ಬೀಜೋಪಚಾರ ಯಾಕೆ ಮಾಡಬೇಕು?
ಶೇಂಗಾ ಬೀಜಗಳಿಗೆ ಬೀಜೋಪಚಾರ ಮಾಡಿ ಬಿತ್ತುವುದರಿಂದ, ಉಪಕಾರಿ ಸೂಕ್ಷ್ಮಾಣು ಜೀವಿಗಳು ಅಭಿವೃದ್ಧಿಯಾಗುತ್ತವೆ. ಇವು ಮಣ್ಣಿನಲ್ಲಿರುವ ಅಪಕಾರಿ ಸೂಕ್ಷ್ಮಾಣು ಜೀವಿಗಳೊಂದಿಗೆ ಹೋರಾಡಿ ಬೀಜಗಳನ್ನ ರಕ್ಷಿಸುತ್ತವೆ. ಆಗ ಬೀಜಗಳು ನಿರಾತಂಕವಾಗಿ ಮೊಳಕೆ ಒಡೆಯುತ್ತವೆ, ಜತೆಗೆ ಮಣ್ಣು ಫಲವತ್ತಾಗುತ್ತದೆ, ಬಿಳಿ ಬೇರುಗಳು ಅಭಿವೃದ್ಧಿಯಾಗುತ್ತವೆ. ಬೆಳೆಗೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ರೈತನಮಿತ್ರ ಎರೆಹುಳುಗಳ ಸಂತತಿ ದ್ವಿಗುಣವಾಗುತ್ತದೆ.
ಶೇಂಗಾಗೆ ಹೇಗೆ ಬೀಜೋಪಚಾರ ಮಾಡಬೇಕು?
ಶೇಂಗಾ ಒಂದು ದ್ವಿದಳ ಧಾನ್ಯವಾಗಿದ್ದರಿಂದ ಡಾ.ಸಾಯಿಲ್ ರೈಜೋಬಿಯಮ್ ಬೀಜೋಪಚಾರ ಉಪಯೋಗಿಸಬೇಕಾಗುತ್ತದೆ. ನಂತರ ಬೀಜಗಳನ್ನ ಬಿತ್ತುವ ಪೂರ್ವದಲ್ಲಿ 10 ರಿಂದ 15 ಕೆ.ಜಿ ಬೀಜಗಳಿಗೆ ಒಂದು ಲೀಟರ್ ಡಾ.ಸಾಯಿಲ್ ರೈಜೋಬಿಯಮ್ ಬೀಜೋಪಚಾರ ತೆಗೆದುಕೊಂಡು ಬೀಜಗಳಿಗೆ ಮಿಶ್ರಣ ಮಾಡಬೇಕು. 10 ನಿಮಿಷಗಳ ಕಾಲ ನೆರಳಿನಲ್ಲಿ ಒಣಗಿಸಿ ಬೀಜಗಳನ್ನ ಬಿತ್ತಬೇಕು.
ಒಟ್ಟಾರೆಯಾಗಿ ಬೀಜಗಳನ್ನ ಬಿತ್ತುವ ಪೂರ್ವದಲ್ಲಿ ಸಾವಯವ ಕೃಷಿಯಡಿಯಲ್ಲಿ ಬೀಜೋಪಚಾರ ಮಾಡಿಕೊಂಡರೆ ಕೃಷಿಕರು ಅಂದುಕೊಂಡ ಇಳುವರಿ ನೀಡಲು ಬೆಳೆ ಶಕ್ತವಾಗುತ್ತದೆ.
ವರದಿ: ಶ್ವೇತಾ ಕಲಕಣಿ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://www.facebook.com/microbiagrotech/videos/194298172726718/
Blog