Blog

ಎಲೆಕೋಸು ಒಂದು ಬಹುಮುಖ್ಯ ಬೆಳೆಯಾಗಿದ್ದು, ಅನೇಕ ಭಾಗಗಳಲ್ಲಿ ಪ್ರಧಾನವಾದ ಬೆಳೆಯಾಗಿದೆ. ಎಲೆಕೋಸು ಒಂದು ತಂಪಾದ ಋತುವಿನ ಬೆಳೆಯಾಗಿದ್ದು ಬೆಳೆಯಲು ಸುಲಭ ಮತ್ತು ನೆಟ್ಟ 90 ರಿಂದ 120 ದಿನಗಳಲ್ಲಿ ಕೊಯ್ಲು ಮಾಡಬಹುದು. ಎಲೆಕೋಸು ಯಾವಾಗಲು ಬೇಡಿಕೆಯಲ್ಲಿರುವ ಒಂದು ಬೆಳೆಯಾಗಿದೆ. ಹಾಗಾಗಿ ಮಾರುಕಟ್ಟೆ ಇರುವ ಕಡೆ ಬೆಳೆದರೆ ಉತ್ತಮ ಲಾಭ ಗಳಿಸಬಹದು. ಇದನ್ನು ಸಾವಯವ ಪದ್ಧತಿಯಲ್ಲಿ ಬೆಳೆದಿರುವ ರೈತ ತಮ್ಮ ಜಮೀನಿನಲ್ಲಿ ಹಲವು ಲಾಭಗಳನ್ನು ಪಡೆದಿದ್ದಾರೆ.

 

       ಬೆಂಗಳೂರಿನ ದೇವನಹಳ್ಳಿ ತಾಲ್ಲೂಕಿನ ರೈತ ನಾರಾಯಣಸ್ವಾಮಿ 30 ಗುಂಟೆಯಲ್ಲಿ ಎಲೆಕೋಸು ಬೆಳೆದಿದ್ದಾರೆ. ಮೊದಲೆಲ್ಲಾ ಹಿಪ್ಪು ನೇರಳೆ ಬೆಳೆಯುತ್ತಿದ್ದ ಇವರು ಈ ಬಾರಿ ಸಾವಯವ ಕೃಷಿಯಲ್ಲಿ ಎಲೆಕೋಸು ಬೆಳೆದಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಮಾಡಿದ್ದರಿಂದ ಮಣ್ಣಿನ ಗುಣಧರ್ಮಗಳು ಉತ್ತವಾಗಿವೆ ಎನ್ನುತ್ತಾರೆ ರೈತ. ಬಿತ್ತನೆಗೂ ಮೊದಲೇ ಡಾ.ಸಾಯಿಲ್ ಬೀಜೋಪಚಾರ್ ಬಳಸಿ ಬೀಜೋಪಚಾರ ಮಾಡಿದ್ದರ ಪರಿಣಾಮವಾಗಿ ಉತ್ತಮವಾಗಿ ಬೆಳೆಗಳು ಬೆಳೆದಿವೆ. ಡಾ.ಸಾಯಿಲ್ ಬಳಕೆಯಿಂದ ಮಣ್ಣು ಮೃದುವಾಗಿ, ಎರೆಹುಳುಗಳು ಪ್ರಾರಂಭವಾಗಿವೆ. ರಾಸಾಯನಿಕ ಗೊಬ್ಬರ ಬಳಸುವಾಗ ಮಣ್ಣು ಗಟ್ಟಿಯಾಗಿ ಎರೆಹುಳು ಇಲ್ಲವಾಗಿತ್ತು. ಈಗ ಸಾವಯವ ಕೃಷಿಯಿಂದಾಗಿ ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮಾಣು ಜೀವಿಗಳು ವೃದ್ಧಿಯಾಗುತ್ತಿವೆ. ಇದರ ಫಲವಾಗಿಯೇ ಮಣ್ಣು ಮೃದುಗೊಂಡಿದೆ.

       ಜೈವಿಕ ಗೊಬ್ಬರಗಳ ಬಳಕೆ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ವೃದ್ಧಿಯಾಗಲು ಸಹಾಯ ಮಾಡುತ್ತದೆ. ಇದು ತ್ಯಾಜ್ಯಗಳನ್ನು ಕಳಿಯುವಂತೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಿ ಬೆಳೆಗಳಿಗೆ ಪೋಷಕಾಂಶ ಪೂರೈಕೆ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ರೈತರು ಉತ್ತಮ ಇಳುವರಿ ಪಡೆಯಬಹುದು.

 

       ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಮಾಡಿರುವ ನಾರಾಯಣಸ್ವಾಮಿ ಅವರೇ ಹೇಳುವಂತೆ 30% ನಷ್ಟು ಖರ್ಚು ಉಳಿತಾಯವಾಗಿದೆ. ಸಾವಯವ ಕೃಷಿಯಿಂದ ಕೃಷಿ ಸರಳವಾಗಿದೆ. ಕೋಸಿನ ಗಾತ್ರ ಹೆಚ್ಚಾಗಿದೆ ಮತ್ತು ರೋಗಗಳು ಕಡಿಮೆಯಾಗಿವೆ. ಈ ಬೆಳೆಯಿಂದ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ ರೈತ ನಾರಾಯಣಸ್ವಾಮಿ.

 

ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=bf14nSA0Eg4&list=PLuN9VcGQAtK43tNyT4gEBjhv9WyVANRxl

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #soil  #organicspray  #soilerosion  #soilfertility  #cabbage  #organiccabbage  



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies