ಮೆಕ್ಕೆಜೋಳಕ್ಕೆ ಬೀಜೋಪಚಾರ ಏಕೆ ಮಾಡಬೇಕು..?

ಬೀಜೋಪಚಾರ ಎಂಬುದು ಬೀಜಗಳಿಗೆ ರಕ್ಷಾಕವಚ. ಬೀಜಗಳನ್ನು ಬಿತ್ತುವ ಮುನ್ನ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದರೆ, ಎಲ್ಲಾ ಬೀಜಗಳು ಉತ್ತಮವಾಗಿ ಮೊಳಕೆಯೊಡೆಯುವುದರ ಜತೆಗೆ ಆರೋಗ್ಯವಾದ ಬೆಳೆ ಪಡೆಯಬಹುದು. ಏಕದಳ ಧಾನ್ಯ, ದ್ವಿದಳ ಧಾನ್ಯ, ಸಸಿಗಳು ಹೀಗೆ ಆಯಾ ಬೆಳೆಗೆ ತಕ್ಕಂತಹ ಬೀಜೋಪಚಾರಗಳು ಲಭ್ಯ.ಆದರೆ ಆದಷ್ಟು ಸಾವಯವ ಕೃಷಿ ಪದ್ಧತಿಯಲ್ಲಿ ಜೈವಿಕ ಬೀಜೋಪಚಾರಗಳನ್ನು ಬಳಸುವುದು ಒಳ್ಳೆಯದು.

ಉಳ್ಳಾಗಡ್ಡಿಯಲ್ಲಿ ಸಾಹುಕಾರರಾಗುವುದು ಹೇಗೆ..?

ಈರುಳ್ಳಿ ಇಲ್ಲ ಎಂದ್ರೆ, ಬಹುತೇಕರ ಮನೆಯಲ್ಲಿ ಅಡುಗೆಯೇ ಅಪೂರ್ಣವಾಗಿಬಿಡುತ್ತದೆ.  ಯಾವುದೇ ಅಡುಗೆಯ ರುಚಿಯೂ ಇಲ್ಲಾ ಎಂದರ್ಥ. ಈರುಳ್ಳಿಯ ಒಗ್ಗರಣೆ ಚುರ್ ಎನ್ನಲಿಲ್ಲಾ ಎಂದರೆ ಅಡುಗೆ ಮನೆಗೆ ಕಳೇನೆ ಇರುವುದಿಲ್ಲ. ಆದರೆ ಒಗ್ಗರಣಗೆ ಮಾತ್ರವಲ್ಲ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿಯೂ ಈರುಳ್ಳಿ ಪ್ರಮುಖ ಪಾತ್ರ ವಹಿಸುತ್ತೆ.

ಕಲ್ಲಂಗಡಿ ಕೃಷಿ ಹೇಗೆ ಮಾಡಬೇಕು ಗೊತ್ತಾ?

ಕಲ್ಲಂಗಡಿ ರಾಜ್ಯದ ಬೇಸಿಗೆ ಕಾಲದ ಪ್ರಮುಖ ಬೆಳೆ. ಆದರೆ ಇತ್ತೀಚಿನ ದಿನಗಳಲ್ಲಿ ವರ್ಷಪೂರ್ತಿ ಇದಕ್ಕೆ ಬೇಡಿಕೆ ಸೃಷ್ಟಿಯಾಗಿದೆ. ಇದರ ವೈಜ್ಞಾನಿಕ ಹೆಸರು ಸಿಟ್ರುಲಸ್ ಲನಾಟಸ್. ಇದು ಕುಕುರ್ಬೆಟಿಸ್ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದನ್ನು ಬಚ್ಚಲಕಾಯಿ ಎಂದೂ ಕರೆಯುವುದುಂಟು. ಬೇಸಿಗೆ ಕಾಲ ಕಲ್ಲಂಗಡಿ ಹಣ್ಣು ಬೆಳೆಗೆ ಸೂಕ್ತ ಹವಾಗುಣ ಅಂತ ಹೇಳಬಹುದು. ಒಣಹವೆ ಇದ್ದರೆ ಸಕ್ಕರೆಯ ಅಂಶ ಚೆನ್ನಾಗಿ ಬರುತ್ತದೆ. 

ಎಲ್ಲಾ ರೈತರೂ ಉದ್ಧಾರವಾಗಲಿ ಎಂದು ಬಯಸಿದರು. ಆಮೇಲೆ?

