ಗಾಡ್ ಪ್ಲ್ಯಾಂಟ್ ಗ್ಲಿರಿಸಿಡಿಯಾ-ಇದು ಬುದ್ಧಿವಂತರ ಐಡಿಯಾ

ವೈಜ್ಞಾನಿಕವಾಗಿ ಗ್ಲಿರಿಸಿಡಿಯಂ ಸ್ಪೆಸಿಯಂ ಎಂಬ ಹೆಸರಿನಿಂದ ಕರೆಸಿಕೊಳ್ಳುವ  ಗೊಬ್ಬರ ಗಿಡವಾದ  ಗ್ಲಿರಿಸಿಡಿಯಾದ  ಉಪಯೋಗಗಳು ಒಂದಲ್ಲ ಎರಡಲ್ಲ.  ನೈಸರ್ಗಿಕವಾಗಿ  ಭೂಮಿಗೆ ಸಾವಯವ ಗೊಬ್ಬರವನ್ನು  ಒದಗಿಸಿಕೊಟ್ಟು ಭೂತಾಯಿಯನ್ನು  ಸಮೃದ್ಧವಾಗಿಡುವುದರಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆಸದಾ ಕಾಲ ಹಚ್ಚ ಹಸಿರಾಗಿರುವ ಈ ಗಿಡ ಸಾಕಷ್ಟು  ಪೋಷಕಾಂಶವನ್ನು ಹೊಂದಿದ್ದು ಕೃತಕ ಗೊಬ್ಬರಗಳಿಗೆ ಸೆಡ್ಡು ಹೊಡೆದು ನಿಂತಿದೆ.

ಕಡಿಮೆ ಖರ್ಚಿನಲ್ಲಿ ಅಡಿಕೆಯಿಂದ ಹೆಚ್ಚು ಇಳುವರಿ ಪಡೆಯಲು ಹೀಗೆ ಮಾಡಿ..!

ಅಡಿಕೆ ಬೆಳೆ ಇದೊಂದು ವಾಣಿಜ್ಯ ಬೆಳೆ, ಕೃಷಿಕ ತನ್ನ ನಿರೀಕ್ಷೆಯಂತೆ ಹೆಚ್ಚು ಇಳುವರಿ ಪಡೆದರೆ ಆದಾಯಕ್ಕೆ ಯಾವುದೇ ಕೊರತೆಯಿಲ್ಲ. ಒಂದು ವೇಳೆ ಬೆಳೆ ಪೋಷಕಾಂಶದಿಂದ ವಂಚಿತವಾಗಿ ಅನಾರೋಗ್ಯಕ್ಕೆ ಡಾದ್ರೆ, ರೈತ ಹಾಕಿದ ಬಂಡವಾಳ ನೀರಿನಲ್ಲಿ ಹೋಮವಾಗುವುದು ಖಚಿತ.

ಸಾವಯವ ಕೃಷಿಯಲ್ಲಿ ಕೀಟಗಳ ನಿಯಂತ್ರಣ

ಬೆಳೆಗಳಿವೆ ಎಂದ ಮೇಲೆ ಅಲ್ಲಿ ಕೀಟಗಳ ಹಾವಳಿ ತಪ್ಪಿದ್ದಲ್ಲ. ರೈತರು ಕೀಟಗಳ ಬಾಧೆಯನ್ನು ತಡೆಯುವಲ್ಲಿ ಹೈರಾಣಾಗಿ ಹೋಗುತ್ತಾರೆ. ಬಹು ವೇಗವಾಗಿ ಬೆಳೆಗಳಮೇಲೆ ದಾಳಿಮಾಡುವ ಈ ಕೀಟಗಳು, ರೈತ ಶ್ರಮದ ಫಲವನ್ನು ಹುರಿದು ಮುಕ್ಕಿ ಹಾಕುತ್ತವೆ. ಇವುಗಳ ಕಾಟಕ್ಕೆ ಪರಿಹಾರ ರೂಪಿಸಿಕೊಳ್ಳಲು ಕೃಷಿಕರು ರಾಸಾಯನಿಕ ಸ್ಪ್ರೇಗಳಿಗೆ ಮೊರೆ ಹೋಗುವುದು ಸಾಮಾನ್ಯವಾಗಿ ಬಿಟ್ಟಿದೆ. ರಾಸಾಯನಿಕ ಸ್ಪ್ರೇಗಳನ್ನು ಬಿಟ್ಟು ಬೇರೆ ಯಾವ ದಾರಿ ಇಲ್ಲ ಎಂಬ ಕಲ್ಪನೆಯಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.ಆದರೆ ಸಾವಯವ ಕೃಷಿಯಲ್ಲಿ ಇವುಗಳ ನಿರ್ಮೂಲನೆಯನ್ನು ಮಾಡಿಕೊಳ್ಳಬಹುದು ಎಂಬ ನಿಜ ಸಂಗತಿಯನ್ನು ಕೃಷಿಕರು ಅರಿಯಬೇಕಾಗಿದೆ.

ಅಂತರ ಬೆಳೆ-ರೈತರಿಗೆ ಲಾಭದ ಸುರಿಮಳೆ

ಅಂತರ ಬೆಳೆಯು ಒಂದು ಹೊಲ/ತೋಟದಲ್ಲಿ ಎರಡು ಅಥವಾ ಹೆಚ್ಚಿನ ಬೆಳೆಗಳನ್ನು  ಏಕಕಾಲದಲ್ಲಿ ಬೆಳೆಸುವುದರಿಂದ ರೈತರಿಗೆ ಸಹಾಯವಾಗುತ್ತದೆ.

ಸೂಕ್ಷ್ಮ ನೀರಾವರಿ ಯೋಜನೆ: ಎಲ್ಲಾ ರೈತರಿಗೆ ಹಿಂದಿನಂತೆಯೇ ಸಬ್ಸಿಡಿ-ಬಿ.ಸಿ.ಪಾಟೀಲ್

ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಈ ಹಿಂದೆ ನೀಡುತ್ತಿದ್ದ ಸಬ್ಸಿಡಿಯನ್ನು ಅದೇ ಮಾದರಿಯಲ್ಲಿ ಮುಂದುವರೆಸುತ್ತಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಉಚಿತ ಮಣ್ಣಿನ ಪರೀಕ್ಷೆ, ಗರಿಗೆದರಿತು ಸಾವಿರ ನಿರೀಕ್ಷೆ..! ನಿಮ್ಮ ತೋಟಕ್ಕೆ ನೀವೇ ಕೃಷಿ ವಿಜ್ಞಾನಿಗಳಾಗಿ

ಯಾವುದೇ ಬೆಳೆಗೆ ಸಮಗ್ರ ಪೋಷಕಾಂಶಗಳನ್ನು ಒದಗಿಸಿಕೊಡುವ ಶಕ್ತಿ ಹೊಂದಿರುವ ಮಣ್ಣನ್ನು ಫಲವತ್ತಾದ ಮಣ್ಣು ಎಂದು ಕರೆಯುತ್ತೇವೆ. ಒಬ್ಬ ಕೃಷಿಕ ಎಷ್ಟು ಎಕರೆ ಜಮೀನು ಹೊಂದಿದ್ದಾನೆ ಎಂಬುವುದಕ್ಕಿಂತ ಎಷ್ಟು ಎಕರೆ ಫಲವತ್ತಾದ ಜಮೀನು ಹೊಂದಿದ್ದಾನೆ ಎನ್ನುವುದು ಮುಖ್ಯವಾಗುತ್ತದೆ.

Dr. Soil Bio Fertilizer ಡಾ.ಸಾಯಿಲ್ ಜೈವಿಕ ಗೊಬ್ಬರ, ರೈತರ ಪಾಲಿನ ಸಾವಯವ ಬಂಗಾರ
|< ... 30>|
Home    |   About Us    |   Contact    |   
microbi.tv | Powered by Ocat™ Web Promotion Services in India | Member of Ocat Platform