ಕಬ್ಬಿನ ರವದಿ ಹಾಕಿದ್ದಕ್ಕೆ ಕೃಷಿ ಭೂಮಿ ಸೇಫ್..!

ಮಂಡ್ಯ : ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕಿನ ಕೃಷಿಕರಾದ ಲೋಕೇಶ್ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಹಿಪ್ಪುನೇರಳೆ ಮತ್ತು ಕಬ್ಬು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕಬ್ಬು ಬೆಳೆಯಲ್ಲಿ ಈಗಾಗಲೇ ಒಂದು ಕೂಳೆ ಇಳುವರಿ ತೆಗೆದುಕೊಂಡಿದ್ದಾರೆ, ಈಗ ಎರಡನೇ ಕೂಳೆ ಕಬ್ಬು ಬೆಳೆಯುತ್ತಿದೆ.  ಒಟ್ಟಾರೆ ಒಂದೂವರೆ ಎಕರೆಯಲ್ಲಿ  ಬೆಳೆಗಳನ್ನು  ಬೆಳೆಯುತ್ತಿದ್ದು 20 ಗುಂಟೆಯಲ್ಲಿ ಹಿಪ್ಪುನೇರಳೆ ಬೆಳೆ ಇದೆ.

20 ಗುಂಟೆಯಲ್ಲಿ 27 ಕೆಜಿ ಸುಗಂಧರಾಜ ಹೂ ಇಳುವರಿ..!

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ಯುವ ಕೃಷಿಕರಾದ ಮುದ್ದುರಾಜ್ ಅವರು ಸುಗಂಧರಾಜ ಹೂ ಬೆಳೆಯನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ, 20 ಗುಂಟೆಯಲ್ಲಿ ಬೆಳೆಯಿದ್ದು, 27ಕೆಜಿಯವರೆಗೂ ಇಳುವರಿಯನ್ನು ಪಡೆಯುತ್ತಿದ್ದಾರೆ, ಹೂ ಶೈನಿಂಗ್, ಕಲರ್ ತುಂಬಾ ಗುಣಮಟ್ಟದಿಂದ ಬೆಳೆಯುತ್ತಿದೆ.

ಅಡಿಕೆಯಲ್ಲಿ 150 ಕ್ವಿಂಟಾಲ್ ನಿಂದ 750 ಕ್ವಿಂಟಾಲ್ ಗೆ ಇಳುವರಿ ಹೆಚ್ಚಾಯ್ತು.

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆ, ತರಿಕೆರೆ ತಾಲ್ಲೂಕಿನ ಸಾವಯವ ಕೃಷಿಕರಾದ ಪಿ ಜಿ ಓಂಕಾರಪ್ಪ ಅವರು ಅಡಿಕೆ ಬೆಳೆಯಲ್ಲಿ 750 ಕ್ವಿಂಟಾಲ್ ಇಳುವರಿ ಪಡೆಯುತ್ತಿದ್ದಾರೆ. ಹೌದು 6 ವರ್ಷದಿಂದ ಸಾವಯವ ಕೃಷಿ ಪದ್ಧತಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಅಡಿಕೆ ಬೆಳೆ ಬೆಳೆಯುತ್ತಿರುವ ಕೃಷಿಕ ವರ್ಷದಿಂದ ವರ್ಷಕ್ಕೆ ಅದಿಕ ಇಳುವರಿ ಪಡೆಯುತ್ತಿದ್ದಾರೆ.

8 ಅಡಿಕೆ ಮರಗಳಲ್ಲಿ ಒಂದು ಮರದಿಂದ 12 ಕೆಜಿ ಅಡಿಕೆ..!

ತುಮಕೂರು : ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕಿನಲ್ಲಿರುವ ಅಡಿಕೆ ತೋಟ ಯಾವುದೇ ರೋಗ ಕೀಟಗಳ ತೊಂದರೆಯಿಲ್ಲದೆ ಸಮೃದ್ಧವಾಗಿ ಬೆಳೆಯುತ್ತಿದೆ. ಹೌದು, ಕೊರಟಗೆರೆ ತಾಲೂಕಿನ ಕೃಷಿಕ ಮಂಜುನಾಥ್ ಅವರು 6-8 ವರ್ಷದ ಅಡಿಕೆ ತೋಟವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸದೆ ಸಾವಯವ ಕೃಷಿ ಪದ್ಧತಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ.

ಏಲಕ್ಕಿ ಬಾಳೆಯಲ್ಲಿ ಒಂದೊಂದು ಗೊನೆ 18-20 ಕೆಜಿ..!

ಕೋಲಾರ: ಕೋಲಾರ ಜಿಲ್ಲೆ, ಶ್ರೀನಿವಾಸಪುರ ತಾಲ್ಲೂಕಿನ ರೈತರಾದ ಶಿವಕುಮಾರ್ ಹಾಗೂ ಅವರ ತಂದೆಯವರಾದ ಮುನಿವೆಂಕಟಪ್ಪ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಗುಂಪುಬಾಳೆಯನ್ನು ಬೆಳೆಯುತ್ತಿದ್ದಾರೆ. ಏಲಕ್ಕಿ ಬಾಳೆಯನ್ನು ಬೆಳೆಯುತ್ತಿದ್ದು ಒಂದೊಂದು ಬಾಳೆಗೊನೆ 18-20 ಕೆಜಿ ಬರುತ್ತಿದೆ. 20*20 ಅಡಿಯಲ್ಲಿ ಗುಂಪುಬಾಳೆಯನ್ನು ಬೆಳೆಯುತ್ತಿದ್ದು  ಎಕರೆಗೆ 125 ಸಸಿಗಳನ್ನು ನಾಟಿಮಾಡಿದ್ದಾರೆ, ಒಂದೊಂದು ಗುಂಪಿನಲ್ಲಿ 10-15 ಮರಿಗಳು ಬರುತ್ತಿವೆ. ಬಾಳೆ ಎಲೆಗಳು 7 ಅಡಿಯಷ್ಟು ಎತ್ತರ ಬೆಳೆಯುತ್ತಿವೆ.

ಈ ಗುಲಾಬಿ ಹೂ ಮಾರ್ಕೆಟ್ ನಲ್ಲಿ ಫುಲ್ ಸೇಲ್

ಚಿಕ್ಕಬಳ್ಳಾಪುರ :  ಚಿಕ್ಕಬಳ್ಳಾಪುರ ಜಿಲ್ಲೆ, ಕೊತ್ತನೂರು ಗ್ರಾಮದ ಕೃಷಿಕರಾದ ಸುಬ್ರಹ್ಮಣ್ಯ ಅವರು ಗುಲಾಬಿ ಬೆಳೆಯನ್ನು ಬೆಳೆಯುತ್ತಿದ್ದಾರೆ, ಇವರ ಗುಲಾಬಿ ಹೂಗಳು ಮಾರುಕಟ್ಟೆಗೆ ಲಗ್ಗೆ ಇಟ್ಟರೆ ಫುಲ್ ಸೇಲ್ ಆಗಿಬಿಡುತ್ತವೆ. ಮಾರುಕಟ್ಟೆಯಲ್ಲಿ 10 ರಿಂದ 20 ರೂ ಜಾಸ್ತಿ ಬೆಲೆ ಇವರ ಹೂವಿಗೆ ಸಿಗುತ್ತದೆ.

ಜಿ9 (Grand nain) ಗುಂಪು ಬಾಳೆ ಪದ್ಧತಿಯಲ್ಲಿ ವರ್ಷಪೂರ್ತಿ ಆದಾಯ..!

ಮಂಡ್ಯ : ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕಿನ  ಸಾವಯವ ಕೃಷಿ ರೈತರಾದ ನಂದೀಶ್ ಅವರು ಬಾಳೆ, ಪಪ್ಪಯಾ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಾ ಸಮಗ್ರ ಕೃಷಿ ಮಾಡುತ್ತಿದ್ದಾರೆ. ಸಾವಯವ ಕೃಷಿ ಪದ್ಧತಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರವನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಗೊಬ್ಬರದ ನಿರ್ವಹಣೆ ಮಾಡುತ್ತಿದ್ದು ಅನೇಕ ಕೃಷಿಕರಿಗೆ ಮಾದರಿಯಾಗಿದ್ದಾರೆ.

30 ಗಿಡದಿಂದ 450 ಕೆಜಿ ಅಡಿಕೆ..!

