Blog

ರಾಯಸಂದ್ರ ಸತೀಶ್ ರವರ ತೋಟವು ನಿರಂತರ ರಾಸಾಯನಿಕ ಗೊಬ್ಬರ ಹಾಗೂ ಹೆಚ್ಚು ನೀರಿನ ಬಳಕೆಯಿಂದ ಹಾಳಾಗಿತ್ತು. ಅಂಥ ತೋಟವನ್ನು ಆಯ್ಕೆ ಮಾಡಿಕೊಂಡ ಡಾ.ಹುಲ್ಲುನಾಚೆಗೌಡರು, ಅಲ್ಲಿದ್ದ ರೈತರಿಗೆ ಮಣ್ಣಿನ 3 ಗುಣಗಳಾದ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಚೆನ್ನಾಗಿ ಕಾಯಿ ಬಿಟ್ಟು ಇಳುವರಿ ಇರುವ ಗಿಡದ ಬೇರುಗಳ ಅಭಿವೃದ್ಧಿ, ಅಲ್ಲಿನ ಜೈವಿಕ ಕ್ರಿಯೆಗಳು, ಸಾವಯವ ಇಂಗಾಲದ ಮಹತ್ವವನ್ನು ಹೇಳಿಕೊಟ್ಟರು. ಹಾಗೆಯೇ ಇಳುವರಿ ಇಲ್ಲದೆ ಸೊರಗಿರುವ ತೆಂಗಿನ ಮರದಲ್ಲಿ ಬೇರುಗಳು ಅಭಿವೃದ್ಧಿಯಾಗದೆ ಇರುವುದು ಹಾಗೂ ಮಣ್ಣಿನ ಮೂರೂ ಗುಣಗಳು ಹಾಳಾಗಿರುವುದನ್ನು ತೋರಿಸಿಕೊಟ್ಟರು. ಅದೇ ರೀತಿ ಬದುಗಳಲ್ಲಿ ತ್ಯಾಜ್ಯಗಳನ್ನು ಕ್ರೋಡೀಕರಿಸಿರುವ ಜಾಗಕ್ಕೆ ಮರದ ಬೇರುಗಳು ಹೋಗಿರುವುದನ್ನು ಪ್ತತ್ಯಕ್ಷವಾಗಿ ತೋರಿಸಿಕೊಟ್ಟರಲ್ಲದೆ ಅಲ್ಲಿ ಮಣ್ಣಿನ ಮೂರುಗುಣಗಳು ಚೆನ್ನಾಗಿರುವುದನ್ನು ರೈತರಿಗೆ ಮನಮುಟ್ಟುವಂತೆ ತಿಳಿ ಹೇಳಿದರು.

 

ಮರದಿಂದ ಬರುವ ತ್ಯಾಜ್ಯಗಳನ್ನು ಬಳಸಿ, ಮಣ್ಣಿನ ಜೈವಿಕ ಪರಿಸರವನ್ನು ಉತ್ತಮ ಪಡಿಸಿಕೊಂಡು ಒಂದು ಮರದಿಂದ 200 ಕಾಯಿಗಳಿಗಿಂತಲೂ ಹೆಚ್ಚು ಇಳುವರಿ ತೆಗೆಯುವ ವೈಜ್ಞಾನಿಕ ವಿಧಾನಗಳನ್ನು ಡಾ.ಹುಲ್ಲುನಾಚೆಗೌಡರು ತಿಳಿಸಿಕೊಟ್ಟರು.

 

ಸಮಗ್ರಕೃಷಿ ಅಡಿಯಲ್ಲಿ ತೆಂಗಿನ ತೋಟದಲ್ಲಿ ಅಂತರ ಬೆಳೆಗಳಾಗಿ ಬಾಳೆ, ಬೆಣ್ಣೆಹಣ್ಣು, ಕೊಕೊ, ಜಾಕಾಯಿ, ಮರಗೆಣಸು, ಸುವರ್ಣಗಡ್ಡೆ, ತರಕಾರಿಗಳು ಮುಂತಾದ ಬೆಳೆಗಳನ್ನು ಹಾಕುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೆ ರೈತರ ಆದಾಯವನ್ನು ವೃದ್ಧಿಸಿಕೊಳ್ಳುವ ಮಾರ್ಗಗಳನ್ನು ಹೇಳಿಕೊಟ್ಟರು.

ಉಪಕಸುಬುಗಳಾದ ಕುರಿ, ಮೇಕೆ, ಕೋಳಿ, ದೇಸಿಹಸುಗಳನ್ನು ಸಾಕಿ, ಕೃಷಿಯನ್ನು ಲಾಭದಾಯಕ ಉದ್ಧಿಮೆಯಾಗಿ ಪರಿವರ್ತಿಸಲು ರೈತರಿಗೆ ಕರೆಕೊಟ್ಟರು. ಅದೇ ರೀತಿ ಬದುಗಳಲ್ಲಿ ಕೃಷಿ ಅರಣ್ಯದ ಬೆಳೆಗಳಲ್ಲಿ ಒಂದಾದ ಟಿಶ್ಯು ಕಲ್ಚರ್ ಟೀಕ್ ಹಾಕುವುದರಿಂದ ಒಂದು ಎಕರೆಯಲ್ಲಿ 20 ವರ್ಷದಲ್ಲಿ ಒಂದೇ ಬಾರಿಗೆ 25 ಲಕ್ಷ ಆದಾಯಗಳಿಸುವ ಮಾರ್ಗವನ್ನು ತಿಳಿಸಿಕೊಟ್ಟರು.

 

ವರದಿ: ಶ್ರೀನಿವಾಸ ರೈತ

8197443132

 




Blog




Home    |   About Us    |   Contact    |   
microbi.tv | Website Promotion and Content Marketing through Ocat Online Catalog in India | Powered by Ocat Digital Pvt.Ltd