Blog

ಅರಿಶಿನವು ಕೇವಲ ಅಡುಗೆ ಮನೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುವುದು ಮಾತ್ರವಲ್ಲಧಾರ್ಮಿಕ ಕಾರ್ಯಗಳಲ್ಲಿ ಮತ್ತು  ಆರೋಗ್ಯದ ರಕ್ಷಣೆಯಲ್ಲೂ ಬಹುಪಕಾರಿ

 

ಅರಿಶಿನವು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಗುಣಪಡಿಸುವ ಗುಣಗಳನ್ನು ಹೊಂದಿದೆಕರ್ಕುಮಾ ಲಾಂಗಾ ಎಂಬುದು ಅರಿಶಿನದ ವೈಜ್ಞಾನಿಕ ಹೆಸರುಅರಿಶಿನ ಬಳಸುವುದರಿಂದ ಹೇಗೆ ಪ್ರಯೋಜನ ಪಡೆಯಬಹುದೋ, ಹಾಗೆಯೇ ಅದನ್ನು ಕೃಷಿ ಮಾಡುವುದರಿಂದ ಕೂಡ ಅಷ್ಟೇ ಲಾಭಗಳಿವೆನೀವು ಮನೆಯಲ್ಲಿಯೂ ಸಹ ಬೆಳೆಯನ್ನು ಬೆಳೆಯಬಹುದುಹಾಗೆಯೇ ಜಮೀನಿನಲ್ಲೂ ಬೆಳೆಯುವುದರಿಂದ ಅನೇಕ ಲಾಭ ಪಡೆಯಬಹುದುಹಾಗಾದರೆ ಅರಿಶಿನ ಬೆಳೆಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಬನ್ನಿ ನೋಡೋಣ.

 

ಯಾವುದೇ ವಾಮಾನಕ್ಕೂ  ಬೆಳೆ ಹೊಂದಿಕೊಳ್ಳುತ್ತದೆಶೀತವಿರುವ ಪ್ರದೇಶದಲ್ಲೂ ಇದನ್ನು ಬೆಳೆಯಬಹುದುಇದಲ್ಲದೆಇತರ ಸಸ್ಯಗಳಿಗೆ ಹೋಲಿಸಿದರೆ ಅರಿಶಿನವು ಬೇಗ ಬೆಳೆಯುತ್ತದೆತಿಂಗಳಿಗೊಮ್ಮೆ ಸಮೃದ್ಧ ಫಲ ಸಿಗುವುದರಿಂದ ಬೆಳೆಯನ್ನು ಎರಡು ಸಾರಿ ಬಿತ್ತನೆ ಮಾಡಿ ಇಳುವರಿ ಪಡೆಯಬುಹುದು.


ಅರಿಶಿನ ಕೃಷಿ ಮಾಡಿ ಯಶಸ್ಸು ಕಂಡವರ ಪ್ರಮಾಣವು ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕು ನಿಂಗಾಪುರ ಗ್ರಾಮದ ಕೃಷಿಕ ವಿನಾಯಕ್ ಅವರು ಕಳೆದ 4 ವರ್ಷದಿಂದ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದು, ಮೊದಲು ಕಬ್ಬು ಬೆಳೆಯನ್ನು ಸಾವಯವ ಕೃಷಿಯಲ್ಲಿ ಬೆಳೆಯೋಕೆ ಶುರುಮಾಡಿ ಈಗ ಅರಿಶಿನ ಬೆಳೆಯನ್ನು ಬೆಳೆಯುತ್ತಿದ್ದಾರೆ. ರಾಸಾಯನಿಕದಲ್ಲಿ ಅರ್ಧ ಎಕರೆಗೆ 25 ಟನ್ ಪಡೆಯುತ್ತಿದ್ದ ಕೃಷಿಕ, ಈಗ ಸಾವಯವದಲ್ಲಿ 35 ಟನ್ ಅರಿಶಿನ ಇಳುವರಿ ಪಡೆಯುತ್ತಿದ್ದಾರೆ.


ಮಾರ್ಕೇಟ್ ನಲ್ಲಿಯೂ ಸಹಿತ ಇವರ ಅರಿಶಿನ ಬೆಳೆಗೆ 1000 ರೂ. ಹೆಚ್ಚು ಬೆಲೆ ಸಿಗುತ್ತಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆದಿದ್ದಾರೆ. ಹಾಗಾದ್ರೆ ಸಾವಯವ ಕೃಷಿಯಲ್ಲಿ ರೈತ ಬಳಸಿದ ಗೊಬ್ಬರ ಯಾವುದು? ಖರ್ಚು ಕಡಿಮೆಯಾಗಿದ್ದು ಹೇಗೆ? ಇವೆಲ್ಲದರ ಕಂಪ್ಲೀಟ್ ಮಾಹಿತಿಯನ್ನು ಕೃಷಿಕರು ಹಂಚಿಕೊಂಡಿದ್ದಾರೆ.


https://www.youtube.com/watch?v=QSHSTWeCehw&t=95s


ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.


ವರದಿ: ವನಿತಾ ಪರಸನ್ನವರ್

 




Blog




Home    |   About Us    |   Contact    |   
microbi.tv | Powered by Ocat Online Advertising Service in India