Blog

       ಉತ್ತಮ ಲಾಭಕ್ಕಾಗಿ ಉತ್ತಮ ಬೆಳೆ ಬೆಳೆಯುವುದು ತುಂಬಾ ಮುಖ್ಯ. ಉತ್ತಮ ಬೆಳೆ ಬೆಳೆಯಲು ಗಿಡಗಳನ್ನು ರೋಗಗಳು ಮತ್ತು ಕೀಟಗಳಿಂದ ಕಾಪಾಡಬೇಕಾಗುತ್ತದೆ. ಇದಕ್ಕಾಗಿ ರೈತರು ಬಹಳ ವಿಧಾನಗಳನ್ನು ಅನುಸರಿಸುತ್ತಾರೆ. ರೋಗಗಳು ಮತ್ತು ಕೀಟಗಳನ್ನು ತಡೆಯಲು ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಇದು ದುಬಾರಿಯೂ ಹೌದು ಹಾಗೂ ಅಪಾಯಕಾರಿಯು ಹೌದು.

 

ಕೀಟನಾಶಕಗಳನ್ನು ಬಳಸುವುದರಿಂದ ಮಣ್ಣಿನ ಸೂಕ್ಷ್ಮಜೀವಿಗಳು ನಾಶವಾಗುತ್ತವೆ. ಕೀಟನಾಶಕಗಳಿಂದ ಕೀಟಗಳು ರಾಸಾಯನಿಕಗಳಿಗೆ ನಿರೋಧಕತೆಯನ್ನು ಬೆಳೆಸಿಕೊಳ್ಳುತ್ತವೆ. ಈಗ ಅವುಗಳನ್ನು ಕೊಲ್ಲಲು ಹೆಚ್ಚು ಪ್ರಮಾಣದ ಅಥವಾ ಬೇರೆ ರಾಸಾಯನಿಕಗಳನ್ನು ಬಳಸಬೇಕಾಗುತ್ತದೆ. ಇದು ಕೃಷಿಯ ಖರ್ಚನ್ನು ಹೆಚ್ಚಿಸುತ್ತದೆ. ಹಾಗಾದರೆ ಕೀಟಬಾಧೆಯನ್ನು ತಡೆಯಲು ಏನು ಮಾಡಬೇಕು? ರಾಸಾಯನಿಕ ಬಳಸದೇ ಕೀಟಗಳನ್ನು ಕೊಲ್ಲಬಹುದೇ? ನೋಡೋಣ ಬನ್ನಿ.

 

       ರಾಸಾಯನಿಕ ಕೀಟನಾಶಕಗಳನ್ನು ಬಳಸದೇ ಸಾವಯವ ಕೃಷಿಯಲ್ಲಿ ಕೀಟಗಳನ್ನು ನಿಯಂತ್ರಣ ಮಾಡಬಹುದು. ಕಡಿಮೆ ಖರ್ಚಿನಲ್ಲಿ ಕೀಟಗಳನ್ನು ನಿಯಂತ್ರಿಸಿ, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬಹುದು. ಸಾವಯವದಲ್ಲಿ ಕೀಟ ನಿಯಂತ್ರಣ ಮಾಡುವ ಕೆಲವು ವಿಧಾನಗಳು.

 

1. ಲಿಂಗಾಕರ್ಷಕ ಬಲೆಗಳು (Pheromone traps)

       ಫೆರೋಮೋನ್ ಬಲೆಗಳು ವಿರುದ್ಧ ಲಿಂಗದ ಕೀಟಗಳಿಂದ ಹೊರಹೊಮ್ಮುವ ಪರಿಮಳದಂತಹ ವಸ್ತುವನ್ನು ಬಳಸಿಕೊಂಡು ಗಂಡು ಪತಂಗಗಳನ್ನು ಆಕರ್ಷಿಸಿ ಕೊಲ್ಲುತ್ತವೆ. ಹೆಣ್ಣು ಕೀಟವೆಂದು ಭಾವಿಸುವ ಗಂಡು ಕೀಟಗಳು ವಾಸನೆಗೆ ಆಕರ್ಷಿತವಾಗಿ ಅಲ್ಲಿರುವ ಸಾವಯವ ಕೀಟನಾಶಕ ಅಥವಾ ಮೇಣದಂತಹ ವಸ್ತುವಿಗೆ ಸಿಲುಕಿ ಸಾಯುತ್ತವೆ. ಇದನ್ನು ಉಪಯೋಗಿಸಿ ಹಾರುವ ಹುಳುಗಳನ್ನು ನಿಯಂತ್ರಿಸಬಹುದು.

 

2. ಸ್ಟಿಕ್ಕಿ ಟ್ರ್ಯಾಪ್ (sticky traps)

       ಸ್ಟಿಕ್ಕಿ ಟ್ರ್ಯಾಪ್ಸ್ ಗಳು ಕೀಟಗಳನ್ನು ಹಿಡಿಯಲು ಮತ್ತು ನಿಯಂತ್ರಣ ಮಾಡಲು ಬಳಸುವ ಅಂಟು ಆಧಾರಿತ ಬಲೆಗಳಾಗಿವೆ. ಇದನ್ನು ರಸಹೀರುವ ಕೀಟಗಳ ನಿಯಂತ್ರಣ ಮಾಡಲು ಬಳಸಲಾಗುತ್ತದೆ. ಈ ಕೀಟಗಳು ಕೆಲವು ಬಣ್ಣಗಳಿಗೆ ಆಕರ್ಷಿತವಾಗುತ್ತವೆ. ಹೆಚ್ಚಾಗಿ ಹಳದಿ ಮತ್ತು ನೀಲಿ ಬಣ್ಣದ ಟ್ರ್ಯಾಪ್ ಗಳನ್ನು ಬಳಸಲಾಗುತ್ತದೆ. ಈ ಕೀಟಗಳು ಈ ಬಣ್ಣಗಳಿಗೆ ಆಕರ್ಷಿತವಾಗಿ ಇದರಲ್ಲಿರುವ ಅಂಟಿಗೆ ಅಂಟಿಕೊಳ್ಳುತ್ತವೆ.

 

3. ಲೈಟ್ ಟ್ರಾಪ್ (light traps)

       ಇವು ಬೆಳಕನ್ನು ಉಪಯೋಗಿಸಿ ಕೀಟಗಳನ್ನು ಆಕರ್ಷಿಸುತ್ತವೆ. ಸಾಮಾನ್ಯವಾಗಿ ಕೀಟಗಳು ಹೆಚ್ಚಾಗಿ ರಾತ್ರಿ ಸಮಯದಲ್ಲಿ ಬೆಳೆಗಳನ್ನು ಆಕ್ರಮಿಸುತ್ತವೆ. ಲೈಟ್ ಟ್ರ್ಯಾಪ್ ಗಳನ್ನು ಬಳಸುವುದರಿಂದ ಇದನ್ನು ತಡೆಯಬಹುದು. ಉದಾಹರಣೆಗೆ ಸೋಲಾರ್ ಲೈಟ್ ಟ್ರ್ಯಾಪ್. ಬಲ್ಬ್ ಗಳ ಕೆಳಗೆ ಕೀಟಗಳನ್ನು ಕೊಲ್ಲಲು ಸೀಮೆಎಣ್ಣೆ ಅಥವಾ ಇತರ ಸಾವಯವ ಕೀಟನಾಶಕಗಳನ್ನು ಬಳಸಬಹುದು.

 

ಇವುಗಳನ್ನು ಬಸುವ ವಿಧಾನವನ್ನು ವಿವರವಾಗಿ ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=q-eILMgIC5Q&list=PLuN9VcGQAtK7oisEShNo44mvl_N89CcKy&index=2

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 

 




Blog




Home    |   About Us    |   Contact    |   
microbi.tv | Powered by Ocat Online Advertising Service in India