       ಸಾವಯವ ಕೃಷಿ ಸಾವಿಲ್ಲದ ಕೃಷಿ, ಸನಾತನ ಕೃಷಿ. ಒಂದು ಕಾಲದಲ್ಲಿ ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕವಾಗಿ ಬೆಳೆದ ಆಹಾರ ತಿಂದು ಜನ ಸದೃಢವಾಗಿದ್ದರು. ಹಸಿರು ಕ್ರಾಂತಿಯ ನಂತರ ಹೆಚ್ಚಿದ ರಾಸಾಯನಿಕ ಬಳಕೆಯಿಂದ ಮಣ್ಣು ಮಲಿನವಾಗಿ ಆಹಾರದ ಪೌಷ್ಠಿಕತೆ ನಶಿಸಿಹೋಗಿದೆ. ಇದನ್ನು ಅರ್ಥ ಮಾಡಿಕೊಂಡಿರುವ ಜನರು ಈಗ ನಿಧಾನವಾಗಿ ಸಾವಯವ ಬೆಳೆಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಹೀಗಾಗಿ ರೈತರೂ ಕೂಡ ಸಾವಯವ ಕೃಷಿ ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಇಲ್ಲೊಬ್ಬ ರೈತ 7-8 ವರ್ಷಗಳಿಂದ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದು, ಇತರ ರೈತರಿಗೂ ಈ ಅಮೂಲ್ಯ ಜ್ಞಾನವನ್ನು ಹಂಚುತ್ತಿದ್ದಾರೆ.

ವಿಷಯುಕ್ತ ಶೇಂಗಾ ಬೇಡ, ವಿಷಮುಕ್ತ ಶೇಂಗಾ ಬೇಕು..!

ಶೇಂಗಾ ಬೀಜವನ್ನು ನಾವು ನೆಲಗಡಲೆ, ಕಡಲೆಕಾಯಿ, ಕಡ್ಲೆ ಬೀಜ ಸೇರಿದಂತೆ ಹಲವಾರು ಹೆಸರುಗಳಲ್ಲಿ ಕರೆಯುವುದುಂಟು. ಹೀಗಿರುವಾಗ ಶೇಂಗಾ ಬೀಜಕ್ಕೆ ಹೆಸರುಗಳು ಮಾತ್ರ ಹೆಚ್ಚಾಗಿಲ್ಲ ಶೇಂಗಾ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳು ಕೂಡ ಅಷ್ಟೇ ಅಧಿಕ.

ಕೃಷಿಯಲ್ಲಿ ರೈತನ ತಂತ್ರಜ್ಞಾನ ಹೆಚ್ಚುಇಳುವರಿಗೆ ಮಾರ್ಗ..!

ಕೃಷಿ ನಮ್ಮ ದೇಶದ ಆರ್ಥಿಕ ಬೆನ್ನೆಲುಬು. ಕೃಷಿ ಕ್ಷೇತ್ರದ ಏಳಿಗೆಯಲ್ಲಿ ನಮ್ಮ ದೇಶದ ಏಳಿಗೆ ಇದೆ ಅಂತ ಹೇಳಿದರೆ ತಪ್ಪಾಗಲಾರದು. ಸದ್ಯಕ್ಕೆ ಕೃಷಿಯ ಮೇಲೆ ನಮ್ಮ ಸರ್ಕಾರ ತೋರುತ್ತಿರುವ ಕಾಳಜಿ, ನೀಡುತ್ತಿರುವ ಸವಲತ್ತುಗಳನ್ನು ನೋಡ್ತಾಯಿದ್ರೆ ರೈತರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.

ಶೇಂಗಾ ಅಥವಾ ಕಾಳು ಬೆಳೆಯನ್ನು ಬೆಳೆಯುವಾಗ..!

ಬಡವರ ಬಾದಾಮಿ ಶೇಂಗಾ ರಾಜ್ಯದ ಎಲ್ಲಾ ಭಾಗದಲ್ಲಿ ಬೆಳೆಯುವ ಬೆಳೆ. ಎಲ್ಲಾ ರೀತಿಯ ಹವಾಗುಣಕ್ಕೂ ಹೊಂದಿಕೊಳ್ಳುವುದರಿಂದ ಪ್ರಮುಖ ದ್ವಿದಳ ಎಣ್ಣೆಕಾಳು ಬೆಳೆ ಎಂದು ಕರೆಯುತ್ತಾರೆ.

ಒಂದೇ ಒಂದು ಬದಲಾವಣೆಯಿಂದ 100 ಟನ್ ಕಬ್ಬು ಇಳುವರಿ..!

ಮೈತುಂ ಸಿಹಿಯನ್ನು ತುಂಬಿಕೊಂಡು ಸಕ್ಕರೆ, ಬೆಲ್ಲ ಸೇರಿದಂತೆ ಹಲವಾರು ಪದಾರ್ಥಗಳಾಗಿ ಮಾರ್ಪಾಡಾಗುವ ಕಬ್ಬು ನಮ್ಮ ರಾಜ್ಯದ ಪ್ರಮುಖ ಬೆಳೆಗಳಲ್ಲಿ ಒಂದು. ಹಾಗಾಗಿ ಕಬ್ಬು ಬೆಳೆ ರೈತನ ಕೈಹಿಡಿಯಿತು ಅಂದರೆ ಖಜಾನೆ ತುಂಬಿಸುವುದರಲ್ಲಿ ಅನುಮಾನವೇ ಇಲ್ಲ. ಆದರೆ ಈಗಿನ ಕೃಷಿ ಪದ್ಧತಿಯಿಂದ ಕಬ್ಬು ಬೆಳೆಯಲ್ಲಿ ಎಕರೆಗೆ 30 ರಿಂದ 40 ಟನ್ ಪಡೆಯುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ತಾವು ಎಡುವುತ್ತಿರುವುದು ಎಲ್ಲಿ ಎಂಬುದು ಬಹುತೇಕ ರೈತರಿಗೂ ಅರಿವಿಲ್ಲ. ಇದನ್ನು ಮನಗಂಡಿರುವ ಮೈಕ್ರೋಬಿ ಸಂಸ್ಥೆ ರೈತರಿಗೆ ಅರಿವು ಮೂಡಿಸಿ ಎಕರೆಗೆ 80 ರಿಂದ 100 ಟನ್ ಇಳುವರಿ ಪಡೆಯಲು ರೈತರಿಗೆ ಬೆನ್ನೆಲುಬಾಗಿ ನಿಂತಿದೆ.

ಆರೋಗ್ಯಕರ ಅರಿಶಿನ ಬೆಳೆಯಲು ಸರಳ ಮಾರ್ಗ

ಅರಿಶಿನ ಕೇವಲ ಅಡುಗೆಗೆ ಮಾತ್ರ ಬಳಸುವಂತಹ ಪದಾರ್ಥವ ಲ್ಲ. ಸಾಕಷ್ಟು ರೋಗಗಳಿಗೆ ಅರಿಶಿನ ರಾಮಬಾಣವಾಗಿದೆ.ಅರಿಶಿನದಲ್ಲಿ ಕಂಡು ಬರುವ ಕರ್ಕುಮಿನ್ ಎಂಬ ಪೋಷಕಾಂಶವೇ ಈ ಹೆಗ್ಗಳಿಕೆಗೆ ಪ್ರಮುಖ ಕಾರಣ. ಅಷ್ಟೇ ಅಲ್ಲ ಸೌಂದರ್ಯವರ್ಧಕಗಳಲ್ಲಿಯೂ ಸಹಿತ ಅರಿಶಿನದ ಪ್ರಾಮುಖ್ಯತೆ ಹೆಚ್ಚು. ಅರಿಶಿನದಲ್ಲಿ ಕರ್ಕುಮಿನ್ ಪೋಷಕಾಂಶ ಹೆಚ್ಚು ಆದ್ಯತೆ ಪಡೆದಿರುವುದರಿಂದ ಅರಿಶಿನ ಖರೀದಿ ಮಾಡುವಾಗ, ಮಾರ್ಕೆಟ್ ನಲ್ಲಿ ಕರ್ಕುಮಿನ್ ಕಂಟೆಂಟ್ ಎಷ್ಟಿದೆ ಎಂಬುದನ್ನು ನೋಡಿ ಖರೀದಿಸುತ್ತಾರೆ. ಅದು ಅಗತ್ಯ ಪ್ರಮಾಣದಲ್ಲಿದ್ದರೆ ಮಾತ್ರ ಹೆಚ್ಚು ಬೇಡಿಕೆ. ಹೀಗಿರುವಾಗ ರೈತರು ಅರಿಶಿನವನ್ನು ಬೆಳೆಯುವಾಗ ಗುಣಮಟ್ಟದ ಬೆಳೆ ಬರುವ ಹಾಗೆ ಜೈವಿಕ ಗೊಬ್ಬರಗಳನ್ನು ಬಳಸಿ ಬೆಳೆದರೆ ಒಳ್ಳೆಯದು.

120 ಎಕರೆಯ ಕಡಲೆಯಲ್ಲಿ ನೋಡಿ ಚಮತ್ಕಾರ..!

ಕಡಲೆ ಬೆಳೆ ಉತ್ಪಾದನೆ ಹಾಗೂ ಬೆಳವಣಿಗೆಯಲ್ಲಿ ಭಾರತ ದೇಶ ಅಗ್ರಸ್ಥಾನದಲ್ಲಿದೆ. ಕಡಲೆ ಬೆಳೆಯಲ್ಲಿ ಉತ್ತಮ ಪೋಷಕಾಂಶಗಳಿರುವುದರಿಂದ ಹೆಚ್ಚು ಬಳಸಲಾಗುತ್ತದೆ. 3 ತಿಂಗಳ ಬೆಳೆಯಾಗಿರುವ ಕಡಲೆ ಬೆಳೆಯನ್ನು ವಿವಿಧ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದು. ಮರಳು ಮಿಶ್ರಿತ ಕಲಸು ಮಣ್ಣು, ಜೇಡಿ ಮಣ್ಣು ಇದಕ್ಕೆ ಸೂಕ್ತವಾಗಿರುತ್ತದೆ. ಮಣ್ಣಿನಲ್ಲಿ 5.5 ರಿಂದ 7.0 ರವರೆಗಿನ ಪಿಎಚ್ ಮಟ್ಟ ಸೂಕ್ತ. ತೇವಾಂಶ ಭರಿತವಾದ ಹವಾಗುಣದಲ್ಲಿ ಕಡಲೆ ಚೆನ್ನಾಗಿ ಬೆಳೆಯುತ್ತದೆ.

|<  1   2  3  4   5 ...>|
Home    |   About Us    |   Contact    |   
microbi.tv | Powered by Ocat Business Promotion Service in India