Blog

       ಸಾವಯವದಲ್ಲಿ ಕೃಷಿ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂಬುದಕ್ಕೆ ಸಾಕ್ಷಿ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಗೋಪಾರದೇವಳ್ಳಿ ಗ್ರಾಮದ ರೈತ ಬಾರೇಗೌಡ ಅವರು. ಅದರಲ್ಲೂ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಮಾಡಿದರೆ ಇನ್ನೂ ಉತ್ತಮವಾದ ಇಳುವರಿ ಮತ್ತು ರೋಗಗಳ ವಿರುದ್ಧ ಹೋರಾಡುವ ಕ್ಷಮತೆ ಹೆಚ್ಚಿಸಲು ಸಹಾಯ ಮಾಡುತ್ತದೆ.

 

       15 ವರ್ಷದ 240 ಮರಗಳ ಮಾಲೀಕರಾಗಿರುವ ಬಾರೇಗೌಡರವರು ಮೊದಲಿನಿಂದಲೂ ಸಾಯವ ಪದ್ಧತಿಯಲ್ಲೇ ಕೃಷಿ ಮಾಡುತ್ತಿದ್ದಾರೆ. ಕಳೆದ 3 ವರ್ಷಗಳಿಂದ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದು, ಈಗ ಮೊದಲಿಗಿಂತಲೂ ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ. 8 ಕ್ವಿಂಟಾಲ್ ಇದ್ದ ಒಣ ಅಡಿಕೆ ಇಳುವರಿ ಈಗ 10 ಕ್ವಿಂಟಾಲ್ ಗಿದೆ. ಬೇರೆ ತೋಟಗಳಲ್ಲಿ ಹರಳು ಉದುರುವಿಕೆ ಹೆಚ್ಚಾಗಿದ್ದರೆ, ಇವರ ತೋಟದಲ್ಲಿ ಹರಳು ಉದುರುವ ಸಮಸ್ಯೆಯೇ ಇಲ್ಲ. ಮುಂಚೆ ಪ್ರತಿ ಮರಕ್ಕೆ 3-4 ಗೊನೆಗಳು ಬರುತ್ತಿದ್ದವು. ಈಗ 7ರಿಂದ 8 ಗೊನೆಗಳು ಬರುತ್ತಿವೆ.

 

ಡಾ.ಸಾಯಿಲ್ ಅರೇಕಾ ಬಳಕೆಯ ನಂತರ ಅಡಿಕೆ ಗೊನೆಗಳ ಗಾತ್ರ, ತೂಕ ಹೆಚ್ಚಾಗಿವೆ. ಇವರ ಅಡಿಕೆ ತೋಟದಲ್ಲಿ ಗೊನೆಗಳ ತೂಕ ಹೆಚ್ಚಾಗಿ ಮುರಿದು ಬೀಳುತ್ತಿವೆ. ಅಷ್ಟರ ಮಟ್ಟಿಗೆ ಬೆಳವಣಿಗೆಯಾಗಿದೆ. ಇತರ ತೋಟಗಳಲ್ಲಿ ಅಡಿಕೆ ಗೊನೆಗಳು ಡಿಸೆಂಬರ್-ಜನವರಿಯವರೆಗೆ ಕೊನೆಯಾದರೆ ಇವರ ತೋಟದಲ್ಲಿ  ಫೆಬ್ರವರಿಯವರೆಗೆ ಚೆನ್ನಾಗಿರುತ್ತವೆ. ಖರ್ಚಿನ ವಿಷಯದಲ್ಲೂ ಇಳಿಕೆ ಕಂಡಿದ್ದು, ಲಾಭ ಜಾಸ್ತಿಯಾಗಿದೆ. ಎರೆಹುಳುಗಳು ಹೆಚ್ಚಾಗಿರುವುದರಿಂದ ಯಾವುದೇ ತ್ಯಾಜ್ಯನ್ನು ಡೀಕಂಪೋಸ್ ಮಾಡುತ್ತವೆ ಎನ್ನುತ್ತಾರೆ ಬಾರೇಗೌಡರು.

 

ಪೂರ್ತಿ ವಿಡೀಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=lGYU4JLXhzQ

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #integratedfarming  #organicfarming  #organiccrops  #sustainablefarming  #highyield  #healthycrop  #soilhealth  #biofertilizers  #lowinvestment  #areca  #arecafarming  #betelnut  #organicbetel  



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies