Blog

ಕೆಲವೊಮ್ಮೆ ಬೆಳೆಗಿಂತ ಬೇಡದ ಕಳೆ ಗಿಡಗಳು ಹೆಚ್ಚು ಬೆಳೆದು, ಫಸಲು ಕೊಡುವ ಗಿಡದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆಇದರ ನಿವಾರಣೆಗಾಗಿ ಕನಿಷ್ಠ 10 ಅಥವಾ 15 ದಿನಕ್ಕೊಮ್ಮೆಯಾದರೂ ತೋಟವನ್ನು ಸ್ವಚ್ಛಗೊಳಿಸುತ್ತಿರಬೇಕುಕಳೆಗಳು ಗಿಡಗಳ ತೇವಾಂಶವನ್ನೆಲ್ಲಾ ಸಂಪೂರ್ಣವಾಗಿ ಹೀರಿಕೊಳ್ಳುವ ಕಾರಣ ಬೆಳೆ ಒಣಗಿ ಹೋಗುತ್ತವೆ. ಸಾವಯವ ವಿಧಾನದಲ್ಲೂ  ಕಳೆಗಳನ್ನು ತೆಗೆಯಲು ಸಾಧ್ಯವಿದೆತೋಟದಲ್ಲಿಯೇ ಒಣಗಿದ ತರಗೆಲೆಗಳನ್ನು ಗಿಡದ ಬುಡದ ಸುತ್ತ ಹಾಕಿದರೆ ಅನವಶ್ಯಕವಾದ ಕಳೆ ಬೆಳೆಯುವುದಿಲ್ಲ.

 

ಹಸುವಿನ ಗಂಜಲ ಉತ್ತಮ ಕಳೆನಾಶಕ ಗುಣ ಹೊಂದಿರುವುದರಿಂದ, ಇದನ್ನು ಗಿಡದ ಬುಡದ ಸುತ್ತ ತಿಳಿಯಾಗಿ ಹದಿನೈದು ದಿನಕ್ಕೊಮ್ಮೆ ಸಿಂಪಡಿಸಿದರೆ,  ಕಳೆ ಬೆಳೆಯುವುದಿಲ್ಲಹಾಗಂತ ಹೆಚ್ಚಿನ ಪ್ರಮಾಣದಲ್ಲಿ ಗಂಜಲ ಸಿಂಪಡಿಸಬಾರದು. ಹೀಗೆ ಸಾವಯವ ಕೃಷಿ ಪದ್ಧತಿಯಲ್ಲಿಯೇ ಹಲವಾರು ವಿಧಾನದಲ್ಲಿ ಕಳೆ ನಿರ್ವಹಣೆಯನ್ನು ಮಾಡಬಹುದಾಗಿದೆ. ಜೈವಿಕ ಕಳೆನಾಶಕಗಳ ಬಳಕೆ, ಯಂತ್ರೋಪಕರಣಗಳ ಬಳಕೆ, ಸಾಂಪ್ರದಾಯಕ ಕೃಷಿ ಪದ್ಧತಿಯಲ್ಲಿ ಕಳೆ ನಿಯಂತ್ರಣ ಮಾಡಬಹುದು.

 

ಕೃಷಿ ಭೂಮಿಗೆ ರಾಸಾಯನಿಕ ಕಳೆನಾಶಕಗಳನ್ನು ಬಳಸದೆ, ಸಾವಯವ ಕೃಷಿಯಲ್ಲಿ ಹೇಗೆಲ್ಲಾ ಕಳೆ ನಿರ್ವಹಣೆ ಮಾಡಬಹುದೆಂಬ ಮಾಹಿತಿ ಈ ಕೆಳಗಿನ ವೀಡೀಯೋದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ.

https://www.youtube.com/watch?v=whHnV6gJoC4

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

ವರದಿ : ವನಿತಾ ಪರಸನ್ನವರ್

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies