Blog

ಗೊಣ್ಣೆ ಹುಳು/ ಬೇರು ಹುಳು ಮಣ್ಣಿನಲ್ಲಿ ಜೀವಿಸುವ ಒಂದು ಕೀಟ. ಇದೊಂದು ಲಾರ್ವಾ ಆಗಿದೆ. ಬೆಳೆಗಳ ಬೇರನ್ನು ತಿಂದು ಅವುಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇದು ಎಲ್ಲಾ ಬೆಳೆಗಳನ್ನು ಆಕ್ರಮಿಸುವುದರಿಂದ ರೈತರಿಗೆ ಇನ್ನಿಲ್ಲದಂತೆ ಬಾಧಿಸಿ, ನಷ್ಟ ತರುವ ಕೀಟವಾಗಿದೆ. ಹಾಗಾದರೆ ಗೊಣ್ಣೆ ಹುಳುವನ್ನು ನಿಯಂತ್ರಣ ಮಾಡುವುದು ಹೇಗೆ? ರಾಸಾಯನಿಕ ಬಳಸದೇ ಸಾವಯವ ಪದ್ಧತಿಯಲ್ಲಿ ನಿಯಂತ್ರಣ ಹೇಗೆ?

 

ಗೊಣ್ಣೆ ಹುಳು ಹೇಗೆ ಬರುತ್ತದೆ?

       ವಯಸ್ಕ ಕೀಟ ಮಣ್ಣಿನಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಗೊಣ್ಣೆ ಹುಳು ತೇವಾಂಶ ಹೆಚ್ಚಿರುವ ವಾತಾವರಣದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಉದಾಹರಣೆಗೆ ಸರಿಯಾಗಿ ಕಳೆತಿರದ ಗೊಬ್ಬರಗಳಲ್ಲಿ, ಹೆಚ್ಚು ತೇವ ಇರುವ ಮಣ್ಣಿನಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.

 

ಗೊಣ್ಣೆ ಹುಳುವಿನ ಜೀವನ ಚಕ್ರ

       ಗೊಣ್ಣೆ ಹುಳುವಿನ ಬೆಳವಣಿಗೆ ನಾಲ್ಕು ಹಂತಗಳಲ್ಲಿ ಇರುತ್ತದೆ. ಮೊಟ್ಟೆ, ಲಾರ್ವಾ, ಕೋಶಾವಸ್ಥೆ ಮತ್ತು ವಯಸ್ಕ ಕೀಟ. ವಯಸ್ಕ ಕೀಟ ಮೊಟ್ಟೆಗಳನ್ನು ತೇವಾಂಶ ಇರುವ ಮಣ್ಣಿನಲ್ಲಿ ಇಡುತ್ತದೆ. ಲಾರ್ವಾ ಹಂತದಲ್ಲಿ ಬೇರುಗಳು ಮತ್ತು ಬೆಳೆಗಳ ಮೃದು ಭಾಗಗಳನ್ನು ತಿನ್ನುತ್ತದೆ. ಬೆಳೆಗಳಿಗೆ ಹೆಚ್ಚು ಹಾನಿ ಮಾಡುವ ಹಂತ ಇದು. ಮೊಟ್ಟೆ ಮತ್ತು ಕೋಶಾವಸ್ಥೆಯಲ್ಲಿದ್ದಾಗ ಇದು ನಿಷ್ಕ್ರಿಯ ಸ್ಥಿತಿಯಲ್ಲಿರುತ್ತದೆ. ಈ ಹಂತದಲ್ಲಿ ಬೆಳೆಗಳಿಗೆ ಹಾನಿಯಾಗುವುದಿಲ್ಲ ಮತ್ತು ಇವುಗಳ ನಿಯಂತ್ರಣ ಸುಲಭ. ನಂತರ ಇದು ಪ್ರೌಢಾವಸ್ಥೆಗೆ ಬಂದು ಮತ್ತೆ ಮೊಟ್ಟೆ ಇಡುತ್ತದೆ.

 

ನಿಯಂತ್ರಣ ಹೇಗೆ?

       ಸಾಮಾನ್ಯವಾಗಿ ಗೊಣ್ಣೆಹುಳು ನಿಯಂತ್ರಿಸಲು ರೈತರು ರಾಸಾಯನಿಕ ಕೀಟನಾಶಕಗಳ ಮೊರೆ ಹೋಗುತ್ತಾರೆ. ಆದರೆ ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಉಪಕಾರಿ ಸೂಕ್ಷ್ಮ ಜೀವಿಗಳು ಮತ್ತು ಉಪಕಾರಿ ಕೀಟಗಳು ಕೂಡ ನಾಶಗೊಳ್ಳುತ್ತವೆ. ಇದರಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತದೆ. ಸಾವಯವ ಪದ್ಧತಿಯಲ್ಲಿ ನಿಯಂತ್ರಣ ಮಾಡುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಬಹದು. ಪ್ರೌಢಾವಸ್ಥೆಯ ಕೀಟಗಳನ್ನು sticky trap, light trap ಅಥವಾ pheromone trap ಬಳಸಿ ನಿಯಂತ್ರಿಸಬಹುದು. ಕೀಟಗಳ ಜೈವಿಕ ನಿಯಂತ್ರಣದ ಬಗ್ಗೆ ತಿಳಿಯಲು ಕೆಳಗಿನ ವೀಡಿಯೋ ನೋಡಿ.

 

https://www.youtube.com/watch?v=q-eILMgIC5Q&list=PLuN9VcGQAtK7oisEShNo44mvl_N89CcKy&index=2

 

       ಭೂಮಿ ಸಿದ್ಧತೆ ಮಾಡುವಾಗಲೇ ಮಣ್ಣಿಗೆ ಬೇವಿನ ಹಿಂಡಿ ಸೇರಿಸುವುದರಿಂದ ಮಣ್ಣಿನಲ್ಲಿರುವ ಮೊಟ್ಟೆ ಮತ್ತು ಕೋಶಾವಸ್ಥೆಯ ಹಂತದಲ್ಲೇ ಇವುಗಳನ್ನು ಕೊಲ್ಲಬಹುದು. ಮಣ್ಣಿನಲ್ಲಿರುವ ಬೇರುಹುಳುಗಳನ್ನು ನಿಯಂತ್ರಣ ಮಾಡಲು ಮೆಟಾರೈಜಿಯಮ್ ಎಂಬ ಶಿಲೀಂಧ್ರವನ್ನು ಬಳಸಿ ಕೊಲ್ಲಬಹುದು.

 

ಗೊಣ್ಣೆಹುಳು ನಿಯಂತ್ರಣಕ್ಕಾಗಿ ಮೆಟಾರೈಜಿಯಮ್ ಹೇಗೆ ಬಳಸುವುದು ಎಂಬುದನ್ನು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವೀಡಿಯೋ ನೋಡಿ.

 

https://www.youtube.com/watch?v=dqriHH7uqdQ&list=PLuN9VcGQAtK7oisEShNo44mvl_N89CcKy

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #soil  #organicspray  #soilerosion  #soilfertility  #integratedfarming  #rootgrub  #pest  #pestcontrol  #organicpestcontrol  #whitegrub  #rootgrubcontrol  #metarhizium  #fungus  



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies