Blog

       ಕಬ್ಬಿನಲ್ಲಿ 3 ಕುಳೆ ಬೆಳೆ ತೆಗೆಯುವವರೇ ಕಡಿಮೆ, ಇಳುವರಿ ಕಡಿಮೆಯಾಗಿ ಆದಾಯ ಕಡಿಮೆಯಾಗುತ್ತದೆ ಎಂಬ ಲೆಕ್ಕಾಚಾರ. ಆದರೆ ಸಾವಯವ ಪದ್ಧತಿಯಲ್ಲಿ 10 ಕುಳೆ ಬೆಳೆ ಕೂಡ ತೆಗೆಯಬಹುದು. ನಿರ್ವಹಣೆ ಮತ್ತು ತಂತ್ರಜ್ಞಾನ ತಿಳಿದುಕೊಳ್ಳಬೇಕು ಅಷ್ಟೆ.

 

       ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮುಗಳ್ಕೋಡ್ ಗ್ರಾಮದ ಕಾಡಪ್ಪಣ್ಣ ಪರಪ್ಪನವರ್ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಕಬ್ಬು ಕೃಷಿ ಮಾಡುತ್ತಿದ್ದಾರೆ. 2ನೇ ಕುಳೆಯಲ್ಲಿ 1.9 ಎಕರೆಯಲ್ಲಿ 85 ಟನ್ ಕಬ್ಬು ಬೆಳೆದಿರುವ ಇವರು, ಈ ಬಾರಿ ಇನ್ನೂ ಹೆಚ್ಚು ಇಳುವರಿ ತೆಗೆಯುವ ಭರವಸೆಯಲ್ಲಿದ್ದಾರೆ. ಸಾವಯವ ಕೃಷಿಯಿಂದ ಮಣ್ಣು ಫಲವತ್ತಾಗಿ ಬೆಳೆ ಉತ್ತಮವಾಗುತ್ತದೆ ಎಂಬುದನ್ನು ಇವರು ತಿಳಿದುಕೊಂಡಿದ್ದಾರೆ.

 

ಕೃಷಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ

 

       ರೈತರ ಜಮೀನಿನಲ್ಲೇ ಅಲ್ಲಿರುವ ಸಮಸ್ಯೆಗಳನ್ನು ತೋರಿಸಿ ಪ್ರಾಯೋಗಿಕವಾಗಿ ರೈತರಿಗೆ ಸಾವಯವ ಕೃಷಿ ಕಲಿಸುವ ಕಾರ್ಯಾಗಾರ ಇದಾಗಿದೆ. ಮೈಕ್ರೋಬಿ ಸಂಸ್ಥೆ ವತಿಯಿಂದ ಕೃಷಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರವನ್ನು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ನಡೆಸಿ ರೈತರನ್ನು ಸಾವಯವ ಕೃಷಿಯ ಕಡೆ ಪ್ರೇರೇಪಿಸಲಾಗುತ್ತಿದೆ. ತೀರ್ಥಹಳ್ಳಿ, ಬನಹಟ್ಟಿ ರಬಕವಿಯಿಂದ ಬಂದಿದ್ದ ರೈತರಿಗೆ ಕಾಡಪ್ಪಣ್ಣ ಪರಪ್ಪನವರ್ ಅವರ ಜಮೀನಿನಲ್ಲಿ ಮಣ್ಣಿನ ಮಹತ್ವ ಮತ್ತು ಸಾವಯವ ಕೃಷಿಯ ಸಾಮರ್ಥ್ಯದ ಬಗ್ಗೆ ತಿಳಿಸಲಾಯಿತು. ಸಾವಯವ ಪದ್ಧತಿಯಿಂದ ಕಬ್ಬಿನಲ್ಲಿ ಆಗಿರುವ ಬೇರಿನ ಬೆಳವಣಿಗೆ ಮತ್ತು ಮಣ್ಣಿನ ಪರಿವರ್ತನೆಯನ್ನು ತೋರಿಸಲಾಯಿತು. ಇಂದು ರಾಸಾಯನಿಕ ಕೃಷಿ ಪದ್ಧತಿಯಿಂದ ರೈತ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಸಾವಯವ ಕೃಷಿ ಇದಕ್ಕೆ ಪರಿಹಾರವಾಗಿದೆ. ಇದನ್ನು ಎಲ್ಲಾ ರೈತರೂ ಅಳವಡಿಸಿಕೊಳ್ಳಬೇಕು. ಇದರ ಸಲುವಾಗಿ ರೈತರನ್ನು ಸಜ್ಜುಗೊಳಿಸುವುದು ಈ ಕಾರ್ಯಾಗಾರದ ಉದ್ದೇಶ.

 

       ಮೈಕ್ರೋಬಿ ಸಂಸ್ಥೆಯ ಅಧ್ಯಕ್ಷರು ಮತ್ತು ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಕೆ.ಆರ್.ಹುಲ್ಲುನಾಚೇಗೌಡರು ಕಬ್ಬಿನಲ್ಲಿ ಉತ್ತಮವಾಗಿ ಇಳುವರಿ ಪಡೆಯಲು ವಿವಿಧ ಸಲಹೆಗಳನ್ನು ತಿಳಿಸಿದ್ದಾರೆ. ಅಂತರ ಮತ್ತು ನೀರು ನಿರ್ವಹಣೆಯನ್ನು ಉತ್ತಮವಾಗಿ ಮಾಡಿದರೆ ಕಬ್ಬಿನಲ್ಲಿ 10 ಕುಳೆ ತೆಗೆಯಬಹುದು.

 

ಪೂರ್ತಿ ಮಾಹಿತಿಗಾಗಿ ಕೆಳಗಿನ ವೀಡಿಯೋ ನೋಡಿ….

https://www.youtube.com/watch?v=ycuQ1LAKQ8M&t=332s

 

ಬರಹ: ರವಿಕುಮಾರ್

 

 

#kannadablog  #drsoil  #microbiagrotech  #agricultureblogs  #agricultureinkannada  #organicfarming  #integratedfarming  #highyield  #healthycrop  #sugarcane  #plantnutrition  #cultivationtechniques  #highyieldhighincome  #skilldevelopment  #agritraining  



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies