ಕೃಷಿ ನಮ್ಮ ದೇಶದ ಆರ್ಥಿಕ ಬೆನ್ನೆಲುಬು. ಕೃಷಿ ಕ್ಷೇತ್ರದ ಏಳಿಗೆಯಲ್ಲಿ ನಮ್ಮ ದೇಶದ ಏಳಿಗೆ ಇದೆ ಅಂತ ಹೇಳಿದರೆ ತಪ್ಪಾಗಲಾರದು. ಸದ್ಯಕ್ಕೆ ಕೃಷಿಯ ಮೇಲೆ ನಮ್ಮ ಸರ್ಕಾರ ತೋರುತ್ತಿರುವ ಕಾಳಜಿ, ನೀಡುತ್ತಿರುವ ಸವಲತ್ತುಗಳನ್ನು ನೋಡ್ತಾಯಿದ್ರೆ ರೈತರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಸರ್ಕಾರ ಏನೋ ಸವಲತ್ತುಗಳನ್ನು ನೀಡುವ ಮೂಲಕ ಕೃಷಿಗೆ ಬೆಂಬಲ ನೀಡುತ್ತಿದೆ. ಆದರೆ ನಮ್ಮ ರೈತರ ಕೃಷಿ ಪದ್ಧತಿ ಮಾತ್ರ ಬದಲಾಗುತ್ತಿಲ್ಲ. ಕೃಷಿ ಪದ್ಧತಿ ಬದಲಾಗುವುದೆಂದರೆ ಹೇಗೆ..? ರೈತರು ಕೃಷಿಯಲ್ಲಿ ತೆಗೆದುಕೊಳ್ಳಬೇಕಾದ ಸರಿಯಾದ ಕೃಷಿ ಕ್ರಮಗಳು ಯಾವುವು..? ಎಂಬುದನ್ನು ನೋಡುವುದಾದರೆ
- ಮೊದಲು ರೈತ ತನ್ನ ರಾಸಾಯನಿಕ ಕೃಷಿ ಪದ್ಧತಿಯಿಂದ ಆಚೆ ಬಂದು, ರಾಸಾಯನಿಕ ಗೊಬ್ಬರಗಳನ್ನು ಕೃಷಿ ಭೂಮಿಗೆ ಬಳಸುವುದನ್ನು ನಿಲ್ಲಿಸಬೇಕು
- ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ, ಜೈವಿಕ ಗೊಬ್ಬರಗಳನ್ನು ಬಳಸಬೇಕು. ಪರಿಸರಕ್ಕೆ ಪೂರಕವಾದ ಹಸಿರೆಲೆ ಗೊಬ್ಬರಗಳ ಬಳಕೆ, ಕೃಷಿ ತ್ಯಾಜ್ಯಗಳ ನಿರ್ವಹಣೆಯನ್ನು ಸರಿಯಾದ ಕ್ರಮದಲ್ಲಿ ಅನುಸರಿಸಬೇಕಾಗುತ್ತದೆ.
- ಕೃಷಿಯಲ್ಲಿ ನೀರಿನ ನಿರ್ವಹಣೆ ತುಂಬಾ ಮುಖ್ಯ. ಕೃಷಿ ಭೂಮಿಯ ಪರಿಸ್ಥಿತಿಯನ್ನು ಸರಿಯಾಗಿ ತಿಳಿದುಕೊಂಡು ನೀರು ನೀಡಬೇಕಾಗುತ್ತದೆ.
ಇನ್ನು ಈ ರೀತಿಯಾದ ಹಲವಾರು ವೈಜ್ಞಾನಿಕ ವಿಷಗಳನ್ನು ತಿಳಿದು, ಕೃಷಿಯನ್ನು ಮಾಡಿದಾಗ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯ.
ಕೃಷಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಲಾಭದಾಯಕ. ಕೃಷಿ ಜತೆಗೆ ತಂತ್ರಜ್ಞಾನ ಈಗಾಗಲೇ ಹೆಚ್ಚಾಗಿ ಯಂತ್ರೋಪಕರಣಗಳ ಬಳಕೆಯಾಗುತ್ತಿದೆ. ಇವೆಲ್ಲವೂ ರೈತನ ಶ್ರಮವನ್ನು ಕಡಿಮೆ ಮಾಡಿದೆ. ಕಾರ್ಮಿಕರ ಸಮಸ್ಯೆಯೂ ಕಡಿಮೆಯಾಗಿದೆ. ಆದರೆ ಭಾರವಾದ ವಸ್ತುಗಳನ್ನು ಹೆಚ್ಚಾಗಿ ಕೃಷಿ ಭೂಮಿಯ ಮೇಲೆ ಹಾಯಿಸುವುದು ಒಳ್ಳಿತಲ್ಲ ಹಾಗಾಗಿ ಕಡಿಮೆ ತೂಕದ ಯಂತ್ರ, ವಾಹನಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಇವುಗಳ ಮಧ್ಯೆ ರೈತರೇ ವಿಜ್ಞಾನಿಗಳಾಗಿ ತಮ್ಮ ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ರೂಪಿಸಿಕೊಳ್ಳುತ್ತಿರುವುದು ಸಂತಸದ ವಿಚಾರ.
ಹುಬ್ಬಳ್ಳಿ ತಾಲೂಕು, ಜಬ್ಬಿ ಗ್ರಾಮದ ಕೃಷಿಕ ವೀರೇಶ್ ಅಂಗಡಿಯವರು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಗಳ ನಿರ್ವಹಣೆ ಮಾಡುತ್ತಿದ್ದು, ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಅದರ ಜತೆಗೆ ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಂಡಿದ್ದಾರೆ. ಡಾ.ಸಾಯಿಲ್ ಸ್ಲರಿ ಎನ್ರಿಚರ್ ಬಳಕೆಗೆ ಹೊಸ ತಂತ್ರವನ್ನು ರೂಪಿಸಿಕೊಂಡಿರುವ ಕೃಷಿಕ, ಬೆಳೆಗಳಿಗೆ ಜೈವಿಕ ಗೊಬ್ಬರಗಳನ್ನು ನೀಡುತ್ತಾ ಕಡಿಮೆ ವೆಚ್ಚದಲ್ಲಿ ಇಳುವರಿ ಹೆಚ್ಚು ಪಡೆಯುತ್ತಿದ್ದಾರೆ.
ಬೆಳೆಗಳಿಗೆ ನಾವು ನೇರವಾಗಿ ಸಗಣಿ ಹಾಕುವ ಬದಲು ಈ ರೀತಿಯಾದ ಸ್ಲರಿಯನ್ನು ತಯಾರಿಸಿಕೊಂಡು ಬಳಸಬೇಕು. 200 ಲೀಟರ್ ನೀರಿನ ಡ್ರಮ್ ನಲ್ಲಿ 100 ಕೆ.ಜಿ ಸಗಣಿ, 5 ಕೆ.ಜಿ ಶೇಂಗಾ ಹಿಂಡಿ, ಕಡಲೆ ಹಿಂಡಿ ಬಳಸಬಹುದು. ಬೇವಿನ ಹಿಂಡಿಯನ್ನು ಹೊರತು ಪಡಿಸಿ, ಉಳಿದ ಯಾವುದೇ ಹಿಂಡಿಯನ್ನು ಬಳಸಬಹುದು. ಅದರಲ್ಲಿ 1 ಲೀಟರ್ ಪೊಟ್ಯಾಷ್ ಅಥವಾ ಫಾಸ್ಫೇಟ್ ಡಾ.ಸಾಯಿಲ್ ಸ್ಲರಿ ಎನ್ರಿಚರ್ ಹಾಕಬೇಕು. ಇದನ್ನು ತಯಾರಿಸಿದ 5 ದಿನಗಳ ಬಳಿಕ ಬೆಳೆಗೆ ನೀಡುವುದರಿಂದ ಕೃಷಿ ಮಣ್ಣಿನ ಫಲವತ್ತತೆ ಹೆಚ್ಚಾಗಿ, ಸೂಕ್ಷ್ಮಾಣು ಜೀವಿಗಳು, ಎರೆಹುಳುಗಳ ಚಟುವಟಿಕೆ ಹೆಚ್ಚಾಗುತ್ತದೆ. ಪೋಷಕಾಂಶಗಳ ಅಭಿವೃದ್ಧಿ ಹೆಚ್ಚಾಗುತ್ತದೆ. ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಲುವ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಬೆಳೆ ಗುಣಮಟ್ಟವಾಗಿ, ರೋಗ ಮುಕ್ತವಾಗಿ ಬೆಳೆದು ಹೆಚ್ಚಿನ ಇಳುವರಿಯನ್ನು ನೀಡುತ್ತದೆ.
ಈಗಾಗಲೇ ಇದರ ಲಾಭವನ್ನು ಪಡೆದಿರುವ ಸಾವಯವ ಕೃಷಿಕ ವೀರೇಶ್ ಹೊಸ ತಂತ್ರಜ್ಞಾನದ ಜತೆಗೆ ಸ್ಲರಿ ಬಳಕೆ ಮಾಡುತ್ತಿದ್ದು, 2 ಎಕರೆಯಲ್ಲಿ ಗೋಡಂಬಿ, ಉದ್ದು, ಪಪ್ಪಾಯ, ತೆಂಗು ಬೆಳೆದು ಹೆಚ್ಚು ಲಾಭ ಪಡೆದಿದ್ದಾರೆ.
https://www.youtube.com/watch?v=qCSr1A2DLEk&t=6s
ವರದಿ: ವನಿತಾ ಯ ಪರಸನ್ನವರ್
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/