ಕಲ್ಲಂಗಡಿ ರಾಜ್ಯದ ಬೇಸಿಗೆ ಕಾಲದ ಪ್ರಮುಖ ಬೆಳೆ. ಆದರೆ ಇತ್ತೀಚಿನ ದಿನಗಳಲ್ಲಿ ವರ್ಷಪೂರ್ತಿ ಇದಕ್ಕೆ ಬೇಡಿಕೆ ಸೃಷ್ಟಿಯಾಗಿದೆ. ಇದರ ವೈಜ್ಞಾನಿಕ ಹೆಸರು ಸಿಟ್ರುಲಸ್ ಲನಾಟಸ್. ಇದು ಕುಕುರ್ಬೆಟಿಸ್ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದನ್ನು ಬಚ್ಚಲಕಾಯಿ ಎಂದೂ ಕರೆಯುವುದುಂಟು. ಬೇಸಿಗೆ ಕಾಲ ಕಲ್ಲಂಗಡಿ ಹಣ್ಣು ಬೆಳೆಗೆ ಸೂಕ್ತ ಹವಾಗುಣ ಅಂತ ಹೇಳಬಹುದು. ಒಣಹವೆ ಇದ್ದರೆ ಸಕ್ಕರೆಯ ಅಂಶ ಚೆನ್ನಾಗಿ ಬರುತ್ತದೆ.
ಹಣ್ಣಿನಲ್ಲಿ ಶೇ. 78ರಷ್ಟು ಭಾಗವು ಸೇವನೆಗೆ ಯೋಗ್ಯವಾಗಿದ್ದರಿಂದ ಪ್ರೋಟಿನ್, ಕ್ಯಾಲರೀಸ್ ಗಳಿಂದ ಶಕ್ತಿಯನ್ನು ಹೊಂದಿದೆ. ಇದಲ್ಲದೆ ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣ, ಕರೋಟಿನ್ , ಥಯಾಮಿನ್ , ರೈಬೋಪ್ಲೇವಿನ್, ನಯಾಸಿನ್ ಹಾಗೂ ವಿಟಮಿನ್ ಸಿ ಅಂಶವನ್ನು ಸಹ ಹೊಂದಿದೆ.
ಮಣ್ಣು
ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಜೇಡಿಮಣ್ಣು ತುಂಬಾ ಸೂಕ್ತವಾಗಿದೆ. ಮಣ್ಣಿನಲ್ಲಿ ಸಾವಯವ ಪದಾರ್ಥಗಳ ಅಂಶ ಹೆಚ್ಚಾಗಿದ್ದು, ರಸಸಾರ 6 ರಿಂದ 7 ಇದ್ದರೆ ಸೂಕ್ತ. ಹೆಚ್ಚು ಕ್ಷಾರ ಮತ್ತು ಹುಳಿ ಮಣ್ಣಿನಲ್ಲಿ ಕಲ್ಲಂಗಡಿ ಬೆಳೆಯುವುದು ಸೂಕ್ತವಲ್ಲ. ಇತ್ತೀಚಿನ ದಿನಗಳಲ್ಲಿ ರೈತರು ಸಣ್ಣ ಪ್ರಮಾಣದಲ್ಲಿ ಕರಾವಳಿ ತೀರಪ್ರದೇಶದಲ್ಲಿ ಬೆಳೆಯುವುದುಂಟು. ಇನ್ನು ಬೇಸಿಗೆಯ ಕಾಲದಲ್ಲಿ ನದಿ ತೀರಗಳಲ್ಲಿ ಬೆಳೆಯುತ್ತಾರೆ.
ಹವಾಗುಣ
ಉಷ್ಣ ಹವೆಯಿರುವ ವಾತಾವರಣ, ಪ್ರಖರವಾದ ಬಿಸಿಲು, ಹೆಚ್ಚು ಹಗಲಿನ ಉಷ್ಣಾಂಶ ಮತ್ತು ರಾತ್ರಿಯ ಬೆಚ್ಚನೆಯ ಹವಾಮಾನ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಲು ಸಹಾಯಕವಾಗುತ್ತೆ. ಈ ಬೆಳೆಯನ್ನು ನವೆಂಬರ್ ನಿಂದ ಅಕ್ಟೋಬರ್ ತಿಂಗಳಲ್ಲಿ ಬೆಳೆದರೆ ಬೆಳೆ ಚೆನ್ನಾಗಿಬರುತ್ತದೆ. ಹಾಗಾಗಿ ಅಕ್ಟೋಬರ್ ತಿಂಗಳಲ್ಲಿ ಬೆಳೆ ಬೆಳೆಯಲು ಪ್ರಾರಂಭಿಸಬೇಕು.
ತಳಿಗಳು
ಅರ್ಕಾಜ್ಯೋತಿ
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರಿನಿಂದ ಬಿಡುಗಡೆಗೊಂಡ ಈ ಸಂಕರಣ ತಳಿಯು ದುಂಡನೆಯ ಆಕಾರ ಹೊಂದಿದ್ದು, ಸುಮಾರು 6-8 ಕೆ.ಜಿ ತೂಕ ಬರುತ್ತದೆ. ಸಕ್ಕರೆಯ ಅಂಶ 11-13 ಡಿಗ್ರಿ ಬ್ರಿಕ್ಸ್ ಹೊಂದಿದ್ದು, ದೂರದ ಮಾರುಕಟ್ಟೆಗೆ ಕೆಡದಂತೆ ಸರಾಗವಾಗಿ ಸಾಗಿಸಬಹುದು. ಬೆಳೆಯು 90 ರಿಂದ 100 ದಿವಸಗಳಲ್ಲಿ ಕೊಯ್ಲಿಗೆ ಬರುತ್ತದೆ.
ಅರ್ಕಾಮಾಣಿಕ್
ಈ ತಳಿಯ ಹಣ್ಣುಗಳು ದುಂಡಾಗಿದ್ದು, ಹಸಿರು ಬಣ್ಣದ ಪಟ್ಟೆಗಳನ್ನು ಹೊಂದಿರುತ್ತದೆ. ಪ್ರತಿ ಹಣ್ಣು ಸುಮಾರು 4 – 6 ಕೆ.ಜಿ ತೂಕವನ್ನು ಹೊಂದಿದ್ದು, ದೀರ್ಘಾವಧಿಯ ತಳಿಯಾಗಿದೆ. 100-120 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. 12 ರಿಂದ 13 ಡಿಗ್ರಿ ಬ್ರಿಕ್ಸ್ ಅನ್ನು ಹೊಂದಿದ್ದು. ಬೂದು ರೋಗ, ಎಲೆಚುಕ್ಕೆ ರೋಗ, ಬೂಜು ತುಪ್ಪಟ ರೋಗಗಳ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಹೊಂದಿದೆ.
ಶುಗರ್ ಬೇಬಿ
ಅಮೇರಿಕಾ ದೇಶದ ತಳಿಯಾದ ಇದನ್ನು ಭಾರತೀಯ ಸಂಶೋಧನಾ ಸಂಸ್ಥೆ ನವದೆಹಲಿಯಿಂದ ಬಿಡುಗಡೆಗೊಳಿಸಲಾಗಿದೆ. ಇದೊಂದು ಅಲ್ಪಾವಧಿ ತಳಿಯಾಗಿದ್ದು 80 ರಿಂದ 90 ದಿವಸಗಳಲ್ಲಿ ಕೊಯ್ಲು ಮಾಡಬಹುದು. ಸುಮಾರು 4-6 ಕೆ.ಜಿ ವರೆಗೆ ಬೆಳೆಯುವ ಈ ಹಣ್ಣಿನಲ್ಲಿ 11-13 ಡಿಗ್ರಿ ಬ್ರಿಕ್ಸ್ ಇರುತ್ತದೆ.
ಅರ್ಕಾ ಐಶ್ವರ್ಯ
ಇದು ಒಂದು ಸಂಕರಣ ತಳಿ. ಈ ಹಣ್ಣು ಉದ್ದವಾಗಿದ್ದು, ಕೆಂಪು ಬಣ್ಣದ ತಿರುಳನ್ನು ಹೊಂದಿದೆ. ಇದರ ಸಿಹಿ ಅಂಶ 13 ಬ್ರಿಕ್ಸ್ ಇದ್ದು, ಹಣ್ಣಿನ ಸರಾಸರಿ ತೂಕ 9 ಕೆ.ಜಿ ಇರುತ್ತದೆ. ಗಿಡಕ್ಕೆ ಒಂದೇ ಹಣ್ಣು ಬಿಡುತ್ತದೆ. ಇದರ ಅವಧಿ 90-95 ದಿನಗಳಾಗಿದ್ದು, ಈ ಹಣ್ಣುಗಳು ತಿನ್ನಲು ತುಂಬಾ ರಸಭರಿತ ಸಿಹಿಯಾಗಿರುತ್ತದೆ.
ಹೆಚ್ಚಿನ ಪ್ರೋಟಿನ್ ಗಳೊಂದಿಗೆ ಆರೋಗ್ಯಕ್ಕೆ ಲಾಭದಾಯಕವಾಗಿರುವ ಕಲ್ಲಂಗಡಿಯನ್ನು ರಾಸಾಯನಿಕ ಪದ್ಧತಿಯಲ್ಲಿ ಬೆಳೆಯದೆ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದರೆ, ಇನ್ನೂ ಹೆಚ್ಚಿನ ಲಾಭಗಳನ್ನು ಪಡೆಯಬಹುದು. ಈ ಮೇಲೆ ತಿಳಿಸಿದ ತಳಿಗಳಲ್ಲಿ ಅಷ್ಟೊಂದು ಬ್ರಿಕ್ಸ್ ಕಂಟೆಂಟ್ ಇದ್ದರೂ ಸಹಿತ, ನಾವು ರಾಸಾಯನಿಕದಲ್ಲಿ ಬೆಳೆಯುವುದರಿಂದ ಗುಣಮಟ್ಟ ಸರಿಯಾಗಿ ಬರುವುದಿಲ್ಲ. ಹಾಗಾಗಿ ಮಾರ್ಕೆಟ್ ನಲ್ಲಿ ರೇಟು ಕಡಿಮೆಯಾಗುವುದು, ಹಣ್ಣುಗಳು ಬೇಗ ಕೆಡುತ್ತದೆ. ಹಾಗಾಗಿ ಸಾವಯವ ಕೃಷಿಯಲ್ಲಿ ಕಲ್ಲಂಗಡಿ ಬೆಳೆದರೆ, ಉತ್ತಮ ಗುಣಮಟ್ಟದೊಂದಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು.
ಮಂಡ್ಯ ಜಿಲ್ಲೆಯ ಮಾದರಿ ಸಾವಯವ ಕೃಷಿಕರು, ನಿವೃತ್ತ ಎಸ್ ಪಿ ಆದಂತಹ ಬಲರಾಮೇಗೌಡರ ಸಾವಯವ ಕೃಷಿಯಲ್ಲಿ ಬೆಳೆದ ಕಲ್ಲಂಗಡಿ ಇದಕ್ಕೆ ಉದಾಹರಣೆ. ಇವರು ಸಾವಯವ ಕೃಷಿ ಪದ್ಧತಿಯಲ್ಲಿ ಕಡಿಮೆ ಖರ್ಚಿನಿಂದ ಕಲ್ಲಂಗಡಿ ಬೆಳೆದು, ಹೆಚ್ಚಿನ ಇಳುವರಿಯನ್ನು ಪಡೆಯುತ್ತಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿರುವುದರಿಂದ ಭೂಮಿಯಲ್ಲಿ ಫಲವತ್ತತೆ ಹೆಚ್ಚಾಗಿ ಬೆಳೆಯಲ್ಲಿ ಸಕ್ಕರೆಯ ಅಂಶ ಕೂಡ ಹೆಚ್ಚಾಗಿದೆ. ಬೆಳೆ ರೋಗಮುಕ್ತವಾಗಿದೆ.
https://www.youtube.com/watch?v=M5y1-bo4LSo&t=303s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/mic
ವರದಿ : ವನಿತಾ ಯ ಪರಸನ್ನವರ್