ಮೈತುಂಬ ಸಿಹಿಯನ್ನು ತುಂಬಿಕೊಂಡು ಸಕ್ಕರೆ, ಬೆಲ್ಲ ಸೇರಿದಂತೆ ಹಲವಾರು ಪದಾರ್ಥಗಳಾಗಿ ಮಾರ್ಪಾಡಾಗುವ ಕಬ್ಬು ನಮ್ಮ ರಾಜ್ಯದ ಪ್ರಮುಖ ಬೆಳೆಗಳಲ್ಲಿ ಒಂದು. ಹಾಗಾಗಿ ಕಬ್ಬು ಬೆಳೆ ರೈತನ ಕೈಹಿಡಿಯಿತು ಅಂದರೆ ಖಜಾನೆ ತುಂಬಿಸುವುದರಲ್ಲಿ ಅನುಮಾನವೇ ಇಲ್ಲ. ಆದರೆ ಈಗಿನ ಕೃಷಿ ಪದ್ಧತಿಯಿಂದ ಕಬ್ಬು ಬೆಳೆಯಲ್ಲಿ ಎಕರೆಗೆ 30 ರಿಂದ 40 ಟನ್ ಪಡೆಯುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ತಾವು ಎಡುವುತ್ತಿರುವುದು ಎಲ್ಲಿ ಎಂಬುದು ಬಹುತೇಕ ರೈತರಿಗೂ ಅರಿವಿಲ್ಲ. ಇದನ್ನು ಮನಗಂಡಿರುವ ಮೈಕ್ರೋಬಿ ಸಂಸ್ಥೆ ರೈತರಿಗೆ ಅರಿವು ಮೂಡಿಸಿ ಎಕರೆಗೆ 80 ರಿಂದ 100 ಟನ್ ಇಳುವರಿ ಪಡೆಯಲು ರೈತರಿಗೆ ಬೆನ್ನೆಲುಬಾಗಿ ನಿಂತಿದೆ.
ರೈತ ತಾನು ಅನುಸರಿಸುತ್ತಿರುವ ರಾಸಾಯನಿಕ ಕೃಷಿ ಪದ್ಧತಿಯಿಂದ ತನ್ನ ಕೃಷಿ ಭೂಮಿಯನ್ನು ತಾನೇ ಹಾಳುಮಾಡಿಕೊಳ್ಳುತ್ತಿದ್ದಾನೆ. ಅವೈಜ್ಞಾನಿಕ ಕೃಷಿ, ರಾಸಾಯನಿಕ ಗೊಬ್ಬರಗಳಿಂದ ಸಾಲದ ಸುಳಿಯಲ್ಲಿ ಸಿಲುಕಿ ಕೃಷಿಕ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಉತ್ತಮ ಇಳುವರಿ ಬಾರದೆ ಕಂಗಾಲಾಗಿದ್ದಾರೆ. ಆದ್ದರಿಂದ ರೈತನ ಕೃಷಿ ಪದ್ಧತಿ ಬದಲಾಗಬೇಕು, ಮಣ್ಣು ಜೀವಿಸಬೇಕು, ಕಡಿಮೆ ಖರ್ಚಿನಲ್ಲಿ ರೈತ ಹೆಚ್ಚು ಆದಾಯ ಪಡೆಯಬೇಕೆಂಬ ಉದ್ದೇಶದಿಂದ ಮೈಕ್ರೋಬಿ ಸಂಸ್ಥೆ ಕೃಷಿಕರಿಗೆ ಸಾವಯವ ಕೃಷಿ ಹಾಗೂ ವೈಜ್ಞಾನಿಕ ಕೃಷಿಯ ಬಗ್ಗೆ ಅರಿವು ಮೂಡಿಸುತ್ತಿದೆ. ರೈತರು ಬೆಳೆಗಳಲ್ಲಿ ಹೆಚ್ಚು ಇಳುವರಿ ಪಡೆಯೋಕೆ ಇದರಿಂದ ಸಹಾಯವಾಗುತ್ತಿದೆ.
ಬೀಳಗಿ ತಾಲೂಕಿನ ಸಾವಯವ ಕೃಷಿಕ ದುಂಡಪ್ಪ ಅವರು, ರಾಸಾಯನಿಕ ಕೃಷಿ ನಿಲ್ಲಿಸಿ ಸಾವಯವ ಕೃಷಿ ಶುರುಮಾಡಿದ ಮೇಲೆ ಕಬ್ಬು ಬೆಳೆಯಲ್ಲಿ ಹೆಚ್ಚು ಇಳುವರಿಯನ್ನು ಪಡೆಯುತ್ತಿದ್ದಾರೆ. ಇವರು ಹಿಂದೆ ರಾಸಾಯನಿಕ ಕೃಷಿ ಪದ್ಧತಿಯಲ್ಲಿಯೇ ಕಬ್ಬು ಬೆಳೆ ಬೆಳೆಯುತ್ತಿದ್ದರು. ಆಗ ಎಕರೆಗೆ 15 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ, 40 ರಿಂದ 50 ಟನ್ ಇಳುವರಿ ಪಡೆಯುತ್ತಿದ್ದರು. ಆದರೆ ಈಗ ಎಕರೆಗೆ 6000 ಖರ್ಚು ಮಾಡಿ 100 ಟನ್ ಇಳುವರಿ ಪಡೆಯುತ್ತಿದ್ದಾರೆ. 20 ಗುಂಟೆಯಲ್ಲಿ 47 ಟನ್ ಇಳುವರಿ ಪಡೆದಿದ್ದಾರೆ.
https://www.youtube.com/watch?v=Y7qCfjDbXr0&t=443s
ವರದಿ: ವನಿತಾ ಪರಸನ್ನವರ್
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
Blog