ಈ ಪುಷ್ಪ ಕೃಷಿಯನ್ನು ಒಂದುವೇಳೆ, ಹಬ್ಬ ಹರಿದಿನವನ್ನ ದೃಷ್ಟಿಕೋನದಲ್ಲಿಟ್ಟುಕೊಂಡು ಹೂ ಬೆಳೆದರೆ, ಹೂ ಬೆಳೆಗಾರರಿಗೆ ಇನ್ನೂ ಹೆಚ್ಚಿನ ಲಾಭವಾಗುವುದು ನಿಶ್ಚಿತ. ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಮಾಳಿಗೇಹಳ್ಳಿ ಗ್ರಾಮದ ಕೃಷಿಕ ರಾಜಣ್ಣ ಅವರು, ಶ್ರಾವಣ ಮಾಸವನ್ನ ದೃಷ್ಟಿಕೋನದಲ್ಲಿಟ್ಟುಕೊಂಡು ತಮ್ಮ 15 ಗುಂಟೆ ಭೂಮಿಯಲ್ಲಿ ಸೇವಂತಿಗೆ ಮತ್ತು ಅರ್ಧ ಎಕರೆಯಲ್ಲಿ ಗುಲಾಬಿ ಬೆಳೆ ಬೆಳೆಯಲು ಮುಂದಾದ್ರು. ಇಷ್ಟು ಚಿಕ್ಕ ಭೂಮಿಯಲ್ಲಿ ಕೃಷಿಕ ರಾಜಣ್ಣ ಅವರು ಟನ್ ಗಟ್ಟಲೆ ಇಳುವರಿ ಮತ್ತು ಲಕ್ಷಗಳ ಲೆಕ್ಕಾಚಾರದಲ್ಲಿ ಆದಾಯಗಳಿಸುತ್ತಿದ್ದಾರೆ.
ಇಂತಹ ಅತ್ಯಾಕರ್ಷಣೆಯ ಇಳುವರಿ ಪಡೆಯಲು ಕೃಷಿಕ ಹೆಚ್ಚು ಖರ್ಚು, ಹೆಚ್ಚು ನಿರ್ವಹಣೆ ಮಾಡಿಲ್ಲ. ಬದಲಿಗೆ ಕಡಿಮೆ ಖರ್ಚಿನ ಸಾವಯವ ಕೃಷಿಯಲ್ಲಿ ಸೇವಂತಿಗೆ ಮತ್ತು ಗುಲಾಬಿ ಬೆಳೆಗೆ ಜೀವ ಕೊಟ್ಟಿದ್ದಾರೆ. ಹೀಗಾಗಿ ಬೆಳೆ ನೋಡಲು ಆಕರ್ಷಿತವಾಗಿದ್ದು, ಒಂದೆರಡು ದಿನ ಹೂಗಳನ್ನು ಸಂಗ್ರಹಿಸಿಟ್ಟು ಮಾರಿದರೂ ಕ್ವಾಲಿಟಿ ಮಾತ್ರ ಕಡಿಮೆಯಾಗ್ತಿಲ್ಲ. ಇಂತಹ ಬದಲಾವಣೆಗೆ ಕಾರಣ, ಸಾವಯವ ಕೃಷಿ.
ಸಾವಯವ ಕೃಷಿಯಲ್ಲಿ ಬೆಳೆದ ಹೂಗಳಿಗೆ ಬಾರಿ ಬೇಡಿಕೆ…!
ನೋಡಲು ಆಕರ್ಷಕ ಬಣ್ಣ ಮತ್ತು ಉತ್ತಮ ಗಾತ್ರ ಹೊಂದಿರುವ ಕಾರಣ, ಮಾರುಕಟ್ಟೆಯಲ್ಲಿ ಗ್ರಾಹಕರು ಈ ಹೂಗಳನ್ನ ಬಿಟ್ಟು ಹೋಗಲು ಮನಸ್ಸುಮಾಡ್ತಿಲ್ಲ. ಜತೆಗೆ ಇಂತಹ ಕ್ವಾಲಿಟಿ ಬೆಳೆ ಕಂಡು ಗ್ರಾಹಕರೇ, ಹೆಚ್ಚು ಹಣ ಕೊಟ್ಟು ಕೊಂಡುಕೊಳ್ಳುತ್ತಿರುವುದು ಗಮರ್ನಾಹ ವಿಚಾರ.
ಒಟ್ಟಿನಲ್ಲಿ ಹೂ ಬೆಳೆಗಾರರು, ಸಾವಯವ ಕೃಷಿಯನ್ನ ಅಳವಡಿಸಿಕೊಂಡರೆ, ಭೂತಾಯಿ, ಮಾರುಕಟ್ಟೆ ಮತ್ತು ಗ್ರಾಹಕರು ಕೈ ಬಿಡುವುದಿಲ್ಲ ಎಂಬುವುದಕ್ಕೆ ಕೃಷಿಕ ರಾಜಣ್ಣ ಅವರ ಹೂದೋಟವೇ ಸಾಕ್ಷಿ
ವರದಿ: ಶ್ವೇತಾ ಕಲಕಣಿ
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=Nbf76jjV3eU&t=70s
Blog