Blog

ಸಾವಯವ ಕೃಷಿ ಸಾವಿಲ್ಲದ ಕೃಷಿ, ಸನಾತನ ಕೃಷಿ. ಒಂದು ಕಾಲದಲ್ಲಿ ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕವಾಗಿ ಬೆಳೆದ ಆಹಾರ ತಿಂದು ಜನ ಸದೃಢವಾಗಿದ್ದರು. ಹಸಿರು ಕ್ರಾಂತಿಯ ನಂತರ ಹೆಚ್ಚಿದ ರಾಸಾಯನಿಕ ಬಳಕೆಯಿಂದ ಮಣ್ಣು ಮಲಿನವಾಗಿ ಆಹಾರದ ಪೌಷ್ಠಿಕತೆ ನಶಿಸಿಹೋಗಿದೆ. ಇದನ್ನು ಅರ್ಥ ಮಾಡಿಕೊಂಡಿರುವ ಜನರು ಈಗ ನಿಧಾನವಾಗಿ ಸಾವಯವ ಬೆಳೆಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಹೀಗಾಗಿ ರೈತರೂ ಕೂಡ ಸಾವಯವ ಕೃಷಿ ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಇಲ್ಲೊಬ್ಬ ರೈತ 7-8 ವರ್ಷಗಳಿಂದ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದು, ಇತರ ರೈತರಿಗೂ ಈ ಅಮೂಲ್ಯ ಜ್ಞಾನವನ್ನು ಹಂಚುತ್ತಿದ್ದಾರೆ.

 

       ಕೊಪ್ಪಳದ ರೈತರಾದ ಬಸವರಾಜ್, ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಇವರು ಡಾ.ಸಾಯಿಲ್ ನ ಕಾರ್ಯಕ್ಷಮತೆ ಮತ್ತು ಫಲಿತಾಂಶ ನೋಡಿ ಇಂದು ಡಾ.ಸಾಯಿಲ್ ಜೈವಿಕ ಗೊಬ್ಬರಗಳ ವಿತರಕರಾಗಿದ್ದಾರೆ. ಇದರ ಮುಖಾಂತರ ರೈತರಿಗೆ ಉಚಿತವಾಗಿ ಸಾವಯವ ಕೃಷಿಯ ಮಾಹಿತಿ ನೀಡುತ್ತಾ, ರೈತರ ತೋಟದಲ್ಲಿ ಸಾವಯವ ಪದ್ಧತಿಯಲ್ಲಿ ಉತ್ತಮ ಬೆಳೆ ಬೆಳೆಯುವ ಪಾಠ ಹೇಳಿಕೊಡುತ್ತಿದ್ದಾರೆ. ಇವರು ಸುಮಾರು 7-8 ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಾ ಬಂದಿದ್ದಾರೆ. ಈಗ ಇವರು ಸಾವಯವ ಕೃಷಿ ಪದ್ಧತಿಯಲ್ಲಿ ಗುಣಮಟ್ಟದ ಹೀರೆಕಾಯಿ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.

 

ಸಾವಯವದಲ್ಲಿ ಬೆಳೆದಿದ್ದರ ಫಲವಾಗಿ ಯಾವುದೇ ರೋಗರುಜಿನಗಳಿಲ್ಲದೇ ಉತ್ಕೃಷ್ಟವಾದ ಬೆಳೆ ತೆಗೆದಿದ್ದಾರೆ. ತರಕಾರಿ ಬೆಳೆಗಳನ್ನೇ ಹೆಚ್ಚಾಗಿ ಬೆಳೆಯುವ ಇವರು, ಉತ್ತಮ ಗುಣಮಟ್ಟದ ಬೆಳೆ ಬೆಳೆದು ಒಳ್ಳೆಯ ಲಾಭಗಳಿಸುತ್ತಿದ್ದಾರೆ. ಚಳಿಗಾಲದಲ್ಲಿ ಹೀರೆಕಾಯಿ ಬೆಳೆದರೆ ರೋಗಗಳು ಹೆಚ್ಚಾಗಿ ಬರುತ್ತವೆ ಎನ್ನುವ ರೈತರ ಮಧ್ಯೆ ಇವರು ಆರೋಗ್ಯಕರ ಬೆಳೆ ಬೆಳೆದಿದ್ದು, ಕೆಜಿಗೆ 60 ರೂ. ಬೆಲೆ ಸಿಕ್ಕಿದೆ. ಯಾವುದೇ ರಾಸಾಯನಿಕ ಬಳಸದೆ, ಸಗಣಿ, ಶೇಂಗಾ ಹಿಂಡಿ ಮತ್ತು ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ವ್ಯವಸಾಯ ಮಾಡುತ್ತಿದ್ದಾರೆ.

 

ಮಣ್ಣು ಮತ್ತು ಬೇರಿನ ಬೆಳವಣಿಗೆ

       ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಮಾಡುವುದರಿಂದ ಮಣ್ಣು ಫಲವತ್ತಾಗಿರುವುದನ್ನು ರೈತ ಕಂಡುಕೊಂಡಿದ್ದಾರೆ. ಎರೆಹುಳುಗಳು ಮತ್ತು ಮಣ್ಣಿನ ಉಪಕಾರಿ ಸೂಕ್ಷ್ಮಜೀವಿಗಳು ಹೆಚ್ಚಾಗಿ ಮಣ್ಣು ಸಡಿಲಗೊಂಡು ಗಾಳಿ ಆಡುವಂತಾಗುತ್ತದೆ. ಇದರಿಂದ ಮಣ್ಣು ಮೃದುವಾಗಿ ಜೈವಿಕ ಕ್ರಿಯೆಗೆ ಸೂಕ್ತವಾದ ವಾತಾವರಣ ಸೃಷ್ಟಿಯಾಗುತ್ತದೆ. ಇದರ ಪರಿಣಾಮವಾಗಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಹಾಗಾಗಿ ಸಾವಯವ ಕೃಷಿ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿ ಪೋಷಕಾಂಶಗಳ ಲಭ್ಯತೆ ಹೆಚ್ಚಾಗುತ್ತದೆ.

 

       ಮಣ್ಣು ಆರೋಗ್ಯಕರವಾಗುವುದರಿಂದ ಬೆಳೆಗಳ ಬೇರಿನ ಬೆಳವಣಿಗೆ ಉತ್ತವಾಗುತ್ತದೆ. ಮಣ್ಣಿನಿಂದ ಬರುವ ಹಲವು ರೋಗಗಳು ಕಡಿಮೆಯಾಗುತ್ತವೆ. ಇದರಿಂದ ಪೋಷಕಾಂಶ ಮತ್ತು ನೀರಿನ ಇಂಗುವಿಕೆ ಸಾಮರ್ಥ್ಯ ಹೆಚ್ಚಾಗಿ ಉತ್ತಮ ಇಳುವರಿ ಪಡೆಯಲು ಸಹಾಯವಾಗುತ್ತದೆ.

 

ಸಾವಯವದಲ್ಲಿ ಕೇವಲ 4000 ರೂ. ಖರ್ಚು ಮಾಡಿ ಉತ್ತಮ ಬೆಳೆ ಬೆಳೆದಿದ್ದಾರೆ. ಬಸವರಾಜ್ ಈಗ ನಿತ್ಯ ನಿರಂತರವಾಗಿ ರೈತರಿಗೆ ಸಾವಯವ ಕೃಷಿಯ ಪಾಠ ಮಾಡಿ ರೈತರ ಆದಾಯ ಹೆಚ್ಚಿಸಲು ಸಹಾಯ ಮಾಡುತ್ತಿದ್ದಾರೆ.

 

https://www.youtube.com/watch?v=4T-EvU-Mt-E

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

  

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #soil  #soilerosion  #soilfertility  #ridgegourd  #vegetable  #organicvegetable  Blog
Home    |   About Us    |   Contact    |   
microbi.tv | Powered by Ocat Online Advertising & Content Marketing Service in India