Blog

ಶೇಂಗಾ ಬೀಜವನ್ನು ನಾವು ನೆಲಗಡಲೆ, ಕಡಲೆಕಾಯಿ, ಕಡ್ಲೆ ಬೀಜ ಸೇರಿದಂತೆ ಹಲವಾರು ಹೆಸರುಗಳಲ್ಲಿ ಕರೆಯುವುದುಂಟು. ಹೀಗಿರುವಾಗ ಶೇಂಗಾ ಬೀಜಕ್ಕೆ ಹೆಸರುಗಳು ಮಾತ್ರ ಹೆಚ್ಚಾಗಿಲ್ಲ ಶೇಂಗಾ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳು ಕೂಡ ಅಷ್ಟೇ ಅಧಿಕ.

 

ಬಡವರ ಬಾದಾಮಿ ಶೇಂಗಾವನ್ನು ತಿನ್ನುವುದರಿಂದ ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು, ಮಧುಮೇಹಿಗಳಿಗೂ ಒಳ್ಳೆಯದು. ಈ ರೀತಿಯಾದ ಹತ್ತು ಹಲವಾರು ಆರೋಗ್ಯಕರ ಲಾಭಗಳು ಶೇಂಗಾ ಬೀಜದಲ್ಲಿವೆ.

 

ಶೇಂಗಾ ಬೀಜದಲ್ಲಿ ಪ್ರೋಟೀನ್ ಶಕ್ತಿ ಮತ್ತು ಕಬ್ಬಿಣದ ಪ್ರಮಾಣ ಹೆಚ್ಚಾಗಿದ್ದು, ಅರಾಚಿನ್ ಮತ್ತು ಕೊನರಾಚಿನ್ ಎಂಬ ಪ್ರೋಟೀನ್ ಗಳು ಪೌಷ್ಠಿಕ ಮೌಲ್ಯಗಳನ್ನು ಹೆಚ್ಚಿಸುತ್ತವೆ.

 

ಷ್ಟೆಲ್ಲಾ ಆರೊಗ್ಯಕ್ಕೆ ಪ್ರಯೋಜನಕಾರಿ ಪೌಷ್ಠಿಕ ಶಕ್ತಿಯನ್ನು ಹೊಂದಿರುವ ಶೇಂಗಾ ಬೆಳೆಗೆ, ನಮ್ಮ ರೈತರು ರಾಸಾಯನಿಕ ಗೊಬ್ಬರಗಳನ್ನು ಬಳಸಿ, ಬೆಳೆಯಲ್ಲಿ ಹಾಗೂ ಭೂಮಿಯಲ್ಲಿ ಪೋಷಕಾಂಶಗಳನ್ನು ನಾಶಮಾಡಿಕೊಳ್ಳುತ್ತಾರೆ. ವಿಷಯುಕ್ತ ಆಹಾರವನ್ನು ಬೆಳೆದು ಮಣ್ಣನ್ನು ನಾಶಪಡಿಸಿಕೊಂಡು, ಇಡೀ ದೇಹವನ್ನೇ ರೋಗಗಳ ಆಗರ ಮಾಡಿಕೊಳ್ಳುತ್ತಿದ್ದಾರೆ.

 

ಇಂತಹ ರೈತರ ಮಧ್ಯೆ, ಲ್ಲೊಬ್ಬ ಕೃಷಿಕರು ಸಾವಯವ ಕೃಷಿ ಪದ್ಧತಿಯಲ್ಲಿ ಶೇಂಗಾ ಬೆಳೆದು ವಿಷಮುಕ್ತ ಆಹಾರವನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ರೈತ ಅರುಣ್ ಕುಮಾರ್ ಅವರು, ಸಾವಯವ ಕೃಷಿ ಪದ್ಧತಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಶೇಂಗಾ ಬೆಳೆಯನ್ನು ಬೆಳೆದಿದ್ದು, ಕಡಿಮೆ ಖರ್ಚಿನಲ್ಲಿ ಬೆಳೆ ಅದ್ಭುತವಾದ ಇಳುವರಿಯನ್ನು ನೀಡಿದೆ. ಸಾವಯವ ಕೃಷಿ ಸಾವಿಲ್ಲದ ಕೃಷಿ ಎಂಬುದರ ಅರಿವು ಈಗ ರೈತರಿಗೆ ಅರಿವಾಗಿದ್ದು, ಭೂಮಿಯ ಉಳಿವಿಗಾಗಿ ರೈತ ಶ್ರಮಿಸುತ್ತಿದ್ದಾರೆ.

 

https://www.youtube.com/watch?v=WQQjYCymFgU&t=107s

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

  

ವರದಿ: ವನಿತಾ ಪರಸನ್ನವರ್

 




Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing