ಕೃಷಿಗೆ ಭೂಮಿ ಸಿದ್ಧತೆ ಮಾಡುವುದು ಹೇಗೆ? ಬರಿ ಉಳುಮೆ ಮಾಡಿದರೆ ಸಾಕಾ?
ಬಹುತೇಕ ರೈತರು ಉಳುಮೆ ಮಾಡುವುದನ್ನೇ ಭೂಮಿ ಸಿದ್ಧತೆ ಎಂದುಕೊಂಡಿದ್ದಾರೆ. ಆದರೆ ಇದು ಸಿದ್ಧತೆಯ ಒಂದು ಭಾಗ ಅಷ್ಟೇ. ಮಣ್ಣು ಫಲವತ್ತಾಗಿದ್ದರೆ ಮಾತ್ರ ಬೆಳೆ ಬೆಳೆಯಲು ಯೋಗ್ಯವಾಗಿರುತ್ತದೆ. ಸಾವಯವ ಇಂಗಾಲ ಹೆಚ್ಚಿದ್ದರೆ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ. ಇದನ್ನೆಲ್ಲಾ ಬೆಳೆ ಬೆಳೆಯುವ ಮೊದಲು ಉಳುಮೆ ಜತೆ ಮಾಡಿದರೆ ಮಣ್ಣು ಫಲವತ್ತಾಗುತ್ತದೆ. ಇದರ ಬಗ್ಗೆ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಕೆ.ಆರ್ ಹುಲ್ಲುನಾಚೇಗೌಡರು ವಿವರವಾಗಿ ತಿಳಿಸಿದ್ದಾರೆ.
|
ಬಾಳೆ ಬೆಳೆ ಬೆಳೆಯುವ ಮುನ್ನ ನಿಮ್ಮ ಕೃಷಿ ಭೂಮಿ ಹೀಗೆದೆಯಾ ಎಂದು ಪರೀಕ್ಷಿಸಿ
ಭಾರತದಲ್ಲಿ ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆ ಎಂದರೆ ಅದು ಬಾಳೆ. ಪ್ರತಿಯೊಬ್ಬರೂ ತಿನ್ನಲು ಬಯಸುವ ಬಾಳೆ ಹಣ್ಣಿನಲ್ಲಿ ಕೆಲ ಖನಿಜಾಂಶಗಳು, ಜೀವಸತ್ವಗಳ ಪ್ರಮಾಣ ಹೆಚ್ಚಿರುವುದರಿಂದ ಆರೋಗ್ಯಕ್ಕೆ ಇದು ತುಂಬಾ ಒಳಿತು. ಬಾಳೆ ಬೆಳೆಯನ್ನು ಬೆಳೆಯುವಾಗ ಕೃಷಿಕರು ಅದರದೆ ಆದ ಕೆಲವೊಂದು ನಿಯಮಗಳನ್ನು ಪಾಲಿಸಿ ಬೆಳೆದರೆ ಉತ್ತಮ ಇಳುವರಿಗೆ ಸಹಾಯಕ.
|
ದಾಳಿಂಬೆ ಬೆಳೆಯಲು ಈ ವಿಧಾನವನ್ನು ಅನುಸರಿಸಿದರೆ ಅಧಿಕ ಲಾಭ
ಮಹಾರಾಷ್ಟ್ರದಲ್ಲಿ ರೈತರೊಬ್ಬರು ಸಾವಯವ ಪದ್ಧತಿಯಲ್ಲಿ ದಾಳಿಂಬೆ ಬೆಳೆದಿದ್ದಾರೆ. ರಾಸಾಯನಿಕ ಕೃಷಿಗಿಂತ ಉತ್ತಮವಾದ ಫಸಲು ಬರುತ್ತಿದೆ. ಕೃಷಿ ಮಣ್ಣಿನಲ್ಲಿ ಬದಲಾವಣೆ ಕಂಡಿದ್ದಾರೆ.
|
ಹೀಗೆ ಮಾಡಿದರೆ 1 ಚದರಡಿಯಲ್ಲಿ ಏನಿಲ್ಲವೆಂದರೂ 15 ಎರೆಹುಳು ಸಿಗುತ್ತೆ..!
ಶಿರಾ: ಭಾರತದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಎಷ್ಟೋ ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನಾಧಾರವಾಗಿದೆ.ಅಡಿಕೆಗೆ ರೇಟು ಸಿಕ್ಕರೆ ಮಾತ್ರ ರೈತ ಲಕ್ಷ ಲಕ್ಷ ಹಣ ಎಣಿಸುವುದರಲ್ಲಿ ಅನುಮಾನವಿಲ್ಲ.ಆದರೆ ಅಡಿಕೆಯಲ್ಲಿ ಸೂಕ್ಷ್ಮವಾಗಿ ಗಮನಿಸಿ ಮಾಡ ಬೇಕಾದ ವೈಜ್ಞಾನಿಕ ಕೃಷಿ ಮಾಹಿತಿಗಳು ತುಂಬಾ ಇದೆ. ಅಡಿಕೆಯಲ್ಲಿ ಹೆಚ್ಚಾಗಿ ಬೆಳೆಗಳಿಗೆ ಆವರಿಸಿಕೊಳ್ಳುವ ಹರಳು ಉದುರುವ ಸಮಸ್ಯೆ, ಹಂಡೊಡಕದ ಸಮಸ್ಯೆ, ಅಣಬೆ ರೋಗದ ಸಮಸ್ಯೆ, ಸುಳಿರೋಗ, ಹೀಗೆ ಹಲವಾರು ತೊಂದರೆಗಳಿರುತ್ತವೆ.ಇವೆಲ್ಲಾ ರೋಗಗಳು ಬೆಳೆಗಳಿಗೆ ಆವರಿಸಿಕೊಳ್ಳಬಾರದು ಎಂದರೆ ರೈತ ತನ್ನ ಕೃಷಿಯಲ್ಲಿ ಬದಲಾವಣೆ ಕಾಣಬೇಕು.ಅದುವೇ ವೈಜ್ಞಾನಿಕ ಕೃಷಿ ಸಾವಯವ ಕೃಷಿ.
|
2 ವರ್ಷದ ಹಿಂದೆ ಕಣ್ಣಿಗೆ ಬಿದ್ದ ಆಪತ್ಬಾಂಧವ..!
ದಾವಣಗೆರೆ : 2 ವರ್ಷದ ಹಿಂದೆ ರಾಸಾಯನಿಕ ಬಳಸುತ್ತಿದ್ದ ಕೃಷಿಕ ಬಸವನಗೌಡರು, ಲಾಭಕ್ಕಿಂತ ನಷ್ಟಗಳನ್ನು ಅನುಭವಿಸಿದ್ದೆ ಜಾಸ್ತಿ. ಎರೆಹುಳುಗಳ ಮಾರಣಹೋಮ, ಸುಳಿರೋಗ, ದಿನೇ ದಿನೇ ಮಣ್ಣಿನ ಫಲವತ್ತತೆ ಹಾಳು. ಹೀಗೆ ಒಂದಲ್ಲ ಒಂದು ಸಮಸ್ಯೆಯಿಂದ ಇಡೀ ಅಡಿಕೆ ತೋಟವೇ ರೋಗಕ್ಕೆ ಸಿಲುಕಿತ್ತು.
|
ಬೀನ್ಸ್ ಬೆಳೆಯಲ್ಲಿ ಭರ್ಜರಿ ಇಳುವರಿಗೆ ಇಷ್ಟು ಮಾಡಿದರೆ ಸಾಕು
ಬೀನ್ಸ್ ಬೆಳೆಯಲ್ಲಿ ಲಾಭ ಕಾಣುತ್ತಿರವ ಕೃಷಿಕ ತಿಲಕ್ ಅವರು, ರಾಸಾಯನಿಕ ಕೃಷಿ ನಿಲ್ಲಿಸಿ ಸಾವಯವ ಕೃಷಿಗೆ ಕಾಲಿಟ್ಟರು. ಸಾವಯವ ಕೃಷಿಯಲ್ಲಿ ಇವರು ಆಯ್ಕೆ ಮಾಡಿಕೊಂಡ ಡಾ.ಸಾಯಿಲ್ ಜೈವಿಕ ಗೊಬ್ಬರಗಳು ರೈತನ ಕನಸನ್ನು ನನಸು ಮಾಡಿ, ಬೀನ್ಸ್ ಬೆಳೆಯಲ್ಲಿ ಲಾಭ ತಂದುಕೊಟ್ಟಿವೆ.
|
ರಸಗೊಬ್ಬರ vs ಸಾವಯವ ಗೊಬ್ಬರ. ಯಾವುದರ ಬಳಕೆಯಿಂದ ಕೃಷಿ ಖರ್ಚು ಕಡಿಮೆ?
ಕೃಷಿಯಲ್ಲಿ ಲಾಭಗಳಿಸಲು ಕೃಷಿಯನ್ನು ಉದ್ದಿಮೆಯಾಗಿ ನೋಡಬೇಕು. ಲಾಭ-ನಷ್ಟಗಳ ಲೆಕ್ಕಾಚಾರ ಹಾಕಬೇಕು. ಪ್ರತಿಯೊಬ್ಬ ರೈತನೂ ಉದ್ಯಮಿಯಾಗಬೇಕು. ರೈತ ತಾನು ಬೆಳೆದ ಬೆಳೆಯನ್ನು ಉತ್ತಮ ಬೆಲೆ ಸಿಗುವ ಕಡೆ ಮಾರಾಟ ಮಾಡಬೇಕು. ಯಾವುದೇ ಬಿಸ್ನೆಸ್ ನಲ್ಲಿ ಲಾಭ ಹೆಚ್ಚಿಸಲು ಖರ್ಚು ಕಡಿಮೆ ಮಾಡಬೇಕಾಗುತ್ತದೆ. ನಿರ್ವಹಣೆಯ ಅಧ್ಯಯನ ಮಾಡಬೇಕಾಗುತ್ತದೆ.
|
ಅಪೂರ್ವ ಸಹೋದರರ ಅಪೂರ್ವ ಕೃಷಿ ಸಾಧನೆಗೆ ಜನ ಫಿದಾ..!
ಮಂಡ್ಯ ತಾಲೂಕಿನ ಕೃಷಿಕರಾದ ನವೀನ್ ಹಾಗೂ ಕಿರಣ್ ಸಹೋದರರ ಕೃಷಿ ಜನ ಮೆಚ್ಚುವ ಹಾಗೆ ಇದೆ. ಕೃಷಿಯಲ್ಲಿ ಏನಾದರೂ ಸಾಧಿಸಬೇಕೆಂಬ ಇವರ ಛಲಕ್ಕೆ ಇಂದು ಸಾರ್ಥಕತೆ ಲಭಿಸಿದೆ. ಕಬ್ಬು ಬೆಳೆ ಈ ರೈತರ ಕನಸನ್ನು ನನಸು ಮಾಡಿದೆ.
|
ಕೂಳೆ ಕಬ್ಬು 9 ತಿಂಗಳಿಗೆ 23 ಗಣಿಕೆ
ರಬಕವಿ ಬನಹಟ್ಟಿ : ಬೆಳೆಯಲ್ಲಿ ಲಾಭ ಪಡೆಯಬೇಕೆಂದರೆ ಮೊದಲು ರೈತ ತಾನು ಯಾವ ಕೃಷಿ ಪದ್ಧತಿಯ ಮೇಲೆ ಅವಲಂಬಿತನಾಗಬೇಕೆಂಬುದನ್ನು ತಿಳಿಯಬೇಕು, ರೈತನ ಕೃಷಿ ಪದ್ಧತಿಯ ಮೇಲೆ ಲಾಭ ನಿರ್ಧಾರವಾಗಿರುತ್ತೆ, ವೈಜ್ಞಾನಿಕ ಕೃಷಿ ಪದ್ಧತಿ ಜತೆಯಲ್ಲಿ, ಸಾವಯವ ಕೃಷಿಯೊಂದಿಗೆ ಮುಂದುವರೆದಾಗ ನಿರೀಕ್ಷೆಗೂ ಮೀರಿ ಲಾಭ ಪಡೆಯಲು ಸಾಧ್ಯ.
|
ಕೃಷಿ ಭೂಮಿಗೆ ರಜೆ ಯಾವಾಗ..?
ನಾವು ದಿನಂಪ್ರತಿ ಕೆಲಸ ಮಾಡಿದಾಗ ನಮಗೆ ದೈಹಿಕವಾಗಿ, ಮಾನಸಿಕವಾಗಿ ವಿಶ್ರಾಮ ಬೇಕೆನಿಸುತ್ತದೆ. ಅದೇ ರೀತಿಯಾಗಿ ಒಂದು ದಿನವೂ ರಜೆ ಇಲ್ಲದೆ ಹಗಲು-ರಾತ್ರಿ ಕೆಲಸ ಮಾಡುವ ನಮ್ಮ ಭೂಮಿ ತಾಯಿಗೂ ರಜೆ ಎನ್ನುವುದು ಬೇಕಲ್ಲವೇ? ಹಾಗಿದ್ರೆ ನಮ್ಮ ಕೃಷಿ ಭೂಮಿಗೆ ರಜೆ ಹೇಗೆ ಕೊಡುವುದು? ರಜೆ ಕೊಟ್ರೆ ಏನು ಲಾಭ?
|