Blog

ಕೋಲಾರ: ಕೋಲಾರ ಜಿಲ್ಲೆ, ಶ್ರೀನಿವಾಸಪುರ ತಾಲ್ಲೂಕಿನ ರೈತರಾದ ಶಿವಕುಮಾರ್ ಹಾಗೂ ಅವರ ತಂದೆಯವರಾದ ಮುನಿವೆಂಕಟಪ್ಪ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಗುಂಪುಬಾಳೆಯನ್ನು ಬೆಳೆಯುತ್ತಿದ್ದಾರೆ. ಏಲಕ್ಕಿ ಬಾಳೆಯನ್ನು ಬೆಳೆಯುತ್ತಿದ್ದು ಒಂದೊಂದು ಬಾಳೆಗೊನೆ 18-20 ಕೆಜಿ ಬರುತ್ತಿದೆ. 20*20 ಅಡಿಯಲ್ಲಿ ಗುಂಪುಬಾಳೆಯನ್ನು ಬೆಳೆಯುತ್ತಿದ್ದು  ಎಕರೆಗೆ 125 ಸಸಿಗಳನ್ನು ನಾಟಿಮಾಡಿದ್ದಾರೆ, ಒಂದೊಂದು ಗುಂಪಿನಲ್ಲಿ 10-15 ಮರಿಗಳು ಬರುತ್ತಿವೆ. ಬಾಳೆ ಎಲೆಗಳು 7 ಅಡಿಯಷ್ಟು ಎತ್ತರ ಬೆಳೆಯುತ್ತಿವೆ.

ರೈತರಾದ ಶಿವಕುಮಾರ್ ಅವರು  ರಾಸಾಯನಿಕ ಗೊಬ್ಬರವನ್ನು ಬಳಸದೆ ಸಂಪೂರ್ಣವಾಗಿ ಡಾ.ಸಾಯಿಲ್  ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಮಣ್ಣಿನಲ್ಲಿ ಫಲವತ್ತತೆ ಹೆಚ್ಚಾಗಿದ್ದು ಆರೋಗ್ಯಕರ ಬಾಳೆ ಬೆಳೆಯುತ್ತಿದೆ, ಅಷ್ಟೇ ಅಲ್ಲ ಬಾಳೆಯಿಂದ ಬಂದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಭೂಮಿಯ ಮೇಲೆಯೇ ಮಲ್ಚಿಂಗ್ ಮಾಡಿದ್ದಾರೆ. ಕೊಟ್ಟಿಗೆ ಗೊಬ್ಬರವನ್ನು ಡಾ.ಸಾಯಿಲ್ ಡಿಕಂಪೋಸರ್ ಬಳಸಿ ಡಿಕಂಪೋಸ್ ಮಾಡಿ ಕೃಷಿ ಭೂಮಿಗೆ ಬಳಸುತ್ತಿದ್ದಾರೆ.

ಸಿಂಗಲ್ ಬಾಳೆಯನ್ನು ನಾಟಿ ಮಾಡಿದಾಗ 12 ತಿಂಗಳಿಗೊಮ್ಮೆ ಮಾತ್ರ ಇಳುವರಿ ಪಡೆಯಬಹುದು, ಆದರೆ ಗುಂಪುಬಾಳೆ ಪದ್ಧತಿಯಲ್ಲಿ ವರ್ಷಪೂರ್ತಿ ಆದಾಯ ಪಡೆಯಬಹುದು. ಜತೆಗೆ 20*20  ಅಡಿ ಅಂತರದಲ್ಲಿ ಅಂತರ ಬೆಳೆಗಳನ್ನು ಬೆಳೆಯಬಹುದು. ಕೃಷಿಕರಾದ ಶಿವಕುಮಾರ್ ಸೇವಂತಿಗೆಯನ್ನು ಅಂತರ ಬೆಳೆಯಾಗಿ ಬೆಳೆದು 3.5 ಲಕ್ಷ ರೂ ಆದಾಯ ಪಡೆದುಕೊಂಡಿದ್ದರಂತ್ತೆ.

ಈ ಬಗ್ಗೆ ರೈತರು ಮೈಕ್ರೋಬಿಯೊಂದಿಗೆ ಮಾತನಾಡಿದ್ದಾರೆ.

ವಿಡಿಯೋಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.


https://www.youtube.com/watch?v=zIvIMWCpfwE&t=1s


ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

► Follow us on Instagram: https://www.instagram.com/microbiagrotech/

► Subscribe to Whats app Channel:  https://whatsapp.com/channel/0029VaA7ZHPGzzKJXAJrz21s

ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.


 




Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing