Blog

ಕಡಲೆ ಬೆಳೆ ಉತ್ಪಾದನೆ ಹಾಗೂ ಬೆಳವಣಿಗೆಯಲ್ಲಿ ಭಾರತ ದೇಶ ಅಗ್ರಸ್ಥಾನದಲ್ಲಿದೆ. ಕಡಲೆ ಬೆಳೆಯಲ್ಲಿ ಉತ್ತಮ ಪೋಷಕಾಂಶಗಳಿರುವುದರಿಂದ ಹೆಚ್ಚು ಬಳಸಲಾಗುತ್ತದೆ. 3 ತಿಂಗಳ ಬೆಳೆಯಾಗಿರುವ ಕಡಲೆ ಬೆಳೆಯನ್ನು ವಿವಿಧ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದು. ಮರಳು ಮಿಶ್ರಿತ ಕಲಸು ಮಣ್ಣು, ಜೇಡಿ ಮಣ್ಣು ಇದಕ್ಕೆ ಸೂಕ್ತವಾಗಿರುತ್ತದೆ. ಮಣ್ಣಿನಲ್ಲಿ 5.5 ರಿಂದ 7.0 ರವರೆಗಿನ ಪಿಎಚ್ ಮಟ್ಟ ಸೂಕ್ತ. ತೇವಾಂಶ ಭರಿತವಾದ ಹವಾಗುಣದಲ್ಲಿ ಕಡಲೆ ಚೆನ್ನಾಗಿ ಬೆಳೆಯುತ್ತದೆ.

 

ಕಡಲೆ ಅಥವಾ ಯಾವುದೇ ದ್ವಿದಳ ಧಾನ್ಯವನ್ನು ಬೆಳೆಯುವಾಗ ಬೀಜಗಳಿಗೆ ಬೀಜೋಪಚಾರ ತುಂಬಾ ಮುಖ್ಯವಾಗಿರುತ್ತದೆ. ಮೊದಲಿಗೆ ಬೀಜೋಪಚಾರ ಎಂದರೆ ಏನು ಎಂಬುದನ್ನು ತಿಳಿಯುವುದಾದರೆ, ಬೀಜೋಪಚಾರ ಬೆಳೆಗಳಿಗೆ ಮಾಡುವ ಅತಿಮುಖ್ಯವಾದ ಒಂದು ಉಪಚಾರ. ಬೀಜಗಳು ಮೊಳಕೆಯೊಡೆಯುವಾಗ ರೋಗಗಳು ತಾಕದ ಹಾಗೆ ಮೊಳಕೆಯೊಡೆಯಬೇಕು. ಯಾವುದೇ ರೋಗಕ್ಕೆ ತುತ್ತಾಗದೆ ಆರೋಗ್ಯವಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಬೀಜೋಪಚಾರವನ್ನು ಮಾಡಲಾಗುತ್ತದೆ. ಇನ್ನು ಬೀಜೋಪಚಾರಗಳಲ್ಲಿ ಹಲವಾರು ವಿಧಾನಗಳು. ದ್ರವರೂಪದ ಬೀಜೋಪಚಾರ ಹಾಗೂ ಪೌಡರ್ ಫಾರ್ಮ್ ನಲ್ಲಿ ಬೀಜೋಪಚಾರ ಮಾಡಲಾಗುತ್ತದೆ.

 

ಪೌಡರ್ ಫಾರ್ಮ್ ಬೀಜೋಪಚಾರ:  ಪೌಡರ್ ಫಾರ್ಮ್ ನಲ್ಲಿ ಬೀಜೋಪಚಾರ ಮಾಡಿದಾಗ, ಬೀಜಗಳಿಗೆ ಸರಿಯಾಗಿ ಲೇಪನವಾಗದೆ ಬಿತ್ತಿದಾಗ ಬೀಜಗಳು ಅನಾರೋಗ್ಯಕ್ಕೆ ತುತ್ತಾಗುವ ಪ್ರಸಂಗಗಳು ಹೆಚ್ಚಾಗಿರುತ್ತದೆ. ಆದ್ದರಿಂದ ಪೌಡರ್ ಫಾರ್ಮ್ ಬೀಜೋಪಚಾರ ಅಷ್ಟೊಂದು ಸೂಕ್ತವಲ್ಲ.

 

ದ್ರವ ರೂಪದ ಬೀಜೋಪಚಾರ: ದ್ರವರೂಪದ ಬೀಜೋಪಚಾರ ಮಾಡಿದಾ ಬೀಜಗಳಿಗೆ ದ್ರಾವಣವು ಸರಿಯಾಗಿ ಲೇಪನಗೊಂಡು ರಕ್ಷಾಕವಚ ಹಾಕಿದಂತೆ. ಯಾವುದೇ ರೋಗ ತಾಕದ ಹಾಗೆ ನೋಡಿಕೊಳ್ಳುತ್ತದೆ. ಆದ್ದರಿಂದ ದ್ರವರೂಪದ ಬೀಜೋಪಚಾರ ಹೆಚ್ಚು ಒಳ್ಳೆಯದು.

 

ದ್ರವ ರೂಪದ ಬೀಜೋಪಚಾರದಲ್ಲಿ ಹೆಚ್ಚು ಪ್ರಚಲಿತವಾಗಿರುವುದು ಡಾ. ಸಾಯಿಲ್ ಬೀಜೋಪಚಾರ. ಇದು ಕಡಿಮೆ ಖರ್ಚಿನಲ್ಲಿ ರೈತರ ಕೈಗೆಟುಕುವ ಬೆಲೆಯಲ್ಲಿದ್ದು, ನಿಮ್ಮ ಬೆಳೆಯಲ್ಲಿ ಹೆಚ್ಚಿನ ಇಳುವರಿ ಬರಲು ಸಹಾಯ ಮಾಡುತ್ತದೆ. ಹಾಗಾಗಿ ಚಿಕ್ಕನಾಯಕನಕೊಪ್ಪದ ಸಾವಯವ ಕೃಷಿಕರಾದ ಶ್ರೀಕಾಂತ್ ಅವರು ತಮ್ಮ 120 ಎಕರೆಯಲ್ಲಿ ಡಾ.ಸಾಯಿಲ್ ಬೀಜೋಪಚಾರ ಬಳಸಿ ನಾಟಿ ಮಾಡಿದ್ದು, ಅವರ ಬೆಳೆ ನೋಡುಗರ ಕಣ್ಣು ಕುಕ್ಕುವಂತೆ ಬೆಳೆದು ನಿಂತಿದೆ. ರಾಸಾಯನಿಕ ಬಳಸಿ ಬೆಳೆಯುವಾಗ 120 ಎಕರೆಗೆ 1,80,000 ಖರ್ಚು ಮಾಡುತ್ತಿದ್ದ ಕೃಷಿಕ, ಸಾವಯವ ಕೃಷಿಯಲ್ಲಿ ಡಾ.ಸಾಯಿಲ್ ದ್ರವರೂಪದ ಬೀಜೋಪಚಾರ ಬಳಸಿದ ಮೇಲೆ ಎಕರೆಗೆ 500ರೂ.ಗಳಂತೆ 120 ಎಕರೆಗೆ 60,000 ಖರ್ಚು ಮಾಡಿದ್ದಾರೆ.

 

https://www.youtube.com/watch?v=Uch7HbgYh7I&t=85s

 

ವರದಿ: ವನಿತಾ ಪರಸನ್ನವರ್

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

 




Blog




Home    |   About Us    |   Contact    |   
microbi.tv | Powered by Ocat Online Advertising Service in India