ದಶಕದ ಹಿಂದೆ ವೀಳ್ಯದೆಲೆ ಬೆಳೆಯೋಕೆ ಪೈಪೋಟಿಗೆ ಬಿದ್ದಿದ್ದ ರೈತರು ಈಗ, ಶೇಂಗಾ, ಹತ್ತಿ, ಇತರ ವಾಣಿಜ್ಯ ಬೆಳೆಗಳು, ತೋಟಗಾರಿಕೆ ಬೆಳೆಗಳತ್ತ ಮುಖಮಾಡಿದ್ದಾರೆ. ವೀಳ್ಯದೆಲೆ ಸೂಕ್ಷ್ಮ ಬೆಳೆಯಾಗಿದ್ದರಿಂದ ನಿರ್ವಹಣೆಯಲ್ಲಿ ರೈತರು ಎಡುವುದು ಹೆಚ್ಚು. ಇತ್ತೀಚೆಗೆ ರೋಗಗಳು ಹೆಚ್ಚಾಗಿದ್ದು, ವೀಳ್ಯದೆಲೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಎಲೆಚುಕ್ಕೆ ರೋಗ, ಎಲೆ ಮುಟುರು ರೋಗ, ಸೊರಗು ರೋಗ, ಬುಡ ಕೊಳೆಯುವ ರೋಗಗಳಿಂದ ಹೆಚ್ಚಿನ ವೀಳ್ಯದೆಲೆ ಬೇಸಾಯಗಾರರು ನಷ್ಟ ಅನುಭವಿಸುತ್ತಿದ್ದಾರೆ.
ಈ ರೋಗಗಳ ಪ್ರಾರಂಭಿಕ ಹಂತದಲ್ಲಿ ಎಲೆಗಳ ಮೇಲೆ ನೀರಿನಿಂದ ಆವೃತ ಚುಕ್ಕೆಗಳು ಕಂಡುಬಂದು, ಕ್ರಮೇಣ ಅವು ಕಂದು ಬಣ್ಣಕ್ಕೆ ತಿರುಗುತ್ತವೆ. ಈ ಚುಕ್ಕೆಗಳ ಸುತ್ತ ಹಳದಿ ಬಣ್ಣವು ಆವೃತಗೊಂಡಿರುತ್ತದೆ. ರೋಗವು ಪಸರಿಸುತ್ತಾ ಹೆಚ್ಚಿನ ಭಾಗವನ್ನು ಆವರಿಸಿ ರೋಗಪೀಡಿತ ಭಾಗದಲ್ಲಿ ಪಸರಿಸಿದಂತೆ ಕಾಣುತ್ತದೆ. ರೋಗ ಪೀಡಿತ ಎಲೆಗಳು ತನ್ನ ಹೊಳಪು ಕಳೆದುಕೊಂಡು ಹಳದಿ ಬಣ್ಣಕ್ಕೆ ತಿರುಗಿ ಉದುರಿ ಬೀಳುತ್ತದೆ. ವಾತಾವರಣದಲ್ಲಿ ಆದ್ರತೆ ಹೆಚ್ಚಾದಂತೆ ರೋಗದ ಸೋಂಕು ಕಾಂಡದ ಮೇಲೆ ಕಾಣಿಸಿಕೊಳ್ಳುತ್ತದೆ. ಹೀಗೆ ಒಂದೊಂದೇ ರೋಗಗಳು ಹುಟ್ಟಿಕೊಳ್ಳುತ್ತಾ ಬೆಳೆ ಪೂರ್ತಿಯಾಗಿ ನಾಶವಾಗುತ್ತದೆ. ಈ ಸಮಸ್ಯೆಗಳು ರಾಸಾಯನಿಕ ಗೊಬ್ಬರ ಬಳಸುತ್ತಿರುವ ತೋಟಗಳಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ಯಾವುದೇ ರೋಗಗಳು ಬೆಳೆಗೆ ಆವರಿಸಿಕೊಳ್ಳಲು ಅಲ್ಲಿ ರೈತನ ಅವೈಜ್ಞಾನಿಕ ಕೃಷಿಯೂ ಕೂಡ ಕಾರಣವಾಗಿರುತ್ತದೆ.
ಹೂವಿನ ಹಡಗಲಿ ತಾಲೂಕಿನ ಕೃಷಿಕರಾದ ರುದ್ರಪ್ಪ ಅವರು ಎಲೆ ಬಳ್ಳಿ ಬೆಳೆಯನ್ನು ಬೆಳೆದಿದ್ದು, ಈ ಹಿಂದೆ ಅಲ್ಲಿ ಸಾಕಷ್ಟು ರೋಗಗಳನ್ನು ಕಂಡು, ನಷ್ಟ ಅನುಭವಿಸಿದ್ದರು. ಎಲೆಗಳು ಒಣಗುವುದು, ಹಳದಿಯಾಗುವಂತಹ ಸಮಸ್ಯೆ ಹೆಚ್ಚಾಗಿ ಕಾಡುತ್ತಿತ್ತು. ಇದರಿಂದ ಬೇಸತ್ತ ರೈತ ಈ ಕೃಷಿಯೇ ಬೇಡ ಎಂದು ನಿರ್ಧರಿಸಿ ಸಾಯುತ್ತಿದ್ದ ಎಲೆಬಳ್ಳಿಗಳನ್ನು ತೆಗೆದು ಹಾಕಲು ಮುಂದಾದ್ರು. ಆಗ ರೈತನಿಗೆ ಸಿಕ್ಕ ಅಮೃತವೆಂದರೆ ಡಾ.ಸಾಯಿಲ್ ಜೈವಿಕ ಗೊಬ್ಬರಗಳು. ಡಾ.ಸಾಯಿಲ್ ಬಳಸೋಕೆ ಶುರು ಮಾಡಿದ ಮೇಲೆ ಕೇವಲ ಒಂದು ತಿಂಗಳಲ್ಲಿ ಬೆಳೆ ಬದಲಾವಣೆಗೊಂಡು, ಸಾಯುತ್ತಿದ್ದ ಬಳ್ಳಿಗಳು ಮತ್ತೆ ಚಿಗುರಲು ಆರಂಭಿಸಿ, ಈಗ ತಿಂಗಳಿಗೆ 30 ಸಾವಿರ ಲಾಭವನ್ನು ಪಡೆಯುತ್ತಿದ್ದಾರೆ.
4,200 ರೂ. ಖರ್ಚಿನಲ್ಲಿ 30 ಸಾವಿರ ಲಾಭ ಪಡೆದಿರುವ ಕೃಷಿಕ ಖುಷಿಯಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
https://www.youtube.com/watch?v=jzg8EB4gfZk
ವರದಿ : ವನಿತಾ ಯ ಪರಸನ್ನವರ್
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/