ಮುತ್ತು ಕೃಷಿ ಅಧಿಕ ಲಾಭದಾಯಕ. ಆದರೆ?
ಸಿಹಿ ನೀರಿನ ಕಪ್ಪೆ ಚಿಪ್ಪುಗಳಲ್ಲಿ ಮುತ್ತು ಕೃಷಿಯನ್ನು ಯಶಸ್ವಿ ಕೃಷಿ ಎಂದು ಭಾವಿಸಿರುವ ಸರಕಾರ, ಸಹಾಯಧನದ ಮೂಲಕ ಪ್ರೋತ್ಸಾಹವನ್ನು ಸಹ ನೀಡುತ್ತಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಸಹಾಯಧನದಡಿ ಸಿಹಿ ನೀರಿನ ಕಪ್ಪೆ ಚಿಪ್ಪುಗಳಲ್ಲಿ ಮುತ್ತು ಕೃಷಿಯನ್ನು ಸರ್ಕಾರ, ಮೀನುಗಾರಿಕೆ ಇಲಾಖೆ ಮೂಲಕ 2012-13ನೇ ಸಾಲಿನಲ್ಲಿ ಜಾರಿಗೊಳಿಸಿದೆ. ಮುತ್ತು ಕೃಷಿ ಆಯ್ದ ಜನರಿಗೆ ಮಾತ್ರ ಗೊತ್ತಾಗಿದ್ದು ನಿರೀಕ್ಷಿತ ಯಶಸು ಪಡೆದಿಲ್ಲ. ಆಭರಣಗಳಾಗಿ ಮಾತ್ರ ಮುತ್ತು ಬಳಕೆ ಆಗದೆ ಕಾಂತಿವರ್ಧಕ, ಔಷಧ, ಬಣ್ಣ ತಯಾರಿಕೆಗೂ ಬಳಸುತ್ತಿರುವುದರಿಂದ ಬೇಡಿಕೆ ಹೆಚ್ಚಿದೆ.
|
ಅಡಿಕೆ ತೋಟದಲ್ಲಿ ಹರಳು ಉದುರುವಿಕೆ ಸರ್ವೇ ಸಾಮಾನ್ಯ, ಆದರೆ ಇವರ ತೋಟದಲ್ಲಿ ಗೊನೆಗಳೇ ಉದುರುತ್ತೆ.!
ಸಾವಯವದಲ್ಲಿ ಕೃಷಿ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂಬುದಕ್ಕೆ ಸಾಕ್ಷಿ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಗೋಪಾರದೇವಳ್ಳಿ ಗ್ರಾಮದ ರೈತ ಬಾರೇಗೌಡ ಅವರು. ಅದರಲ್ಲೂ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಮಾಡಿದರೆ ಇನ್ನೂ ಉತ್ತಮವಾದ ಇಳುವರಿ ಮತ್ತು ರೋಗಗಳ ವಿರುದ್ಧ ಹೋರಾಡುವ ಕ್ಷಮತೆ ಹೆಚ್ಚಿಸಲು ಸಹಾಯ ಮಾಡುತ್ತದೆ.
|
ಇಳುವರಿ ಹೆಚ್ಚಾಗಲು ಏನು ಮಾಡಬೇಕು..?
ಯಾವುದೇ ಬೆಳೆಯಾಗಲಿ ಮಣ್ಣು ಫಲವತ್ತಾಗಿದ್ದರೆ, ಫಸಲು ಉತ್ತಮವಾಗಿ ಬರುವುದರಲ್ಲಿ ಸಂದೇಹವೇ ಇಲ್ಲ. ಕೃಷಿ ಮಾಡುವವರು ಮಣ್ಣಿನ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಮಣ್ಣಿನ ಮತ್ತು ಕಳೆಗಳ ನಿರ್ವಹಣೆ ಸರಿಯಾಗಿ ಮಾಡುವುದು ಮುಖ್ಯ. ಕೃಷಿ ಮಣ್ಣು ಹಾಳಾಗುವುದಕ್ಕೆ ಕಾರಣ ರಾಸಾಯನಿಕಗಳ ಬಳಕೆ. ಇವು ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ನಾಶಮಾಡುತ್ತವೆ. ಸಾವಯವ ಕೃಷಿ ಇದಕ್ಕೆ ಪರಿಹಾರವಾಗಿದೆ.
|
ಯಾವುದೇ ಉಪಕರಣ ಇಲ್ಲದೇ, ನೀವೇ ಮಣ್ಣು ಪರೀಕ್ಷೆ ಮಾಡಿ..!
ಮಣ್ಣು ಸಕಲ ಸಂಪತ್ತುಗಳ ಆಗರ ಎನ್ನುತ್ತಾರೆ ಹಿರಿಯರು. ಮಣ್ಣು ಫಲವತ್ತಾದರೆ ರೈತ ಬೆಳೆಯುವ ಫಸಲು ಆರೋಗ್ಯಕರವಾಗಿರುತ್ತದೆ. ಕೃಷಿಯಲ್ಲಿ ಮಣ್ಣಿನ ಮಹತ್ವ ಮರೆತಿರುವ ಇಂದಿನ ರೈತರು ಬೆಳೆಗಳಿಗೆ ಕೃತಕವಾಗಿ ಪೋಷಕಾಂಶಗಳನ್ನು ಪೂರೈಸಲು ಹೋಗಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಇದರ ಲಾಭ ಪಡೆದುಕೊಳ್ಳುತ್ತಿರುವುದು ರಾಸಾಯನಿಕ ಗೊಬ್ಬರ ತಯಾರಿಕ ಕಂಪನಿಗಳು. ಮಣ್ಣಿನ ಫಲವತ್ತತೆ, ಪೋಷಕಾಂಶಗಳ ಪ್ರಮಾಣ ತಿಳಿಯಲು ಮಣ್ಣು ಪರೀಕ್ಷೆ ಮಾಡಿಸುವುದು ವೈಜ್ಞಾನಿಕ ಪದ್ಧತಿ. ಆದರೆ ಇದರ ಜೊತೆ ರೈತರು ತಮ್ಮ ಕೃಷಿ ಭೂಮಿಯ ಮಣ್ಣನ್ನು ಸ್ವತಃ ತಾವೇ ಪರೀಕ್ಷಿಸಿಕೊಳ್ಳಬಹುದು. ಮಣ್ಣಿನ ಗುಣಧರ್ಮಗಳನ್ನು ತಿಳಿದರೆ ಕೃಷಿ ಸರಳವಾಗುತ್ತದೆ.
|
ಲಾಭಕರ ಕರಿ ಮೆಣಸು ಬೆಳೆಯುವುದು ಹೇಗೆ?
ಭಾರತೀಯ ಉಪಖಂಡವು ಮಸಾಲೆಗಳ ನಾಡು ಎಂದೇ ಪ್ರಸಿದ್ಧವಾಗಿದೆ. ಅನೇಕ ಮಸಾಲೆ ಪದಾರ್ಥಗಳು ಭಾರತದಲ್ಲಿ ಉತ್ಪಾದನೆಯಾಗುತ್ತವೆ. ಅದರಲ್ಲಿ ಕರಿ ಮೆಣಸು ಕೂಡ ಒಂದು. ಇದು ಒಂದು ಬಹುವಾರ್ಷಿಕ ಬೆಳೆಯಾಗಿದೆ. ಭಾರತದ ಮಲಬಾರ್ ಕರಾವಳಿಗೆ ಸ್ಥಳೀಯವಾಗಿದೆ ಮತ್ತು ಇದು ಮಾನವನಿಗೆ ತಿಳಿದಿರುವ ಪ್ರಾಚೀನ ಮಸಾಲೆಗಳಲ್ಲಿ ಒಂದಾಗಿದೆ. ಇದನ್ನು ಪ್ರಪಂಚದಾದ್ಯಂತ ಮಸಾಲೆಯಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಭಾರತದಲ್ಲಿ ಕಾಳು ಮೆಣಸಿನ ಪ್ರಮುಖ ಉತ್ಪಾದಕರು ದಕ್ಷಿಣದ ರಾಜ್ಯಗಳು - ಕರ್ನಾಟಕ, ಕೇರಳ ಮತ್ತು ತಮಿಳುನಾಡು. ಸ್ಥಳೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಣಸಿಗೆ ತುಂಬಾ ಬೇಡಿಕೆ ಇದೆ. ಹಾಗಾಗಿ ಇದೊಂದು ಉತ್ತಮ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿದೆ.
|
ಪ್ರತಿಯೊಬ್ಬ ರೈತರೂ ಇದನ್ನು ಕಡ್ಡಾಯವಾಗಿ ಓದಲೇ ಬೇಕು…! ಇಲ್ಲವಾದರೆ..?
ದಾವಣಗೆರೆ ಜಿಲ್ಲೆಯ ಈ ರೈತರು ತಮ್ಮ ಅಡಿಕೆ ತೋಟದಲ್ಲಿ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾದ ಮಹದೇವಪ್ಪ ಅವರಿಂದ ಸಾವಯವ ಕೃಷಿ ಶಿಕ್ಷಣ ಪಡೆದರು. ಸಾವಯವ ಕೃಷಿಯಿಂದ ಆಗುವ ಲಾಭಗಳ ಬಗ್ಗೆ ರೈತ ಸುಭಾಷ್ ಗೌಡರವರು ಮಾತನಾಡಿ ಇತರ ರೈತರಿಗೆ ತಿಳುವಳಿಕೆ ನೀಡಿದರು.
|
ಸಾವಯವ ಅಡಿಕೆ ತೋಟದಲ್ಲಿ ಗುಂಪು ಬಾಳೆ: ಏನು ಲಾಭ?
ರಾಸಾಯನಿಕ ಕೃಷಿಯಲ್ಲಿ ಭೂಮಿ ಹಾಳಾಗುತ್ತದೆ. ಆದರೆ ಸಾವಯವ ಕೃಷಿಯಲ್ಲಿ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬಹುದು ಮತ್ತು ಆದಾಯ ಹೆಚ್ಚಿಸಿಕೊಳ್ಳಲು ಸುಲಭ. ಸಾವಯವ ಕೃಷಿಯ ಮತ್ತೊಂದು ಉಪಯೋಗ ಎಂದರೆ ಇದು ಸಮಗ್ರ ಕೃಷಿಯನ್ನು ಉತ್ತೇಜಿಸುತ್ತದೆ. ರಾಸಾಯನಿಕ ಕೃಷಿ ಏಕಬೆಳೆ ಪದ್ಧತಿಯನ್ನು ಅವಲಂಬಿಸಿರುವುದರಿಂದ ರೈತರ ಆದಾಯ ಹವಾಮಾನ ಮತ್ತು ಬೇಡಿಕೆಗೆ ಅವಲಂಬಿತವಾಗಿ ನಿರಂತರ ಆದಾಯ ಇಲ್ಲವಾಗಿದೆ. ಸಾವಯವ ಕೃಷಿಯನ್ನು ಅಳವಡಿಸಿಕೊಂಡು ವಿವಿಧ ರೀತಿಯಲ್ಲಿ ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ.
|
ಉಪ ಕಸುಬು ಏಕೆ ಬೇಕು? ಏನೆಲ್ಲಾ ಲಾಭಗಳು? ಸಾವಯವ ಕೃಷಿ ತಜ್ಞರ ಅಮೂಲ್ಯ ಮಾಹಿತಿ
ಬಹುತೇಕ ರೈತರು ತಮ್ಮ ಕೃಷಿ ಆದಾಯದಿಂದ ಸಂತೃಪ್ತರಿಲ್ಲ. ಸರಿಯಾದ ಬೆಲೆ ಸಿಗದ ಕಾರಣ ರೈತರು ಪರದಾಡುವ ಪರಿಸ್ಥಿತಿ ಏರ್ಪಾಡಾಗಿದೆ. ರೈತರು ತಮ್ಮ ಬಳಿ ಇರುವ ಜಮೀನಿನಲ್ಲೇ ಆದಾಯ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು? ಸಮಗ್ರ ಕೃಷಿ ಅಳವಡಿಸಿಕೊಳ್ಳುವುದರಿಂದ ಏನು ಲಾಭ? ಉಪಕಸುಬಿನಿಂದ ಲಾಭ ಹೇಗೆ ಮಾಡಬಹುದು? ನೋಡೋಣ ಬನ್ನಿ.
|
ಟೊಮ್ಯಾಟೋಗೆ ಬೀಜೋಪಚಾರ ಮಾಡಿದ ರೈತನ ಅದ್ಭುತ ಅನುಭವ
ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ನಾವು ಆರಿಸುವ ಬೀಜ ಮತ್ತು ಅದರ ಆರೋಗ್ಯ ತುಂಬಾ ಮುಖ್ಯ. ಬೀಜಗಳಿಗೆ ರಕ್ಷಕ ಎನಿಸಿಕೊಳ್ಳುವ ಬೀಜೋಪಚಾರ ಮಾಡುವುದರಿಂದ ಬೀಜಗಳ ಮೊಳಕೆ ಪ್ರಮಾಣ ಹೆಚ್ಚಿಸಬಹುದು. ಸಾವಯವ ಪದ್ಧತಿಯಲ್ಲಿ ಬೀಜೋಪಚಾರ ಮಾಡುವುದರಿಂದ ಬಿಳಿಬೇರುಗಳ ಬೆಳವಣಿಗೆ ಉತ್ತಮವಾಗುತ್ತದೆ. ರೋಗಬಾಧೆಯ ವಿರುದ್ಧ ರಕ್ಷಣೆ ನೀಡಿ, ಸಸಿಗಳಿಗೆ ಪೋಷಕಾಂಶ ದೊರೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
|
ಇಲ್ಲಿ ಹಲವಾರು ಕೃಷಿಕರು ಸಾವಿರ, 10 ಸಾವಿರ ಎಕರೆಯಲ್ಲಿ ಕೃಷಿ ಮಾಡುತ್ತಿದ್ದಾರೆ
ಕರ್ನಾಟಕದ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರು ಈಗ ವಿದೇಶಗಳಲ್ಲೂ ಸಾವಯವ ಕಂಪನ್ನು ಪಸರಿಸುತ್ತಿದ್ದಾರೆ. ರಾಜ್ಯದಾದ್ಯಂತ ಡಾ.ಸಾಯಿಲ್ ಜೈವಿಕ ಗೊಬ್ಬರಗಳ ಮುಖಾಂತರ ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಲು ಮಾರ್ಗ ತೋರಿದ ಡಾ.ಕೆ.ಆರ್.ಹುಲ್ಲುನಾಚೆಗೌಡರು, ಈಗ ಕೀನ್ಯಾದಲ್ಲಿನ ತೋಟವೊಂದಕ್ಕೆ ಭೇಟಿ ನೀಡಿ, ಅಲ್ಲಿರುವ ಮಣ್ಣು, ಕೃಷಿ ಪದ್ಧತಿ ಬಗ್ಗೆ ಮಾಹಿತಿ ನೀಡಿದ್ದಾರೆ.
|
ಒಂದು ಗುಲಾಬಿ ತೋಟದ ದುರಂತ ಕತೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿರುವ ಹೂ ಗುಲಾಬಿ. ವಿವಿಧ ಬಣ್ಣಗಳ ಗುಲಾಬಿಯನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಸುಗಂಧ ದ್ರವ್ಯ ತಯಾರಿಕೆ, ಖಾದ್ಯ, ಅಲಂಕಾರ ಹೀಗೆ ನಾನಾ ರೀತಿಯಲ್ಲಿ ಬಳಸಲ್ಪಡುತ್ತದೆ. ಇಂಥಾ ವಿಶೇಷತೆ ಹೊಂದಿರುವ ಗುಲಾಬಿಯನ್ನು ಬೆಳೆಯುವುದರಿಂದ ಉತ್ತಮ ಲಾಭಗಳಿಸಬಹುದು. ಆದರೆ ಇಲ್ಲೊಂದು ಗುಲಾಬಿ ತೋಟದಲ್ಲಿ ಮಾಡಿದ ತಪ್ಪುಗಳಿಂದ ಇಡೀ ತೋಟವೇ ಹಾಳಾಗಿದೆ. ಈ ರೈತರು ಮಾಡಿರುವ ತಪ್ಪೇನು? ಇದಕ್ಕೆ ಮೈಕ್ರೋಬಿ ತಂಡ ನೀಡಿದ ಸಲಹೆಗಳೇನು? ನೋಡೋಣ ಬನ್ನಿ…
|
ನಿಮ್ಮ ಬೆಳೆಗಳಿಗೆ ಫಾಸ್ಫರಸ್, ಪೊಟ್ಯಾಶ್ ಬೇಕೆ?
ಚಾಮರಾಜನಗರ ಜಿಲ್ಲೆ ಮತ್ತು ತಾಲ್ಲೂಕಿನ ದೇವನಹಳ್ಳಿಯ ರೈತ ಮಧು ಅವರು ಡಾ.ಸಾಯಿಲ್ ಸ್ಲರಿ ಬಳಸಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಪೊಟ್ಯಾಶ್ ಮತ್ತು ಫಾಸ್ಫರಸ್ ಎನ್ರಿಚರ್ ಸ್ಲರಿಗಳನ್ನು ಬಳಸಿ ಬಾಳೆ, ಸೌತೆಕಾಯಿ ಹೀಗೆ ಇತರ ಬೆಳೆಗಳಿಗೆ ಬಳಸುತ್ತಾ ಬಂದಿದ್ದಾರೆ.
|
ನೀವೂ ರಾಸಾಯನಿಕ ಗೊಬ್ಬರ ಬಳಸುತ್ತಿದ್ದೀರಾ?
ಆಹಾರ ಭದ್ರತೆ ಹೆಚ್ಚಿಸಲು 1960ರ ದಶಕದಲ್ಲಿ ಬಂದ ಹಸಿರು ಕ್ರಾಂತಿಯಿಂದ ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಯಿತು. ಆದರೆ ಇಂದು ರಾಸಾಯನಿಕಗಳ ಬಳಕೆಯಿಂದ ಮಣ್ಣು ಹಾಳಾಗುತ್ತಿರುವುದಲ್ಲದೇ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಹಾಗಾಗಿ ಕೃಷಿ ಇಂದು ಮಾಲಿನ್ಯಕ್ಕೆ ಕಾರಣವಾಗಿರುವ ಬಹುದೊಡ್ಡ ಕಾರಣಗಳಲ್ಲಿ ಒಂದಾಗಿದೆ.
|
ಕೀನ್ಯಾದ ಬರಗಾಲದಲ್ಲಿ 2 ಸಾವಿರ ಗೋವುಗಳನ್ನು ಪೋಷಿಸಿದ ಕರ್ನಾಟಕದ ಕರ್ಣ
ಕಳೆದ 2 ವರ್ಷಗಳಿಂದ ಪೂರ್ವ ಆಫ್ರಿಕಾದಲ್ಲಿ ಬರಗಾಲ ಮನೆಮಾಡಿತ್ತು. ಇದರಲ್ಲಿ ಕೀನ್ಯಾ ದೇಶವೂ ಒಂದು. ಸತತ ನಾಲ್ಕು ಋತುಗಳು ಸಾಕಷ್ಟು ಮಳೆಯಾಗದ ಕಾರಣ 1980 ರ ದಶಕದ ನಂತರದ ಅತ್ಯಂತ ಕೆಟ್ಟ ಶುಷ್ಕ ಪರಿಸ್ಥಿತಿ ಕೀನ್ಯಾದಲ್ಲಿ ಸೃಷ್ಟಿಯಾಗಿತ್ತು. ನದಿಗಳು ಮತ್ತು ಬಾವಿಗಳು ಬತ್ತಿಹೋಗಿ, ಹುಲ್ಲುಗಾವಲುಗಳು ಧೂಳಾಗಿ ಮಾರ್ಪಟ್ಟಿತ್ತು. ಇದರಿಂದ ಕೀನ್ಯಾದಲ್ಲಿ 15 ಲಕ್ಷಕ್ಕೂ ಹೆಚ್ಚು ಜಾನುವಾರುಗಳ ಸಾವಿಗೀಡಾಗಿದ್ದವು. ಇಂತಹ ಪರಿಸ್ಥಿತಿಯಲ್ಲಿ ರೈತರ ಗೋಳು ಕೇಳಲಾಗದು. ಕೃಷಿ ಮಾಡಲಾಗದೇ ತಮಗೂ ಆಹಾರ ಇಲ್ಲದೇ, ತಾವು ಸಾಕುವ ದನಗಳಿಗೂ ಆಹಾರವಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಸಿಗುವ ಸಣ್ಣ ಸಹಾಯವೂ ದೊಡ್ಡ ಪ್ರಭಾವ ಬೀರುತ್ತದೆ. ಕರ್ನಾಟಕದ ವ್ಯಕ್ತಿಯೊಬ್ಬರು ಕೀನ್ಯಾದ ಹಸುಗಳಿಗೆ ಮೇವು ಒದಗಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ.
|
ಬೀಜೋಪಚಾರದಿಂದ 80 ಚೀಲ ಶೇಂಗಾ ಬಂತು..!
ಡಾ.ಸಾಯಿಲ್ ಬೀಜೋಪಚಾರಗಳಿಂದ ಬೆಳೆದ ಬೆಳೆಗಳಲ್ಲಿ ಲಾಸು ಎಂಬುದೇ ಇಲ್ಲ. ಬೆಳೆಗೆ ತಕ್ಕಂತೆ ರೈಜೋಬಿಯಂ, ಅಜೋಸ್ಪಿರಿಲಂ, ಅಜಟೋಬ್ಯಾಕ್ಟರ್ ಬೀಜೋಪಚಾರಗಳು ಡಾ.ಸಾಯಿಲ್ ನಲ್ಲಿ ಲಭ್ಯವಿದ್ದು, ಪ್ರತಿ ಬೆಳೆಯಲ್ಲಿಯೂ ಉತ್ಕೃಷ್ಟವಾಗಿ ಇಳುವರಿ ಬರಲು ಸಹಾಯಕವಾಗಿದೆ.
|
ಬೇವಿನ ಹಿಂಡಿ ಕೃಷಿ ಭೂಮಿಗೆ ಎಷ್ಟು ಲಾಭಕರ..?
ಬೇವಿನ ಹಿಂಡಿ ಕೃಷಿಕರಿಗೆ ವರದಾನ. ಕೃಷಿ ಭೂಮಿಗೆ ಬೇವಿನ ಹಿಂಡಿ ನೀಡುವುದರಿಂದ ಸಾಕಷ್ಟು ಲಾಭಗಳು ದೊರೆಯುತ್ತವೆ. ಕೃಷಿ ವಿಜ್ಞಾನಿಗಳು ಬೇವಿನ ಹಿಂಡಿಯನ್ನು ಬಳಸುವಂತೆ ಹೆಚ್ಚಾಗಿ ರೈತರಿಗೆ ಶಿಫಾರಸ್ಸು ಮಾಡ್ತಾರೆ. ಕಾರಣ?
|
ಹೆಚ್ಚು ಕಬ್ಬಿನ ಇಳುವರಿಗಾಗಿ ಪಂಚಸೂತ್ರಗಳು..!
ಕಬ್ಬು ಬೆಳೆಯಲ್ಲಿ 100 ಟನ್ ಇಳುವರಿ ಪಡೆಯೋಕೆ ಸಾಧ್ಯ ಇದೆಯಾ..? ಇದೇ ಎನ್ನುವುದಾದರೆ ಏನೆಲ್ಲಾ ಸೂತ್ರಗಳನ್ನು ಬಳಸಬೇಕೆಂಬ ಗೊಂದಲದಲ್ಲಿ ರೈತರು ಇರ್ತಾರೆ. ಇವುಗಳ ಬಗ್ಗೆ ಪ್ರಮುಖ ಮಾಹಿತಿ ಇಲ್ಲಿದೆ.
|
ಹರಳು ಉದುರುವಿಕೆ, ಹಿಂಗಾರ ಒಣಗುವುದು, ಹಿಡಿಮುಂಡಿಗೆ ರೋಗ, ಸುಳಿ ರೋಗಗಳಿಗೆ ಬ್ರೇಕ್
ಅಡಿಕೆ ತೋಟದಲ್ಲಿ ರೋಗಗಳು ಕಡಿಮೆಯಾಗಿ ಹೆಚ್ಚು ಇಳುವರಿ ಪಡೆಯಬೇಕು, ಉತ್ತಮ ಆದಾಯ ಗಳಿಸಬೇಕು ಎಂಬುದು ಎಲ್ಲಾ ಅಡಿಕೆ ಬೆಳೆಗಾರರ ಆಶಯ. ಆದರೆ ನಮ್ಮ ರೈತರು ರಾಸಾಯನಿಕಗಳ ಮೊರೆ ಹೋಗಿ ತೋಟಗಳನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ತಾತ್ಕಾಲಿಕ ಇಳುವರಿಗಾಗಿ ಮಣ್ಣನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಶಿವಮೊಗ್ಗದ ಈ ರೈತರು ಇದನ್ನು ಅರಿತುಕೊಂಡು ಸಾವಯವದಲ್ಲೇ ಉತ್ತಮವಾಗಿ ಅಡಿಕೆ ತೋಟ ನಿರ್ವಹಣೆ ಮಾಡುತ್ತಿದ್ದಾರೆ.
|
ತಿಂಗಳಾದ್ರೂ ಹಾಳಾಗದ ಟೊಮ್ಯಾಟೋ ಬೆಳೆದಿದ್ದು ಹೇಗೆ ಈ ರೈತ..?
ಸಾವಯವ ಕೃಷಿ ಪದ್ಧತಿಯ ಬಗ್ಗೆ ಅನುಮಾನ ಪಡುವ ರೈತರ ಮಧ್ಯೆ ಇಲ್ಲೊಬ್ಬ ರೈತ 10 ವರ್ಷದಿಂದ ಸಾವಯವ ಕೃಷಿ ಪದ್ದತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೈವಿಕ ಗೊಬ್ಬರ ಬಳಸಿ ಸಾವಯವ ಕೃಷಿಯಲ್ಲೇ ಉತ್ತಮ ಇಳುವರಿ ಪಡೆಯಬಹುದು ಎಂಬುದಕ್ಕೆ ಇವರು ಪ್ರತ್ಯಕ್ಷ ಸಾಕ್ಷಿ.
|
ಕಬ್ಬು, ಶೇಂಗಾ, ಜೋಳ… ಈ ಕೃಷಿಕ ಏನು ಬೆಳೆದರೂ ಸೂಪರ್
ಕೃಷಿಯಲ್ಲಿ ಮೊದಲ ಪ್ರಯತ್ನ. ಸಾವಯವ ಕೃಷಿ ಪದ್ಧತಿಯಲ್ಲೇ ಬೆಳೆ ಬೆಳೆದಿದ್ದಾರೆ ರೈತ ಪರಶುರಾಮ್. ಕಬ್ಬು, ಜೋಳ, ಶೇಂಗಾ ಹೀಗೆ ವಿವಿಧ ಬೆಳೆಗಳನ್ನು ಬೆಳೆದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಗ್ರಾಮದ ರೈತರಾದ ಪರಶುರಾಮ್ ಅವರಿಗೆ ಇದು ವ್ಯವಸಾಯದ ಮೊದಲ ಅನುಭವ. ಯಾವುದೇ ರಾಸಾಯನಿಕ ಬಳಸದೆ ಬೆಳೆ ಬೆಳೆಯುತ್ತಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿ ಕಬ್ಬು, ಶೇಂಗಾ ಮತ್ತು ಜೋಳ ಬೆಳೆಗಳನ್ನು ಬೆಳೆದಿದ್ದಾರೆ.
|
MNC ಬಿಟ್ಟು ಸಾವಯವದಲ್ಲಿ ದಾಳಿಂಬೆ ಬೆಳೆಯಲು ಬಂದಿದ್ದೇಕೆ ಈ ಎಂಜಿನಿಯರ್..?
ಹಳ್ಳಿ ಬಿಟ್ಟು ಪಟ್ಟಣಕ್ಕೆ ಕೆಲಸ ಹುಡುಕಿ ಬರುವ ಈಗಿನ ಯುವಜನತೆಯ ಮಧ್ಯೆ, ಈ ಎಂಜಿನಿಯರ್ ಬೆಂಗಳೂರಿನಲ್ಲಿನ ಉದ್ಯೋಗ ಬಿಟ್ಟು ಕೃಷಿ ಮಾಡಲು ಹಳ್ಳಿಗೆ ಬಂದಿದ್ದಾರೆ. ಸಾವಯವ ಕೃಷಿಯ ಕಡೆ ಒಲವು ತೋರಿಸಿ, ಸಾವಯವ ಪದ್ಧತಿಯಲ್ಲಿ ದಾಳಿಂಬೆ ಮತ್ತು ಸೀಬೆ ಬೆಳೆದಿದ್ದಾರೆ. ಇವರು ಕೃಷಿಗೆ ಅದರಲ್ಲೂ ಸಾವಯವ ಕೃಷಿಗೆ ಬಂದ ಕಾರಣ ತಿಳಿಯೋಣ ಬನ್ನಿ…
|
1 ಎಕರೆಗೆ 75 ರೂ., 6 ಎಕರೆಗೆ 500 ರೂ. ಖರ್ಚು..! ಏನಿದು ಮ್ಯಾಜಿಕ್?
ಕಲಬುರಗಿ : ರಾಸಾಯನಿಕ ಕೃಷಿಯಲ್ಲಿ ಗೊಬ್ಬರದ ಬಳಕೆ ಹೆಚ್ಚಾಗಿ, ಕೃಷಿ ಭೂಮಿಯ ಆಹುತಿ ದಿನೇದಿನೇ ಹೆಚ್ಚಾಗುತ್ತಿದೆ. ಕೃಷಿ ಭೂಮಿಯ ಫಲವತ್ತತೆ ರಾಸಾಯನಿಕ ಗೊಬ್ಬರಗಳ ವಿಷಕ್ಕೆ ಸತ್ತು ಹೋಗುತ್ತಿದೆ. ಹೀಗಿರುವಾಗ ಕೃಷಿಕರು ಬೆಳೆಯ ಇಳುವರಿ ಪಡೆಯುವುದರಲ್ಲಿ ವಿಫಲವಾಗುತ್ತಿದ್ದಾರೆ. ಕೃಷಿ ಭೂಮಿಯ ನಾಶದ ಜತೆಗೆ ವಿನಾಶಕ ಖರ್ಚನ್ನು ಮಾಡಿಕೊಂಡು ರೈತ ಸಾಲದ ಸುಳಿಯಲ್ಲಿ ಸಿಲುಕುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.
|
ಅಪ್ಪನಿಗೆ ರಾಸಾಯನಿಕ ಕೃಷಿ ಮೇಲೆ ಒಲವು, ಮಗನಿಗೆ ಸಾವಯವ ಕೃಷಿಯೇ ಚೆಲುವು
ಸಾವಯವ ಕೃಷಿ ಉತ್ತಮವೋ ಅಥವಾ ರಾಸಾಯನಿಕ ಕೃಷಿ ಪದ್ಧತಿ ಉತ್ತಮವೋ? ಇದೇ ಈ ಅಪ್ಪ-ಮಗನ ವಾದ. ಮಗನಿಗೆ ಸಾವಯವ ಕೃಷಿ ಹಿಡಿಸಿದರೆ, ಸಾವಯವ ಕೃಷಿ ಪದ್ಧತಿಯಿಂದ ನಷ್ಟದ ಹಾದಿ ಹಿಡಿಯಬೇಕಾಗುತ್ತದೆ ಎಂಬುದು ಅಪ್ಪನ ವಾದ. ಇವರಿಬ್ಬರಲ್ಲಿ ಯಾರು ಸರಿ? ಸಾವಯವ ಕೃಷಿಯಿಂದ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದು ಎಷ್ಟೋ ರೈತರ ಅನಿಸಿಕೆ. ಆದರೆ ಸಾಯವಯವದಲ್ಲಿ ರಾಸಾಯನಿಕ ಪದ್ಧತಿಗಿಂತ ಕಡಿಮೆ ಖರ್ಚು ಮತ್ತು ಇಳುವರಿ ಹೆಚ್ಚಾಗುತ್ತದೆ.
|
ಉತ್ತಮ ಗುಣಮಟ್ಟದ ರೇಷ್ಮೆ ಬೆಳೆಯುವುದು ಈಗ ಸುಲಭ
ಹಿಪ್ಪುನೇರಳೆಯ ಎಲೆಗಳು ರೇಷ್ಮೆ ಹುಳುಗಳಿಗೆ ಏಕೈಕ ಆಹಾರವಾಗಿದೆ. ಆದ್ದರಿಂದ ಹಿಪ್ಪುನೇರಳೆ ಕೃಷಿ ನೇರವಾಗಿ ರೇಷ್ಮೆ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಹಿಪ್ಪುನೇರಳೆ ಹೆಚ್ಚು ಬೆಳೆಯುವ ದೇಶಗಳಲ್ಲಿ ಹೆಚ್ಚು ರೇಷ್ಮೆ ಉತ್ಪಾದಿಸಲಾಗುತ್ತದೆ. ಜಗತ್ತಿನ ಹಿಪ್ಪುನೇರಳೆ ಕೃಷಿಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ ಮತ್ತು ರೇಷ್ಮೆ ಉತ್ಪಾದನೆಯಲ್ಲೂ 2ನೇ ಸ್ಥಾನದಲ್ಲಿದೆ. ಇಲ್ಲೊಬ್ಬ ರೈತರು ಸಾವಯವದಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿ ಹಿಪ್ಪುನೇರಳೆ ಬೆಳೆದಿದ್ದಾರೆ.
|
ಸಾವಯವ ಈರುಳ್ಳಿ: ಉತ್ತಮ ಆದಾಯ ಗಳಿಸುವುದು ಹೀಗೆ…
ಈರುಳ್ಳಿ ಎಲ್ಲಾ ರೀತಿಯ ಅಡುಗೆ, ತಿಂಡಿ-ತಿನಿಸುಗಳಲ್ಲಿ ಬಳಸುವ ತರಕಾರಿಯಾಗಿದೆ. ನಮ್ಮ ದೇಶದಲ್ಲಂತೂ ಈರುಳ್ಳಿ ಇಲ್ಲದೆ ಅಡುಗೆಯೇ ಇಲ್ಲಾ ಎಂಬ ಮಟ್ಟಿಗೆ ಇದರ ಬಳಕೆಯಿದೆ. ಹಾಗಾಗಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ದೇಶಗಳಲ್ಲಿ ಚೀನಾ ನಂತರ 2ನೇ ಸ್ಥಾನದಲ್ಲಿ ಭಾರತ ಇದೆ. ನಮ್ಮ ದೇಶದಲ್ಲಿ ತುಂಬಾ ರೈತರು ಈರುಳ್ಳಿ ಬೆಳೆಯುತ್ತಾರೆ. ಈರುಳ್ಳಿ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕವು 3ನೇ ಸ್ಥಾನದಲ್ಲಿದೆ. ನಮ್ಮ ರಾಜ್ಯದಲ್ಲಿ ಈರುಳ್ಳಿಗೆ ತುಂಬಾ ಬೇಡಿಕೆಯಿದ್ದು, ಇದರ ಸದುಪಯೋಗ ರೈತರು ಪಡೆದುಕೊಳ್ಳಬಹುದು. ಇಲ್ಲೊಬ್ಬ ರೈತರು ಈರುಳ್ಳಿಯಲ್ಲಿ ಉತ್ತಮ ಇಳುವರಿಯನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
|
28 ಎಕರೆಯಲ್ಲಿ ಸಾವಯವದಲ್ಲಿ ಕಡಲೆ ಬೆಳೆದ ಕೃಷಿಕರ ಅನುಭವ
ಕಡಲೆ ಒಂದು ಅತೀ ಮುಖ್ಯ ವಾಣಿಜ್ಯ ಬೆಳೆ. 2020ರಲ್ಲಿ ಭಾರತವು ಜಾಗತಿಕ ಮೊತ್ತದ ಒಟ್ಟು 73% ರಷ್ಟು ಕಡಲೆಯನ್ನು ಉತ್ಪಾದಿಸಿತ್ತು. ಈ ಮಟ್ಟಿಗೆ ಭಾರತದ ಕಡಲೆಗೆ ಬೇಡಿಕೆಯಿದ್ದು, ಇದರ ಸದುಪಯೋಗ ರೈತರು ಪಡೆದುಕೊಳ್ಳಬಹುದು. ಉತ್ತಮ ಇಳುವರಿಯಿಂದ ಆದಾಯ ಹೆಚ್ಚಿಸಿಕೊಳ್ಳಬಹುದು.
|
ಉತ್ಕೃಷ್ಟ ಸುಗಂಧರಾಜ ಹೂ ಬೆಳೆಯುವುದು ಹೇಗೆ..?
ಸುಗಂಧರಾಜ ಹೂವು ಯಾರಿಗೆ ಗೊತ್ತಿಲ್ಲ ಹೇಳಿ. ಹಾರಗಳಲ್ಲಿ, ಹೂಗುಚ್ಛಗಳಲ್ಲಿ ಬಳಸಲಾಗುವ ಜನಪ್ರಿಯ ಹೂವು. ಇದರ ಸುಗಂಧದ ಕಾರಣದಿಂದ ಇದನ್ನು ಪರ್ಫ್ಯೂಮ್ ಗಳಲ್ಲಿ ಬಳಸಲಾಗುತ್ತದೆ. ಕೃಷಿ ವಲಯದಲ್ಲಿ ಕಡಿಮೆ ಕೇಳಿಬರುವ, ಕಡಿಮೆ ರೈತರು ಬೆಳೆಯುವ ಬೆಳೆ ಇದಾಗಿದೆ. ಇದರಿಂದ ಒಳ್ಳೆ ಲಾಭ ಪಡೆಯಬಹುದು. ಆದರೆ ಇದನ್ನು ಬೆಳೆಯುವುದು ಹೇಗೆ? ಬನ್ನಿ ತಿಳಿಯೋಣ.
|
ರೈತ ಶಕ್ತಿ ಯೋಜನೆಯ ಸಮಗ್ರ ಮಾಹಿತಿ ಇಲ್ಲಿದೆ
ಬೆಂಗಳೂರು: ರೈತರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಕೃಷಿಇಲಾಖೆ ಮುಂದಾಗಿದ್ದು, ಕೃಷಿಕರ ಮೇಲಿನ ಹೊರೆ ತಪ್ಪಿಸುವ ಸಲುವಾಗಿ ಬಜೆಟ್‌ನಲ್ಲಿ ಘೋಷಿಸಿದಂತೆ " ರೈತಶಕ್ತಿ ಯೋಜನೆ" ರೂಪಿಸಿದೆ.
|
ಕೇವಲ 15 ಗುಂಟೆಯಲ್ಲಿ, 4 ಲಕ್ಷ ಆದಾಯ..!
ಹಾವೇರಿ: ಕೃಷಿ ಭೂಮಿ ಕಡಿಮೆ ಇದ್ದರೆ, ರೈತರು ಹೆಚ್ಚು ಆದಾಯ ಪಡೆಯೋಕೆ ಸಾಧ್ಯವಿಲ್ಲಎಂಬ ಮಾತಿಗೆ ಟಕ್ಕರ್ ಕೊಟ್ಟಿದ್ದಾರೆ ಈ ಸಾವಯವ ಕೃಷಿಕ. ಕೇವಲ15 ಗುಂಟೆ ಕೃಷಿ ಭೂಮಿಯಲ್ಲಿ ಸಧ್ಯ 4 ಲಕ್ಷ ರೂ. ಆದಾಯ ಪಡೆಯುತ್ತಿರುವ ಇವರ ಸಾಧನೆ ಎಲ್ಲಾ ಕೃಷಿಕರಿಗೆ ಮಾದರಿಯಾಗಿದೆ.
|
ಪ್ರತಿ ಕೆ.ಜಿ ಬಾಳೆಗೆ 50 ರೂ. ಪಡೆಯುತ್ತಿರುವ ಕೃಷಿಕ..!
ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕರೆ, ರೈತ ಪಟ್ಟ ಶ್ರಮಕ್ಕೆ ಪ್ರತಿಫಲ ದೊರೆತಂತಾಗುತ್ತದೆ. ಹಾಗಿದ್ದಾಗ ಬೆಲೆ ಚೆನ್ನಾಗಿ ಸಿಗಬೇಕೆಂದರೆ ಮೊದಲು ಬೆಳೆ ಆರೋಗ್ಯವಾಗಿ ಬೆಳೆದು, ಹೆಚ್ಚಿನ ಇಳುವರಿಯನ್ನು ರೈತನಿಗೆ ನೀಡಬೇಕು. ಮಾರ್ಕೆಟ್ ನಲ್ಲಿ ಹೆಚ್ಚಿನ ಬೇಡಿಕೆಯಲ್ಲಿ ನಾವು ಬೆಳೆದ ಆಹಾರ ಮಾರಾಟ ಆಗಲು, ನೋಡುವುದಕ್ಕೆ ಆಕರ್ಷಕವಾಗಿ, ತಿನ್ನಲು ರುಚಿಯಾಗಿ ಇರಬೇಕಾಗುತ್ತದೆ.
|
ಕಿಸಾನ್ ದಿವಸ್: ರೈತರು ಆರ್ಥಿಕವಾಗಿ ಸದೃಢರಾಗಲು ಏನು ಮಾಡಬೇಕು?
ಡಿಸೆಂಬರ್ 23, ಭಾರತದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ. ಈ ದಿನವನ್ನು ‘ಕಿಸಾನ್ ದಿವಸ್’ ಅಥವಾ ರಾಷ್ಟ್ರೀಯ ರೈತರ ದಿನವೆಂದು ದೇಶದಾದ್ಯಂತ ಆಚರಿಸಲಾಗುತ್ತದೆ. ಸಮಾಜಕ್ಕೆ ರೈತರ ಕೊಡುಗೆ, ದೇಶದ ಒಟ್ಟಾರೆ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಮಹತ್ವವನ್ನು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಕೃಷಿ ಮತ್ತು ರೈತರಿಗಾಗಿ ದುಡಿದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಗೌರವಾರ್ಥವಾಗಿ ಅವರ ಜನ್ಮದಿನವನ್ನು ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ.
|
ದ್ರಾಕ್ಷಿ ಬೆಳೆಗಾರ ತಯಾರಿಸಿದ ಔಷಧ: ಡೌನಿ ಬಾಧೆಯೂ ಇಲ್ಲ, ಕೀಟಬಾಧೆಯೂ ಇಲ್ಲ
ಅಕ್ಕ-ಪಕ್ಕದ ದ್ರಾಕ್ಷಿ ತೋಟಗಳು ಡೌನಿ ಬಾಧೆಯಿಂದ ನರಳುತ್ತಿದ್ದರೆ, ಈ ರೈತನ ದ್ರಾಕ್ಷಿ ತೋಟ ಮಾತ್ರ ಕಂಗೊಳಿಸುತ್ತಿದೆ. ಸಾವಯವ ಕೃಷಿಯ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಇವರು, ಸ್ವತಃ ತಾವೇ ರೋಗ, ಕೀಟಬಾಧೆಗೆ ಪರಿಹಾರ ಕಂಡುಕೊಂಡಿದ್ದಾರೆ.
|
ಪಾಲಿಹೌಸ್ ನಲ್ಲಿ ವೀಳ್ಯದೆಲೆ ಕೃಷಿ ಎಷ್ಟು ಲಾಭಕರ?
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಸರಗೂರು ಗ್ರಾಮದ ಈ ರೈತ ತಮ್ಮ 3.5 ಎಕರೆ ಜಮೀನಿನಲ್ಲಿ ಪಾಲಿಹೌಸ್ ನಲ್ಲಿ ವೀಳ್ಯದೆಲೆ ಬೆಳೆದು ಲಾಭ ಗಳಿಸುತ್ತಿದ್ದಾರೆ. ಪಾನ್ ಮತ್ತಿತರ ಖಾದ್ಯಗಳಲ್ಲಿ ಬಳಸಲಾಗುವ ತಳಿಯನ್ನು ಆಯ್ಕೆ ಮಾಡಿ ಕೃಷಿ ಮಾಡಿದ್ದಾರೆ ರೈತ ಪಾಷಾ. ಸಂಪೂರ್ಣ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿ ಬೆಳೆದಿದ್ದಾರೆ. ಲಕ್ಷಾಂತರ ಜನರು ತಿನ್ನುವ ವೀಳ್ಯದೆಲೆಯನ್ನು ಸಾವಯವದಲ್ಲೇ ಬೆಳೆದು ಜನರಿಗೆ ವಿಷಮುಕ್ತ ಆಹಾರ ಕೊಡಬೇಕು ಎಂದು ಸಾವಯವ ಕೃಷಿ ಆಯ್ದುಕೊಂಡೆ ಎನ್ನುತ್ತಾರೆ ಈ ಯುವ ರೈತ.
|
ಸಾವಯವ ಕೃಷಿ ಬಗ್ಗೆ ಜನಪ್ರಿಯ ನಾಯಕರು, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್ ಬಿಚ್ಚುಮಾತು
ಸಾವಯವ ಮತ್ತು ನೈಸರ್ಗಿಕ ಕೃಷಿ ನಮ್ಮ ಪೂರ್ವಜರು ನಮಗೆ ಕೊಟ್ಟ ಬಳುವಳಿ. ಈ ಪದ್ಧತಿಯಲ್ಲಿ ಖರ್ಚು ಕಡಿಮೆ ಮತ್ತು ಇದರಿಂದ ಬಂದ ಫಸಲು ಆರೋಗ್ಯಕರ ಮತ್ತು ಪೌಷ್ಟಿಕಾಂಶಗಳಿಂದ ಕೂಡಿತ್ತು. ಆದರೆ ಈಗ ರಾಸಾಯನಿಕ ಪದ್ಧತಿಯಲ್ಲಿ ಬೆಳೆದ ಬೆಳೆಗಳು ಮನುಷ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕಲಬುರಗಿ ಜಿಲ್ಲೆಯ ಜನಪ್ರಿಯ ನಾಯಕರು ಮತ್ತು ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್ ಅವರು ಕೂಡ ಸಾವಯವ ಕೃಷಿಯ ಕಡೆ ಒಲವು ತೋರಿಸಿದ್ದಾರೆ.
|
ಸೌತೆಕಾಯಿ ನೆಚ್ಚಿಕೊಂಡು ಅಡಿಕೆ ತೋಟ ಹಾಳು?
ಅಡಿಕೆ ತೋಟದಲ್ಲಿ ಸೌತೆಕಾಯಿ ಬೆಳೆದರೆ ಏನಾಗುತ್ತೆ? ತೋಟ ಹಾಳಾಗುತ್ತಾ? ಖಂಡಿತ ಇಲ್ಲಾ. ಆದರೆ ರಾಸಾಯನಿಕ ಬಳಸಿ ಬೆಳೆಯುವುದರಿಂದ ಅಡಿಕೆ ತೋಟ ಹಾಳಾಗುವುದು ಗ್ಯಾರಂಟಿ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ದೇವರಳ್ಳಿ ಗ್ರಾಮದ ಲೋಕೇಶ್ ಅವರು 240 ಅಡಿಕೆ ಮರಗಳನ್ನು ಹೊಂದಿದ್ದಾರೆ. ಮೊದಲು ಇವರು ರಾಸಾಯನಿಕ ಬಳಸುತ್ತಿದ್ದರು. ಮೈಕ್ರೋಬಿಯ ಸಂಪನ್ಮೂಲ ವ್ಯಕ್ತಿಯಾದ ಮಂಜುನಾಥ್ ಅವರು ಲೋಕೇಶ್ ಅವರಿಗೆ ಸಾವಯವ ಪದ್ಧತಿಯ ಬಗ್ಗೆ ತಿಳಿಸಿ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಲು ಸಲಹೆ ನೀಡಿದರು. ಕಳೆದ ವರ್ಷದಿಂದ ಡಾ.ಸಾಯಿಲ್ ಬಳಸುತ್ತಿರುವ ಇವರು ಉತ್ತಮ ಫಲಿತಾಂಶ ಕಂಡಿದ್ದಾರೆ. ಹೊಂಬಾಳೆ ಉದ್ದ ಬರುತ್ತಿದ್ದು, ಕಾಯಿಗಳೂ ಕೂಡ ಅಧಿಕವಾಗಿ ಬರುತ್ತಿದೆ ಎನ್ನುತ್ತಾರೆ.
|
ಎರೆಹುಳುಗಳಿಂದ ಎಷ್ಟೆಲ್ಲಾ ಲಾಭ ಸಿಗುತ್ತದೆ?
ಎರೆಹುಳುಗಳ ಸಂಖ್ಯೆ ಒಂದು ಜಮೀನಿನ ಫಲವತ್ತತೆಯನ್ನು ತೋರಿಸುತ್ತದೆ. ಮಣ್ಣಿನ ಫಲವತ್ತತೆಯ ಸೂಚಕ ಎರೆಹುಳು ಎನ್ನಬಹುದು. ಹೇರಳವಾಗಿ ಎರೆಹುಳುಗಳು ಇವೆ ಎಂದರೆ ಮಣ್ಣಿನಲ್ಲಿ ಸಾವಯವ ತ್ಯಾಜ್ಯಗಳು ಹೇರಳವಾಗಿವೆ ಎಂದರ್ಥ. ಮೈಕ್ರೋಬಿ ಸಂಸ್ಥೆಯು ರೈತರಿಗೆ ಸಾವಯವ ಕೃಷಿಯ ಬಗ್ಗೆ ದಶಕದಿಂದ ತಿಳಿಸುತ್ತಾ ಬಂದಿದೆ. ರೈತರನ್ನು ಸಾವಯವದ ಕಡೆ ಹೋಗಲು ಪ್ರೇರೇಪಿಸುತ್ತಿದೆ. ಎರೆಹುಳುಗಳ ಜೊತೆ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವುದರಿಂದ ಮೈಕೋರೈಜಾದ ಅಭಿವೃದ್ಧಿಯಾಗುತ್ತದೆ. ಇದು ಬೆಳೆಗಳ ಬೇರಿಗೆ ಅಂಟಿ ಇನ್ನೂ ವಿಸ್ತಾರವಾಗಿ ಹರಡುತ್ತವೆ ಮತ್ತು ಸಸ್ಯಗಳಿಗೆ ಎಟುಕದ ಪೋಷಕಾಂಶಗಳನ್ನು ಸಸ್ಯಗಳ ಬೇರುಗಳಿಗೆ ರವಾನಿಸುತ್ತದೆ. ಬೇರುಗಳಿಗೆ ಹೆಲ್ಮೆಟ್ ರೀತಿ ಸುರಕ್ಷತೆ ನೀಡುತ್ತದೆ.
|
ಸಾವಯವ ಕೃಷಿಯ ಜೀವ ಈ ಜೈವಿಕ ಗೊಬ್ಬರಗಳು
ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯು ಕೃಷಿ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ವಿಷಯ. ರಾಸಾಯನಿಕ ಪದ್ಧತಿಯಿಂದ ಸಾವಯವ ಪದ್ಧತಿಯ ಕಡೆ ಬರಲು ಜನರು ಒಲವು ತೋರುತ್ತಿದ್ದಾರೆ. ವಿಷಮುಕ್ತ ಆಹಾರದ ಕಡೆ ಗ್ರಾಹಕರ ಬೇಡಿಕೆ ಹೆಚ್ಚಿರುವುದರಿಂದ ಮತ್ತು ಸಾವಯವ ಪದ್ಧತಿಯ ಕಡಿಮೆ ಖರ್ಚಿನ ಲಾಭಗಳಿಂದ ರೈತರು ಸಾವಯವದ ಕಡೆ ತಿರುಗುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರಗಳು ಅವಿಭಾಜ್ಯ ಅಂಗ ಮತ್ತು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ.
|
ಕಡಲೆ, ಜೋಳ ಬಿತ್ತುವ ಮುನ್ನ ಈ ವಿಚಾರ ತಿಳಿಯಿರಿ..!
ಬಿತ್ತಿದ ಬೀಜಗಳು ಸಸಿಯಾಗುತ್ತಲೇ ನಾನಾ ರೋಗಗಳಿಗೆ ತುತ್ತಾಗಿ ಸತ್ತು ಹೋಗುತ್ತವೆ. ಇನ್ನೂ ಕೆಲವು ಬೀಜಗಳು ಮೊಳಕೆಯೊಡೆದು ಸಾಯುತ್ತವೆ. ಮತ್ತೆ ಕೆಲವು ಸಂದರ್ಭದಲ್ಲಿ ಬೆಳೆದ ಬೆಳೆಗಳನ್ನು ರೋಗದಿಂದ ಉಳಿಸಿಕೊಳ್ಳಲು ಹತ್ತಾರು ಔಷಧಗಳನ್ನು ಸಿಂಪಡಿಸಬೇಕಾಗುತ್ತದೆ.
|
6 ವರ್ಷದ ಅಡಿಕೆಯಲ್ಲಿ ಇನ್ನೂ ಹೊಂಬಾಳೆ ಬಂದಿಲ್ಲ ಯಾಕೆ..?
ಬೆಳೆ ಆರೋಗ್ಯವಾಗಿರಬೇಕೆಂದರೆ ಮೊದಲು ಕೃಷಿ ಭೂಮಿ ಆರೋಗ್ಯವಾಗಿ ಸಮಗ್ರ ಪೋಷಕಾಂಶಗಳಿಂದ ಕೂಡಿರಬೇಕು. ಹಾಗಿದ್ದಾಗ ಮಾತ್ರ ನಾವು ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಪಡೆಯೋಕೆ ಸಾಧ್ಯವಾಗುತ್ತೆ.
|
ರೋಗ-ರುಜಿನಗಳಿಲ್ಲದ ಬೆಳೆ ಬೆಳೆಯಬೇಕಾದರೆ ಹೀಗೆ ಮಾಡಿ…
ವಿಜಯಪುರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ತಿಪ್ಪಾಪುರ ಗ್ರಾಮದ ರೈತ ಮುದ್ದಿ ನಿಂಗಪ್ಪ ತಮ್ಮ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಇಲ್ಲಿಯವರೆಗೆ ರಾಸಾಯನಿಕ ಬಳಸಿ ಕೃಷಿ ಮಾಡಿದ್ದ ಇವರು, ಸಾವಯವ ಕೃಷಿಯ ಫಲಿತಾಂಶ ನೋಡಿ ಬೆರಗಾಗಿದ್ದಾರೆ. ಹಾಗಾದರೆ ಇವರು ಅನುಸರಿಸಿರುವ ಕ್ರಮಗಳೇನು? ಇವರ ಅನುಭವವೇನು ತಿಳಿಯೋಣ.
|
ಸೇವಂತಿಗೆ ಸಸಿಗಳಿಗೆ ತಪ್ಪದೇ ಉಪಚರಿಸಿ, ಇಳುವರಿ ಹೆಚ್ಚುತ್ತೆ
ಕೃಷಿಯಲ್ಲಿ ಇಳುವರಿ ಉತ್ತಮವಾಗಿ ಬರಲು ಏನು ಮಾಡಬೇಕು? ಅಧಿಕ ಲಾಭ ಗಳಿಸಲು ಒಂದು ಪ್ರಮುಖ ಭಾಗ, ಆದರೆ ಎಷ್ಟೋ ರೈತರಿಗೆ ತಿಳಿಯದ ವಿಷಯ ಅಂದರೆ ಅದು ಬೀಜೋಪಚಾರ ಅಥವಾ seed treatment. ಹೂವಿನ ಬೆಳೆ ಅಥವಾ ಇನ್ಯಾವುದೇ ಬೆಳೆಯಾಗಲಿ ಬೀಜೋಪಚಾರ ಅತ್ಯವಶ್ಯಕ. ಬೀಜಗಳು ಮೊಳಕೆಯೊಡೆಯುವ ಪ್ರಮಾಣ ಮತ್ತು ಸಸಿಗಳ ಆರೋಗ್ಯ ವೃದ್ಧಿಸುತ್ತದೆ. ಏಕದಳ, ದ್ವಿದಳ ಮತ್ತು ಹಣ್ಣು-ತರಕಾರಿ ಬೆಳೆಗಳಿಗೆ ತಕ್ಕಂತೆ ವಿವಿಧ ಬೀಜೋಪಚಾರ ದ್ರವಗಳು ಸಾವಯವದಲ್ಲಿ ದೊರೆಯುತ್ತದೆ.
|
ಅಡಿಕೆ ಬೆಳೆಗಾರ ಬದಲಾದರೆ ತೋಟ ಬದಲಾಗಿ ಬಿಡುತ್ತಾ?
ರೈತ ಬದಲಾದರೆ ತೋಟ ಬದಲಾಗುತ್ತಾ? ಬಹುತೇಕ ರೈತರಿಗೆ ಸರಿಯಾದ ಕೃಷಿ ಪದ್ಧತಿ ಮತ್ತು ತಂತ್ರಜ್ಞಾನದ ಅರಿವಿನ ಕೊರತೆಯಿಂದ ಕೃಷಿಯಲ್ಲಿ ತಪ್ಪು ಮಾಡುತ್ತಿದ್ದಾರೆ. ಇದರಿಂದ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಉತ್ತಮ ಬೆಳೆ ಬೆಳೆಯಲಾಗದೆ ನಷ್ಟಕ್ಕೆ ಸಿಲುಕುತ್ತಿದ್ದಾರೆ. ಹಾಗಾದರೆ ರೈತ ಹೇಗೆ ಬದಲಾಗಬೇಕು? ಇದರಿಂದ ಏನು ಲಾಭ?
|
ಕಬ್ಬಿನಲ್ಲಿ 10 ಕುಳೆ ಬೆಳೆಯಲು ಸಾಧ್ಯ..?
ಕಬ್ಬಿನಲ್ಲಿ 3 ಕುಳೆ ಬೆಳೆ ತೆಗೆಯುವವರೇ ಕಡಿಮೆ, ಇಳುವರಿ ಕಡಿಮೆಯಾಗಿ ಆದಾಯ ಕಡಿಮೆಯಾಗುತ್ತದೆ ಎಂಬ ಲೆಕ್ಕಾಚಾರ. ಆದರೆ ಸಾವಯವ ಪದ್ಧತಿಯಲ್ಲಿ 10 ಕುಳೆ ಬೆಳೆ ಕೂಡ ತೆಗೆಯಬಹುದು. ನಿರ್ವಹಣೆ ಮತ್ತು ತಂತ್ರಜ್ಞಾನ ತಿಳಿದುಕೊಳ್ಳಬೇಕು ಅಷ್ಟೆ.
|
300 ಲೋಡ್ ಮಣ್ಣು, 3 ಎಕರೆ ಅಡಿಕೆ ತೋಟ ನಾಶ
ಜಮೀನಿಗೆ ಮಣ್ಣು ಹೊಡೆಸುವುದರಿಂದ ಮಣ್ಣು ಫಲವತ್ತಾಗಿ, ಬೆಳೆಗಳು ಉತ್ತಮವಾಗಿ ಬರುತ್ತವೆ ಎಂಬುದು ಬಹುತೇಕ ರೈತರ ಅನಿಸಿಕೆ. ಎಲ್ಲಿಂದಲೋ ಮಣ್ಣು ತರಿಸಲು ಹಣ ಸುರಿಯುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಇದರ ಪ್ರಯೋಜನ ಎಷ್ಟು? ಇದರಿಂದ ನಿಜವಾಗಿಯೂ ಮಣ್ಣು ಫಲವತ್ತಾಗುತ್ತದೆಯೇ? ಉತ್ತಮ ಇಳುವರಿ ನಿರೀಕ್ಷಿಸಬಹುದೇ? ಇಲ್ಲೊಬ್ಬ ರೈತರು ತಮ್ಮ ಅನುಭವ ಹಂಚಿಕೊಂಡಿದ್ದಾರೆ ನೋಡೋಣ ಬನ್ನಿ.
|
ಕಾಫಿಯಲ್ಲಿ ನಷ್ಟ ಬಾರದಿರಲು ಈ ಕ್ರಮಗಳು ಅಗತ್ಯ..!
ಹೆಚ್ಚು ಕಾಫಿ ಉತ್ಪಾದಕತೆಯ ಪ್ರತಿಷ್ಠಿತ 10 ದೇಶಗಳಲ್ಲಿ ನಮ್ಮ ಭಾರತ ಕೂಡ ಒಂದು. ಅದರಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದ್ದು, ಕಾಫಿಗೆ ಹೆಸರುವಾಸಿಯಾಗಿದೆ. ಹೀಗಿರುವಾಗ ನಾವು ಇತ್ತೀಚಿನ ದಿನಗಳಲ್ಲಿ ಗಮನಿಸಿದರೆ, ಕಾಫಿ ಬೆಳೆಗಾರರು ಲಾಭಕ್ಕಿಂತ ಹೆಚ್ಚು ನಷ್ಟವನ್ನುಅನುಭವಿಸುತ್ತಿದ್ಧಾರೆ ಅಂತ ಹೇಳಿದ್ರೆ ತಪ್ಪಾಗಲಾರದು. ಕಾರಣಗಳನ್ನು ನೋಡುವುದಾದರೆ, ರೈತರು ಅನುಸರಿಸುತ್ತಿರುವ ಅವೈಜ್ಞಾನಿಕ ಕೃಷಿ ಪದ್ಧತಿ. ಮೊದಲನೆಯದಾಗಿದೆ.
|
ಸಾವಯವ ಕೃಷಿಯಿಂದ ಇಳುವರಿ ಹೆಚ್ಚುತ್ತಿದೆ..!
ಜೈವಿಕ ಗೊಬ್ಬರ, ಪರಿಸರಕ್ಕೆ ಪೂರಕವಾದ ಕೃಷಿ, ಸಹಜ ಕೃಷಿ, ನೈಸರ್ಗಿಕ ಕೃಷಿ ಮುಂತಾದ ವಿಭಿನ್ನ ಪದಗಳಿಂದ ಕರೆಯಲ್ಪಡುವ "ಸಾವಯವ ಕೃಷಿ" ನಾನಾ ವಿಧದಲ್ಲಿ ಉಪಕಾರಿಯಾಗಿದೆ. ಕೃಷಿ, ಮಾನವ ಆರೋಗ್ಯ ಹಾಗೂ ವಾಣಿಜ್ಯ ಸಮಸ್ಯೆಗಳ ಮೇಲೆ ಹೆಚ್ಚುತ್ತಿರುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯ ನಕಾರಾತ್ಮಕ ಪರಿಣಾಮಗಳನ್ನು ನಿವಾರಿಸಲು ಪರ್ಯಾಯ ವಿಧಾನವಾಗಿ ಹೊರಹೊಮ್ಮಿದೆ.
|
ಸಾವಯವದಲ್ಲಿ ಶೇಂಗಾ ಬೆಳೆ: ಡಬಲ್ ಆದಾಯದ ಮಳೆ
ಸಾವಯವ ಕೃಷಿಯಲ್ಲಿ ಇಳುವರಿ ಹೆಚ್ಚುವುದಿಲ್ಲ ಎಂದು ಹೇಳುವವರು ಇದನ್ನು ಓದಲೇಬೇಕು. ರಾಸಾಯನಿಕ ಕೃಷಿಯಲ್ಲಿ ಖರ್ಚು ಹೆಚ್ಚು ಮತ್ತು ಆದಾಯ ಕಡಿಮೆ. ಇದರ ಜೊತೆ ಮಣ್ಣನ್ನು ಕೂಡ ಹಾಳು ಮಾಡುತ್ತದೆ. ಮಣ್ಣಿನ ಉಪಕಾರಿ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ. ಇಲ್ಲೊಬ್ಬ ರೈತರು ಸಾವಯವ ಕೃಷಿ ಪದ್ಧತಿಯಲ್ಲಿ ಉತ್ತಮ ಆದಾಯ ಪಡೆಯಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ.
|
ಕ್ಯಾನ್ಸರ್ ಗೆ ರಾಮಬಾಣವಾದ ಲಕ್ಷ್ಮಣ..! ಕೃಷಿಗೆ..?
ಕ್ಯಾನ್ಸರ್ ಗೆ ಲಕ್ಷ್ಮಣ ಫಲ ರಾಮಬಾಣವಾಗಿದ್ದು, ರೈತರಿಗೂ ಲಾಭದಾಯಕ ಆಗಿರುವುದು ವಿಶೇಷವಾಗಿದೆ. ರಾಮ, ಲಕ್ಷ್ಮಣ ಹಾಗೂ ಹನುಮಂತ ಫಲಗಳು ಅತ್ಯಂತ ಹೆಚ್ಚಿನ ಪ್ರಮಾಣದ ರೋಗನಿರೋಧಕ ಶಕ್ತಿಯನ್ನು ಹೊಂದಿವೆ. ಅದರಲ್ಲಿಯೂ ಪ್ರಮುಖವಾಗಿ ಲಕ್ಷ್ಮಣ ಫಲವು ಸುಮಾರು 12 ಮಾದರಿಯ ಕ್ಯಾನ್ಸರ್ ಕಣಗಳನ್ನು ಕೊಲ್ಲುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.
|
ಅಡಿಕೆ ತೋಟಕ್ಕೆ ಎಷ್ಟು ನೀರು ಕೊಡಬೇಕು?
ಅಡಿಕೆಯಲ್ಲಿ ಇಳುವರಿ ಕಡಿಮೆಯಾಗಲು ಕಾರಣ ಏನು ಗೊತ್ತಾ? ಅಧಿಕ ಆದಾಯ ಕೊಡುವ ಅಡಿಕೆಯಲ್ಲಿ ರೈತರು ಮುಗ್ಗರಿಸುವುದೇಕೆ? ಯಾವ ತಪ್ಪುಗಳಿಂದ ಅಡಿಕೆ ತೋಟದಲ್ಲಿ ರೋಗ-ರುಜಿನಗಳು ಕಾಣಿಸಿಕೊಳ್ಳುತ್ತವೆ?
|
ಬರಡಾಗಿದ್ದ ಭೂಮಿಗೆ ಹಿಂದೆ 90 ಸಾವಿರ ಖರ್ಚು, ಈಗ 15 ಸಾವಿರ..!
ಅರಿಶಿನ ಹಲವು ಮನೆಮದ್ದುಗಳ ಒಡೆಯ. ಅಡುಗೆಗೂ ಬೇಕು, ಔಷಧಿಗೂ ಬೇಕು. ಆರೋಗ್ಯಕ್ಕೂ ಅರಿಶಿನ ಬೇಕು. ಮನೆಯಲ್ಲಿಯೇ ಮಾಡಿಕೊಳ್ಳುವ ಚರ್ಮದ ಆರೈಕೆಯಲ್ಲಿಯೂ ಅರಿಶಿನದ್ದು ದೊಡ್ಡ ಪಾಲು. ಭಾರತೀಯರ ಮನೆಯಲ್ಲಿ ಅರಿಶಿನಕ್ಕೆ ಬಹಳ ಪ್ರಾಧಾನ್ಯತೆ ಇದೆ. ಅರಿಶಿನವು 300ಕ್ಕೂ ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.
|
|