Blog

ದಂಪತಿಸಾವಯವ ಕೃಷಿ ಪದ್ಧತಿ ಊರಿಗೆ ಮಾದರಿಯಾಗಿದೆ. ಬಳ್ಳಾರಿ ಜಿಲ್ಲೆ , ಸಂಡೂರು ತಾಲೂಕಿನ ದಂತಿಯಾದ ಅಕ್ಕನಾಗಮ್ಮ, ಶಿವಕುಮಾರ್ ಸಾವಯವ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಿ, ಎರಡೂವರೆ ಎಕರೆಯಲ್ಲಿ ಸುಮಾರು 7 ಬೆಳೆಗಿಂತ ಹೆಚ್ಚು ಬೆಳೆಯನ್ನು ಬೆಳೆಯುತ್ತಿದ್ದಾರೆ. ಮುಖ್ಯ ಬೆಳೆಯಾಗಿ ಅಡಿಕೆ, ಅದರಲ್ಲಿ ಅಂತರ ಬೆಳೆಯಾಗಿ ಬಾಳೆ , ಈರುಳ್ಳಿ, ತರಕಾರಿ ಬೆಳೆಗಳಿದ್ದು ಎಲ್ಲಾ ಬೆಳೆಗಳಿಗೂ ಡಾ.ಸಾಯಿಲ್ ದ್ರವರೂಪದ ಜೈವಿಕ ಗೊಬ್ಬರವನ್ನು ಬಳಸುತ್ತಿದ್ದಾರೆ.

 

ವೃತ್ತಿಯಲ್ಲಿ ಅಕ್ಕನಾಗಮ್ಮ ಶಿಕ್ಷಕಿ, ಅವರ ಪತಿ ಶಿವಕುಮಾರ್ ವಕೀಲರು.   ಕೃಷಿಯಲ್ಲಿ ಅಪಾರ ಒಲವು ಹೊಂದಿದ್ದರಿಂದ ಸಾವಯವ ಸಮಗ್ರ ಕೃಷಿ ಮಾಡಿ ದೇಶಕ್ಕೆ ವಿಷಮುಕ್ತ ಆಹಾರ ನೀಡುತ್ತಿದ್ದಾರೆ. ಕೊಟ್ಟಿಗೆ ಗೊಬ್ಬರ ಹಾಗೂ ಗೋಮೂತ್ರ ಬಳಸಿದರೆ ಸಾಕು, ಅದೇ ಸಾವಯವ ಕೃಷಿ ಪದ್ಧತಿ ಎಂದು ತಿಳಿದಿದ್ದರು.  ಈಗ ಹೇಳ್ತಾರೆ, ಸಾವಯವ ಕೃಷಿ ಎಂದರೆ ಸಾವಯವ ತ್ಯಾಜ್ಯಗಳ ಜತೆಗೆ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿ ಬೆಳೆದರೆ ಅದೇ ನಿಜವಾದ ಸಾವಯವ ಕೃಷಿ ಪದ್ಧತಿ. ಜತೆಗೆ ವೈಜ್ಞಾನಿಕ ಕೃಷಿ ಪದ್ಧತಿ, ಇದನ್ನು ಅರ್ಥೈಸಿಕೊಂಡಿದ್ದರಿಂದ ಇಂದು ತಮ್ಮ ತೋಟದ ಬೆಳೆಗಳು, ಯಾವ ರೋಗಬಾಧೆಯ ತೊಂದರೆಯಿಲ್ಲದೆ ಕೃಷಿ ಭೂಮಿ ಫಲವತ್ತತೆಯಾಗಿ ಬೆಳೆ ಆರೋಗ್ಯವಾಗಿದೆ ಎನ್ನುತ್ತಾರೆ.

 

ಇನ್ನು ಬೆಂಬಲ ಬೆಲೆಗೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಸಮಗ್ರ ಕೃಷಿ ಪದ್ಧತಿಯಿಂದ. ಸಮಗ್ರ ಕೃಷಿ ಪದ್ಧತಿ ರೈತನಿಗೆ ಯಾವಾಗಲೂ ಆದಾಯ ದಾಯಕವಾಗಿರುತ್ತದೆ. ಒಂದಕ್ಕೊಂದು ಬೆಳೆಗಳನ್ನು ಬೆಳೆದುಕೊಂಡಾಗ ಒಂದಲ್ಲಾ ಒಂದು ಬೆಳೆಯಲ್ಲಿ ಲಾಭ ಸಿಗುತ್ತದೆ. ಒಂದು ಬೆಳೆಗೆ ಬೆಲೆ ಸಿಗದಿದ್ದರೆ, ಇನ್ನೊಂದು ಬೆಳೆಯಲ್ಲಿ ಖಂಡಿತವಾಗಿಯು ಲಾಭ ಪಡೆಯುತ್ತಾನೆ. ಸಾವಯವ ಕೃಷಿ ಮಾಡಿಕೊಂಡಾಗ ರೈತನಿಗೆ ಹೆಚ್ಚು ಖರ್ಚು ಸಹಿತ ಆಗುವುದಿಲ್ಲ. ಇದನ್ನು ತಿಳಿದುಕೊಂಡ ದಂಪತಿ ಎಲ್ಲಾ ರೈತರಿಗೆ ಸಮಗ್ರ ಕೃಷಿಯ ಬಗ್ಗೆ ತಿಳಿ ಹೇಳುತ್ತಿದ್ದಾರೆ.  

  

ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೆ ರೈತರು ಆರ್ಥಿಕ ಕಷ್ಟಗಳನ್ನು ಅನುಭವಿಸುವುದೆ ಜಾಸ್ತಿ ಇದರಿಂದ ಮುಕ್ತಿ ಹೊಂದ ಬೇಕಾದರೆ ಸಾವಯವ ಸಮಗ್ರ ಕೃಷಿ ಒಂದೇ ದಾರಿ ಹಾಗಾದರೆ ಕೆಳಗೆ ಕಾಣುತ್ತಿರುವ ಲಿಂಕ್ ಅನ್ನು ಒಮ್ಮೆ ಕ್ಲಿಕ್ ಮಾಡಿ ಅಕ್ಕನಾಗಮ್ಮ ಶಿವಕುಮಾರ್ ಸಮಗ್ರ ಕೃಷಿ ಹೇಗೆ ಮಾಡಿದ್ದಾರೆ ಎಂಬುದನ್ನು ಪ್ರಾಯೋಗಿಕವಾಗಿ ತಿಳಿದುಕೊಳ್ಳಿ.

https://www.youtube.com/watch?v=EdbcAd05bes

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/



 

ವರದಿ: ವನಿತಾ ಪರಸನ್ನವರ್

 

#microbitv  #microbiagrotech  #agriculturalnewschannel  #agrinews  #Drsoil  #doctorsoil  #drsoilnearme  



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies