Blog

ಕೃಷಿಯಲ್ಲಿ ಇಳುವರಿ ಉತ್ತಮವಾಗಿ ಬರಲು ಏನು ಮಾಡಬೇಕು? ಅಧಿಕ ಲಾಭ ಗಳಿಸಲು ಒಂದು ಪ್ರಮುಖ ಭಾಗ, ಆದರೆ ಎಷ್ಟೋ ರೈತರಿಗೆ ತಿಳಿಯದ ವಿಷಯ ಅಂದರೆ ಅದು ಬೀಜೋಪಚಾರ ಅಥವಾ seed treatment. ಹೂವಿನ ಬೆಳೆ ಅಥವಾ ಇನ್ಯಾವುದೇ ಬೆಳೆಯಾಗಲಿ ಬೀಜೋಪಚಾರ ಅತ್ಯವಶ್ಯಕ. ಬೀಜಗಳು ಮೊಳಕೆಯೊಡೆಯುವ ಪ್ರಮಾಣ ಮತ್ತು ಸಸಿಗಳ ಆರೋಗ್ಯ ವೃದ್ಧಿಸುತ್ತದೆ. ಏಕದಳ, ದ್ವಿದಳ ಮತ್ತು ಹಣ್ಣು-ತರಕಾರಿ ಬೆಳೆಗಳಿಗೆ ತಕ್ಕಂತೆ ವಿವಿಧ ಬೀಜೋಪಚಾರ ದ್ರವಗಳು ಸಾವಯವದಲ್ಲಿ ದೊರೆಯುತ್ತದೆ. 

 

ಬೀಜೋಪಚಾರದ ಪ್ರಯೋಜನಗಳು

- ಬೀಜಗಳ ಉತ್ತಮ ಮೊಳಕೆ ಒಡೆಯುತ್ತವೆ.

- ಬೇರುಗಳ ಉತ್ತಮ ಅಭಿವೃದ್ಧಿ.

- ಸಾರಜನಕ ಸ್ಥಿರೀಕರಣ.

- ವಾತಾವರಣ ವೈಪರೀತ್ಯವನ್ನು ತಡೆದುಕೊಳ್ಳುವ ಶಕ್ತಿ.

- ಬಿಳಿಬೇರಿನ ಉತ್ತಮ ಅಭಿವೃದ್ಧಿ.

 

ಬೀಜೋಪಚಾರ ಮಾಡುವ ವಿಧಾನ

ಬೀಜೋಪಚಾರವನ್ನು ಬೀಜಗಳು ಮತ್ತು ಸಸಿಗಳಿಗೂ ಮಾಡಬಹುದು.

ಬೀಜಗಳ ಬೀಜೋಪಚಾರಕ್ಕಾಗಿ ಕೆಳಗಿನ ಈ ವೀಡಿಯೋ ನೋಡಿ

https://www.youtube.com/watch?v=lF8Gp_fVxME&list=PLuN9VcGQAtK7HCkXFX6h2et0NFzC63cSN

 

ಸಸಿಗಳಿಗಾಗಿ ಬೀಜೋಪಚಾರ

30 ಲೀಟರ್ ನೀರಿಗೆ 1 ಲೀಟರ್ ಡಾ.ಸಾಯಿಲ್ ಬೀಜೋಪಚಾರ ಬಳಸಬಹುದು.

- ಡಾ.ಸಾಯಿಲ್ ಬೀಜೋಪಚಾರನ್ನು ಚೆನ್ನಾಗಿ ಕುಲುಕಿ, 20 ಲೀಟರ್ ನೀರಿಗೆ ಚೆನ್ನಾಗಿ ಮಿಶ್ರಣ ಮಾಡಿ.

- ಬೀಜೋಪಚಾರ ತಯಾರಿಸಲು ರಾಸಾಯನಿಕ ಬಳಸಿದ ಡ್ರಮ್ ಅಥವಾ ಪಾತ್ರೆಗಳನ್ನು ಬಳಸಬಾರದು.

- ಮಿಶ್ರಣ ಮಾಡಿದ ನೀರನ್ನು ಸಸಿಗಳ ಬೇರಿಗೆ ಹೋಗುವಂತೆ ಸಿಂಪಡಿಸಿ.

 ಹೀಗೆ ಬೀಜೋಪಚಾರ ಮಾಡುವುದರಿಂದ ಸಸಿಗಳು ಉತ್ಕೃಷ್ಟವಾಗಿ ಬೆಳೆಯುತ್ತವೆ. ರೋಗ ರುಜಿನಗಳು ಕಡಿಮೆಯಾಗಿ ಖರ್ಚು ಮತ್ತು ನಿರ್ವಹಣೆಯನ್ನು ಕಡಿಮೆ ಮಾಡಿಕೊಳ್ಳಬಹುದು.

 

 

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡೀಯೋ ನೋಡಿ…..

https://www.youtube.com/watch?v=7m5i6macVbA&t=391s

 

ಬರಹ: ರವಿಕುಮಾರ್

 

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies