೊಳ್ಳತ್ತಿದೆ. ಯುವ ಜನತೆ ಯಾವುದೇ ಕ್ಷೇತ್ರದಲ್ಲಿ ಬಂದರೂ ಅಲ್ಲಿ ಹೊಸ ಪ್ರಯೋಗ ಮತ್ತು ಪ್ರಯತ್ನಗಳು ನಡೆಯುತ್ತವೆ. ಇಲ್ಲೊಬ್ಬ ಯುವ ರೈತ ನಿರಂತರ ಆದಾಯಗಳಿಸಲು ಇಂಗ್ಲೀಷ್ ಬೆಳೆಗಳನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.
|
2 ಸಾವಿರ ರೂ. ಖರ್ಚು ಮಾಡಿ 10 ಟನ್ ಗೊಬ್ಬರ ಉತ್ಪಾದನೆ
ಇಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಗೊಬ್ಬರ ಸಿಗುವುದು ಬಹಳ ಕಷ್ಟ. ಕಲಬೆರಕೆ ಗೊಬ್ಬರಗಳನ್ನು ಕೊಟ್ಟು ಮೋಸ ಮಾಡುವುದು ತುಂಬಾ ಸಾಮಾನ್ಯವಾಗಿದೆ. ಅದರಲ್ಲೂ ಕೊಟ್ಟಿಗೆ ಗೊಬ್ಬರ ದುಬಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಸ್ವತಃ ಗೊಬ್ಬರ ತಯಾರಿಸಿಕೊಳ್ಳುವುದು ರೈತರಿಗೆ ಲಾಭಕರ. ಇಲ್ಲೊಬ್ಬ ರೈತ ಹಸಿರೆಲೆ ಗೊಬ್ಬರ ಬೆಳೆದಿದ್ದಾರೆ. ಇದರಿಂದ ಆಗುವ ಲಾಭಗಳೇನು? ಬನ್ನಿ ತಿಳಿಯೋಣ.
|
ಅಡಿಕೆ ಬೆಳೆಗಾರರಿಗೆ ಸಿಕ್ಕ ಒಂದೇ ಒಂದು ತರಬೇತಿ ಅವರ ತೋಟದ ಹಣೆಬರಹವನ್ನೇ ಬದಲಿಸಿತು
ದಾವಣಗೆರೆಯ ನಾಗರಕಟ್ಟೆ ಗ್ರಾಮದ ರೈತರಾದ ನಟರಾಜ್ ಮತ್ತು ಮಂಜಣ್ಣ ಕಳೆದ ಎರಡು ವರ್ಷಗಳಿಂದ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಕೆ ಆರ್ ಹುಲ್ಲುನಾಚೇಗೌಡರ ತರಬೇತಿಯ ನಂತರ ಸಾವಯವ ದಾರಿಯಲ್ಲಿ ಸಾಗಿದ್ದಾರೆ. ರಾಸಾಯನಿಕ ಗೊಬ್ಬರ ಬಳಸಿ ಕೃಷಿ ಮಾಡುತ್ತಿದ್ದಾಗ ಕಡಿಮೆ ಇದ್ದ ಇಳುವರಿ ಈಗ ಅಧಿಕವಾಗಿದ್ದು, ತೋಟ ರೋಗಗಳಿಂದಲೂ ಮುಕ್ತವಾಗಿವೆ. ಹಿಂದೆಲ್ಲಾ ರೋಗಗಳು ಬಂದು ಮರಗಳು ಸಾಯುತ್ತಿದ್ದವು. ಆದರೆ ಈಗ ರೋಗ ಬಂದರೂ ತಡೆದುಕೊಳ್ಳುವ ಶಕ್ತಿ ಹೆಚ್ಚಾಗಿದೆ ಎನ್ನುತ್ತಾರೆ ರೈತರು.
|
ಕೃಷಿಗೆ ಭೂಮಿ ಸಿದ್ಧತೆ ಮಾಡುವುದು ಹೇಗೆ? ಬರಿ ಉಳುಮೆ ಮಾಡಿದರೆ ಸಾಕಾ?
ಬಹುತೇಕ ರೈತರು ಉಳುಮೆ ಮಾಡುವುದನ್ನೇ ಭೂಮಿ ಸಿದ್ಧತೆ ಎಂದುಕೊಂಡಿದ್ದಾರೆ. ಆದರೆ ಇದು ಸಿದ್ಧತೆಯ ಒಂದು ಭಾಗ ಅಷ್ಟೇ. ಮಣ್ಣು ಫಲವತ್ತಾಗಿದ್ದರೆ ಮಾತ್ರ ಬೆಳೆ ಬೆಳೆಯಲು ಯೋಗ್ಯವಾಗಿರುತ್ತದೆ. ಸಾವಯವ ಇಂಗಾಲ ಹೆಚ್ಚಿದ್ದರೆ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ. ಇದನ್ನೆಲ್ಲಾ ಬೆಳೆ ಬೆಳೆಯುವ ಮೊದಲು ಉಳುಮೆ ಜತೆ ಮಾಡಿದರೆ ಮಣ್ಣು ಫಲವತ್ತಾಗುತ್ತದೆ. ಇದರ ಬಗ್ಗೆ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಕೆ.ಆರ್ ಹುಲ್ಲುನಾಚೇಗೌಡರು ವಿವರವಾಗಿ ತಿಳಿಸಿದ್ದಾರೆ.
|
ಬಾಳೆ ಬೆಳೆ ಬೆಳೆಯುವ ಮುನ್ನ ನಿಮ್ಮ ಕೃಷಿ ಭೂಮಿ ಹೀಗೆದೆಯಾ ಎಂದು ಪರೀಕ್ಷಿಸಿ
ಭಾರತದಲ್ಲಿ ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆ ಎಂದರೆ ಅದು ಬಾಳೆ. ಪ್ರತಿಯೊಬ್ಬರೂ ತಿನ್ನಲು ಬಯಸುವ ಬಾಳೆ ಹಣ್ಣಿನಲ್ಲಿ ಕೆಲ ಖನಿಜಾಂಶಗಳು, ಜೀವಸತ್ವಗಳ ಪ್ರಮಾಣ ಹೆಚ್ಚಿರುವುದರಿಂದ ಆರೋಗ್ಯಕ್ಕೆ ಇದು ತುಂಬಾ ಒಳಿತು. ಬಾಳೆ ಬೆಳೆಯನ್ನು ಬೆಳೆಯುವಾಗ ಕೃಷಿಕರು ಅದರದೆ ಆದ ಕೆಲವೊಂದು ನಿಯಮಗಳನ್ನು ಪಾಲಿಸಿ ಬೆಳೆದರೆ ಉತ್ತಮ ಇಳುವರಿಗೆ ಸಹಾಯಕ.
|
ದಾಳಿಂಬೆ ಬೆಳೆಯಲು ಈ ವಿಧಾನವನ್ನು ಅನುಸರಿಸಿದರೆ ಅಧಿಕ ಲಾಭ
ಮಹಾರಾಷ್ಟ್ರದಲ್ಲಿ ರೈತರೊಬ್ಬರು ಸಾವಯವ ಪದ್ಧತಿಯಲ್ಲಿ ದಾಳಿಂಬೆ ಬೆಳೆದಿದ್ದಾರೆ. ರಾಸಾಯನಿಕ ಕೃಷಿಗಿಂತ ಉತ್ತಮವಾದ ಫಸಲು ಬರುತ್ತಿದೆ. ಕೃಷಿ ಮಣ್ಣಿನಲ್ಲಿ ಬದಲಾವಣೆ ಕಂಡಿದ್ದಾರೆ.
|
ಹೀಗೆ ಮಾಡಿದರೆ 1 ಚದರಡಿಯಲ್ಲಿ ಏನಿಲ್ಲವೆಂದರೂ 15 ಎರೆಹುಳು ಸಿಗುತ್ತೆ..!