ಮೈಸೂರು: ಮೈಸೂರು ಜಿಲ್ಲೆ, ಮೈಸೂರು ತಾಲೂಕಿನ, ಯಾಚೇಗೌಡನಹಳ್ಳಿ ಗ್ರಾಮದ ಕೃಷಿಕರಾದ ಕುಮಾರ್ ಅವರು ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದು ಜತೆಗೆ ಕೃಷಿಯತ್ತ ಒಲವು ತೋರಿ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಅಡಿಕೆಯ ಜತೆಗೆ ತೆಂಗು, ಜಾಯಿಕಾಯಿ ಮಿಶ್ರ ಬೆಳೆಗಳನ್ನು ಬೆಳೆಯುತ್ತಾ ಸಾವಯವ ಕೃಷಿ ಪದ್ಧತಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ.
ಒಟ್ಟಾರೆ ಇಪ್ಪತ್ತು ವರ್ಷದ 40 ಅಡಿಕೆ ಮರಗಳು, ಐದು ವರ್ಷದ 300 ಅಡಿಕೆ ಗಿಡಗಳಿದ್ದು ಇಪ್ಪತ್ತು ವರ್ಷದ 30 ಅಡಿಕೆ ಮರಗಳಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿದ ಮೇಲೆ 450 ಕೆಜಿ ಇಳುವರಿ ಪಡೆದಿದ್ದಾರೆ.
ಸತತ 4 ವರ್ಷದಿಂದ ಸಾವಯವ ಕೃಷಿ ಮಾಡುತ್ತಿರುವ ರೈತ ಈ ಹಿಂದೆ ರಾಸಾಯನಿಕ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದರು ಆಗ 40 ಮರಗಳಿಂದ ಕೇವಲ 50-60 ಕೆಜಿ ಅಡಿಕೆ ಸಿಕ್ಕಿತ್ತು, ಈಗ ಸಾವಯವ ಕೃಷಿಗೆ ಬದಲಾದ ಮೇಲೆ 450 ಕೆಜಿ ಪಡೆದಿದ್ದಾರೆ.
ವಾರ್ಷಿಕ ಬೆಳೆಯಾದ ಅಡಿಕೆ ಬೆಳೆಯನ್ನು ಬೆಳೆಯುವಾಗ ಬೆಳೆಯಲ್ಲಿ ಕಾಣಿಸಿಕೊಳ್ಳುವ ರೋಗಗಳು, ಕೀಟಗಳ ತೊಂದರೆಯಿಂದ ರೈತರು ಹೆಚ್ಚು ಖರ್ಚು ಮಾಡಬೇಕಾಗುತ್ತದೆ, ಅಷ್ಟೇ ಅಲ್ಲ ಬೆಳೆಗೆ ಬಳಸುವಂತಹ ರಸಗೊಬ್ಬರಗಳಿಂದಲೂ ರೋಗಗಳ ತೊಂದರೆ ಹೆಚ್ಚಾಗುತ್ತಿರುತ್ತದೆ. ಕಡಿಮೆ ಖರ್ಚಿನಲ್ಲಿ ರೋಗಮುಕ್ತ ಬೆಳೆಯನ್ನು ಬೆಳೆಯುವುದು ಹೇಗೆ? ಇಳುವರಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ಎನ್ನುವುದರ ಕುರಿತು ರೈತರಾದ ಕುಮಾರ್ ನಮ್ಮ ಪ್ರತಿನಿಧಿ ಜತೆ ಮಾತನ್ನಾಡಿದ್ದು ಹೀಗೆ.

ಸಾಯುತ್ತಿದ್ದ ಎಲೆ ಬಳ್ಳಿ 1 ತಿಂಗಳಲ್ಲಿ ಮತ್ತೆ ಚಿಗುರಿತು..!

ದಶಕದ ಹಿಂದೆ ವೀಳ್ಯದೆಲೆ ಬೆಳೆಯೋಕೆ ಪೈಪೋಟಿಗೆ ಬಿದ್ದಿದ್ದ ರೈತರು ಈಗ, ಶೇಂಗಾ, ಹತ್ತಿ, ಇತರ ವಾಣಿಜ್ಯ ಬೆಳೆಗಳು, ತೋಟಗಾರಿಕೆ ಬೆಳೆಗಳತ್ತ ಮುಖಮಾಡಿದ್ದಾರೆ. ವೀಳ್ಯದೆಲೆ ಸೂಕ್ಷ್ಮ ಬೆಳೆಯಾಗಿದ್ದರಿಂದ ನಿರ್ವಹಣೆಯಲ್ಲಿ ರೈತರು ಎಡುವುದು ಹೆಚ್ಚು. ತ್ತೀಚೆಗೆ ರೋಗಗಳು ಹೆಚ್ಚಾಗಿದ್ದು, ವೀಳ್ಯದೆಲೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಎಲೆಚುಕ್ಕೆ ರೋಗ, ಎಲೆ ಮುಟುರು ರೋಗ, ಸೊರಗು ರೋಗ, ಬುಡ ಕೊಳೆಯುವ ರೋಗಗಳಿಂದ ಹೆಚ್ಚಿನ ವೀಳ್ಯದೆಲೆ ಬೇಸಾಯಗಾರರು ನಷ್ಟ ಅನುಭವಿಸುತ್ತಿದ್ದಾರೆ.

ಸೆಡ್ಡು ಹೊಡೆದು ಮಾಡಿದ ಸಾವಯವ ಕೃಷಿ ಯುವ ಕೃಷಿಕನಿಗೆ ಬೆಳಕಾಯ್ತು..!

ಮೊದಲು ಸಾವಯವ ಕೃಷಿ ಎಂದ್ರೆ ಮೂಗು ಮುರಿಯುವ ಜನರು ಹೆಚ್ಚಾಗಿದ್ದರು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿಯ ಮಹತ್ವವನ್ನು ಅರಿಯುತ್ತಿರುವುದರಿಂದ ಬೆಳೆ, ಭೂಮಿ ಉಳಿಸಿಕೊಳ್ಳಲು ಸಾವಯವ ಕೃಷಿ ಅನಿವಾರ್ಯ ಎಂಬುದನ್ನು ಮನಗಾಣುತ್ತಿದ್ದಾರೆ.

|<  1  2  3   4   5 ...>|
Home    |   About Us    |   Contact    |   
microbi.tv | Powered by Ocat Website Promotion Service in India | | Promote Website with Ocat Banner Ads and Landing Pages