ಶಿರಾ: ಭಾರತದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಎಷ್ಟೋ ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನಾಧಾರವಾಗಿದೆ.ಅಡಿಕೆಗೆ ರೇಟು ಸಿಕ್ಕರೆ ಮಾತ್ರ ರೈತ ಲಕ್ಷ ಲಕ್ಷ ಹಣ ಎಣಿಸುವುದರಲ್ಲಿ ಅನುಮಾನವಿಲ್ಲ.ಆದರೆ ಅಡಿಕೆಯಲ್ಲಿ ಸೂಕ್ಷ್ಮವಾಗಿ ಗಮನಿಸಿ ಮಾಡ ಬೇಕಾದ ವೈಜ್ಞಾನಿಕ ಕೃಷಿ ಮಾಹಿತಿಗಳು ತುಂಬಾ ಇದೆ. ಅಡಿಕೆಯಲ್ಲಿ ಹೆಚ್ಚಾಗಿ ಬೆಳೆಗಳಿಗೆ ಆವರಿಸಿಕೊಳ್ಳುವ ಹರಳು ಉದುರುವ ಸಮಸ್ಯೆ, ಹಂಡೊಡಕದ ಸಮಸ್ಯೆ, ಅಣಬೆ ರೋಗದ ಸಮಸ್ಯೆ, ಸುಳಿರೋಗ, ಹೀಗೆ ಹಲವಾರು ತೊಂದರೆಗಳಿರುತ್ತವೆ.ಇವೆಲ್ಲಾ ರೋಗಗಳು ಬೆಳೆಗಳಿಗೆ ಆವರಿಸಿಕೊಳ್ಳಬಾರದು ಎಂದರೆ ರೈತ ತನ್ನ ಕೃಷಿಯಲ್ಲಿ ಬದಲಾವಣೆ ಕಾಣಬೇಕು.ಅದುವೇ ವೈಜ್ಞಾನಿಕ ಕೃಷಿ ಸಾವಯವ ಕೃಷಿ.
|
2 ವರ್ಷದ ಹಿಂದೆ ಕಣ್ಣಿಗೆ ಬಿದ್ದ ಆಪತ್ಬಾಂಧವ..!
ದಾವಣಗೆರೆ : 2 ವರ್ಷದ ಹಿಂದೆ ರಾಸಾಯನಿಕ ಬಳಸುತ್ತಿದ್ದ ಕೃಷಿಕ ಬಸವನಗೌಡರು, ಲಾಭಕ್ಕಿಂತ ನಷ್ಟಗಳನ್ನು ಅನುಭವಿಸಿದ್ದೆ ಜಾಸ್ತಿ. ಎರೆಹುಳುಗಳ ಮಾರಣಹೋಮ, ಸುಳಿರೋಗ, ದಿನೇ ದಿನೇ ಮಣ್ಣಿನ ಫಲವತ್ತತೆ ಹಾಳು. ಹೀಗೆ ಒಂದಲ್ಲ ಒಂದು ಸಮಸ್ಯೆಯಿಂದ ಇಡೀ ಅಡಿಕೆ ತೋಟವೇ ರೋಗಕ್ಕೆ ಸಿಲುಕಿತ್ತು.
|
ಬೀನ್ಸ್ ಬೆಳೆಯಲ್ಲಿ ಭರ್ಜರಿ ಇಳುವರಿಗೆ ಇಷ್ಟು ಮಾಡಿದರೆ ಸಾಕು
ಬೀನ್ಸ್ ಬೆಳೆಯಲ್ಲಿ ಲಾಭ ಕಾಣುತ್ತಿರವ ಕೃಷಿಕ ತಿಲಕ್ ಅವರು, ರಾಸಾಯನಿಕ ಕೃಷಿ ನಿಲ್ಲಿಸಿ ಸಾವಯವ ಕೃಷಿಗೆ ಕಾಲಿಟ್ಟರು. ಸಾವಯವ ಕೃಷಿಯಲ್ಲಿ ಇವರು ಆಯ್ಕೆ ಮಾಡಿಕೊಂಡ ಡಾ.ಸಾಯಿಲ್ ಜೈವಿಕ ಗೊಬ್ಬರಗಳು ರೈತನ ಕನಸನ್ನು ನನಸು ಮಾಡಿ, ಬೀನ್ಸ್ ಬೆಳೆಯಲ್ಲಿ ಲಾಭ ತಂದುಕೊಟ್ಟಿವೆ.
|
ರಸಗೊಬ್ಬರ vs ಸಾವಯವ ಗೊಬ್ಬರ. ಯಾವುದರ ಬಳಕೆಯಿಂದ ಕೃಷಿ ಖರ್ಚು ಕಡಿಮೆ?
ಕೃಷಿಯಲ್ಲಿ ಲಾಭಗಳಿಸಲು ಕೃಷಿಯನ್ನು ಉದ್ದಿಮೆಯಾಗಿ ನೋಡಬೇಕು. ಲಾಭ-ನಷ್ಟಗಳ ಲೆಕ್ಕಾಚಾರ ಹಾಕಬೇಕು. ಪ್ರತಿಯೊಬ್ಬ ರೈತನೂ ಉದ್ಯಮಿಯಾಗಬೇಕು. ರೈತ ತಾನು ಬೆಳೆದ ಬೆಳೆಯನ್ನು ಉತ್ತಮ ಬೆಲೆ ಸಿಗುವ ಕಡೆ ಮಾರಾಟ ಮಾಡಬೇಕು. ಯಾವುದೇ ಬಿಸ್ನೆಸ್ ನಲ್ಲಿ ಲಾಭ ಹೆಚ್ಚಿಸಲು ಖರ್ಚು ಕಡಿಮೆ ಮಾಡಬೇಕಾಗುತ್ತದೆ. ನಿರ್ವಹಣೆಯ ಅಧ್ಯಯನ ಮಾಡಬೇಕಾಗುತ್ತದೆ.
|
ಅಪೂರ್ವ ಸಹೋದರರ ಅಪೂರ್ವ ಕೃಷಿ ಸಾಧನೆಗೆ ಜನ ಫಿದಾ..!
ಮಂಡ್ಯ ತಾಲೂಕಿನ ಕೃಷಿಕರಾದ ನವೀನ್ ಹಾಗೂ ಕಿರಣ್ ಸಹೋದರರ ಕೃಷಿ ಜನ ಮೆಚ್ಚುವ ಹಾಗೆ ಇದೆ. ಕೃಷಿಯಲ್ಲಿ ಏನಾದರೂ ಸಾಧಿಸಬೇಕೆಂಬ ಇವರ ಛಲಕ್ಕೆ ಇಂದು ಸಾರ್ಥಕತೆ ಲಭಿಸಿದೆ. ಕಬ್ಬು ಬೆಳೆ ಈ ರೈತರ ಕನಸನ್ನು ನನಸು ಮಾಡಿದೆ.
|
ಕೂಳೆ ಕಬ್ಬು 9 ತಿಂಗಳಿಗೆ 23 ಗಣಿಕೆ
ರಬಕವಿ ಬನಹಟ್ಟಿ : ಬೆಳೆಯಲ್ಲಿ ಲಾಭ ಪಡೆಯಬೇಕೆಂದರೆ ಮೊದಲು ರೈತ ತಾನು ಯಾವ ಕೃಷಿ ಪದ್ಧತಿಯ ಮೇಲೆ ಅವಲಂಬಿತನಾಗಬೇಕೆಂಬುದನ್ನು ತಿಳಿಯಬೇಕು, ರೈತನ ಕೃಷಿ ಪದ್ಧತಿಯ ಮೇಲೆ ಲಾಭ ನಿರ್ಧಾರವಾಗಿರುತ್ತೆ, ವೈಜ್ಞಾನಿಕ ಕೃಷಿ ಪದ್ಧತಿ ಜತೆಯಲ್ಲಿ, ಸಾವಯವ ಕೃಷಿಯೊಂದಿಗೆ ಮುಂದುವರೆದಾಗ ನಿರೀಕ್ಷೆಗೂ ಮೀರಿ ಲಾಭ ಪಡೆಯಲು ಸಾಧ್ಯ.
|
ಕೃಷಿ ಭೂಮಿಗೆ ರಜೆ ಯಾವಾಗ..?
ನಾವು ದಿನಂಪ್ರತಿ ಕೆಲಸ ಮಾಡಿದಾಗ ನಮಗೆ ದೈಹಿಕವಾಗಿ, ಮಾನಸಿಕವಾಗಿ ವಿಶ್ರಾಮ ಬೇಕೆನಿಸುತ್ತದೆ. ಅದೇ ರೀತಿಯಾಗಿ ಒಂದು ದಿನವೂ ರಜೆ ಇಲ್ಲದೆ ಹಗಲು-ರಾತ್ರಿ ಕೆಲಸ ಮಾಡುವ ನಮ್ಮ ಭೂಮಿ ತಾಯಿಗೂ ರಜೆ ಎನ್ನುವುದು ಬೇಕಲ್ಲವೇ? ಹಾಗಿದ್ರೆ ನಮ್ಮ ಕೃಷಿ ಭೂಮಿಗೆ ರಜೆ ಹೇಗೆ ಕೊಡುವುದು? ರಜೆ ಕೊಟ್ರೆ ಏನು ಲಾಭ?
|
ಮುತ್ತು(Pearl) ಕೃಷಿ ಸಾಮಾನ್ಯ ರೈತರು ಮಾಡಬಹುದೇ? ಸರ್ಕಾರದಿಂದ ಸಿಗುವ ಸಹಾಯಧನವೆಷ್ಟು?
ಹಿಂದಿನ ಕಾಲದಲ್ಲಿ ರಾಜ-ರಾಣಿಯರು, ರಾಜಮನೆತನದವರು ಧರಿಸುತ್ತಿದ್ದ ಅತ್ಯಮೂಲ್ಯ ಆಭರಣಗಳಲ್ಲಿ ಮುತ್ತು ಕೂಡ ಒಂದು. ಶತಶತಮಾನಗಳಿಂದಲೂ ಮುತ್ತುಗಳು ಸಂಪತ್ತು, ರಾಜತ್ವ, ಶುದ್ಧತೆ, ಬುದ್ಧಿವಂತಿಕೆ, ತಾಳ್ಮೆ ಮತ್ತು ಶಾಂತಿಯೊಂದಿಗೆ ಸಂಬಂಧಿಸಿವೆ. ಕೇವಲ ಆಗರ್ಭ ಶ್ರೀಮಂತರು ಮಾತ್ರ ಧರಿಸುತ್ತಿದ್ದ ಮುತ್ತು ಇಂದು ಬಹಳ ಜನರಿಗೆ ಸಿಗುವಂತಾಗಿದೆ. ಇದಕ್ಕೆ ಕಾರಣ ಕೃತಕವಾಗಿ ಮುತ್ತು ಕೃಷಿ ಮಾಡುತ್ತಿರುವುದು.
|
ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚಲಿಲ್ಲ, ಅಡಿಕೆ ಮರಗಳ ಸಾವು ಹೆಚ್ಚಾಯಿತು. ಕಾರಣ?
ಹೆಚ್ಚು ಇಳುವರಿ ಪಡೆಯಬೇಕು ಎಂಬುದು ಎಲ್ಲಾ ರೈತರ ಆಶಯ. ಇದು ಸಾಮಾನ್ಯ ಬಯಕೆ ಮತ್ತು ಖಂಡಿತಾ ತಪ್ಪಲ್ಲ. ಆದರೆ, ಇದನ್ನು ಲಾಭವಾಗಿ ಬಳಸಿಕೊಂಡಿದ್ದು ಮಾತ್ರ ರಾಸಾಯನಿಕ ಗೊಬ್ಬರ ಕಂಪನಿಗಳು. ರೈತರಿಗೆ ಹೆಚ್ಚು ಇಳುವರಿ ಆಸೆ ತೋರಿಸಿ, ರಾಸಾಯನಿಕ ಕೃಷಿ ಪದ್ಧತಿಗೆ ಬರುವಂತೆ ಮಾಡಿದವು. ಮಣ್ಣಿನ ಮಹತ್ವ ತಿಳಿಯದೇ ಯಥೇಚ್ಛ ರಾಸಾಯನಿಕಗಳ ಬಳಕೆಯಿಂದ ಕೃಷಿ ಸುಲಭವಾಯಿತು ಎಂದುಕೊಂಡ ರೈತರಿಗೆ ರಾಸಾಯನಿಕಗಳ ಅಪಾಯ ಈಗ ತಿಳಿಯುತ್ತಿದೆ.
|
ಸಾವಯವದಲ್ಲಿ ಅಡಿಕೆ ಬೆಳೆಯುತ್ತಿರುವ ಈ ರೈತರ ಆದಾಯ 13 ಲಕ್ಷ..!
ತುಮಕೂರಿನ ಈ ರೈತರು ಯಾವುದೇ ರಾಸಾಯನಿಕ ಬಳಸದೇ, ಕಳೆಗಳನ್ನು ಕೀಳದೇ, ಉಳುಮೆ ಮಾಡದೇ, ಕಾರ್ಮಿಕರ ಸಹಾಯವಿಲ್ಲದೇ ವ್ಯವಸಾಯ ಮಾಡುತ್ತಿದ್ದಾರೆ. ಕೃಷಿಯಲ್ಲಿ ಖರ್ಚು ಕಡಿಮೆ ಮಾಡುವುದು ಹೇಗೆ? ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಸೆಡ್ಡು ಹೊಡೆದಿರುವ ಇವರ ಕೃಷಿಯಲ್ಲಿ ಲಾಭ ಹೆಚ್ಚು.
|
ಮೆಂತೆ ಸೊಪ್ಪು ಬೆಳೆಯಲು 1500 ರೂ. ಖರ್ಚು, ಆದಾಯ 60 ಸಾವಿರ..!
ಮೆಂತೆ ಸೊಪ್ಪು ಆಯುರ್ವೇದದಲ್ಲಿ ಮಹತ್ತರವಾದ ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೆ ವಿವಿಧ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಇದನ್ನು ವಿಶೇಷವಾಗಿ ಬಳಸುತ್ತಾರೆ. ಈ ಸಸ್ಯದ ಬೀಜವನ್ನು ಸುವಾಸನೆಗಾಗಿ ಹಾಗೂ ಎಲೆಗಳನ್ನು ವಿಶೇಷ ಪೋಷಣೆಗಳಿಗೆ ಉಪಯೋಗಿಸುತ್ತಾರೆ. ಪೌಷ್ಟಿಕಾಂಶದ ಆಗರವಾದ ಮೆಂತೆಯ ಉಪಯೋಗಗಳು ಹಲವಾರು. ಹೊಟ್ಟೆನೋವು, ಪಿತ್ತ, ಅಜೀರ್ಣ, ಗ್ಯಾಸ್ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತೆಯಿಂದ ಮನೆ ಔಷಧಿ ತಯಾರಿಸಬಹುದು.
|
ಅಡಿಕೆ ಸಿಪ್ಪೆಗೆ ಬೆಂಕಿ ಹಚ್ಚುತ್ತಿದ್ದೀರಾ? ಬೆಂಕಿ ಹಚ್ಚಿದ್ದು ಸಿಪ್ಪೆಗಲ್ಲ..!
ಕೃಷಿಯಲ್ಲಿ ಲಾಭ ಕಡಿಮೆಯಾಗುವುದಕ್ಕೆ ಒಂದು ಪ್ರಮುಖ ಕಾರಣ ಖರ್ಚು ಹೆಚ್ಚಾಗಿರುವುದು. ಉತ್ತಮ ಇಳುವರಿಗಾಗಿ ಬಳಸುವ ರಾಸಾಯನಿಕ ಗೊಬ್ಬರಗಳಿಗೆ ಹೆಚ್ಚು ಹಣ ಖರ್ಚು ಮಾಡುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಪಾರಾಗುವುದಕ್ಕೆ ರೈತರು ಸಾವಯವ ಮಾರ್ಗವನ್ನು ಅನುಸರಿಸುವ ಅಗತ್ಯತೆ ಹೆಚ್ಚಾಗಿದೆ. ಉಚಿತವಾಗಿ ಪೋಷಕಾಂಶಗಳನ್ನು ಒದಗಿಸಲು ಕೃಷಿ ತ್ಯಾಜ್ಯಗಳಾದ ಕಟಾವಿನ ನಂತರ ಮಿಕ್ಕ ಗಿಡಗಳು, ಸಿಪ್ಪೆಗಳನ್ನು ಕಳೆಸಿ ಮಣ್ಣಿಗೆ ನೀಡಬಹುದು. ಆದರೆ ನಮ್ಮ ರೈತರು ಇವುಗಳ ಮೌಲ್ಯ ಅರಿಯದೇ ಸುಟ್ಟುಹಾಕಿ ವಾಯು ಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆ. ಉಚಿತವಾಗಿ ಸಿಗುವ ಪೋಷಕಾಂಶಗಳ ಆಗರವನ್ನು ವ್ಯರ್ಥ ಮಾಡಿ ರಾಸಾಯನಿಕ ಗೊಬ್ಬರಗಳಿಗೆ ಖರ್ಚು ಮಾಡುತ್ತಿರುವುದು ದುರ್ದೈವದ ಸಂಗತಿ.
|
ಬೀಜೋಪಚಾರದ ಬಳಿಕ ಮುಖ್ಯವಾಗಿ ಈ ಕೆಲಸಗಳನ್ನು ಮಾಡಿ..!
ಡಾ.ಸಾಯಿಲ್ ಬೀಜೋಪಚಾರಗಳು ರೈತರಿಗೆ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯೋಕೆ, ರೋಗಮುಕ್ತ ಬೆಳೆ ಪಡೆಯೋಕೆ ಅನುಕೂಲವಾಗುತ್ತಿವೆ.ಆದರೆ ರೈತರು ಮಾಡುವ ತಪ್ಪುಗಳೇನೆಂದರೆ ಬೀಜೋಪಚಾರದ ಬಳಿಕ ಗೊಬ್ಬರದ ನಿರ್ವಹಣೆ ಮಾಡುವುದರಲ್ಲಿ ಎಡುವುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಬಳಸುವುದು ಅಥವಾ ಏನೂ ಗೊಬ್ಬರ ಬಳಸದೆ ಇರುವುದು, ಇವೆಲ್ಲ ಕೆಲವು ರೈತರ ಬೆಳೆಗಳ ಮೇಲೆ ದುಷ್ಪರಿನಾಮಗಳನ್ನು ಬೀರುತ್ತಿವೆ.ಗೊಬ್ಬರದ ನಿರ್ವಹಣೆ ಮಾಡಬೇಕು. ಆದರೆ ರಾಸಾಯನಿಕ ಗೊಬ್ಬರಗಳನ್ನು ಬಳಸಬಾರದು. ಸಾವಯವ ಗೊಬ್ಬರದಲ್ಲಿಯೇ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಮುಂದುವರೆಸಬೇಕು.
|
ಕೇವಲ 500 ರೂ. ಬದಲಿಸಿ ಬಿಡುತ್ತೆ ಕೃಷಿ ಜೀವನದ ದಿಕ್ಕು..!
ಬೀಜ ಬಿತ್ತನೆ ಅಥವಾ ಸಸಿ ನಾಟಿ ಮಾಡುವಾಗ ಸಾಮಾನ್ಯವಾಗಿ ತಳಗೊಬ್ಬರ ಅಂತ ರಾಸಾಯನಿಕ ಪ್ಯಾಕೆಟ್ ಗೊಬ್ಬರವನ್ನು ತಂದು ಹಾಕುತ್ತಾರೆ. ಆದರೆ ನಾಟಿ,ಬಿತ್ತನೆ ಮಾಡಿದ ಪ್ರತಿಯೊಂದು ಬೀಜಗಳೂ ಉತ್ತಮ ಮೊಳಕೆ ಒಡೆಯುವುದಿಲ್ಲ. ಸಸಿಗಳು ಸಾಯುವಂತಹದು ಅಥವಾ ಮಣ್ಣಿನಲ್ಲಿರುವ ರೋಗಾಣುಗಳಿಗೆ ತುತ್ತಾಗುವಂತಹದ್ದು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳಿಂದ ಬೆಳೆ ಬೆಳೆಯುವ ಮುನ್ನವೇ ನಾಶವಾಗುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ, ಬೆಲೆ ಬೆಳೆಯುವಾಗಲೇ ಅದನ್ನು ರಕ್ಷಣೆ ಮಾಡುವಂತಹ ರಕ್ಷಾಕವಚವನ್ನು ತೊಡಿಸಬೇಕು. ಆಗ ಮಾತ್ರ ಮೊಳಕೆಯೊಡೆಯುವ ಹಂತದಲ್ಲಿ ಬೆಳೆ ಕಾಪಾಡಲು ಸಾಧ್ಯ. ಇದಕ್ಕೆ ಸೂಕ್ತ ಮಾರ್ಗ ಎಂದರೆ ಬೀಜೋಪಚಾರ.
|
ಕಳೆಗೆ ಕಳೆನಾಶಕ ಬಳಸಿದರೆ, ಕೃಷಿ ಭೂಮಿಯ ಕಳೆ ನಾಶವಾಗುತ್ತೆ..!
ಕೆಲವೊಮ್ಮೆ ಬೆಳೆಗಿಂತ ಬೇಡದ ಕಳೆ ಗಿಡಗಳು ಹೆಚ್ಚು ಬೆಳೆದು, ಫಸಲು ಕೊಡುವ ಗಿಡದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ಇದರ ನಿವಾರಣೆಗಾಗಿ ಕನಿಷ್ಠ 10 ಅಥವಾ 15 ದಿನಕ್ಕೊಮ್ಮೆಯಾದರೂ ತೋಟವನ್ನು ಸ್ವಚ್ಛಗೊಳಿಸುತ್ತಿರಬೇಕು. ಕಳೆಗಳು ಗಿಡಗಳ ತೇವಾಂಶವನ್ನೆಲ್ಲಾ ಸಂಪೂರ್ಣವಾಗಿ ಹೀರಿಕೊಳ್ಳುವ ಕಾರಣ ಬೆಳೆ ಒಣಗಿ ಹೋಗುತ್ತವೆ. ಸಾವಯವ ವಿಧಾನದಲ್ಲೂ ಈ ಕಳೆಗಳನ್ನು ತೆಗೆಯಲು ಸಾಧ್ಯವಿದೆ. ತೋಟದಲ್ಲಿಯೇ ಒಣಗಿದ ತರಗೆಲೆಗಳನ್ನು ಗಿಡದ ಬುಡದ ಸುತ್ತ ಹಾಕಿದರೆ ಅನವಶ್ಯಕವಾದ ಕಳೆ ಬೆಳೆಯುವುದಿಲ್ಲ.
|
ರಾಜ್ಯ ಪ್ರಶಸ್ತಿ ಪುರಸ್ಕೃತ ರೈತನ 70-30 ಮಲ್ಚಿಂಗ್ ಪದ್ಧತಿ. ಇದರಿಂದ ಆದ ಲಾಭ?
ಚಾಮರಾನಗರ ಜಿಲ್ಲೆ ಹನೂರು ತಾಲ್ಲೂಕಿನ ಮಂಗಲ ಗ್ರಾಮದ ರೈತ ಜಮೀರ್ ಪಾಷಾ ರಾಜ್ಯ ಪ್ರಶಸ್ತಿ ಪುರಸ್ಕೃತ ರೈತರು. ಹಳೆ ಕಾಲದಲ್ಲಿ ರಾಸಾಯನಿಕ ಬಳಸದೇ ಕೃಷಿ ಮಾಡ್ತಿದ್ರು, ಈಗ ಹಂಗೆ ಮಾಡಕ್ಕಾಗಲ್ಲ ಎನ್ನುವವರಿಗೆ, ಕಡಿಮೆ ಖರ್ಚಿನ ಸಾವಯವ ಕೃಷಿಯಲ್ಲಿ ಲಾಭ ಗಳಿಸಬಹುದು ಎಂಬುದಕ್ಕೆ ಉದಾಹರಣೆ ಆಗಿದ್ದಾರೆ. ಇವರು ಹೊಸ ವಿಧಾನಗಳು, ತಂತ್ರಗಳನ್ನು ಬಳಸಿ ಕೃಷಿ ಮಾಡುತ್ತಾ ಯಶಸ್ಸು ಸಾಧಿಸುತ್ತಿದ್ದಾರೆ.
|
ಕೊಳೆರೋಗ, ರಸ ಸೋರುವಿಕೆ ಕಾಡುತ್ತಿದೆಯೇ? ಹಾಗಾದರೆ…!
ಮಾದೇನಹಳ್ಳಿ ನಾಗರಾಜ್ ಅವರು ಇತರ ರೈತರಂತೆ ರಾಸಾಯನಿಕ ಕೃಷಿಯಲ್ಲಿ ತೊಡಗಿಕೊಂಡು, ಅಡಿಕೆ ಮತ್ತು ತೆಂಗಿನ ತೋಟ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮರಗಳು ರೋಗಗಳಿಗೆ ತುತ್ತಾಗಿ ಸಾಯುವಂತಹ ಪರಿಸ್ಥಿತಿ ತಲುಪಿವೆ. 20 ತೆಂಗಿನ ಮರಗಳು ಸ್ಟೆಮ್ ಬ್ಲೀಡಿಂಗ್(ಕಾಂಡದಲ್ಲಿ ರಸ ಸೋರಿಕೆ) ಮತ್ತು ಕೊಳೆ ರೋಗಗಳಿಂದ ಸಾಯುತ್ತಿವೆ. ಎಷ್ಟೋ ಮರಗಳ ಸುಳಿ ಹೋಗಿವೆ.
|
|